ಅವರು ಅಕ್ಟೋಬರ್.15 ರಂದು ಕರ್ನಾಟಕ ಜರ್ನಲಿಸ್ಟ್ ಯೂನಿಯನ್, ಸಿದ್ದಾಪುರದ ಆಯುರ್ವೇದ ಮಹಾವಿದ್ಯಾಲಯ ಹಾಗೂ ತಾಲೂಕಾ ಆಸ್ಪತ್ರೆಗಳ ಸಹಯೋಗದಲ್ಲಿ ಪಟ್ಟಣದ ತಾಲೂಕಾ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಪಂಚಾಯತ ರಾಜ್ಯ ವಿಕೇಂದ್ರೀಕರಣ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ರೋಗಕ್ಕೆ ಚಿಕಿತ್ಸೆ ಒಂದು ವಿಧಾನವಾಗಿರುವಂತೆ, ರೋಗವೇ ಬಾರದಂತೆ ತಡೆಯುವುದು ಇನ್ನೊಂದು ಕ್ರಮವಾಗಿದೆ. ಎಲ್ಲರೂ ರೋಗ ಬಾರದಂತೆ ಮುಂಜಾಗ್ರತೆ ವಹಿಸಿದರೆ ಆರೋಗ್ಯವಂತರಾಗಿ ಬದುಕಬಹುದು ಎಂದರು.
ಸಿದ್ದಾಪುರ ಧನ್ವಂತರಿ, ಆರ್ಯುವೇದ ಕಾಲೇಜು ಪ್ರಾಚಾರ್ಯೆ ಡಾ.ರೂಪಾ ಭಟ್ಟ ಮಾತನಾಡಿ, ಊಟ ಮಾಡುವುದು ಜೀವನಕ್ಕಾಗಿ, ನಾವೇನನ್ನಾದರೂ ಗಳಿಸಿದರೆ ಉತ್ತಮ ಆರೋಗ್ಯ ಸಿದ್ದಿಸಬೇಕು. ಆಯುರ್ವೇದ ಜೀವನ ಚಿಕಿತ್ಸಾ ಪದ್ದತಿ. ರೋಗ ಬಾರದಂತೆ ನೋಡಿಕೊಳ್ಳುವ ರೂಢಿ ಅಳವಡಿಸಿಕೊಳ್ಳಬೇಕು. ನಮ್ಮ ದೈನಂದಿನ ಜೀವನ ಪದ್ದತಿಯನ್ನು ಹಿಂದಿನವರಂತೆ ಬದಲಾಯಿಸಿಕೊಳ್ಳಬೇಕಾಗಿದೆ. ಮಾನಸಿಕ ಆರೋಗ್ಯ ಕಾಯ್ದುಕೊಳ್ಳಲು ವಿದೇಶಿಯರು ಆಯುರ್ವೇದದ ಮೊರೆ ಹೋಗುತ್ತಿದ್ದಾರೆ, ಆದರೆ ನಮ್ಮವರು ಆಯುರ್ವೇದದಿಂದ ದೂರವಾಗುತ್ತಿದ್ದಾರೆ. ಆಯುರ್ವೇದದಲ್ಲಿ ದುಷ್ಪರಿಣಾಮವಿಲ್ಲ ಎಂದು ಹೇಳಿದರು.
ತಾಲೂಕಾ ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ ಮಾತನಾಡಿ, ಆಯುರ್ವೇದದಲ್ಲಿ ಅನೇಕ ರೀತಿಯ ಚಿಕಿತ್ಸೆ ನೀಡಬಹುದಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷ ಶಂಕರ ಭಟ್ಟ ತಾರೀಮಕ್ಕಿ ಮಾತನಾಡಿದರು.
ಪ.ಪಂ ಅಧ್ಯಕ್ಷೆ ಸುನಂದಾ ದಾಸ್, ಪ.ಪಂ ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ, ಕೆ.ಜೆ.ಯು ರಾಜ್ಯ ಕಾರ್ಯಕಾರಿಣಿ ಸದಸ್ಯ ನಾಗರಾಜ ಮದ್ಗುಣಿ, ಸಾಮಾಜಿಕ ಕಾರ್ಯಕರ್ತ ವಿಜಯ ಮಿರಾಶಿ ಮತ್ತಿತರರು ಉಪಸ್ಥಿತರಿದ್ದರು.
