Adv
---------
Thursday, 13 October 2022
ಗಾಯಕ ಎ.ಕೆ. ಗುರುದತ್ತ ಅವರಿಂದ ಸಂಗೀತ ಕಾರ್ಯಕ್ರಮ
ಯಲ್ಲಾಪುರ: ತಾಲೂಕಿನ ವಜಳ್ಳಿಯ ಸರಸ್ವತಿ ಸಂಗೀತ ವಿದ್ಯಾಲಯ ಯಲ್ಲಾಪುರ ಶಾಖಾ ಸಂಗೀತ ಶಾಲಾ ತರಗತಿ ಆರಂಭೋತ್ಸವ ರಂಗ ಸಹ್ಯಾದ್ರಿ ಆಶ್ರಯದಲ್ಲಿ ಶಾರದಾ ಪೂಜೆ ಮತ್ತು ಸಂಗೀತೋತ್ಸವದೊಂದಿಗೆ ಪಟ್ಟಣದ ಜಡ್ಡಿಯ ಡಿ. ಎನ್ ಗಾಂವ್ಕರ್ ಮನೆಯಲ್ಲಿ ನಡೆಯಿತು.
ಗಾಯಕ ಎ.ಕೆ. ಗುರುದತ್ತ ತರಗತಿ ಉದ್ಘಾಟಿಸಿದರು. ನಂತರ ಗುರುದತ್ತ ಗಾಯನ ಪ್ರಸ್ತುತಪಡಿಸಿದರು. ಇವರಿಗೆ ಸತೀಶ ಭಟ್ಟ ಹೆಗ್ಗಾರ್ ಹಾರ್ಮೋನಿಯಂ, ಎನ್.ಜಿ. ಹೆಗಡೆ ಹೊನ್ನಾವರ ತಬಲಾ ಸಾಥ್ ನೀಡಿದರು. ಸರಸ್ವತಿ ಸಂಗೀತ ವಿದ್ಯಾಲಯದ ಮುಖ್ಯಸ್ಥ ವಿದ್ವಾನ್ ದತ್ತಾತ್ರಯ ಚಿಟ್ಟೆಪಾಲ್, ರಂಗ ಸಹ್ಯಾದ್ರಿ ಅಧ್ಯಕ್ಷ ಡಿ.ಎನ್. ಗಾಂವಕರ, ಪ್ರಮುಖರಾದ ಸತೀಶ ಯಲ್ಲಾಪುರ, ಸಣ್ಣಪ್ಪ ಭಾಗತ್ ಮತ್ತಿತರರು ಇದ್ದರು.
Subscribe to:
Posts (Atom)