ಯಲ್ಲಾಪುರ: ಸಾಮಾಜಿಕ ಕಾರ್ಯಕರ್ತೆ ಶೋಭಾ ಹುಲ್ಮನಿಯವರು ಯಲ್ಲಾಪುರ ತಾಲೂಕಿನಲ್ಲಿ ಅಯೋಧ್ಯೆ ರಾಮಮಂದಿರ ವಾರ್ಷಿಕೋತ್ಸವ ಅಂಗವಾಗಿ ಪಟ್ಟಣದ ಬಸವೇಶ್ವರ ಭಕ್ತವೃಂದ ವತಿಯಿಂದ ಆಯೋಜಿಸಲಾಗಿದ್ದ ಶ್ರೀರಾಮಮೂರ್ತಿಯ ಭವ್ಯ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಆ ವೇಳೆ ಏಕಾಏಕಿ ಕುಸಿದುಬಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರು ನಿಧನರಾಗಿರುವುದನ್ನು ವೈದ್ಯರು ತಿಳಿಸಿದರು. ಅವರು ಪತಿ, ಪುತ್ರ, ಅಪಾರ ಬಂಧುಬಳಗವನ್ನು ಬಿಟ್ಟು ಅಗಲಿದ್ದಾರೆ. ಕಳೆದ ವರ್ಷ ತಹಶೀಲ್ದಾರ್ ಕಚೇರಿ ಎದುರು ಬೈಪಾಸ್ಗಾಗಿ ಆಗ್ರಹಿಸಿದ ಪ್ರತಿಭಟನೆಯಲ್ಲಿ ಭಾಗವಹಿಸಿದ ಸಂದರ್ಭದಲ್ಲೂ ಶೋಭಾ ಅವರು ಕುಸಿದು ಅಸ್ವಸ್ಥರಾಗಿದ್ದರು