

ಯಲ್ಲಾಪುರ/ಶಿರಸಿ: ಅರಣ್ಯವಾಸಿಗಳ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆಶ್ರಯದಲ್ಲಿ ಜಿಲ್ಲೆ ಮತ್ತು ರಾಜ್ಯದಲ್ಲಿ ಅರಣ್ಯ ಭೂಮಿ ಹಕ್ಕಿನ ಹೋರಾಟವು 32 ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಸಪ್ಟೆಂಬರ್ 13, ಮಂಗಳವಾರ ಶಿರಸಿಯಲ್ಲಿ ಅರಣ್ಯವಾಸಿಗಳ ಸಮಸ್ಯೆಗಳನ್ನ ಸರಕಾರದ ಗಮನ ಸೆಳೆಯುವ ಉದ್ದೇಶದಿಂದ ಬೆಳಿಗ್ಗೆ 10 ಗಂಟೆಗೆ ಶಿರಸಿ ಮಾರಿಕಾಂಬಾ ದೇವಾಲಯದ ಎದುರು 'ಉರುಳು ಸೇವೆ' ಹಾಗೂ ತದನಂತರ ಮಾರಿಕಾಂಬಾ ಕಲ್ಯಾಣ ಮಂಟಪದಲ್ಲಿ ಸಭೆ ಜರುಗಿಸಲಾಗುತ್ತಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರಣ್ಯ ಹಕ್ಕು ಕಾಯಿದೆಯಲ್ಲಿ ಸುಮಾರು 85,000 ಅರಣ್ಯವಾಸಿಗಳು ಅರ್ಜಿ ಸಲ್ಲಿಸಿದ್ದು, ಸರಕಾರ ಮತ್ತು ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಹಾಗೂ ಕಾನೂನಿನಲ್ಲಿ ವ್ಯತಿರಿಕ್ತವಾಗಿ ಕಾನೂನಿನ ವಿಧಿವಿಧಾನ ಅನುಸರಿಸದೇ 3 ದಶಕದಿಂದ ಅರಣ್ಯ ಭೂಮಿ ಹಕ್ಕಿಗಾಗಿ ವಿವಿಧ ರೀತಿಯ ಹೋರಾಟ ಜರುಗಿದ್ದಾಗಿಯೂ ಅರಣ್ಯವಾಸಿಗಳು ಭೂಮಿ ಹಕ್ಕಿನಿಂದ ವಂಚಿತರಾಗುತ್ತಿರುವುದು ವಿಷಾದಕರ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಹಾಗೂ ನಂತರ ಜರುಗುವ ಸಭೆಯಲ್ಲಿ ಮುಂದಿನ ತಿಳಿಸಿದರು. ಹೋರಾಟದ ರೂಪುರೇಷೆ ನಿರ್ಧರಿಸಲಾಗುವುದೆಂದು ಅವರು
ಆಸಕ್ತ ಅರಣ್ಯ ಅತಿಕ್ರಮಣದಾರರು ಕಾರ್ಯಕ್ರಮಕ್ಕೆ ಆಗಮಿಸಬೇಕಾಗಿ ರವೀಂದ್ರ ನಾಯ್ಡ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಯಲ್ಲಾಪುರ ಪ್ರಾಥಮಿಕ ಪತ್ತಿನ ವ್ಯವಸಾಯ ಸೇವಾ ಸಹಕಾರಿ ಸಂಘ. ಗ್ರಾಮ ಪಂಚಾಯತ್ ನಂದೊಳ್ಳಿ. ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ನಂದೊಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಸೆ.10 ಮಧ್ಯಾಹ್ನ 2.00 ರಿಂದ 5.00 ರವರೆಗೆ ನಂದೊಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 'ಉಚಿತ ಆರೋಗ್ಯ ತಪಾಸಣಾ ಶಿಬಿರ' ಏರ್ಪಡಿಸಲಾಗಿದೆ.
