Adv

Manoj-till-may-18-ntpyd Kesar-till-may-18-ntpyd IMG-20240514-234509 Kamakshi-hrushikesh-may18-ntpyd Bidremane-till-may12-0-5k-ntpyd Kesar-may1-to-7-not-paid DNGoankr-may-5to9-6k-ntpyd Hebbar-till-may16

Tuesday 8 February 2022

ದೇವರು ಜನರ ಬಳಿಗೆ ಬರುವುದೇ ದೇವರ ಉತ್ಸವ

 


ಯಲ್ಲಾಪುರ :  'ದೇವಸ್ಥಾನಗಳಿಗೆ ಎಲ್ಲ ಸಂದರ್ಭಗಳಲ್ಲಿ ಎಲ್ಲರಿಗೂ ಹೋಗಲು ಸಾಧ್ಯವಾಗದು,  ಹೀಗಾಗಿ ಗರ್ಭಗುಡಿಯೊಳಗಿದ್ದ ದೇವರೇ ಭಕ್ತರ ಬಳಿಗೆ ಬರುವುದೇ ಉತ್ಸವ, ರಥೋತ್ಸವ. ಆಗ ದೇವರ ಸಾನಿಧ್ಯ ಸಮೀಪದಿಂದ ನೋಡಲು ಸಾಧ್ಯವಾಗುತ್ತದೆ.  ಈ ಸಂದರ್ಭದಲ್ಲಿ ಜನರಿಗೆ ಸೇವೆಯ ಅವಕಾಶ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಗರ್ಭಗುಡಿಯ ಒಳಗೆ ಇರುವ ಮಡಿಯ ನಿಯಮಗಳು ಸಡಿಲವಾಗಿರುತ್ತವೆ. ' ಎಂದು ಸೋಂದಾ ಸ್ವರ್ಣವಲ್ಲಿ ಶ್ರಿಗಳಾದ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ನುಡಿದರು.

   ಪಟ್ಟಣದ ನಾಯ್ಕನಕೆರೆಯ ಶ್ರೀ ಶಾರದಾಂಭಾ ದೇವಸ್ಥಾನದಲ್ಲಿ ರಥಸಪ್ತಮಿ ನಿಮಿತ್ತ ಸೋಮವಾರ ನಡೆದ ರಥೋತ್ಸವದಲ್ಲಿ ಪಾಲ್ಗೊಂಡು ಭಕ್ತರಿಗೆ ಆಶೀರ್ವಚನ ನೀಡಿದರು.

    ಪ್ರತಿಯೊಬ್ಬನಲ್ಲಿಯೂ ಪರಮಾತ್ಮನಿರುತ್ತಾನೆ.  ಭಕ್ತರಿಗೆ ಮಾಡುವ ಅನ್ನದಾನದ ಮೂಲಕ ದೇವರು ಸಂಪ್ರೀತನಾಗುತ್ತಾನೆ. ಎಂದ ಅವರು ಕೋವಿಡ ನಂತಹ ಮಹಾಮಾರಿ ದೂರಾಗಬೇಕು ಎನ್ನುವ ನಿಟ್ಟಿನಲ್ಲಿ ಶ್ರೀ ಮಠದಲ್ಲಿ   ಯುಗಾದಿಯಿಂದ ನವಚಂಡಿ ಹವನ ನಿರಂತರವಾಗಿ ನಡೆಸುತ್ತಾ ಬರಲಾಗಿದೆ. ಪರಿಣಾಮ ಇಂದು ಕೋವಿಡ್ ತನ್ನ ಪ್ರಾಭಲ್ಯವನ್ನು ಕಳೆದುಕೊಂಡಿದೆ. ಎಮದ ಅವರು ದೇವಸ್ಥಾನದಲ್ಲಿ  ಚಂಡಿ ಪಾರಾಯಣವನ್ನು ನಿರಂತರವಾಗಿ ನಡೆಸಬೇಕು ಎನ್ನುವ ನಿಟ್ಟಿನಲ್ಲಿ  ವಾರ್ಷಿಕ ಮತ್ತು ಶಾಶ್ವತ ನಿಧಿ ಮೂಲಕ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು.

