Adv

news21 ‌ ‌YELLAPURNews prakatane --------- ‌ ‌patanakaroct10to17pydkumar Oct9to15 ‌ ‌ ‌ ‌ ‌ oct5to15-pyd ‌‌ ‌ Vishal-sep13to-unlimited ‌ ‌ ‌ ‌ IMG-20241009-195526

Saturday 3 August 2024

ಯಲ್ಲಾಪುರದ ಗ್ರಾಮ ಒಕ್ಕಲು ಸಂಘದಲ್ಲಿ ಕೆಂಪೇಗೌಡ ಜಯಂತಿ ಆಚರಣೆ, ವೈವಿಧ್ಯಮಯ ಕಾರ್ಯಕ್ರಮ

ಯಲ್ಲಾಪುರ: ಇಲ್ಲಿನ ಗ್ರಾಮ ಒಕ್ಕಲು ಸಂಘವು ಇತ್ತೀಚೆಗೆ ಒಂದು ಸರಣಿ ಪ್ರಮುಖ ಕಾರ್ಯಕ್ರಮಗಳನ್ನು ಆಯೋಜಿಸಿತ್ತು,  ಕೆಂಪೇಗೌಡ ಜಯಂತಿ ಆಚರಣೆ, ನಿವೃತ್ತ ಸರ್ಕಾರಿ ನೌಕರರನ್ನು ಗೌರವಿಸುವ ಕಾರ್ಯಕ್ರಮ ಹಾಗೂ ಗ್ರಾಮದ 102ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪಠ್ಯ ವಿತರಣೆ ಕಾರ್ಯಕ್ರಮಗಳು ಈ ಸಮಾರಂಭದ ಮುಖ್ಯ ಆಕರ್ಷಣೆಗಳಾಗಿದ್ದವು.
  ಇತ್ತೀಚೆಗೆ ಯಲ್ಲಾಪುರದ ಕಾರವಾರ ರಸ್ತೆಯಲ್ಲಿರುವ ಅಂಬೇಡ್ಕರ್ ಸಭಾಭವನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಶೇಖರ್ ಪಟಗಾರ ಅವರು ಮಾತನಾಡಿ, ಸಮಾಜದ ಸರ್ವತೋಮುಖ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು. ಇಂತಹ ಕಾರ್ಯಕ್ರಮಗಳು ಯುವಜನತೆ ಹಾಗೂ ಹಿರಿಯರನ್ನು ಪ್ರೋತ್ಸಾಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
   ಕೆಂಪೇಗೌಡರ ಜೀವನ ಮತ್ತು ಕಾರ್ಯಗಳ ಕುರಿತು ಬಿ. ಆರ್. ಪಿ. ಪ್ರಶಾಂತ್ ಪಟಗಾರ ಅವರು ವಿಸ್ತಾರವಾದ ಉಪನ್ಯಾಸವನ್ನು ನೀಡಿದರು. 
  ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಆನಗೋಡ್ ಗ್ರಾಮ ಪಂಚಾಯತಿಯ ಪಿಡಿಒ ನಾರಾಯಣಗೌಡ ಅವರು ಸಂಘದ ಈ ಕಾರ್ಯವನ್ನು ಶ್ಲಾಘಿಸಿದರು. 
  ಟ್ಯಾಕ್ಸಿ ಮಾಲೀಕರ ಸಂಘದ ಅಧ್ಯಕ್ಷ ಗಜು ಪಟಗಾರ ಹಾಗೂ ಗಣಪತಿ ಪಟಗಾರ ಅವರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
  ಸಂಘದ ಸದಸ್ಯರಾದ ಎಂ. ಎಸ್. ಪಟಗಾರ (ಶಿರಸಿ), ಕಾರ್ಯದರ್ಶಿ ಎಂ. ಆರ್. ಪಟಗಾರ, ಖಜಾಂಚಿ ಸತೀಶ್ ಪಟಗಾರ ಹಾಗೂ ಕ್ರೀಡಾ ಕಾರ್ಯದರ್ಶಿ ಮಂಗಲಾ ಪಟಗಾರ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 
   ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ದೇವಿದಾಸ್ ಪಟಗಾರ ಹಾಗೂ ಅಂಗನವಾಡಿ ಕಾರ್ಯಕರ್ತೆ ಲಕ್ಷ್ಮಿ ಪಟಗಾರ ಅವರನ್ನು ಸನ್ಮಾನಿಸಲಾಯಿತು.
   ಶಿಕ್ಷಕ ಗಂಗಾಧರ ಪಟಗಾರ ಸಂಘದ ಇತಿಹಾಸ ಹಾಗೂ ಭವಿಷ್ಯದ ಯೋಜನೆಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ. ಆರ್. ಪಟಗಾರ ಸ್ವಾಗತವನ್ನು, ಶಿಕ್ಷಕ ರಾಘವೇಂದ್ರ ಗೌಡ ನಿರೂಪಿಸಿ ಹಾಗೂ ಶಿಕ್ಷಕ ಈಶ್ವರ ಪಟಗಾರ ವಂದಿಸಿದರು. 