ಕೆ.ಎಸ್. ಹೆಗ್ಡೆ ಆಸ್ಪತ್ರೆ ಆಸ್ಪತ್ರೆಯ ನುರಿತ ವೈದ್ಯರುಗಳಾದ ಡಾ. ಧನಂಜಯ್ ಕುಮಾರ್ (ಶಸ್ತ್ರಚಿಕಿತ್ಸಾ ತಜ್ಞರು), ಡಾ| ವರುಣ್ ಎಲ್. ಶೆಟ್ಟಿ (ಎಲುಬು ಮತ್ತು ಕೀಲು ತಜ್ಞರು ಹಾಗೂ ಮಕ್ಕಳ ಎಲುಬು ಮತ್ತು ಕೀಲು ತಜ್ಞರು), ಡಾ| ರಾಜೇಶ್ವರಿ. ಎ (ಕಿವಿ ಮೂಗು ಗಂಟಲು ತಜ್ಞರು), ಡಾ| ಭಾರ್ಗವ್ ಕಾರಂತ (ವೈದ್ಯಕೀಯ ತಜ್ಞರು) ರೋಗಿಗಳ ತಪಾಸಣೆ ಮಾಡಲಿದ್ದಾರೆ.
ವೈದ್ಯರು ಸೂಚಿಸಿದವರಿಗೆ ರಕ್ತದ ಒತ್ತಡ ಮತ್ತು ಮಧುಮೇಹ ಪರೀಕ್ಷೆ ಹಾಗೂ ಈ ಸಿ ಜಿ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುವುದು. ಸಾಮಾನ್ಯ ಔಷಧಗಳನ್ನು ಉಚಿತವಾಗಿ ನೀಡಲಾಗುವುದು.
ಶಿಬಿರದಲ್ಲಿ ಜನರಲ್ ಮೆಡಿಸಿನ್, ಶ್ವಾಸಕೋಶ ಸಂಬಂಧಿ ಖಾಯಿಲೆಗಳು, ಕಿವಿ ಮೂಗು ಗಂಟಲು ಚಿಕಿತ್ಸೆ, ಹೃದಯರೋಗ, ಶಸ್ತ್ರಚಿಕಿತ್ಸೆ ವಿಭಾಗ, ಎಲುಬು ಮತ್ತು ಕೀಲು ಚಿಕಿತ್ಸೆ, ಬೆನ್ನುಮೂಳೆ ಚಿಕಿತ್ಸೆ, ಮೊಣಕಾಲಿನ ಚಿಕಿತ್ಸೆ, ಕ್ಯಾನ್ಸರ್ ಚಿಕಿತ್ಸೆ ಅಪೆಂಡಿಕ್ಸ್, ಅಲ್ಸರ್ ಥೈರಾಯಿಡ್, ಹರ್ನಿಯಾ ಚಿಕಿತ್ಸೆ, ಗರ್ಭಕೋಶದ ಗಡ್ಡೆ, ಮೂಲವ್ಯಾಧಿ. ಸಂಧಿವಾತ, ಉದರ ಸಂಬಂಧಿ ಖಾಯಿಲೆ, ವರಿಕೋಸ್ ವೇನ್, ನರ ಸಂಬಂಧಿ ಚಿಕಿತ್ಸೆಗಳ ತಪಾಸಣೆ ನಡೆಸಲಾಗುವುದು.
ವೈದ್ಯರು ತಪಾಸಣೆ ಮಾಡಿರುವ ಹಳೆ ಚೀಟಿ ಇದ್ದಲ್ಲಿ ತಪ್ಪದೇ ತರಬೇಕು. ಆಯುಷ್ಮಾನ್ ಯೋಜನೆಯಡಿ ಅರ್ಹ ರೋಗಿಗಳಿಗೆ ಸಾಮಾನ್ಯ ವಾರ್ಡ್‌ನಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು. ಶಿಬಿರದಲ್ಲಿ ಕ್ಷೇಮ ಹೆಲ್ತ್ ಕಾರ್ಡ್ ನೋಂದಾವಣೆ ಮಾಡಲಾಗುತ್ತದೆ ಎಂದು ಶಿಬಿರದ ಆಯೋಜಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ, ನಾಗರಾಜ ಕವಡಿಕೇರಿ- 9449500718, ಟಿ ಆರ್ ಹೆಗಡೆ- 9448344900, ನರಸಿಂಹ ಕೋಣೆಮನೆ- 9448302538 ಇವರನ್ನು ಸಂಪರ್ಕಿಸಲು ಕೋರಲಾಗಿದೆ.