         ಶ್ರೀ ಮಠದ ಎಲ್ಲ  ಅಂಗ ಸಂಸ್ಥೆಗಳ ಆಡಳಿತ ಮಂಡಳಿಯನ್ನು ಪುನರ್ ರಚಿಸಿದಂತೆ ಇಲ್ಲಿಯ ಶಾರದಾಂಭಾ ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಆದ ಬದಲಾವಣೆಗೆ ಬೇರೆ ಯಾವುದೇ ಅರ್ಥವಿಲ್ಲ. ಇದು ಕಾಲಿಕ ಬದಲಾವಣೆ ಮಾತ್ರ. ದೇವರು ಮಾತ್ರ ಶಾಶ್ವತ, ಆಡಳಿತ ಆಗಾಗ ಬದಲಾವಣೆ ಆಗುತ್ತಿರಬೇಕು ಆವಾಗ ಮಾತ್ರ ಪ್ರಸ್ತುತವಾಗಿರುರುತ್ತದೆ. ಹಿಂದಿನ ಆಡಳಿತ ಮಂಡಳಿಯ ಕಾರಣದಿಂದ ದೇವಸ್ಥಾನ ಇಷ್ಟು ಬೇಗ, ಇಷ್ಟೊಂದು ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ ಎಂದರು.

     ದೇವಸ್ಥಾನದ  ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಸಿಕುಂಬ್ರಿ, ಕಾರ್ಯಾಧ್ಯಕ್ಷ ಜಗದೀಶ ದೀಕ್ಷಿತ್,  ಕಾರ್ಯದರ್ಶಿ ನಾಗೆಂದ್ರ ಕವಾಳೆ, ಸೀಮಾ ಅಧ್ಯಕ್ಷ ಎಸ್.ವಿ. ಹೆಗಡೆ, ಶಾರದಾಂಬಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಉಮೇಶ ಭಾಗ್ವತ್,ಮಾತ್ರಮಂಡಳಿ ಅಧ್ಯಕ್ಷೆ ರಮಾ ದೀಕ್ಷಿತ, ಆಡಳಿತ ಮಂಡಳಿ ಸದಸ್ಯರು, ಹಾಗೂ ಮಾತ್ರ ಮಂಡಳಿ ಸದಸ್ಯೆಯರು, ಸಾರ್ವಜನಿಕರು ಇದ್ದರು.

ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂಧಿಸಿ; ಎಸಿ ದೇವರಾಜ್ ಆರ್

 


