Adv

news21 ‌ ‌YELLAPURNews prakatane --------- ‌ ‌patanakaroct10to17pydkumar Oct9to15 ‌ ‌ ‌ ‌ ‌ oct5to15-pyd ‌‌ ‌ Vishal-sep13to-unlimited ‌ ‌ ‌ ‌ IMG-20241009-195526

Friday 11 February 2022

ರಾಜ್ಯದ ಎಲ್ಲಾ ಪಿಯುಸಿ, ಪದವಿ, ಪಿಜಿ ತರಗತಿಗಳಿಗೆ ಫೆ.16 ವರೆಗೆ ರಜೆ ವಿಸ್ತರಿಸಿ ಉನ್ನತ ಶಿಕ್ಷಣ ಇಲಾಖೆ ಆದೇಶ


 ಯಲ್ಲಾಪುರ/ಬೆಂಗಳೂರು : ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಡಿಸಿ , ಎಸ್.ಪಿ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆದು, ರಾಜ್ಯದ ಎಲ್ಲಾ ಪಿಯುಸಿ, ಪದವಿ, ಪಿಜಿ ತರಗತಿಗಳಿಗೆ ಫೆ.16 ವರೆಗೆ ರಜೆ ವಿಸ್ತರಿಸಿ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

     ರಾಜ್ಯದಲ್ಲಿ 'ಸಮವಸ್ತ್ರ' ವಿವಾದ ಹಿನ್ನೆಲೆ ಶುಕ್ರವಾರ ಸಂಜೆ ವರ್ಚುವಲ್ ಮೂಲಕ ಸಭೆ ನಡೆಸಿರುವ ಸಿಎಂ ಬೊಮ್ಮಾಯಿ, ಸಚಿವರು, ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಎಸ್ ಪಿಗಳ ಜೊತೆ ಸಿಎಂ ಬೊಮ್ಮಾಯಿ ಮಹತ್ವದ ಸಭೆ ನಡೆಸಿದರು. ವಿವಿಧ ಜಿಲ್ಲೆಯ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದಿದ್ದಾರೆ.

    ಸೋಮವಾರದಿಂದ 10ನೇ ತರಗತಿಯವರೆಗೆ ಅಂದ್ರೆ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಶಾಲೆ ಶುರುವಾಗಲಿದ್ದು, ನಂತರ ಪೂರ್ವ ವಿಶ್ವವಿದ್ಯಾಲಯ ಮತ್ತು ಪದವಿ ಕಾಲೇಜುಗಳಿಗೆ ತರಗತಿಗಳನ್ನ ಪುನರಾರಂಭಿಸಲಾಗುವುದು' ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಶುಕ್ರವಾರ ತಾಲೂಕಿನಲ್ಲಿ 7 ಕೊರೊನಾ ಸೋಂಕು ದೃಢ, ಒಟ್ಟು 42 ಸಕ್ರಿಯ

 


ಯಲ್ಲಾಪುರ : ಶುಕ್ರವಾರ ತಾಲೂಕಿನಲ್ಲಿ 7 ಕೊರೊನಾ ಸೋಂಕು ದೃಢಪಟ್ಟಿದ್ದು, ಒಟ್ಟು 42 ಸೋಂಕಿತರು ತಾಲ್ಲೂಕಿನಲ್ಲಿದ್ದಾರೆ. 18 ಜನ  ಗುಣಮುಖರಾಗಿದ್ದಾರೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ ತಿಳಿಸಿದ್ದಾರೆ.