ಧನ್ವಂತರಿ ಕಾಲೇಜಿನ ವೈದ್ಯರಾದ ಡಾ.ರೂಪಾ ಭಟ್ಟ, ಡಾ.ಮಧುಕೇಶ್ವರ ಹೆಗಡೆ, ಡಾ. ಚೈತ್ರಿಕಾ ಹೊಸೂರು, ಯಲ್ಲಾಪುರದ ಆಯುಶ್ ವೈದ್ಯರಾದ ಡಾ. ಕೇಶವ್ರಾಜ್ ವಿ.ವಿ., ಆಶಾ ಪಾಟೀಲ್ 84 ಕ್ಕೂ ಹೆಚ್ಚು ಜನರಿಗೆ ತಪಾಸಣೆ, ಚಿಕಿತ್ಸೆ ನೀಡಿದರು.
ತಾಲೂಕಾ ಆಸ್ಪತ್ರೆಯ ವೈದ್ಯರಾದ ಡಾ. ಸೌಮ್ಯ ಕೆ.ವಿ ಸ್ವಾಗತಿಸಿದರು. ಪತ್ರಕರ್ತ ಕೇಬಲ್ ನಾಗೇಶ ನಿರ್ವಹಿಸಿ, ವಂದಿಸಿದರು.
ಯಲ್ಲಾಪುರ/ದಾಂಡೇಲಿ : ಕಾರ್ಮಿಕ ಖಾತೆ ಸಚಿವರಾದ ಶಿವರಾಮ ಹೆಬ್ಬಾರ್ ಅವರು ಮಂಗಳವಾರ ದಾಂಡೇಲಿ ನಗರದ ಪಟೇಲ್ ವೃತ್ತದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ "ಜಗದ್ಗುರು ಶ್ರೀ ಬಸವೇಶ್ವರರ ಪುತ್ಥಳಿ ಅನಾವರಣ " ಕಾರ್ಯಕ್ರಮದಲ್ಲಿ ಭಾಗಿಯಾಗಿ, ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕವಾಗಿ ಉದ್ಘಾಟಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಮಾಜಿ ಶಾಸಕರಾದ ಸುನೀಲ ಹೆಗಡೆ ಹಾಗೂ ವಿವಿಧ ಮಠದ ಪೂಜ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.
ಯಲ್ಲಾಪುರ/ಮುಂಡಗೋಡ : ಕಾರ್ಮಿಕ ಖಾತೆ ಸಚಿವರಾದ ಶಿವರಾಮ ಹೆಬ್ಬಾರ್ ಅವರು ಮಂಗಳವಾರ ಮುಂಡಗೋಡ ತಾಲೂಕಿನ ಇಂದೂರದಲ್ಲಿ "ಮಲೆನಾಡು ಕೋ - ಆಪರೇಟಿವ್ ಸಹಕಾರಿ ಸಂಘಯನ್ನು " ಉದ್ಘಾಟಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷರಾದ ನಾಗಭೂಷಣ ಹಾವಣಗಿ, ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ರವಿಗೌಡ ಪಾಟೀಲ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಕೆ.ಸಿ.ಗಲಭಿ ಹಾಗೂ ಪಕ್ಷದ ವಿವಿಧಸ್ತರದ ಪದಾಧಿಕಾರಿಗಳು ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
.