ಲಿಂಗನಕೊಪ್ಪ ಶಾಲಾ ಮಕ್ಕಳಿಗೆ ಗದ್ದೆಯಲ್ಲಿ ಕಲಿಕೆ!

ಯಲ್ಲಾಪುರ: ತಾಲೂಕಿನ ಅಂಗನಕೊಪ್ಪ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 20 ಮಕ್ಕಳು ಕೃಷಿಯ ಕುರಿತು ಸೈದ್ಧಾಂತಿಕ ಜ್ಞಾನವನ್ನು ಪ್ರಾಯೋಗಿಕವಾಗಿ ಅನುಭವಿಸುವ ಅವಕಾಶಕ್ಕೆ ಪಾತ್ರರಾದರು. ಶುಕ್ರವಾರ, ಸ್ಥಳೀಯ ನಿವಾಸಿ ಸೋಮಣ್ಣ ಮರಾಟೆಯವರ ಭತ್ತದ ಗದ್ದೆಯಲ್ಲಿ ನಾಟಿ ಮಾಡುವ ಮೂಲಕ ಮಕ್ಕಳು ಕೃಷಿಯ ಮಹತ್ವವನ್ನು ಅರಿತುಕೊಂಡರು.
  ಶಾಲೆಯ ಮುಖ್ಯ ಶಿಕ್ಷಕ ವಿನಾಯಕ ಹೆಗಡೆ ಅವರು, 'ಕೇಳಿಕಲಿ' ಮಾದರಿಯ ಪಾಠದ ಜೊತೆಗೆ 'ಮಾಡಿಕಲಿ' ತತ್ವದಡಿಯಲ್ಲಿ ಕಲಿಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಶಿಕ್ಷಕಿ ಸೌಮ್ಯ ಅವರು ಮಕ್ಕಳಿಗೆ ನಾಟಿ ಮಾಡುವ ವಿಧಾನವನ್ನು ಸರಳವಾಗಿ ವಿವರಿಸಿದರು.
   ಗದ್ದೆಯಲ್ಲಿ ನಾಟಿ ಮಾಡುವ ಮೂಲಕ ಮಕ್ಕಳು ಕೇವಲ ಕೃಷಿಯ ಬಗ್ಗೆ ಮಾತ್ರವಲ್ಲದೆ, ಪ್ರಕೃತಿಯೊಂದಿಗೆ ಸಂವಾದ ನಡೆಸುವುದು ಹೇಗೆ ಎಂಬುದನ್ನು ಕಲಿತರು. ಈ ರೀತಿಯ ಕಾರ್ಯಕ್ರಮಗಳು ಮಕ್ಕಳಲ್ಲಿ ಕೃಷಿಯ ಕಡೆಗೆ ಆಸಕ್ತಿ ಹುಟ್ಟಿಸುವುದರ ಜೊತೆಗೆ, ಪರಿಸರ ಸಂರಕ್ಷಣೆಯ ಮಹತ್ವವನ್ನು ಅರಿತುಕೊಳ್ಳಲು ಸಹಾಯ ಮಾಡುತ್ತದೆ.
 ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪಾಲಕರು, ಮಕ್ಕಳ ಕಲಿಕೆಯಲ್ಲಿ ಈ ರೀತಿಯ ಪ್ರಾಯೋಗಿಕ ಚಟುವಟಿಕೆಗಳು ಬಹಳ ಮುಖ್ಯ ಎಂದು ಹೇಳಿದರು.
   ಹೊಸ ಅನುಭವ: ಮೊದಲ ಬಾರಿಗೆ ಗದ್ದೆ ನೋಡಿ, ಮಣ್ಣನ್ನು ಸ್ಪರ್ಶಿಸಿ, ನಾಟಿ ಮಾಡಿದ ಮಕ್ಕಳು ಹೊಸ ವಿಷಯ ಕಲಿತರು, ನನಗೆ ಗದ್ದೆಯಲ್ಲಿ ನಾಟಿ ಮಾಡುವುದು ಬಹಳ ಇಷ್ಟವಾಯಿತು. ನಾನು ಮೊದಲ ಬಾರಿಗೆ ನಾಟಿ ಮಾಡುವುದು ನನಗೆ ತಿಳಿದಿರಲಿಲ್ಲ ಬೀಜದಿಂದ ಒಂದು ಗಿಡ ಬೆಳೆಯುತ್ತದೆ ಎಂದು ವಿದ್ಯಾರ್ಥಿನಿಯೋರ್ವಳು ಅಭಿಪ್ರಾಯ ಪಟ್ಟಳು.
  ಈ ರೀತಿಯ ಪ್ರಾಯೋಗಿಕ ಕಲಿಕೆಯು ಮಕ್ಕಳ ಕಲಿಕೆಯಲ್ಲಿ ಹೊಸ ಯಾವ ರೀತಿಯ ಬದಲಾವಣೆ ತರುತ್ತದೆ. "ಈ ರೀತಿಯ ಕಾರ್ಯಕ್ರಮಗಳು ಮಕ್ಕಳಲ್ಲಿ ಕೇವಲ ಜ್ಞಾನವನ್ನು ತುಂಬುವುದಲ್ಲದೆ, ಅವರಲ್ಲಿ ಕೌಶಲ್ಯಗಳನ್ನು ಬೆಳೆಸುತ್ತವೆ. ಅವರು ತಮ್ಮ ಕೈಗಳಿಂದ ಕೆಲಸ ಮಾಡುವುದನ್ನು ಕಲಿಯುತ್ತಾರೆ, ತಂಡದಲ್ಲಿ ಕೆಲಸ ಮಾಡುವುದನ್ನು ಕಲಿಯುತ್ತಾರೆ ಮತ್ತು ಪ್ರಕೃತಿಯ ಮಹತ್ವವನ್ನು ಅರ್ಥಮಾಡಿಕೊಳ್ಳುತ್ತಾರೆ," ಎಂದು ಶಾಲೆಯ ಮುಖ್ಯ ಶಿಕ್ಷಕ ವಿನಾಯಕ ಹೆಗಡೆ ಅಭಿಪ್ರಾಯ ಪಟ್ಟರು.

