Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Sunday, 4 August 2024

ಯಲ್ಲಾಪುರದಲ್ಲಿ ಜೆಸಿಬಿ ಚಾಲಕ ಕಾಣೆ, ಪತ್ನಿಯಿಂದ ದೂರು

ಯಲ್ಲಾಪುರ : ತಾಲೂಕಿನ ಕನ್ನಡಗಲ್ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ನಾಗವೇಣಿ ಮೇಟಿ ಅವರ ಪತಿ ಉಮೇಶ ಮೇಟಿ ಕಳೆದ ಮೇ 25 ರಂದು ಮನೆಯಿಂದ ಹೊರಟು ಹೋಗಿ ಕಾಣೆಯಾಗಿದ್ದಾರೆ.
  ಉಮೇಶ ಮೇಟಿ ಜೆ.ಸಿ.ಬಿ ಚಾಲಕರಾಗಿದ್ದು, ಕೆಲಸ ಮುಗಿಸಿ ಮನೆಗೆ ಮರಳದೆ ಕಾಣೆಯಾಗಿದ್ದಾರೆ. ಪತ್ನಿ ನಾಗವೇಣಿ ಅವರು ವಿವಿಧೆಡೆ ಹುಡುಕಾಡಿ, ಸಂಬಂಧಿಕರನ್ನು ವಿಚಾರಿಸಿದರೂ ಯಾವುದೇ ಮಾಹಿತಿ ದೊರಕದ ಕಾರಣ ಪೊಲೀಸರಿಗೆ ದೂರು ನೀಡಿದ್ದಾರೆ.
   ಯಲ್ಲಾಪುರ ಪೊಲೀಸ್ ಠಾಣೆಯ ಪಿಎಸ್‌ಐ ಸಿದ್ದಪ್ಪ ಗುಡಿ ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಗಣಪತಿಗಲ್ಲಿ ಶಾಲೆಯಲ್ಲಿ ಶಿಕ್ಷಕರಿಗೆ ಸ್ವಾಗತ ಹಾಗೂ ಬಿಳ್ಕೊಡುಗೆ/ ವಿಶ್ವ ಹಿಂದೂ ಪರಿಷತ್ ಸಭೆ/ಡೆಂಗ್ಯೂ ಕುರಿತು ಮಾಹಿತಿ

ಗಣಪತಿಗಲ್ಲಿ ಶಾಲೆಯಲ್ಲಿ ಶಿಕ್ಷಕರಿಗೆ ಸ್ವಾಗತ ಹಾಗೂ ಬಿಳ್ಕೊಡುಗೆ
ಯಲ್ಲಾಪುರ : ಪಟ್ಟಣದ ಗಣಪತಿ ಗಲ್ಲಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾಗತ ಹಾಗೂ ಬಿಳ್ಕೊಡುಗೆ ಸಮಾರಂಭ ಶನಿವಾರ ನಡೆಯಿತು
  ಹೊಸದಾಗಿ ಶಾಲೆಗೆ ಆಗಮಿಸಿದ ಶಿಕ್ಷಕರಾದ ಭರತ ಎಸ್ ಮತ್ತು ವನಿತಾ ಶೇಟ್ ರವರಿಗೆ ಸ್ವಾಗತಿಸಿಕೊಳ್ಳಲಾಯಿತು. ವರ್ಗಾವಣೆಗೊಂಡ ಶಿಕ್ಷಕರಾದ ಪಾರ್ವತಿ ನಾಯ್ಕ ಮತ್ತು  ನಾಗರತ್ನಾ ನಾಯಕ ರವರಿಗೆ ಗೌರವ ಪೂರ್ವಕವಾಗಿ ಬೀಳ್ಕೊಡಲಾಯಿತು. 
  ಈ ಸಮಾರಂಭಕ್ಕೆ ಸಿಆರ್‌ಪಿ ಶಿವಾನಂದ ವೆರ್ಣೆಕರ,  ಎಸ್‌ಡಿಎಮ್‌ಸಿ ಅಧ್ಯಕ್ಷ ಸುನೀಲ ಎಂ ಎಲ್ , ಉಪಾಧ್ಯಕ್ಷ ರವಿ ಮರಾಟೆ, ಅಗ್ನಿಶಾಮಕ ಠಾಣಾಧಿಕಾರಿಗಳು ಆದ ಶಂಕರಪ್ಪ ಅಂಗಡಿರವರು, ಸಿಬ್ಬಂದಿ ಅಮಿತ್ ಹಾಗೂ ಪಾಲಕರು, ಹಿರಿಯ ವಿದ್ಯಾರ್ಥಿಗಳು ಇದ್ದರು. 