       ಚವತ್ತಿ 1, ನಂದೊಳ್ಳಿ-ಯಲ್ಲಾಪುರ 2, ವಜ್ರಳ್ಳಿ 0, ದೆಹಳ್ಳಿ 2, ಕಿರವತ್ತಿ 0, ಕುಂದರಗಿ 1, ಮಂಚಿಕೇರಿ 1, ವಜ್ರಳ್ಳಿ 1, ಮಲವಳ್ಳಿ 0, ಕಳಚೆ 0 ಪಿಎಚ್.ಸಿ ವ್ಯಾಪ್ತಿಯಲ್ಲಿ ಕೊವಿಡ್ ಪ್ರಕರಣ ಪತ್ತೆಯಾಗಿದೆ. ಇಲ್ಲಿಯವರೆಗೂ ಒಟ್ಟು 5235 ಕೊವಿಡ್ ಪಾಸಿಟಿವ್ ಬಂದಿದೆ. 5151 ಜನ ಗುಣಮುಖರಾಗಿದ್ದಾರೆ. ಇದುವರೆಗೂ 42 ಜನ ಮೃತಪಟ್ಟಿದ್ದಾರೆ. ಇಂದು 303 ಜನರ ಗಂಟಲು ದ್ರವದ ಪರೀಕ್ಷೆ ಮಾಡಲಾಗಿದೆ. ಹಿಂದಿನ ಪರೀಕ್ಷೆಯೂ ಸೇರಿದಂತೆ 79 ಜನರ ಪರೀಕ್ಷೆ ಫಲಿತಾಂಶ ನೆಗೆಟಿವ್ ಬಂದಿದೆ. 681 ಜನರ ಪರೀಕ್ಷಾ ಫಲಿತಾಂಶ ಬರುವುದು ಬಾಕಿಯಿದೆ,  ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದಾರೆ. 

    

ಲಸಿಕೆ : ಶುಕ್ರವಾರ ಸಂಜೆವರೆಗೆ ಮೊದಲ ಡೋಸ್ 54607, ಎರಡನೇ ಡೋಸ್ 51126 ಒಟ್ಟು ಇಂದಿನವರೆಗೂ ಒಟ್ಟು 105733 ಜನರಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

ಮುಂದಿನ ವಾರದಿಂದ ಚರಂಡಿಗಳಲ್ಲಿ ಕ್ರಿಮಿನಾಶಕ ಸಿಂಪಡನೆ ; ಗುರು ಗಡಗಿ

 


ಯಲ್ಲಾಪುರ ; ಪಟ್ಟಣದಲ್ಲಿ ಈಗಾಗಲೇ ಪಟ್ಟಣ ಪಂಚಾಯಿತಿ ವತಿಯಿಂದ ವಾರ್ಡ್ ವಾರು ಸ್ವಚ್ಛತಾ ಕೆಲಸ ಮಾಡಲಾಗುತ್ತಿದೆ ಪ್ರಪಂ ಆರೋಗ್ಯ ನಿರೀಕ್ಷಕರು ಗುರು ಗಡಗಿ ತಿಳಿಸಿದ್ದಾರೆ.
    ಪಟ್ಟಣ ವ್ಯಾಪ್ತಿಯಲ್ಲಿ ಸೊಳ್ಳೆಗಳ ಕಾಟ ವಿಪರೀತ ವಾಗಿರುವ ಹಿನ್ನೆಲೆಯಲ್ಲಿ ಅವರನ್ನು ಸಂಪರ್ಕಿಸಿದಾಗ ಅವರು ಹೇಳಿಕೆ ನೀಡಿದರು. ಒಂದು ಮಳೆಯಾದರೆ ನಿಂತ ನೀರಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ಆಗುವುದರಿಂದ ಆ ಸಮಯದಲ್ಲಿ ಸೊಳ್ಳೆ ನಿವಾರಕ ಕ್ರಿಮನಾಶಕ ಸಿಂಪಡಣೆ ‌ಹಾಗೂ ಫಾಗಿಂಗ್ ಮಾಡಲಾಗುವುದು, ಮುಂದಿನ ವಾರದಿಂದ ಪಟ್ಟಣದಲ್ಲಿ ಕ್ರಿಮನಾಶಕ ಔಷಧಿ ಸಿಂಪಡಿಸಲಾಗುವುದು. ಸಾರ್ವಜನಿಕರು ಕಸವನ್ನು ತಮ್ಮ ಮನೆಯ ಅಕ್ಕಪಕ್ಕದ ಚರಂಡಿಗಳಲ್ಲಿ ಎಸೆಯದೇ ಕಸದ ವಾಹನಕ್ಕೆ ನೀಡಬೇಕು, ಯಲ್ಲಾಪುರ ಪಟ್ಟಣವನ್ನು ಸೊಳ್ಳೆ ಮುಕ್ತ ಸ್ವಚ್ಛ ಸುಂದರ ಪಟ್ಟಣವನ್ನಾಗಿಸಲು ಜನತೆ  ಸಹಕರಿಸಬೇಕು ಎಂದರು.


ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ದಕ್ಷಿಣ ಕನ್ನಡಕ್ಕೆ ವರ್ಗಾವಣೆ 


ಲ್ಲಾಪುರ/ ಕಾರವಾರ: ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್ ಕೆ (ಕೆ.ಎ.ಎಸ್) ಅವರನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಮುಂದಿನ ಆದೇಶದವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಳಿಸಲಾಗಿದೆ ಎಂದು ಸರಕಾರ ಆದೇಶ ಹೊರಡಿಸಿದೆ.

    ಜನಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕೃಷ್ಣಮೂರ್ತಿಯವರ ವರ್ಗಾವಣೆ ಸಾರ್ವಜನಿಕರಲ್ಲಿ ಅಸಮಾದಾನಕ್ಕೆ ಕಾರಣವಾಗಿದೆ.

ಫೆ.17ರಂದು ಬೆಂಗಳೂರಿನಲ್ಲಿ ಅರಣ್ಯವಾಸಿಗಳ 30 ವರ್ಷ ಹೋರಾಟದ ಸ್ಮರಣ ಸಂಚಿಕೆ ಬಿಡುಗಡೆ, ಸಂವಾದ, ಚಿಂತನ ಕೂಟ ; ರವೀಂದ್ರ ನಾಯ್ಕ


ಯಲ್ಲಾಪುರ/ಶಿರಸಿ
: ಅರಣ್ಯವಾಸಿಗಳ 30 ವರ್ಷ ಹೋರಾಟದ ಸ್ಮರಣ ಸಂಚಿಕೆ ಬಿಡುಗಡೆ, ಸರಕಾರದೊಂದಿಗೆ ಸಂವಾದ ಹಾಗೂ ರಾಜ್ಯ ಮಟ್ಟದ ಅರಣ್ಯ ಭೂಮಿ ಹಕ್ಕು ಚಿಂತನ ಕೂಟ ಕಾರ್ಯಕ್ರಮವನ್ನ ಫೇ, 17ರಂದು ಬೆಂಗಳೂರಿನಲ್ಲಿ ಸಂಘಟಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ. 
    ಅವರು ಇಂದು ಶಿರಸಿಯ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರ ವೇದಿಕೆ ಕಾರ್ಯಾಲಯದಲ್ಲಿ ಅರಣ್ಯ ಅತಿಕ್ರಮಣದಾರರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಕಾರ್ಯಕ್ರಮದಲ್ಲಿ ಸರಕಾರದ ಮಟ್ಟದ ವಿವಿಧ ಸ್ತರದ ಗಣ್ಯರನ್ನು ಆಮಂತ್ರಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. 
   ಉತ್ತರ ಕನ್ನಡ ಜಿಲ್ಲೆ ಮತ್ತು ರಾಜ್ಯದ 16 ಜಿಲ್ಲೆಗಳಲ್ಲಿ ನಿರಂತರ 30 ವರ್ಷ ಸಂಘಟನೆ, ಹೋರಾಟ, ಆಂದೋಲನ ಜರುಗಿಸಿರುವ ವೇದಿಕೆಯ ಸಮಗ್ರ ಮಾಹಿತಿ ಲೇಖನ ಹೋರಾಟದ ಕಾನೂನು ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರದ ಅರಣ್ಯ ಭೂಮಿ ಹಕ್ಕಿಗೆ ಸಂಬಂಧಿಸಿದ ಆದೇಶವನ್ನು 106 ಪುಟಗಳ ಸಮಗ್ರ ದಾಖಲೆಗಳೊಂದಿಗೆ ಸ್ಮರಣ ಸಂಚಿಕೆಯು ಒಳಗೊಂಡಿರುತ್ತದೆ ಎಂದು ಅವರು ಹೇಳಿದರು. 
 

 ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ತಾಲೂಕ ಅಧ್ಯಕ್ಷ ಲಕ್ಕಣ ಮಾಳ್ಳಕ್ಕನವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ರಾಜು ನೇತ್ತೇಕರ್, ರಾಜು ನರೇಬೈಲ್, ದೇವರಾಜ ಮರಾಠಿ, ಚಂದ್ರು ನಾಯ್ಕ, ಇಬ್ರಾಹಿಂ ಗೌಡಳ್ಳಿ, ನೇಹರೂ ನಾಯ್ಕ ಬಿಳೂರು, ನಾರಾಯಣ ಸರ್ವಾ ಗೌಡ, ಲಕ್ಷ್ಮಣ ನಾಯ್ಕ ದೊಡ್ಡಣ್ಣ, ವಿದ್ಯಾಧರ ಶೆಟ್ಟಿ, ಗಣಪತಿ ನಾಯ್ಕ ಗೋಳಿ ಮುಂತಾದವರು ಉಪಸ್ಥಿತರಿದ್ದರು. 