ಯಲ್ಲಾಪುರ : ಬೇರೆ ಬೇರೆ ತಾಲೂಕುಗಳಲ್ಲಿ ಪ್ರತ್ಯೇಕವಾದ ಸಮಸ್ಯೆಗಳಿರುತ್ತವೆ. ಅಧಿಕಾರಿಗಳಾದ ನಾವು ಜವಾಬ್ದಾರಿಯುತವಾಗಿ ನಿರ್ವಹಿಸಿ, ಜಿಲ್ಲಾಡಳಿತ ಮತ್ತು ತಾಲೂಕಾಡಳಿತಕ್ಕೆ ಉತ್ತಮ ಹೆಸರು ಬರುವಂತೆ ನೋಡಿಕೊಳ್ಳಬೇಕೆಂದು ಶಿರಸಿಯ ಸಹಾಯಕ ಆಯುಕ್ತ ದೇವರಾಜ್ ಆರ್. ಹೇಳಿದರು.
ಅವರು ಮಂಗಳವಾರ ಮಧ್ಯಾಹ್ನ ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ತಾಲೂಕಾ ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡುತ್ತಿದ್ದರು. ಸರ್ಕಾರದ ನಿರ್ದೇಶನದಂತೆ ಕೊವಿಡ್ ಸೋಂಕು ಹರಡುವುದನ್ನು ತಡೆಗಟ್ಟಲು ತಾಲೂಕಾ ಆಡಳಿತ ಹಾಗೂ ಜಿಲ್ಲಾಡಳಿತ ಉತ್ತಮ ಕಾರ್ಯನಿರ್ವಹಿಸುತ್ತಿದೆ. ಕೋವಿಡ್‍ನ್ನು ಸಮರ್ಥವಾಗಿ ಎದುರಿಸಿದೆ. ಎಲ್ಲ ಅಧಿಕಾರಿಗಳು ದಕ್ಷತೆಯಿಂದ ಕಾರ್ಯನಿರ್ವಹಿಸಿ, ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂಧಿಸಿ ಜಿಲ್ಲಾಡಳಿತಕ್ಕೆ ಉತ್ತಮ ಹೆಸರು ತರಬೇಕೆಂದರು.
ಪಟ್ಟಣ ವ್ಯಾಪ್ತಿಯಲ್ಲಿ ಮೀನು ಮಾರಾಟ ಮಾಡಲು ಪ್ರತ್ಯೇಕ ಮಾರುಕಟ್ಟೆಯಿದ್ದರೂ ಜೋಡುಕೆರೆ ಬಳಿ ರಸ್ತೆಯಂಚಿಗೆ ಅನೇಕ ತಿಂಗಳುಗಳಿಂದ ಮೀನು ಮಾರಾಟ ಮಾಡಲಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ರವಿವಾರದ ಸಂತೆ ದಿನ ಸಂತೆ ಮಾರುಕ್ಠರಯಲ್ಲಿ ಒಣಮೀನು ಮಾರುತ್ತಾರೆ. ಇಲ್ಲಿಯೂ ಅಧಿಕಾರಿಗಳು ಗಮನಹರಿಸುತ್ತಿಲ್ಲ. ಈ ಕುರಿತು ಸೂಕ್ತ ಕ್ರಮ ಜರುಗಿಸಬೇಕೆಂದು ಮಾಧ್ಯಮ ಪ್ರತಿನಿಧಿಗಳು ಸಹಾಯಕ ಆಯುಕ್ತ ಗಮನಸೆಳೆದರು, ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ಪ.ಪಂ ಅಧಿಕಾರಿಗಳಿಗೆ ಎಸಿ ಸೂಚನೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ ಮಾತನಾಡಿ, ತಾಲೂಕಿನಲ್ಲಿ 19 ಶಾಲೆಗಳು ಅಪಾಯ ಸ್ಥಿತಯಲ್ಲಿವೆ. ಈ ಕುರಿತು ಇಲಾಖಾ ಮೇಲಧಿಕಾರಿಗಳಿಗೆ ಮತ್ತು ಶಾಸಕರು, ಸಚಿವರಿಗೂ ಪ್ರಸ್ತಾವನೆ ಸಲ್ಲಿಸಲಾಗಿದೆ. ಎಸ್‍ಎಸ್‍ಎಲ್‍ಸಿ ಸೇರಿದಂತೆ ಎಲ್ಲ ಶೈಕ್ಷಣಿಕ ವ್ಯವಸ್ಥೆ ಸುಗಮವಾಗಿ ನಡೆಯುತ್ತಿದೆ ಎಂದರು.
ತಾಲೂಕಿನ ವಿವಿಧ ಇಲಾಖಾಧಿಕಾರಿಗಳು ತಾಲೂಕಿನ ಸಮಗ್ರ ಮಾಹಿತಿಯನ್ನು ಆಯುಕ್ತರಿಗೆ ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಶ್ರೀಕೃಷ್ಣ ಕಾಮ್ಕರ್, ತಾಲೂಕಾ ವೈದ್ಯಾಧಿಕಾರಿ ಡಾ. ನರೇಂದ್ರ ಪವಾರ, ಲೋಕೋಪಯೋಗಿ ಸಹಾಯಕ ಕಾರ್ಯ ನಿರ್ವಹಣಾ ಅಭಿಯಂತರ ವಿ.ಎಂ.ಭಟ್ಟ, ಜಿ.ಪಂ ಸಹಾಯಕ ಕಾರ್ಯ ನಿರ್ವಹಣಾ ಅಭಿಯಂತರ ಅಶೋಕ ಬಂಟ, ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಜಗದೀಶ ಕಮ್ಮಾರ, ಸಿಡಿಪಿಓ ರಫೀಕಾ ಹಳ್ಳೂರು, ಅಬಕಾರಿ ಸಹಾಯಕ ಆಯುಕ್ತ ಪ್ರಶಾಂತ ಪಾಟೀಲ, ಪೊಲೀಸ್, ಅರಣ್ಯ, ಕೃಷಿ, ತೊಟಗಾರಿಕಾ, ಪ.ಪಂ, ಸಮಾಜ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದು, ಆಯುಕ್ತರಿಗೆ ಮಾಹಿತಿ ನೀಡಿದರು.  