ವಿಶ್ವ ಹಿಂದೂ ಪರಿಷತ್ ಸಭೆ
ಯಲ್ಲಾಪುರ : ಅನೇಕ ಸಂಘಟನೆಗಳು ಬಹುಕಾಲ ಬಾಳದೇ, ಚೂರು ಚೂರಾಗುವುದನ್ನು ನಾವು ನೋಡುತ್ತಿದ್ದೇವೆ. ಆದರೆ ಸಂಘ ಪರಿವಾರದ ಸಂಘಟನೆಗಳು ಅಖಂಡವಾಗಿ ಹಿಂದೂ ಧರ್ಮದ ಸೇವೆ ಮಾಡುತ್ತಿವೆ' ಎಂದು ವಿಶ್ವ ಹಿಂದೂ ಪರಿಷತ್ ರಾಜ್ಯ ಉಪಾಧ್ಯಕ್ಷ ಗಂಗಾಧರ ಹೆಗಡೆ ಹೇಳಿದರು.
ಪಟ್ಟಣದ ಗ್ರಾಮ ದೇವಿ ದೇವಸ್ಥಾನದಲ್ಲಿ ಗುರುವಾರ ನಡೆದ ವಿಶ್ವ ಹಿಂದೂ ಪರಿಷತ್ ಸಭೆಯಲ್ಲಿ ಅವರು ಮಾತನಾಡಿದರು. ವಿಶ್ವ ಹಿಂದೂ ಪರಿಷತ್ ಗೆ 60 ವರ್ಷ ತುಂಬಿದ ಸಂದರ್ಭದಲ್ಲಿ ಸಂಘಟನೆಯನ್ನು ಪುನಶ್ಚೇತನಗೊಳಿಸುವುದಲ್ಲದೇ, ಪ್ರತಿ ತಾಲೂಕಿನಲ್ಲಿ ಷಷ್ಠಬ್ಧಿ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿರುವ ಹಿನ್ನಲೆಯಲ್ಲಿ ಈ ಸಭೆ ಆಯೋಜಿಸಲಾಗಿದೆ' ಎಂದರು.
 ಜಿಲ್ಲಾಧ್ಯಕ್ಷ ಎಸ್.ಎನ್.ಭಟ್ಟ ಏಕಾನ ಮಾತನಾಡಿ, 'ಅರವತ್ತು ವರ್ಷದ ಸಂದರ್ಭದಲ್ಲಿ ಮುಂದಿನ ದಿನಗಳಲ್ಲಿ ಸಂಘಟನೆಯನ್ನು ಬಲಪಡಿಸಬೇಕಿದೆ. ಈ ಹಿನ್ನೆಲೆಯಲ್ಲಿ ಹೊಸದಾಗಿ ಸಮಿತಿ ರಚನೆ ಹಮ್ಮಿಕೊಳ್ಳಲಾಗಿದೆ' ಎಂದರು
 ಜಿಲ್ಲಾ ಕಾರ್ಯದರ್ಶಿ ಗಣಪತಿ ಭಟ್ಟ ಮಂಜಗುಣಿ, ಜಿಲ್ಲಾ ಉಪಾಧ್ಯಕ್ಷ ಕೇಶವ ಮರಾಠೆ ಉಪಸ್ಥಿತರಿದ್ದರು. ತಾಲೂಕು ಅಧ್ಯಕ್ಷ ನಾರಾಯಣ ನಾಯಕ ಸ್ವಾಗತಿಸಿದರು.
  1. ಯಲ್ಲಾಪುರ ಪಟ್ಟಣದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯುರ್ ಸೇವಾ ಭವನದ ವೈದ್ಯೆ ಡಾ. ಸುಚೇತಾ ಮದ್ಗುಣಿ ' ಡೆಂಗ್ಯೂ ಕುರಿತು ಮಾಹಿತಿ ಮತ್ತು ಮುಂಜಾಗ್ರತಾ ಕ್ರಮ, ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಅನುಸರಿಸಬೇಕಾದ ಕ್ರಮದ ಕುರಿತು ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯಾದ್ಯಾಪಕಿ ಅನಸೂಯಾ ಹಾರವಾಡೇಕರ್, ಶಿಕ್ಷಕರಾದ ಗಣಪತಿ ಭಟ್ಟ, ನಿರ್ಮಲಾ ನಾಯ್ಕ, ಅರ್ಚನಾ ಬಾಂದೇಕರ್ ಇದ್ದರು.

