Adv

Manoj-till-may-18-ntpyd Kesar-till-may-18-ntpyd IMG-20240514-234509 Kamakshi-hrushikesh-may18-ntpyd Bidremane-till-may12-0-5k-ntpyd Kesar-may1-to-7-not-paid DNGoankr-may-5to9-6k-ntpyd Hebbar-till-may16

Monday 14 February 2022

ಭುವನಗಿರಿಯಲ್ಲಿ“ನಮೋ ಭುವನೇಶ್ವರಿ" ಕವಿ ಗೋಷ್ಠಿ ಕಾರ್ಯಕ್ರಮ

 ಭುವನಗಿರಿಯಲ್ಲಿ“ನಮೋ ಭುವನೇಶ್ವರಿ" ಕವಿ ಗೋಷ್ಠಿ ಕಾರ್ಯಕ್ರಮ


ಕುಮಟಾ: ನೂತನವಾಗಿ ಅಸ್ಥಿತ್ವಕ್ಕೆ ಬಂದ ಕುಮಟಾ ಕನ್ನಡ ಸಂಘವು 

ಕನ್ನಡಾಂಬೆಯ ಏಕಮೇವ ದೇವಾಲಯವಿರುವ ಸಿದ್ದಾಪುರ ತಾಲೂಕಿನ ಭುವನಗಿರಿಯ ಪುಣ್ಯ ನೆಲದಲ್ಲಿ ಫೆ.27 ರಂದು ರವಿವಾರ “ನಮೋ ಭುವನೇಶ್ವರಿ” ಕಾರ್ಯಕ್ರಮ 

ನಡೆಸಲಿದೆ ಎಂದು ಸಂಘದ ಸಂಸ್ಥಾಪಕ ಕಾರ್ಯಾಧ್ಯಕ್ಷ ಸದಾನಂದ ದೇಶಭಂಡಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

      “ನಮೋ ಭುವನೇಶ್ವರಿ”ಎಂಬ ಶೀರ್ಷಿಕೆಯಲ್ಲಿ ವಿನೂತನವಾಗಿ ಕಾರ್ಯಕ್ರಮವನ್ನು ಸಂಘಟಿಸಲಾಗಿದ್ದು, ಜಿಲ್ಲಾ ಮಟ್ಟದ ಕವಿಗೋಷ್ಟಿಯನ್ನು ಆಯೋಜಿಸಲಾಗಿದೆ.

ಉತ್ತರಕನ್ನಡ ಜಿಲ್ಲೆಯ 12 ತಾಲೂಕುಗಳ ಕವಿಗಳು ಗೋಷ್ಠಿಯಲ್ಲಿ ಪಾಲ್ಗೊಳ್ಳಬಹುದಾಗಿದ್ದು, ಆಸಕ್ತ ಕವಿಗಳು ಫೆ.20 ರೊಳಗಾಗಿ ತಮ್ಮ ಹೆಸರನ್ನು ದೂರವಾಣಿ ಸಂಖ್ಯೆ- 9448321920 ರಲ್ಲಿ ನೊಂದಾಯಿಸಿ ಕೊಳ್ಳಬಹುದಾಗಿದೆ. ಕಾರ್ಯಕ್ರಮವು ಫೆ. 27ರಂದು ರವಿವಾರದಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದ್ದು,. ಕನ್ನಡಾಭಿಮಾನಿಗಳು ಬಹುಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಅವರು ವಿನಂತಿಸಿರುತ್ತಾರೆ.

ಸೋಮವಾರ ತಾಲೂಕಿನಲ್ಲಿ ಇಬ್ಬರಿಗೆ ಕೊರೊನಾ ಸೋಂಕು ದೃಢ, ಒಟ್ಟು 23 ಸಕ್ರಿಯ

 ಸೋಮವಾರ ತಾಲೂಕಿನಲ್ಲಿ ಇಬ್ಬರಿಗೆ ಕೊರೊನಾ ಸೋಂಕು ದೃಢ, ಒಟ್ಟು 23 ಸಕ್ರಿಯ  


ಯಲ್ಲಾಪುರ : ಸೋಮವಾರ ತಾಲೂಕಿನಲ್ಲಿ ಇಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಒಟ್ಟು 23 ಸೋಂಕಿತರು ತಾಲ್ಲೂಕಿನಲ್ಲಿದ್ದಾರೆ. 9 ಜನ  ಗುಣಮುಖರಾಗಿದ್ದಾರೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ ತಿಳಿಸಿದ್ದಾರೆ.