ಯಲ್ಲಾಪುರ/ಮುಂಡಗೋಡ : ಕಾರ್ಮಿಕ ಖಾತೆ ಸಚಿವರಾದ ಶಿವರಾಮ ಹೆಬ್ಬಾರ್ ಅವರು ಮಂಗಳವಾರ ಮುಂಡಗೋಡ ತಾಲೂಕಿನ ಇಂದೂರಿನ ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ವಾಣಿಜ್ಯ ಮಳಿಗೆ ಹಾಗೂ ಗೋಡೌನ್ ಅನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷರಾದ ನಾಗಭೂಷಣ ಹಾವಣಗಿ, ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ರವಿಗೌಡ ಪಾಟೀಲ್, ಎಲ್.ಟಿ.ಪಾಟೀಲ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಕೆ.ಸಿ.ಗಲಭಿ, ಪ್ರಮುಖರಾದ ಪ್ರಮೋದ ದವಳೆ, ಗುಡ್ಡಪ್ಪ ಕಾತೂರ, ಇಂದೂರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು, ಪಕ್ಷದ ವಿವಿಧಸ್ತರದ ಪದಾಧಿಕಾರಿಗಳು, ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.
.
ಯಲ್ಲಾಪುರ/ಮುಂಡಗೋಡ : ಭಾರತೀಯ ಜನತಾ ಪಕ್ಷದ ತತ್ವ ಸಿದ್ದಾಂತಗಳನ್ನು ಒಪ್ಪಿ ಹಾಗೂ ಸಚಿವರಾದ ಶಿವರಾಮ ಹೆಬ್ಬಾರ್ ಅವರ ಬಡವರ, ರೈತರ ಹಾಗೂ ಕಾರ್ಮಿಕ ಪರವಾದ ಯೋಜನೆಗಳನ್ನು ಕ್ಷೇತ್ರದ ಅಭಿವೃದ್ಧಿ ಕಾರ್ಯವನ್ನು ಮೆಚ್ಚಿ ಮುಂಡಗೋಡ ತಾಲೂಕಿನ ಇಂದೂರ ಗ್ರಾಮ ಪಂಚಾಯತ ವ್ಯಾಪ್ತಿಯ 200 ಕ್ಕೂ ಹೆಚ್ಚಿನ ಅನ್ಯ ಪಕ್ಷದ ಕಾರ್ಯಕರ್ತರು ಮಂಗಳವಾರ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡರು.
ಕಾಂಗ್ರೆಸ್ ಪಕ್ಷವನ್ನು ತೊರೆದು ಭಾರತೀಯ ಜನತಾ ಪಕ್ಷವನ್ನು ಸೇರ್ಪಡೆಗೊಂಡ ಕಾರ್ಯಕರ್ತರುಗಳಿಗೆ ಮಾನ್ಯ ಸಚಿವರಾದ ಶಿವರಾಮ ಹೆಬ್ಬಾರ್ ಅವರು ಪಕ್ಷದ ಶಾಲು ಹಾಕಿ ಅತ್ಯಂತ ಆತ್ಮೀಯತೆಯಿಂದ ಭಾರತೀಯ ಜನತಾ ಪಕ್ಷಕ್ಕೆ ಬರಮಾಡಿಕೊಂಡು ಮುಂದಿನ ದಿನಗಳಲ್ಲಿ ಬೂತ್ ಮಟ್ಟದಲ್ಲಿ ಪಕ್ಷದ ಬಲವರ್ಧನೆಗೆ ಶ್ರಮಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲಾಧ್ಯಕ್ಷರಾದ ನಾಗಭೂಷಣ ಹಾವಣಗಿ, ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ರವಿಗೌಡ ಪಾಟೀಲ್, ಎಲ್.ಟಿ.ಪಾಟೀಲ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಕೆ.ಸಿ.ಗಲಭಿ ಹಾಗೂ ಸ್ಥಳೀಯ ಮುಖಂಡರಾದ ಗುಡ್ಡಪ್ಪ ಕಾತೂರ, ಸಿದ್ದು ಹಡಪದ, ಪಕ್ಷದ ವಿವಿಧಸ್ತರದ ಪದಾಧಿಕಾರಿಗಳು, ಕಾರ್ಯಕರ್ತರು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
ಯಲ್ಲಾಪುರ : ಪಟ್ಟಣದ ಗ್ರಾಮದೇವಿ ನಗರದ ಈಶ್ವರಗಲ್ಲಿ ಶ್ರೀ ಈಶ್ವರ ದೇವಸ್ಥಾನದಲ್ಲಿ ಮಂಗಳವಾರ ವಿಶೇಷ ಹೂವಿನ ಅಲಂಕಾರ ಹಾಗೂ ಅನ್ನ ಸಂತರ್ಪಣೆ ನಡೆಯಿತು.