ಮಂಗಳವಾರ ತಾಲೂಕಿನಲ್ಲಿ 6 ಕೊರೊನಾ ಸೋಂಕು ದೃಢ, ಒಟ್ಟು 83 ಸಕ್ರಿಯ


ಯಲ್ಲಾಪುರ ; ಮಂಗಳವಾರ ತಾಲೂಕಿನಲ್ಲಿ 6 ಕೊರೊನಾ ಸೋಂಕು ದೃಢಪಟ್ಟಿದ್ದು, ಒಟ್ಟು 83 ಸೋಂಕಿತರು ತಾಲ್ಲೂಕಿನಲ್ಲಿದ್ದಾರೆ. 54 ಜನ  ಗುಣಮುಖರಾಗಿದ್ದಾರೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ ತಿಳಿಸಿದ್ದಾರೆ.

       ಚವತ್ತಿ 0, ನಂದೊಳ್ಳಿ-ಯಲ್ಲಾಪುರ 1, ವಜ್ರಳ್ಳಿ 0, ದೆಹಳ್ಳಿ 1, ಕಿರವತ್ತಿ 2, ಕುಂದರಗಿ 2, ಮಂಚಿಕೇರಿ 0, ವಜ್ರಳ್ಳಿ 0, ಮಲವಳ್ಳಿ 0, ಕಳಚೆ 0 ಪಿಎಚ್.ಸಿ ವ್ಯಾಪ್ತಿಯಲ್ಲಿ ಕೊವಿಡ್ ಪ್ರಕರಣ ಪತ್ತೆಯಾಗಿದೆ. ಇಲ್ಲಿಯವರೆಗೂ ಒಟ್ಟು 5220 ಕೊವಿಡ್ ಪಾಸಿಟಿವ್ ಬಂದಿದೆ. 5095 ಜನ ಗುಣಮುಖರಾಗಿದ್ದಾರೆ. ಇದುವರೆಗೂ 42 ಜನ ಮೃತಪಟ್ಟಿದ್ದಾರೆ. ಇಂದು 315 ಜನರ ಗಂಟಲು ದ್ರವದ ಪರೀಕ್ಷೆ ಮಾಡಲಾಗಿದೆ. ಹಿಂದಿನ ಪರೀಕ್ಷೆಯೂ ಸೇರಿದಂತೆ 266 ಜನರ ಪರೀಕ್ಷೆ ಫಲಿತಾಂಶ ನೆಗೆಟಿವ್ ಬಂದಿದೆ. 1168 ಜನರ ಪರೀಕ್ಷಾ ಫಲಿತಾಂಶ ಬರುವುದು ಬಾಕಿಯಿದೆ,  ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದಾರೆ. 

    

ಲಸಿಕೆ : ಮಂಗಳಾವಾರದವರೆಗೆ ಮೊದಲ ಡೋಸ್ 54599, ಎರಡನೇ ಡೋಸ್ 50906 ಒಟ್ಟು ಇಂದಿನವರೆಗೂ ಒಟ್ಟು 105505 ಜನರಿಗೆ ಲಸಿಕೆಯನ್ನು ನೀಡಲಾಗಿದೆ. ಮುನ್ನೆಚ್ಚರಿಕಾ ಡೋಸ್ ಒಟ್ಟು 5488 ಜನರಿಗೆ ನೀಡಲಾಗಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

