ಯಲ್ಲಾಪುರ ; ತಾಲೂಕಿನ ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ 78ನೇ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮ ನಂತರ ಶಾಲಾ ಸಂಸತ್ತು ಉದ್ಘಾಟನೆ ಕಾರ್ಯಕ್ರಮ ಜರುಗಿತು.
ಧ್ವಜಾರೋಹಣ ನೆರವೇರಿಸಿ, ಪ್ರಸಕ್ತ ಶೈಕ್ಷಣಿಕ ಸಾಲಿನ ಸರ್ವೋದಯ ಪ್ರೌಢಶಾಲೆಯ ಸಂಸತ್ತನ್ನು ಉದ್ಘಾಟಿಸಿದ ಸಾಮಾಜಿಕ ಕಾರ್ಯಕರ್ತ ಹಾಗೂ ಸಂಸ್ಥೆಯ ಉಪಾಧ್ಯಕ್ಷರಾದ ಟಿ.ಸಿ.ಗಾಂವ್ಕಾರ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಬಾಲ್ಯದಿಂದಲೇ ಸಂಘಟನಾ ಶಕ್ತಿ ಹೆಚ್ಚಾಗಬೇಕು. ಸಮಾಜವನ್ನು ಸದಾ ಪರಿಚಯಿಸಿಕೊಳ್ಳುತ್ತಾ ಬೆಳೆಯಬೇಕು. ಸಮಾಜ ಸೇವೆಯ ಕಾರ್ಯದಲ್ಲಿ ತಾನು ಏನನ್ನು ಕೊಡುಗೆಯಾಗಿ ನೀಡಬೇಕು ಎನ್ನುವ ಚಿಂತನೆಯಾಗಬೇಕು. ಜನರ ಮನಸ್ಸು ಗೆಲ್ಲುವುದು ಸಾಧನೆಯ ಪಥದ ಯಶಸ್ಸು. ಪ್ರಜಾಪ್ರಭುತ್ವದ ಮಾದರಿಗೆ ನಾವು ಸಾಕ್ಷಿಯಾಗಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಸರ್ವೋದಯ ಶಿಕ್ಷಣ ಸಮಿತಿಯ ಸದಸ್ಯರಾದ ಗಿರೀಶ ಗಾಂವ್ಕರ್, ವೆಂಕಟ್ರಮಣ ಕಿರಗಾರೆ. ಜಿ ಎನ್ ಕೋಮಾರ ಮಾತನಾಡಿದರು.