ವಿಶ್ವದರ್ಶನ ಪಿ.ಯು ಕಾಲೇಜಿನ ವಿಧ್ಯಾರ್ಥಿಗಳಿಗೆ ಕರಿಯರ್ ಅಕಾಡೆಮಿ ಸಂಯೋಜನೆಯಲ್ಲಿ ಸಿ ಏ, ಸಿ ಎಸ್ ಹಾಗೂ ಬ್ಯಾಂಕಿಂಗ್ ಪರೀಕ್ಷೆಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ, ವಿಶೇಷ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು. ನಾವು ಕನಸು ಕಾಣುವುದು ಸಹಜ ಆದರೆ ನಮ್ಮ ಕನಸನ್ನು ನನಸಾಗಿ ಮಾಡುವುದೇ ಸಾಹಸ. ಹಾಗಾಗಿ ನಿಮ್ಮ ಕನಸು ಈಡೇರಲು ಪ್ರಯತ್ನ ಮಾಡಿ ಎಂದು ಕರೆ ನೀಡಿದರು.
ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ ಚಾರ್ಟೆಡ್ ಅಕೌಂಟೆಂಟ್ ಆದ ವಿಘ್ನೇಶ್ವರ ಗಾಂವ್ಕರ್ ಮಾತನಾಡಿ, ಇಂದಿನ ವಿದ್ಯಾರ್ಥಿಗಳಿಗೆ ಒಳ್ಳೆಯ ತರಬೇತಿಗಳು ಅವರ ಹತ್ತಿರದಲ್ಲೇ ವ್ಯವಸ್ಥೆ ಆಗಿರುವುದರಿಂದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಸಿ. ಏ,ಸಿ ಎಸ್, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪರೀಕ್ಷೆ ಎದುರಿಸಬಹುದು ಎಂದರು.
ಇನ್ನೋರ್ವ ಅತಿಥಿ ಚಾರ್ಟೆಡ್ ಅಕೌಂಟೆಂಟ್ ಅಶ್ವಿನಿ ಹೆಗಡೆ ಮಾತನಾಡಿ, ವಿಶ್ವದರ್ಶನ ಸಂಸ್ಥೆ ಈಗಿನ ಅವಶ್ಯಕ ವ್ಯವಸ್ಥೆ ಇಲ್ಲಿಯೇ ಕಲ್ಪಿಸಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಸಾಧ್ಯತೆ ಹೆಚ್ಚಿದೆ ಎಂದರು.
ಸಂಸ್ಥೆಯ ಕಾರ್ಯದರ್ಶಿಗಳಾದ ನರಸಿಂಹ ಕೋಣೆಮನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳಾದ ವಿನುತಾ ಗಾಂವ್ಕರ್ ಪ್ರಾರ್ಥಿಸಿದಳು. ಉಪನ್ಯಾಸಕಿ ವಿದ್ಯಾ ಹೆಗಡೆ ಸ್ವಾಗತಿಸಿದರು. ಪೃಥ್ವಿ ಗಾಂವ್ಕರ್ ನಿರ್ವಹಿಸಿದರು. ಉಪನ್ಯಾಸಕ ಸಚಿನ್ ಭಟ್ ಪ್ರಸ್ತಾಪಿಸಿದರು. ಚೇತನಾ ಭಟ್ ವಂದಿಸಿದರು.
ಸಂಸ್ಥೆಯ ವ್ಯವಸ್ಥಾಪಕರಾದ ಗುರುರಾಜ ಕುಂದಾಪುರ, ಉಪನ್ಯಾಸಕರುಗಳಾದ ನಾಗರಾಜ ಹೆಗಡೆ, ನಾಗರಾಜ ಹೆಗಡೆ, ಸಚಿನ್ ಭಟ್, ಕವಿತಾ ಹೆಬ್ಬಾರ, ವಿದ್ಯಾ ಹೆಗಡೆ, ಕರಿಯರ್ ಅಕಾಡೆಮಿ ಕೋ_ ಅರ್ಡಿನೇಟರ್ ಪ್ರಸನ್ನ ಭಟ್ ಹಾಗೂ ಎಲ್ಲಾ ಉಪನ್ಯಾಸಕ ಬಳಗದ ಸಹಭಾಗಿತ್ವದಲ್ಲಿ ಕಾರ್ಯಕ್ರಮ ನೆರವೇರಿತು.