ಯಲ್ಲಾಪುರ ಬಸ್ ನಿಲ್ದಾಣದಲ್ಲಿ ಬುಕ್ ಸ್ಟಾಲ್ ಟೆಂಡರ್: ಶ್ರೀರಂಗ ಕಟ್ಟಿಯವರ ಹೋರಾಟಕ್ಕೆ ಜಯ

ಯಲ್ಲಾಪುರ : ಯಲ್ಲಾಪುರದಲ್ಲಿ 8 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಹೊಸ ಬಸ್ ನಿಲ್ದಾಣದಲ್ಲಿ ಬುಕ್ ಸ್ಟಾಲ್ ನಿರ್ಮಾಣದ ಹೋರಾಟಕ್ಕೆ ಇದೀಗ ಜಯ ಸಿಕ್ಕಿದೆ. ಮಾತೃಭೂಮಿ ಸಂಘಟನೆಯ ಪ್ರಮುಖರು ಮತ್ತು ಕಸಾಪ ಮಾಜಿ ಅಧ್ಯಕ್ಷರಾದ ಶ್ರೀರಂಗ ಕಟ್ಟಿಯವರು ಈ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. 
    ಅವರು ಹಲವಾರು ಬಾರಿ ಕೆ ಎಸ್ ಆರ್ ಟಿ ಸಿ ಅಧಿಕಾರಿಗಳಿಗೆ ಹಾಗೂ ಅಂದಿನ ಸಚಿವರಾದ ಶಿವರಾಂ ಹೆಬ್ಬಾರ್ ಅವರಿಗೆ, ಸಾರಿಗೆ ನಿಗಮದ ಹಿಂದಿನ ಅಧ್ಯಕ್ಷ ಹಾಗೂ ಮಾಜಿ ಶಾಸಕ ವಿ‌ಎಸ್.ಪಾಟೀಲ್ ರಿಗೂ ಮನವಿ ಅರ್ಪಿಸಲಾಗಿತ್ತು.  ಬಸ್ ನಿಲ್ದಾಣದಲ್ಲಿ ಬುಕ್ ಸ್ಟಾಲ್ ಇರಬೇಕೆಂದು ಒತ್ತಾಯಿಸಿದ್ದರು. ಅಲ್ಲದೆ, ಬುಕ್ ಸ್ಟಾಲ್ ಗೆ ಅವಕಾಶ ನೀಡದಿದ್ದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆಯ ಮೂಲಕ ಕೂಡ ಒತ್ತಡಹಾಕಿದ್ದರು. ಆದರೆ, ಪುಸ್ತಕ ಮಳಿಗೆಗೆ ಟೆಂಡರ್ ಕರೆಯುವ ಪ್ರಕ್ರಿಯೆ ಮಾತ್ರ ನೆನೆಗುದಿಗೆ ಬಿದ್ದಿತ್ತು. ಈಗ ಎಲ್ಲ ಗೊಂದಲಗಳೂ ನಿವಾರಣೆಯಾಗಿವೆ. ಸದ್ಯದಲ್ಲಿಯೇ ಬಸ್ ನಿಲ್ದಾಣದಲ್ಲಿ ಪುಸ್ತಕ ಮಳಿಗೆ ಆರಂಭವಾಗಲಿದೆ.