ಬೆಳಿಗ್ಗೆಯಿಂದ ದೇವರಲ್ಲಿ ಧಾರ್ಮಿಕ ಕಾರ್ಯಗಳು ನಡೆಯುತ್ತಿದ್ದು, ಪಂಚಾಮೃತಾಬಿಷೇಕ, ಏಕಾದಶ ರುದ್ರಾಭಿಷೇಕ ಹಣ್ಣುಕಾಯಿ ಸೇವೆ, ತೀರ್ಥ-ಪ್ರಸಾದ ವಿತರಣೆ ನಡೆಯಿತು. ಈಶ್ವರ ಲಿಂಗ ಹಾಗೂ ಸಂಪೂರ್ಣ ದೇವಸ್ಥಾನಕ್ಕೆ ಹೂವಿನ ಅಲಂಕಾರ ಮಾಡಲಾಗಿತ್ತು, ಮಹಾಪೂಜೆಯ ನಂತರ ನಡೆದ ಅನ್ನ ಸಂತರ್ಪಣೆಯಲ್ಲಿ ಸಾವಿರಾರು ಜನ ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸುತ್ತಿದ್ದಾರೆ.
ತಹಶೀಲ್ದಾರ ಶ್ರೀಕೃಷ್ಣ ಕಾಮ್ಕರ, ಮತ್ತೋರ್ವ ತಹಶೀಲ್ದಾರ ಸಿ ಜಿ ನಾಯ್ಕ ಮುಂತಾದ ಗಣ್ಯರು, ವಿವಿಧ ಪಕ್ಷದ ಪ್ರಮುಖರು ಅನ್ನಪ್ರಸಾದ ಸ್ವೀಕರಿಸಿದರು. ಈಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಬಾಲಕೃಷ್ಣ ನಾಯಕ, ಸಮಿತಿಯ ಪ್ರಮುಖರಾದ ಅರುಣ ಗುಡಿಗಾರ, ಸಂತೋಷ ಗುಡಿಗಾರ, ಪ್ರಕಾಶ ಕವಳಿ ಮುಂತಾದವರು ಉಪಸ್ಥಿತರಿದ್ದು ವ್ಯವಸ್ಥೆ ಮಾಡಿದ್ದರು.
.
ಯಲ್ಲಾಪುರ : ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಆರೋಗ್ಯ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ 'ಮಾನಸಿಕ ಆರೋಗ್ಯ ದಿನ'ವನ್ನು ತಾಲೂಕ ಆರೋಗ್ಯ ಅಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಲಕ್ಷ್ಮೀಬಾಯಿ ಬಸನಗೌಡ ಪಾಟೀಲ್ ಉದ್ಘಾಟಿಸಿ ಮಾತನಾಡಿ, ಪ್ರಪಂಚದಾದ್ಯಂತ ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಮಾನಸಿಕ ಆರೋಗ್ಯವನ್ನು ಬೆಂಬಲಿಸುವ ಪ್ರಯತ್ನಗಳನ್ನು ಸಜ್ಜುಗೊಳಿಸುವುದಕ್ಕಾಗಿ ಪ್ರತಿ ವರ್ಷ ಅಕ್ಟೋಬರ್ 10 ರಂದು ವಿಶ್ವ ಮಾನಸಿಕ ಆರೋಗ್ಯ ದಿನವನ್ನಾಗಿ ಆಚರಿಸಲಾಗುತ್ತದೆ. ಮಾನಸಿಕ ಅನಾರೋಗ್ಯವನ್ನು ನಿರ್ಲಕ್ಷಿಸಕೂಡದು ಎಂದು ಹೇಳಿದ ಅವರು ಎಲ್ಲರನ್ಬೂ ಒಂದೆ ಬಗೆಯಲ್ಲಿ ನೋಡಲಾಗದು. ಸೂಕ್ತ ಚಿಕಿತ್ಸೆ ಹಾಗೂ ಒಳ್ಳೆಯ ಒಡನಾಟದಿಂದ ಮಾನಸಿಕ ಖಿನ್ನತೆಗೆ ಒಳಗಾದವರನ್ನು ಗುಣಪಡಿಸಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಕ್ಕಳ ತಜ್ಞರಾದ ಡಾ ಮಾದಣ್ಣನವರು ಮಾತನಾಡಿ, ಸ್ವಾಸ್ಥ್ಯ ಸಮಾಜ ನಿರ್ಮಾಣ ಆಗಬೇಕಾದರೇ ರೋಗಿಗೆ ಚಿಕಿತ್ಸೆ, ಕೌನ್ಸಿಲರ್ ಎರಡು ಒಂದೆ ಸ್ಥಳದಲ್ಲಿ ಸಿಗುವಮನತಾಗಬೇಕು ಎಂದರು.