ಯಲ್ಲಾಪುರ : ತಾಲ್ಲೂಕಿನಿಂದ ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟಕ್ಕೆ ಪ್ರತಿನಿಧಿಸಿದ ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಪ್ರದರ್ಶಿಸಿದ ವಿಜ್ಞಾನದ ಅಕಟಕಟಾ ಶೀರ್ಷಿಕೆಯ ನಾಟಕವು ಜಿಲ್ಲಾ ಮಟ್ಟದಲ್ಲಿ ಎರಡನೇ ಸ್ಥಾನ ಪಡೆದಿದೆ.
ಬುಧವಾರ ಶಿರಸಿ ನಗರದ ಅವೆಮೇರಿಯಾ ಪ್ರೌಢಶಾಲೆಯಲ್ಲಿ ಜರುಗಿದ ಹತ್ತು ಪ್ರೌಢಶಾಲೆಯ ನಾಟಕ ತಂಡಗಳು ಭಾಗವಹಿಸಿದ್ದವು.
ಸ್ಪರ್ಧೆಯಲ್ಲಿ ವಿಜೇತರಾದ ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯ ವಿದ್ಯಾರ್ಥಿನಿಯರು ದ್ವಿತೀಯ ಪ್ರಶಸ್ತಿ ಪಡೆದು, ಪ್ರಶಸ್ತಿ ಪತ್ರ, ನಗದು ಬಹುಮಾನದ ಗೌರವವನ್ನು ಪಡೆದರು.
ಆರೋಗ್ಯ ಲಸಿಕೆಯ ಮಹತ್ವಸಾರುವ "ಅಕಟಕಟಾ" ನಾಟಕದಲ್ಲಿ ಶಾಲೆಯ ವಿದ್ಯಾರ್ಥಿನಿಯರಾದ ಸುಮೇಧಾ ಗಾಂವ್ಕಾರ, ದೀಕ್ಷಾ ಭಟ್ಟ, ಶ್ವೇತಾ ಗಾಂವ್ಕಾರ, ಸಿಂಧು ಆಚಾರಿ, ಧನ್ಯಶ್ರೀ ಕೋಮಾರ, ಭಾವನಾ ಭಟ್ಟ, ಗೌತಮಿ ಕೋಮಾರ, ವಿದ್ಯಾ ನಾಯ್ಕ, ಭೂಮಿಕಾ, ನಾಗಶ್ರೀ, ಪವಿತ್ರಾ, ರಕ್ಷಿತಾ, ಪಾತ್ರವಹಿಸಿದ್ದರು.
ಪ್ರೌಢಶಾಲೆಯ ಹಂತದಲ್ಲಿ ವಿಜ್ಞಾನ ವಿಭಾಗದಲ್ಲಿ ಒಟ್ಟೂ ನಾಲ್ಕು ವಿಷಯಗಳಲ್ಲಿ ಒಂದರ ಕುರಿತಾಗಿ ಮೂವತ್ತು ನಿಮಿಷದ ಕಾಲಮಿತಿಯಲ್ಲಿ ನಾಟಕವನ್ನು ಪ್ರದರ್ಶಿಸಬೇಕಾಗಿತ್ತು.
ಈ ಸಂದರ್ಭದಲ್ಲಿ ಸರ್ವೋದಯ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿ ಸರೋಜಾ ಭಟ್ಟ, ಶಿಕ್ಷಕರಾದ ಚಿದಾನಂದ ಹಳ್ಳಿ, ರವೀಂದ್ರ ಗಾಂವ್ಕಾರ, ದತ್ತಾತ್ರೇಯ ಭಟ್ಟ ಉಪಸ್ಥಿತರಿದ್ದರು.
ಅಕಟಕಟಾ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಸಾಧನೆ ಮಾಡಿ ವಿಜೇತರಾದ ವಿದ್ಯಾರ್ಥಿನಿಯರನ್ನು ಸರ್ವೋದಯ ಶಿಕ್ಷಣ ಸಮಿತಿಯ ಅಧ್ಯಕ್ಷ ಡಿ.ಶಂಕರ. ಭಟ್, ಗೌರವ ಕಾರ್ಯದರ್ಶಿ ಆರ್ ಎ ಭಟ್ ತೋಟ್ಮನೆ, ಉಪಾಧ್ಯಕ್ಷರಾದ ವಿ ಎನ್ ಭಟ್ಟ, ಹಾಗೂ ಸಮಿತಿಯ ಸದಸ್ಯರು, ಮುಖ್ಯಾಧ್ಯಾಪಕ ಎಮ್ ಕೆ ಭಟ್ಟ ಮತ್ತು ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.