ನಾಳೆಯಿಂದ ಮೂರು ದಿನ ಹೈಸ್ಕೂಲ್ ಪದವಿಪೂರ್ವ ಪದವಿ ಎಂಜಿನಿಯರಿಂಗ್ ಕಾಲೇಜುಗಳಿಗೆ ರಜೆ

ಬೆಂಗಳೂರು: ಹಿಜಾಬ್‌ ವಿವಾದ ರಾಜ್ಯದಲ್ಲಿ ಹೆಚ್ಚಿದ್ದು, ಈ ವಿವಾದ ಪ್ರೌಢಶಾಲೆ, ಪದವಿ ಪೂರ್ವ, ಪದವಿ ಮತ್ತು ಎಂಜಿನಿಯರ್‌ ಕಾಲೇಜುಗಳಿಗೆ ವಿಸ್ತರಣೆಯಾಗಬಾರದು ಎನ್ನುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ಕ್ರಮಕ್ಕೆ ಮುಂದಾಗಿದ್ದು, ನಾಳೆಯಿಂದ 3 ದಿನ ಪ್ರೌಢಶಾಲೆ, ಪದವಿ ಪೂರ್ವ, ಪದವಿ ಹಾಗೂ ಎಂಜಿನಿಯರ್‌ ಕಾಲೇಜುಗಳಿಗೆ ರಜೆ ನೀಡಲಾಗುವುದು ಅಂತ ಸಚಿವ ಅಶ್ವತ್‌ ನಾರಾಯಣ್‌ ತಿಳಿಸಿದ್ದಾರೆ. 
      ಈ ಕುರಿತು ಅವರು ಮಂಗಳವಾರ ಮಧ್ಯಾಹ್ನ ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಮಾಹಿತಿ ನೀಡಿದರು. ಸಚಿವ ಅಶ್ವಥ್‌ ನಾರಾಯಣ್‌ ಅವರ ನೇತೃತ್ವದಲ್ಲಿ ಪದವಿ ಕಾಲೇಜು ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. ಬೇರೆಲ್ಲ ಕಡೆ ಈ ಪ್ರತಿಭಟನೆ ನಡೆದರೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲಿದೆ ಹೀಗಾಗಿ ಮುಂಜಾಗ್ರತ ಕ್ರಮವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ನಾಳೆಯಿಂದ 3 ದಿನ ಹೈ ಸ್ಕೂಲ್‌, ಪ.ಪೂರ್ವ, ಪದವಿ ಎಂಜಿನಿಯರ್‌ ಕಾಲೇಜುಗಳಿಗೆ ರಜೆ ನೀಡಲಾಗುವುದು ಅಂತ ಅವರು ಹೇಳಿದರು.
      ದೆಹಲಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ರಾಜ್ಯದ ಜನತೆಯಲ್ಲಿ ಶಾಂತಿ ಕಾಪಾಡುವಂತೆ ಸಿಎಂ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ. ಅವರು ಮಂಗಳವಾರ ಸುದ್ದಿಗಾರರ ಜೊತೆಗೆ ಮಾತನಾಡಿ, ಸದ್ಯ ಈ ವಿವಾದವು ನ್ಯಾಯಾಪೀಠದ ಮುಂದೆ ಇದ್ದು, ನ್ಯಾಯಾಲಯದ ತೀರ್ಪು ಕಾಯುವಂತೆ ಅವರು ಮನವಿ ಮಾಡಿದರು. ಇದೇ ವೇಳೇ ತಮ್ಮ ಸಚಿವ ಸಂಪುಟದ ಸಹೋದ್ಯೋಗಳಿಗೆ ನೀಡುತ್ತಿರುವ ಹೇಳಿಕೆಗೂ ಕೂಡ ಅವರು ವಿರೋಧ ವ್ಯಕ್ತಪಡಿಸಿದರು. ಇನ್ನೂ ಗಲಾಟೆಯಾಗಿರುವ ಪ್ರದೇಶದಲ್ಲಿ ರಜೆ ನೀಡುವಂತೆ ಸೂಚನೆ ನೀಡಿರುವೆ. ಇಂದು ಸಂಜೆ ಬೆಂಗಳೂರಿಗೆ ತೆರಳಿದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಲಾಗುವುದು ಅಂತ ತಿಳಿಸಿದರು. ಇನ್ನೂ ಯಾರು ಕೂಡ ಪ್ರಚೋದನೆ ಮಾಡುವ ಕೆಲಸ ಮಾಡಬಾರದು, ಈಗಾಗಲೇ ಹೈಕೋರ್ಟ್‌ ನಲ್ಲಿ ವಿಚಾರಣೆ ನಡೆಯುತ್ತಿದೆ, ಹೈಕೋರ್ಟ್‌ನಿಂದ ಅಂತಿಮ ಆದೇಶ ಬರುವ ತನಕ ತಾಳ್ಮೆಯಿಂದ ಇರುವಂತೆ ಅವರು ಹೇಳಿದರು.