ಮಾನಸಿಕ ಆರೋಗ್ಯ ದಿನದ ಬಗ್ಗೆ ಪ್ಯಾನಲ್ ವಕೀಲರಾದ ಸರಸ್ವತಿ ಜಿ ಭಟ್ ಉಪನ್ಯಾಸ ನೀಡಿ ಕೇವಲ ಶಾರಿಕ ಆರೋಗ್ಯವಷ್ಟೆ ಆರೋಗ್ಯವೆಂದು ಪರಿಗಣಿಸಲಾಗದು, ಮಾನಸಿಕವಾಗಿ ಸ್ವಾಸ್ಥ್ಯವಾಗಿರುವುದು ಕೂಡ ಅಷ್ಟೆ ಮುಖ್ಯ. ಇತ್ತೀಚಿನ ವರ್ಷಗಳಲ್ಲಿ, ಜಾಗತಿಕ ಆರೋಗ್ಯ ಗುರಿಗಳನ್ನು ಸಾಧಿಸುವಲ್ಲಿ ಮಾನಸಿಕ ಆರೋಗ್ಯವು ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.
ವೇದಿಕೆಯಲ್ಲಿ ಸಹಾಯಕ ಸರಕಾರಿ ಅಭಿಯೋಜಕರಾದ ಕು.ಝೀನತ್ಬಾನು ಶೇಖ್, ಅರೆಕಾಲಿಕ ನ್ಯಾಯಿಕ ಸೇವಕರಾದ ಗಣಪತಿ ನಾಯ್ಕ, ಲಕ್ಷ್ಮಿ ಸಿದ್ದಿ, ಶ್ರೀಧರ ಮಡಿವಾಳ, ನಾರಾಯಣ ಕಾಂಬಳೆ ಉಪಸ್ಥಿತರಿದ್ದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಜಿ ಭಟ್ ಸ್ವಾಗತಿಸಿ, ನಿರೂಪಿಸಿದರು ಅರೆಕಾಲಿಕ ಸ್ವಯಂ ಸೇವಕರಾದ ಸುಧಾಕರ ನಾಯಕ ವಂದಿಸಿದರು.
.
ಯಲ್ಲಾಪುರ : ಪಟ್ಟಣದ ಶ್ರೀ ಲಕ್ಷ್ಮಿ ವೆಂಕಟರಮಣ ಮಠದ ಮುಂಭಾಗದ ರಾಷ್ಟ್ರೀಯ ಹೆದ್ದಾರಿ 63ಪಕ್ಕದಲ್ಲಿ ಪಟ್ಟಣ ಪಂಚಾಯತ ವತಿಯಿಂದ "ಸಿಟಿ ಬಸ್ ನಿಲ್ದಾಣ" ವನ್ನು ನಿರ್ಮಾಣ ಮಾಡಲು ಉದ್ದೇಶಿಸಿರುವ ಸ್ಥಳಕ್ಕೆ ಮಂಗಳವಾರ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.