  ಈ ಹೋರಾಟದ ಪರಿಣಾಮವಾಗಿ, ಕೆ ಎಸ್ ಆರ್ ಟಿ ಸಿ ನಿಗಮವು ಬಸ್ ನಿಲ್ದಾಣದಲ್ಲಿ ಬುಕ್ ಸ್ಟಾಲ್ ಟೆಂಡರ್ ಕರೆಯಿತು ಈ ಹೋರಾಟದಲ್ಲಿ ಸ್ಥಳೀಯ ಪತ್ರಕರ್ತರು, ವಿವಿಧ ಸಂಘಟನೆಗಳ ಪ್ರಮುಖರು ಸಹ ಬಸ್ ನಿಲ್ದಾಣದಲ್ಲಿ ಬುಕ್ ಸ್ಟಾಲ್ ಇರಬೇಕೆಂದು ಬೆಂಬಲ ನೀಡಿದ್ದರು. 
  ಇಂದಿನ ಶಾಸಕ ಶಿವರಾಂ ಹೆಬ್ಬಾರ್ ಹಾಗೂ ಕೆ ಎಸ್ ಆರ್ ಟಿ ಸಿ ನಿಗಮದ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿರುವ ಶ್ರೀರಂಗ ಕಟ್ಟಿ, ಬುಕ್ ಸ್ಟಾಲ್ ಟೆಂಡರ್ ಆಗಿರುವುದನ್ನು ಸಂತಸದಿಂದ ಸ್ವೀಕರಿಸಿದ್ದಾರೆ. ಇದರಿಂದಾಗಿ, ವ್ಯಾಪಾರದ ಮನೋಧರ್ಮವಿಲ್ಲದೆ, ಈ ಬುಕ್ ಸ್ಟಾಲ್ ನಲ್ಲಿ ಕೇವಲ ಕನ್ನಡದ ಪತ್ರಿಕೆಗಳು ಮತ್ತು ಪುಸ್ತಕಗಳ ಮಾರಾಟವಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
   ಈ ಸಂದರ್ಭದಲ್ಲಿ, "ಬುಕ್ ಸ್ಟಾಲ್ ಮಾಡಿರುವುದರಿಂದ ಕನ್ನಡ ಸಾಹಿತ್ಯ, ಸಂಸ್ಕೃತಿ, ಮತ್ತು ವಿಚಾರಗಳ ಪ್ರಸಾರಕ್ಕೆ ಬಹಳಷ್ಟು ಸಹಾಯವಾಗಲಿದೆ," ಎಂದು ಅವರು ಹೇಳಿದ್ದಾರೆ. 
   ಶ್ರೀರಂಗ ಕಟ್ಟಿಯವರ ಹೋರಾಟದ ಈ ಜಯ ಯಲ್ಲಾಪುರದ ಜನತೆಗೆ ಮತ್ತು ಕನ್ನಡ ಪ್ರೇಮಿಗಳಿಗೆ ನಿಜಕ್ಕೂ ಒಂದು ಉತ್ಸಾಹವರ್ಧಕ ಬೆಳವಣಿಗೆಯಾಗಿದೆ.