ಸಚಿವ ಹೆಬ್ಬಾರರಿಂದ 2 ಕೋ.ರೂ ವೆಚ್ಚದ ಕಟ್ಟಡಕ್ಕೆ ಭೂಮಿ ಪೂಜೆ

 





ಕಾಲೇಜಿನಲ್ಲಿ ಕಲ್ಲು ತೂರಾಟ, ಬಸ್ ಗಳ ಮೇಲೆ ಕಲ್ಲು ತೂರಾಟ, 144 ಸೆಕ್ಷನ್ ಅಡಿಯಲ್ಲಿ 2 ದಿನ ನಿಷೇಧಾಜ್ಞೆ

 

ಯಲ್ಲಾಪುರ/ಶಿವಮೊಗ್ಗ: ಹಿಜಾಬ್ ವಿರೋಧಿಸಿ ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರತಿಭಟನೆನಡೆಸಿ, ಕಾಲೇಜಿನಲ್ಲಿ ಕಲ್ಲು ತೂರಾಟ, ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ಸೋಮವಾರ ನಡೆದಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾಧ್ಯಂತ 144 ಸೆಕ್ಷನ್ ಅಡಿಯಲ್ಲಿ 2 ದಿನ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ.

  ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು ಕಾಲೇಜಿನ ಧ್ವಜ ಸ್ತಂಭವನ್ನು ಹತ್ತಿ ಕೇಸರಿ ಧ್ವಜವನ್ನು ಹಾರಿಸಿದ್ದಾರೆ. 

 ‌‌     ಶಿವಮೊಗ್ಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ಹಿಜಾಬ್ ವಿರೋಧಿಸಿ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಪ್ರತಿಭಟನೆಗೆ ಇಳಿದಿದ್ದರು. ಜೈ ಶ್ರೀರಾಂ ಘೋಷಣೆ ಕೂಗುತ್ತಾ ಧರಣಿ, ಪ್ರತಿಭಟನೆ ನಡೆಸಿದ್ದರು. ಸ್ಥಳಕ್ಕೆ ಆಗಮಿಸಿದಂತ ಪೊಲೀಸರು ನಡುವೆ ವಾಗ್ವಾದ ನಡೆಸಿದ್ದರು. ಅಲ್ಲದೇ ಕಾಲೇಜಿನ ಆವರಣದಲ್ಲಿದ್ದಂತ ಧ್ವಜ ಕಂಬವೇರಿ ಕೇಸರಿ ಧ್ವಜವನ್ನು ಹಾರಿಸಿದ್ದರು.

      ಬಳಿಕ ಪೊಲೀಸರು ಲಾಠಿ ಚಾರ್ಜ್ ಕೂಡ ಮಾಡಲಾಗಿತ್ತು. ಸ್ವತಹ ಡಿಸಿಗಳೇ ಕಾಲೇಜಿಗೆ ಆಗಮಿಸಿ, ಮೊಕ್ಕಾಂ ಹೂಡಿ, ಪರಿಸ್ಥಿತಿ ನಿಯಂತ್ರಣಕ್ಕೆ ಮುಂದಾದರು. ಈ ನಡುವೆಯೂ ಪೊಲೀಸರ ಮೇಲೆ ಕಲ್ಲು ತೂರಾಟ, ಕಾಲೇಜು ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಈ ಎಲ್ಲಾ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ತಹಶೀಲ್ದಾರ್ ನಾಗರಾಜ್ ಅವರು ಜಿಲ್ಲೆಯಾದ್ಯಂತ 144 ಸೆಕ್ಷನ್ ಅಡಿಯಲ್ಲಿ 2 ದಿನ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಿದ್ದಾರೆ.