 ರಾಜ್ಯ ಮಟ್ಟದ ಚಿಂತನ ಕೂಟ: 
ವಿವಿಧ ರೈತ ಸಂಘಟನೆ. ನೀವೃತ್ತ ನ್ಯಾಯಮೂರ್ತಿಗಳು, ಕಾನೂನು ತಜ್ಞರು ವಿವಿಧ ಸಂಘಟನೆಗಳ ಧುರಿಣರು ಹಾಗೂ ರಾಜಕೀಯ ಧುರೀಣರೊಂದಿಗೆ ಭೂಮಿ ಹತ್ತು ಚಿಂತನ ಕೂಟವನ್ನು ಇದೇ ಸಂದರ್ಭದಲ್ಲಿ ಸಂಘಟಿಸಲಾಗಿದ್ದು, ಭೂಮಿ ಹಕ್ಕಿಗೆ ಕ್ರೀಯಾತ್ಮಕ ಹಾಗೂ ಕಾನೂನಾತ್ಮಕ ಮುಂದಿನ ಹೋರಾಟದ ರೂಪರೇಷೆಯನ್ನು ಚಿಂತನ ಕೂಟದಲ್ಲಿ ನಿರ್ಧರಿಸಲಾಗುವುದು ಎಂದು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.

ಉಕ್ರೇನ್ ತೊರೆಯಲು ಅಮೆರಿಕನ್ ನಾಗರಿಕರಿಗೆ ಬಿಡೆನ್ ಮನವಿ,


 ಯಲ್ಲಾಪುರ/ಹೊಸದಿಲ್ಲಿ: ರಷ್ಯಾ ಮತ್ತು ಉಕ್ರೇನ್ ನಡುವಿನ ಘರ್ಷಣೆಗಳು ಮತ್ತು ಪರಿಸ್ಥಿತಿ ಇನ್ನಷ್ಟು ಹದಗೆಡುವ ಆತಂಕವನ್ನು ಗಮನದಲ್ಲಿಟ್ಟುಕೊಂಡು ಆದಷ್ಟು ಬೇಗ ಉಕ್ರೇನ್ ತೊರೆಯುವಂತೆ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ತಮ್ಮ ಅಮೆರಿಕದ ನಾಗರಿಕರಿಗೆ ಮನವಿ ಮಾಡಿದ್ದಾರೆ.

     ಉಕ್ರೇನ್‌ನಲ್ಲಿ ನೆಲೆಸಿರುವ ಅಮೇರಿಕನ್ ನಾಗರಿಕರಿಗೆ ಅಮೆರಿಕ ಅಧ್ಯಕ್ಷರು ಎಚ್ಚರಿಕೆ ನೀಡಿದ್ದಾರೆ. ಪರಿಸ್ಥಿತಿ ಹದಗೆಡುತ್ತಿರುವ ಬಗ್ಗೆ ಮತ್ತು ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡುವ ಬಗ್ಗೆ ಅಮೆರಿಕ ಈಗಾಗಲೇ ತನ್ನ ಆತಂಕವನ್ನು ವ್ಯಕ್ತಪಡಿಸಿದೆ.

    ರಷ್ಯಾ ಮತ್ತು ಉಕ್ರೇನ್ ನಡುವಿನ ಹೆಚ್ಚುತ್ತಿರುವ ಸಂಘರ್ಷದ ದೃಷ್ಟಿಯಿಂದ, ಅಮೆರಿಕ ಕೂಡ ಸಂಪೂರ್ಣ ಜಾಗರೂಕವಾಗಿದೆ ಮತ್ತು ಅದೇ ಸಮಯದಲ್ಲಿ ಅಮೇರಿಕಾ ತನ್ನ ನಿಯೋಜಿತ ಪಡೆಗಳ ಸಂಖ್ಯೆಯನ್ನು ಹೆಚ್ಚಿಸಲು ನಿರ್ಧರಿಸಿದೆ. ಪ್ರಸ್ತುತ, ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಬಹುದು ಎಂದು ಹಲವು ದೇಶಗಳು ಊಹಿಸುತ್ತಿವೆ. ರಷ್ಯಾ ಹಾಗೆ ಮಾಡಿದರೆ, ಇದನ್ನು ಗಮನದಲ್ಲಿಟ್ಟುಕೊಂಡು, ಅಮೆರಿಕ ಮತ್ತು ಇತರ ಹಲವು ದೇಶಗಳು ರಷ್ಯಾದ ಮೇಲೆ ಪೂರ್ಣ ಸಮಯದ ನಿರ್ಬಂಧಗಳನ್ನು ವಿಧಿಸುವ ಬಗ್ಗೆ ಚಿಂತಿಸುತ್ತಿವೆ.

