

ಯಲ್ಲಾಪುರ : ನಾಳೆ ಶನಿವಾರದಂದು ಕಿರವತ್ತಿ ವಿದ್ಯುತ್ ಉಪಕೇಂದ್ರ ನಿರ್ವಹಣಾ ಕೆಲಸ ಇರುವುದರಿಂದ ಬೆಳಿಗ್ಗೆ 10:00 ರಿಂದ ಸಾಯಂಕಾಲ 05:00 ರವರೆಗೆ ಯಲ್ಲಾಪುರ(ಪಟ್ಟಣ) ಇಡಗುಂದಿ, ವಜ್ರಳ್ಳಿ, ಬಿಸಗೋಡ, ಆನಗೋಡ, ದೇಹಳ್ಳಿ, ಮಾಗೋಡ, ಉಪಳೇಶ್ವರ(ಚಂದಗುಳಿ) ಹಾಗೂ ಕಣ್ಣಿಗೇರಿ ಮಾರ್ಗಗಳಿಗೆ ಮತ್ತು ಹೊಸಳ್ಳಿ, ಮದನೂರು, ಸೋಮಾಪುರ ಮತ್ತು ಕಿರವತ್ತಿ ಮಾರ್ಗಗಳಿಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸಬೇಕಾಗಿ ಹೆಸ್ಕಾಂ ಉಪ-ವಿಭಾಗ, , ಯಲ್ಲಾಪುರ ತಿಳಿಸಿದೆ.
ನಾಳೆ ಶನಿವಾರ ವೈಟಿಎಸ್ಎಸ್ ನಲ್ಲಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಮತ್ತು ರಾಷ್ಟ್ರೀಯ ಗ್ರಾಹಕ ದಿನಾಚರಣೆ
ಯಲ್ಲಾಪುರ : ತಾಲೂಕು ಕಾನೂನು ಸೇವಾ ಸಮಿತಿ, ಯಲ್ಲಾಪುರ, ವಕೀಲರ ಸಂಘ ಯಲ್ಲಾಪುರ, ಶಿಕ್ಷಣ ಇಲಾಖೆ, ವೈ.ಟಿ.ಎಸ್.ಎಸ್.ಪದವಿಪೂರ್ವ ಕಾಲೇಜು,ಯಲ್ಲಾಪುರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಮತ್ತು ರಾಷ್ಟ್ರೀಯ ಗ್ರಾಹಕ ದಿನಾಚರಣೆ ಕಾರ್ಯಕ್ರಮ ಶನಿವಾರ, ಬೆಳಿಗ್ಗೆ 9:30 ಗಂಟೆಗೆವೈ.ಟಿ.ಎಸ್.ಎಸ್.ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿದೆ.
ತಾಲೂಕು ಕಾನೂನು ಸೇವಾ ಸಮಿತಿ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಜಿ. ಬಿ. ಹಳ್ಳಾಕಾಯಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ವೈ.ಟಿ.ಎಸ್.ಎಸ್ ಪದವಿಪೂರ್ವ ಕಾಲೇಜಿನ ಅಧ್ಯಕ್ಷರಾದ ರವಿಕುಮಾರ ಎಲ್ ಶಾನಭಾಗ ಅಧ್ಯಕ್ಷತೆ ವಹಿಸಲಿದ್ದಾರೆ. ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಲಕ್ಷ್ಮೀಬಾಯಿ ಬಸನಗೌಡ ಪಾಟೀಲ್ ಮುಂತಾದವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಮತ್ತು ರಾಷ್ಟ್ರೀಯ ಗ್ರಾಹಕ ದಿನಾಚರಣೆ ಕುರಿತು ಅಪರ ಸರಕಾರಿ ವಕೀಲರಾದ ಎನ್ ಟಿ ಗಾಂವ್ಕರ ಉಪನ್ಯಾಸ ನೀಡಲಿದ್ದಾರೆ ಎಂದು ತಾಲೂಕು ಕಾನೂನು ಸೇವಾ ಸಮಿತಿ, ಯಲ್ಲಾಪುರ, ವಕೀಲರ ಸಂಘ ಪ್ರಕಟಣೆ ತಿಳಿಸಿದೆ.