ಯಲ್ಲಾಪುರ, ಪಟ್ಟಣದ ಕ್ರಿಯೇಟಿವ್ ತರಬೇತಿ ಕೇಂದ್ರದಲ್ಲಿ ಶುಕ್ರವಾರ ಗ್ರೀನ್ ಕೇರ್ ಸಂಸ್ಥೆಯ "ಕೌಶಲ್ಯ ವಿಕಾಸ" ಯೋಜನೆಯ ಬ್ಯೂಟಿಷನ್ ಮತ್ತು ಫ್ಯಾಶನ್ ಡಿಸೈನಿಂಗ್ ತರಬೇತಿ ವಿದ್ಯಾರ್ಥಿಗಳಿಗೆ ಉದ್ಯಮಶೀಲತೆ ಕುರಿತು ವಿಶೇಷ ತರಬೇತಿ ನೀಡಲಾಯಿತು.
ಕಾರ್ಯಕ್ರಮವನ್ನು ಗ್ರೀನ್ ಕೇರ್ ಕಾರ್ಯದರ್ಶಿ ಜಿತೇಂದ್ರ ಕುಮಾರ್.ಆರ್.ಎಂ., ಮತ್ತು ಬೆಂಗಳೂರಿನ ಸಿಡಾಕ್ ಸಂಸ್ಥೆಯ ಉಪನಿರ್ದೇಶಕ ಶಿವಾನಂದ್.ವಿ.ಯಲಿಗಾರ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಗ್ರೀನ್ ಕೇರ್ ಸಂಸ್ಥೆಯ ನಿರ್ದೇಶಕಿ ಆಶಾ ಡಿಸೋಜ, ಕ್ರಿಯೇಟಿವ್ ತರಬೇತಿ ಕೇಂದ್ರದ ಮಾಲೀಕ ಶ್ರೀನಿವಾಸ್ ಮುರುಡೇಶ್ವರ್ ಮತ್ತು ಸಿಡಾಕ್ ತರಬೇತುದಾರ ಶಿವರಾಜ್ ಕುಮಾರ್ ಹೆಳವಿ ಉಪಸ್ಥಿತರಿದ್ದರು.