ಯಲ್ಲಾಪುರ ತಾಲೂಕಿನ ವೈಟಿಎಸ್‌ಎಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸೇಜಲ್ ಸತೀಶ ನಾಯ್ಕ, ಕರ್ನಾಟಕ ರಾಜ್ಯ ಸಿನಿಯರ್ ಮಹಿಳಾ ಡರ್ಬಿ ತಂಡವನ್ನು ಪ್ರತಿನಿಧಿಸಿ ರಜತ ಪದಕ ಪಡೆದಿದ್ದಾರೆ. ಸೇಜಲ್ ನಾಯ್ಕ ಪ.ಪಂ. ಸದಸ್ಯ ಸತೀಶ್ ನಾಯ್ಕ ಅವರ ಪುತ್ರಿಯಾಗಿದ್ದು, ಈ ಹಿಂದೆಯೂ ರಾಷ್ಟ್ರಮಟ್ಟದ ಸ್ಕೇಟಿಂಗ್‌ನಲ್ಲಿ ಭಾಗವಹಿಸಿ ಪದಕ ಗಳಿಸಿದ್ದಳು.
ಈಕೆಯೊಂದಿಗೆ ಶಿರಸಿಯ ಎಮ್ಈಎಸ್ ಕಾಲೇಜಿನ ಅನಘಾ ರಮೇಶ್ ಹೆಗಡೆ, ದಾಂಡೇಲಿಯ ಸಾನಿಕಾ ಉಮೇಶ್ ತೊರತ್ ತಂಡದಲ್ಲಿದ್ದು, ಪದಕಕ್ಕೆ ಭಾಜನರಾಗಿದ್ದಾರೆ.
ಕೈಗಾ ರೊಲರ್ ಸ್ಕೇಟಿಂಗ್ ಕ್ಲಬ್‌ನಲ್ಲಿ ಕಳೆದ ನಾಲ್ಕು ವರ್ಷಗಳಿಂದ ತರಬೇತಿಯನ್ನು ಪಡೆಯುತ್ತಿರುವ ಈ ಮೂವರು, ಸತತ ನಾಲ್ಕನೇ ಬಾರಿ ಕರ್ನಾಟಕ ತಂಡದ ಪರವಾಗಿ ಆಡಿದ್ದಾರೆ. ತರಬೇತುದಾರ ದೀಲಿಪ್ ಹಣಬರ್ ಹಾಗೂ ಸಹಾಯಕ ತರಬೇತುದಾರ ಮಂಜಪ್ಪ ನಾಯ್ಕ ಅವರ ಮಾರ್ಗದರ್ಶನದಲ್ಲಿ ಈ ಸಾಧನೆ ಸಾಧ್ಯವಾಗಿದೆ.