       ಚವತ್ತಿ 0, ನಂದೊಳ್ಳಿ-ಯಲ್ಲಾಪುರ 1, ವಜ್ರಳ್ಳಿ 0, ದೆಹಳ್ಳಿ 0, ಕಿರವತ್ತಿ 1, ಕುಂದರಗಿ 0, ಮಂಚಿಕೇರಿ 0, ವಜ್ರಳ್ಳಿ 0, ಮಲವಳ್ಳಿ 0, ಕಳಚೆ 0 ಪಿಎಚ್.ಸಿ ವ್ಯಾಪ್ತಿಯಲ್ಲಿ ಕೊವಿಡ್ ಪ್ರಕರಣ ಪತ್ತೆಯಾಗಿದೆ. ಇಲ್ಲಿಯವರೆಗೂ ಒಟ್ಟು 5240 ಕೊವಿಡ್ ಪಾಸಿಟಿವ್ ಬಂದಿದೆ. 5175 ಜನ ಗುಣಮುಖರಾಗಿದ್ದಾರೆ. ಇದುವರೆಗೂ 42 ಜನ ಮೃತಪಟ್ಟಿದ್ದಾರೆ. ಇಂದು 299 ಜನರ ಗಂಟಲು ದ್ರವದ ಪರೀಕ್ಷೆ ಮಾಡಲಾಗಿದೆ. ಹಿಂದಿನ ಪರೀಕ್ಷೆಯೂ ಸೇರಿದಂತೆ 505 ಜನರ ಪರೀಕ್ಷೆ ಫಲಿತಾಂಶ ನೆಗೆಟಿವ್ ಬಂದಿದೆ. 285 ಜನರ ಪರೀಕ್ಷಾ ಫಲಿತಾಂಶ ಬರುವುದು ಬಾಕಿಯಿದೆ,  ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದಾರೆ. 

ಅರಣ್ಯವಾಸಿಗಳ ಪರವಾಗಿ ನಿರಂತರ ಹೋರಾಟಕ್ಕೆ ಹೋರಾಟಗಾರರ ವೇದಿಕೆ ಬದ್ಧ

IMG-20220214-071935 IMG-20220214-071935 IMG-20220214-071935

30ಕ್ಕೂ ಹೆಚ್ಚು ಪೌರ ಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳಿಗೆ ಸುರಕ್ಷಾ ಪರಿಕರಗಳ ವಿತರಣೆ

 

IMG-20220214-071935IMG-20220214-071935IMG-20220214-071935

ಅರಣ್ಯ ಭೂಮಿ ಹಕ್ಕು ಭೀಕ್ಷೆ ಅಲ್ಲ, ದಾನ ಅಲ್ಲ ; ಸಂವಿಧಾನ ಬದ್ಧ ಹಕ್ಕು

 

IMG-20220214-071935IMG-20220214-071935IMG-20220214-071935

ಕಳಚೆಯ ಬ್ರದರ್ ಹುಡ್ ಕ್ರಿಕೆಟ್ ‌ಕಪ್ ಈರಾಪುರ ತಂಡಕ್ಕೆ

 

IMG-20220214-071935IMG-20220214-071935IMG-20220214-071935IMG-20220214-071935

ರವಿವಾರದ ರಾತ್ರಿ ಸಂತೆ ; ತರಕಾರಿ ಹಣ್ಣು ಸಸ್ತಾ ಸಸ್ತಾ

 

IMG-20220214-071935IMG-20220214-071923IMG-20220214-071915