   ರಷ್ಯಾ ಮತ್ತು ಉಕ್ರೇನ್ ನಡುವಿನ ವಾತಾವರಣವು ಅತ್ಯಂತ ಭಯಾನಕ ಮಟ್ಟಕ್ಕೆ ಹೋಗಬಹುದು ಎಂದು ಯುಎಸ್ ಅಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ. "ಅಮೆರಿಕನ್ ನಾಗರಿಕರು ಶೀಘ್ರದಲ್ಲೇ ಉಕ್ರೇನ್‌ನಿಂದ ಹೊರಬರಬೇಕು. ನಾವು ವಿಶ್ವದ ಅತ್ಯುತ್ತಮ ಮಿಲಿಟರಿ ಪಡೆಗಳಲ್ಲಿ ಒಂದನ್ನು ಎದುರಿಸುತ್ತಿದ್ದೇವೆ."

    ರಷ್ಯಾ ಮತ್ತು ಉಕ್ರೇನ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನ ಪರಿಸ್ಥಿತಿ ಸಾಮಾನ್ಯವಲ್ಲ ಮತ್ತು ಇದು ಇತರ ಸಂದರ್ಭಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ ಎಂದು ಜೋ ಬಿಡೆನ್  ಹೇಳಿದ್ದಾರೆ.

     ಈ ಹಿನ್ನೆಲೆಯಲ್ಲಿ ಶುಕ್ರವಾರ ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ಸಭೆ ಆಯೋಜಿಸಲಾಗಿದೆ. ಸಭೆಯಲ್ಲಿ ಆಸ್ಟ್ರೇಲಿಯಾದ ವಿದೇಶಾಂಗ ಸಚಿವ ಮೋರಿಸ್ ಪೇನ್, ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್, ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಮತ್ತು ಜಪಾನ್ ವಿದೇಶಾಂಗ ಸಚಿವ ಹಯಾಶಿ ಯೋಶಿಮಾಶಾ ಭಾಗವಹಿಸಲಿದ್ದಾರೆ.

(ಯಲ್ಲಾಪುರ ನ್ಯೂಸ್ ನ್ಯೂಸ್ ಡೆಸ್ಕ್)

ಕೊರೊನಾ ಸಂಕಟ ಕಡಿಮೆಯಾಗುತ್ತಿದ್ದಂತೆ ಯಲ್ಲಾಪುರದಲ್ಲಿ ಹೆಚ್ಚಾದ ಸೊಳ್ಳೆಗಳ ಕಾಟ

IMG-20220211-110943 IMG-20220211-110927

ಪುಟಪಾತ್ ಹೊಂಡದಲ್ಲಿ ಬಿದ್ದ ವ್ಯಕ್ತಿಯ ವೈದ್ಯಕೀಯ ವೆಚ್ಚ ಭರಿಸಲು ನಿಯಮದಲ್ಲಿ ಅವಕಾಶವಿಲ್ಲ ; ಪ.ಪಂ ಅಧ್ಯಕ್ಷೆ ಸುನಂದಾ ದಾಸ್

IMG-20220211-094158 IMG-20220211-094145

'ಶಿರಸಿ ಮಾರಿಕಾಂಬಾ ಜಾತ್ರೆ: ಅಂತಿಮವಾಗಿ ಸರಕಾರದ ತಿರ್ಮಾನಕ್ಕೆ ಬದ್ಧರಾಗಿರಬೇಕು' ಜಾತ್ರೆಯ ಪೂರ್ವ ಸಿದ್ಧತೆಗೆ ಜಿಲ್ಲಾಧಿಕಾರಿ ಗ್ರೀನ್ ಸಿಗ್ನಲ್'

IMG-20220211-075548 IMG-20220211-075539

ಕೆಡಿಡಿಸಿಯಿಂದ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ತರಬೇತಿ

IMG-20220211-054333 IMG-20220211-054320