ಯಲ್ಲಾಪುರ : ಪಟ್ಟಣದ ಗಣಪತಿ ಗಲ್ಲಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾಗತ ಹಾಗೂ ಬಿಳ್ಕೊಡುಗೆ ಸಮಾರಂಭ ಶನಿವಾರ ನಡೆಯಿತು
ಹೊಸದಾಗಿ ಶಾಲೆಗೆ ಆಗಮಿಸಿದ ಶಿಕ್ಷಕರಾದ ಭರತ ಎಸ್ ಮತ್ತು ವನಿತಾ ಶೇಟ್ ರವರಿಗೆ ಸ್ವಾಗತಿಸಿಕೊಳ್ಳಲಾಯಿತು. ವರ್ಗಾವಣೆಗೊಂಡ ಶಿಕ್ಷಕರಾದ ಪಾರ್ವತಿ ನಾಯ್ಕ ಮತ್ತು ನಾಗರತ್ನಾ ನಾಯಕ ರವರಿಗೆ ಗೌರವ ಪೂರ್ವಕವಾಗಿ ಬೀಳ್ಕೊಡಲಾಯಿತು.
ಈ ಸಮಾರಂಭಕ್ಕೆ ಸಿಆರ್‌ಪಿ ಶಿವಾನಂದ ವೆರ್ಣೆಕರ, ಎಸ್‌ಡಿಎಮ್‌ಸಿ ಅಧ್ಯಕ್ಷ ಸುನೀಲ ಎಂ ಎಲ್ , ಉಪಾಧ್ಯಕ್ಷ ರವಿ ಮರಾಟೆ, ಅಗ್ನಿಶಾಮಕ ಠಾಣಾಧಿಕಾರಿಗಳು ಆದ ಶಂಕರಪ್ಪ ಅಂಗಡಿರವರು, ಸಿಬ್ಬಂದಿ ಅಮಿತ್ ಹಾಗೂ ಪಾಲಕರು, ಹಿರಿಯ ವಿದ್ಯಾರ್ಥಿಗಳು ಇದ್ದರು.
ವಿಶ್ವ ಹಿಂದೂ ಪರಿಷತ್ ಸಭೆ
ಯಲ್ಲಾಪುರ : ಅನೇಕ ಸಂಘಟನೆಗಳು ಬಹುಕಾಲ ಬಾಳದೇ, ಚೂರು ಚೂರಾಗುವುದನ್ನು ನಾವು ನೋಡುತ್ತಿದ್ದೇವೆ. ಆದರೆ ಸಂಘ ಪರಿವಾರದ ಸಂಘಟನೆಗಳು ಅಖಂಡವಾಗಿ ಹಿಂದೂ ಧರ್ಮದ ಸೇವೆ ಮಾಡುತ್ತಿವೆ' ಎಂದು ವಿಶ್ವ ಹಿಂದೂ ಪರಿಷತ್ ರಾಜ್ಯ ಉಪಾಧ್ಯಕ್ಷ ಗಂಗಾಧರ ಹೆಗಡೆ ಹೇಳಿದರು.
ಪಟ್ಟಣದ ಗ್ರಾಮ ದೇವಿ ದೇವಸ್ಥಾನದಲ್ಲಿ ಗುರುವಾರ ನಡೆದ ವಿಶ್ವ ಹಿಂದೂ ಪರಿಷತ್ ಸಭೆಯಲ್ಲಿ ಅವರು ಮಾತನಾಡಿದರು. ವಿಶ್ವ ಹಿಂದೂ ಪರಿಷತ್ ಗೆ 60 ವರ್ಷ ತುಂಬಿದ ಸಂದರ್ಭದಲ್ಲಿ ಸಂಘಟನೆಯನ್ನು ಪುನಶ್ಚೇತನಗೊಳಿಸುವುದಲ್ಲದೇ, ಪ್ರತಿ ತಾಲೂಕಿನಲ್ಲಿ ಷಷ್ಠಬ್ಧಿ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿರುವ ಹಿನ್ನಲೆಯಲ್ಲಿ ಈ ಸಭೆ ಆಯೋಜಿಸಲಾಗಿದೆ' ಎಂದರು.
ಜಿಲ್ಲಾಧ್ಯಕ್ಷ ಎಸ್.ಎನ್.ಭಟ್ಟ ಏಕಾನ ಮಾತನಾಡಿ, 'ಅರವತ್ತು ವರ್ಷದ ಸಂದರ್ಭದಲ್ಲಿ ಮುಂದಿನ ದಿನಗಳಲ್ಲಿ ಸಂಘಟನೆಯನ್ನು ಬಲಪಡಿಸಬೇಕಿದೆ. ಈ ಹಿನ್ನೆಲೆಯಲ್ಲಿ ಹೊಸದಾಗಿ ಸಮಿತಿ ರಚನೆ ಹಮ್ಮಿಕೊಳ್ಳಲಾಗಿದೆ' ಎಂದರು
ಜಿಲ್ಲಾ ಕಾರ್ಯದರ್ಶಿ ಗಣಪತಿ ಭಟ್ಟ ಮಂಜಗುಣಿ, ಜಿಲ್ಲಾ ಉಪಾಧ್ಯಕ್ಷ ಕೇಶವ ಮರಾಠೆ ಉಪಸ್ಥಿತರಿದ್ದರು. ತಾಲೂಕು ಅಧ್ಯಕ್ಷ ನಾರಾಯಣ ನಾಯಕ ಸ್ವಾಗತಿಸಿದರು.
- ಯಲ್ಲಾಪುರ ಪಟ್ಟಣದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯುರ್ ಸೇವಾ ಭವನದ ವೈದ್ಯೆ ಡಾ. ಸುಚೇತಾ ಮದ್ಗುಣಿ ' ಡೆಂಗ್ಯೂ ಕುರಿತು ಮಾಹಿತಿ ಮತ್ತು ಮುಂಜಾಗ್ರತಾ ಕ್ರಮ, ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಅನುಸರಿಸಬೇಕಾದ ಕ್ರಮದ ಕುರಿತು ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯಾದ್ಯಾಪಕಿ ಅನಸೂಯಾ ಹಾರವಾಡೇಕರ್, ಶಿಕ್ಷಕರಾದ ಗಣಪತಿ ಭಟ್ಟ, ನಿರ್ಮಲಾ ನಾಯ್ಕ, ಅರ್ಚನಾ ಬಾಂದೇಕರ್ ಇದ್ದರು.