ಕೆಲವೇ ತಿಂಗಳಲ್ಲಿ ಯಲ್ಲಾಪುರ ಗ್ರಾಮದೇವಿ ಜಾತ್ರೆ ಬರಲಿದ್ದು, ಯಲ್ಲಾಪುರದ ಮುಖ್ಯ ಬಸ್ ನಿಲ್ದಾಣಕ್ಕೆ ಒತ್ತಡ ಹೆಚ್ಚಾಗುತ್ತದೆ. ಹಳಿಯಾಳ ಕಲಘಟಗಿ, ಹುಬ್ಬಳ್ಳಿ ದಾಂಡೇಲಿ ಕಡೆಯಿಂದ ಬರುವ ಜನರಿಗೆ ಸೂಕ್ತ ಬಸ್ ನಿಲ್ದಾಣವಾಗಲಿದೆ ಎನ್ನುವ ನಿಟ್ಟಿನಲ್ಲಿ ಯಲ್ಲಾಪುರದ ಹುಬ್ಬಳ್ಳಿ ರಸ್ತೆಯ ಬಸ್ ನಿಲ್ದಾಣವನ್ನು ಸೆಟೆಲೈಟ್ ಬಸ್ ನಿಲ್ದಾಣವಾಗಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಈ ಕಾರಣಕ್ಕಾಗಿ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಬಾಲಕೃಷ್ಣ ನಾಯಕ, ಪ.ಪಂ ಸದಸ್ಯರಾದ ಅಮಿತ್ ಅಂಗಡಿ, ಸತೀಶ ನಾಯ್ಕ ಹಾಗೂ ಸ್ಥಳೀಯ ಪ್ರಮುಖರು, ಅಧಿಕಾರಿಗಳು ಇದ್ದರು.
.ಯಲ್ಲಾಪುರ: ಕರ್ನಾಟಕ ಸರಕಾರ, ಕರ್ನಾಟಕ ಅರಣ್ಯ ಇಲಾಖೆ ಸಹಯೋಗದಲ್ಲಿ ಯಲ್ಲಾಪುರದ
ಅರಣ್ಯ ಇಲಾಖೆಯು 68ನೇ ವನ್ಯ ಜೀವ ಸಪ್ತಾಹ_ 2022ರ ಅಂಗವಾಗಿ ಚಿತ್ರಕಲಾ ಸ್ಪರ್ಧೆಯನ್ನು ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿತ್ತು.
ಈ ಸ್ಪರ್ಧೆಯಲ್ಲಿ ಸಂಸ್ಥೆಯ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ವಿತರಣೆಯನ್ನು ಯಲ್ಲಾಪುರದ ಎ ಪಿ ಎಂ ಸಿ ಎದುರಿನ ಟ್ರೀ ಪಾರ್ಕ್ ನಲ್ಲಿ ಆಯೋಜಿಸಲಾಗಿತ್ತು. ಸಂಸ್ಥೆಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ
ಪ್ರಣವ್ ವಿಶ್ವನಾಥ್ ಭಟ್ ಪ್ರಥಮ ಸ್ಥಾನ, ಪವಿತ್ರ ಭಟ್ ದ್ವಿತೀಯ ಸ್ಥಾನ ಹಾಗೂ ಸಾಕ್ಷಿ ಖಾನಾಪುರ್ ತೃತೀಯ ಸ್ಥಾನವನ್ನು ಪಡದುಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಡಿ.ಆರ್.ಎಫ್. ಓ ಸಂಜಯಕುಮಾರ ಹಾಗೂ ಅರಣ್ಯ ರಕ್ಷಕ ಕಾಶೀನಾಥ ಯಾಕಂಚಿ ಇದ್ದರು. ಸಂಸ್ಥೆಯ ಪರವಾಗಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾ.ದತ್ತಾತ್ರೇಯ ಗಾಂವ್ಕರ್, ಉಪನ್ಯಾಸಕಿ ವಂದನಾ ಗುಮ್ಮಾನಿ ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅದ್ಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರು ಸೇರಿದಂತೆ, ಪ್ರಾಂಶುಪಾಲರು, ಉಪನ್ಯಾಸಕ ವರ್ಗದವರು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.