Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Tuesday, 8 February 2022

ನಾಳೆಯಿಂದ ಮೂರು ದಿನ ಹೈಸ್ಕೂಲ್ ಪದವಿಪೂರ್ವ ಪದವಿ ಎಂಜಿನಿಯರಿಂಗ್ ಕಾಲೇಜುಗಳಿಗೆ ರಜೆ

ಬೆಂಗಳೂರು: ಹಿಜಾಬ್‌ ವಿವಾದ ರಾಜ್ಯದಲ್ಲಿ ಹೆಚ್ಚಿದ್ದು, ಈ ವಿವಾದ ಪ್ರೌಢಶಾಲೆ, ಪದವಿ ಪೂರ್ವ, ಪದವಿ ಮತ್ತು ಎಂಜಿನಿಯರ್‌ ಕಾಲೇಜುಗಳಿಗೆ ವಿಸ್ತರಣೆಯಾಗಬಾರದು ಎನ್ನುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ಕ್ರಮಕ್ಕೆ ಮುಂದಾಗಿದ್ದು, ನಾಳೆಯಿಂದ 3 ದಿನ ಪ್ರೌಢಶಾಲೆ, ಪದವಿ ಪೂರ್ವ, ಪದವಿ ಹಾಗೂ ಎಂಜಿನಿಯರ್‌ ಕಾಲೇಜುಗಳಿಗೆ ರಜೆ ನೀಡಲಾಗುವುದು ಅಂತ ಸಚಿವ ಅಶ್ವತ್‌ ನಾರಾಯಣ್‌ ತಿಳಿಸಿದ್ದಾರೆ. 
      ಈ ಕುರಿತು ಅವರು ಮಂಗಳವಾರ ಮಧ್ಯಾಹ್ನ ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಮಾಹಿತಿ ನೀಡಿದರು. ಸಚಿವ ಅಶ್ವಥ್‌ ನಾರಾಯಣ್‌ ಅವರ ನೇತೃತ್ವದಲ್ಲಿ ಪದವಿ ಕಾಲೇಜು ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. ಬೇರೆಲ್ಲ ಕಡೆ ಈ ಪ್ರತಿಭಟನೆ ನಡೆದರೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲಿದೆ ಹೀಗಾಗಿ ಮುಂಜಾಗ್ರತ ಕ್ರಮವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ನಾಳೆಯಿಂದ 3 ದಿನ ಹೈ ಸ್ಕೂಲ್‌, ಪ.ಪೂರ್ವ, ಪದವಿ ಎಂಜಿನಿಯರ್‌ ಕಾಲೇಜುಗಳಿಗೆ ರಜೆ ನೀಡಲಾಗುವುದು ಅಂತ ಅವರು ಹೇಳಿದರು.
      ದೆಹಲಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ರಾಜ್ಯದ ಜನತೆಯಲ್ಲಿ ಶಾಂತಿ ಕಾಪಾಡುವಂತೆ ಸಿಎಂ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ. ಅವರು ಮಂಗಳವಾರ ಸುದ್ದಿಗಾರರ ಜೊತೆಗೆ ಮಾತನಾಡಿ, ಸದ್ಯ ಈ ವಿವಾದವು ನ್ಯಾಯಾಪೀಠದ ಮುಂದೆ ಇದ್ದು, ನ್ಯಾಯಾಲಯದ ತೀರ್ಪು ಕಾಯುವಂತೆ ಅವರು ಮನವಿ ಮಾಡಿದರು. ಇದೇ ವೇಳೇ ತಮ್ಮ ಸಚಿವ ಸಂಪುಟದ ಸಹೋದ್ಯೋಗಳಿಗೆ ನೀಡುತ್ತಿರುವ ಹೇಳಿಕೆಗೂ ಕೂಡ ಅವರು ವಿರೋಧ ವ್ಯಕ್ತಪಡಿಸಿದರು. ಇನ್ನೂ ಗಲಾಟೆಯಾಗಿರುವ ಪ್ರದೇಶದಲ್ಲಿ ರಜೆ ನೀಡುವಂತೆ ಸೂಚನೆ ನೀಡಿರುವೆ. ಇಂದು ಸಂಜೆ ಬೆಂಗಳೂರಿಗೆ ತೆರಳಿದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಲಾಗುವುದು ಅಂತ ತಿಳಿಸಿದರು. ಇನ್ನೂ ಯಾರು ಕೂಡ ಪ್ರಚೋದನೆ ಮಾಡುವ ಕೆಲಸ ಮಾಡಬಾರದು, ಈಗಾಗಲೇ ಹೈಕೋರ್ಟ್‌ ನಲ್ಲಿ ವಿಚಾರಣೆ ನಡೆಯುತ್ತಿದೆ, ಹೈಕೋರ್ಟ್‌ನಿಂದ ಅಂತಿಮ ಆದೇಶ ಬರುವ ತನಕ ತಾಳ್ಮೆಯಿಂದ ಇರುವಂತೆ ಅವರು ಹೇಳಿದರು.