  

ಯಲ್ಲಾಪುರದಲ್ಲಿ ವಿದ್ಯುತ್ ಅವಘಡ: ನಾಲ್ಕು ಜಾನುವಾರುಗಳು ಬಲಿ

ಯಲ್ಲಾಪುರ: ಪಟ್ಟಣದ ಹಿತ್ತಲಾಕಾರಗದ್ದೆ ಗ್ರಾಮದಲ್ಲಿ ರವಿವಾರ ಸಂಭವಿಸಿದ ಅನಿರೀಕ್ಷಿತ ಘಟನೆಯಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದು ನಾಲ್ಕು ಜಾನುವಾರುಗಳು ಮೃತಪಟ್ಟಿವೆ.
   ಭಾರೀ ಮಳೆಯಿಂದಾಗಿ ಮರಗಳು ಮತ್ತು ವಿದ್ಯುತ್ ಕಂಬಗಳು ಹಾನಿಗೊಳಗಾಗಿ, ವಿದ್ಯುತ್ ತಂತಿ ನೆಲಕ್ಕೆ ಬಿದ್ದು ನೀರಿನಲ್ಲಿ ಮುಳುಗಿತ್ತು. ಇದರಿಂದ ಕುತೂಹಲದಿಂದ ಸಮೀಪಿಸಿದ ಜಾನುವಾರುಗಳಿಗೆ ವಿದ್ಯುತ್ ಶಾಕ್ ತಗುಲಿ ದುರ್ಘಟನೆ ಸಂಭವಿಸಿದೆ.
   ಘಟನಾ ಸ್ಥಳಕ್ಕೆ ಆಗಮಿಸಿದ ವಿದ್ಯುತ್ ಇಲಾಖೆಯ ಸಿಬ್ಬಂದಿ ತಕ್ಷಣ ವಿದ್ಯುತ್ ಸರಬರಾಜನ್ನು ನಿಲ್ಲಿಸಿದರು. ಈ ಘಟನೆಯಿಂದ ಸ್ಥಳೀಯರು ಆತಂಕಗೊಂಡಿದ್ದು, ವಿದ್ಯುತ್ ಇಲಾಖೆಯವರು ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ಕಳಚೆಯಲ್ಲಿ ಮತ್ತೆ ಕುಸಿದ ಭೂಮಿ, ಮತ್ತೆ ಆತಂಕ

ಯಲ್ಲಾಪುರ: 2021ರಲ್ಲಿ ಭಾರೀ ಪ್ರಮಾಣದ ಭೂ ಕುಸಿತ ಕಂಡಿದ್ದ ಕಳಚೆಯಲ್ಲಿ ಶನಿವಾರ ರಾತ್ರಿ ಮತ್ತೆ ಕುಸಿತವಾಗಿದೆ.
   ಕಳಚೆಯ ಮಾನಿಗದ್ದೆ ಕುಂಬ್ರಿಯ ಕಮಲಾಕ‌ರ್ ಭಾಗ್ವತ್ ಅವರ ಮನೆ ಮುಂದೆ ದೊಡ್ಡ ಪ್ರಮಾಣದಲ್ಲಿ ಭೂಮಿ ಕುಸಿದಿದೆ. ಜನಾರ್ದನ ಹೆಬ್ಬಾರ್ ಅವರ ತೋಟ ಮಣ್ಣು ಪಾಲಾಗಿದೆ. ಉದಯ್ ಐತಾಳ್ ಅವರ ಮನೆ ಪಕ್ಕದಲ್ಲಿ ಸಹ ಭೂಮಿ ಸಡಿಲಗೊಂಡಿದ್ದು, ಹಂತ ಹಂತವಾಗಿ ಮಣ್ಣು ಕುಸಿಯುತ್ತಿದೆ.
   ಸಡಿಲವಾದ ಮಣ್ಣು ಈಗಲೂ ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಕುಸಿಯುತ್ತಲೇ ಇದೆ. ಮಳೆ ಜಾಸ್ತಿಯಾದರೆ ಮತ್ತೇನು ಆಗಲಿದೆಯೋ ಎಂಬ ಆತಂಕದಲ್ಲೇ ಗ್ರಾಮಸ್ಥರಿದ್ದಾರೆ.

ಯಲ್ಲಾಪುರ ಅರಣ್ಯ ವಿಭಾಗದಲ್ಲಿ ಅಧಿಕಾರಿಗಳಿಗೆ ಬೀಳ್ಕೊಡುಗೆ / ಕಿರವತ್ತಿ ವಲಯದಲ್ಲಿ ವನಮಹೋತ್ಸವ: ಪರಿಸರ ಸಂರಕ್ಷಣೆಗೆ ಒತ್ತು

ಯಲ್ಲಾಪುರ ಅರಣ್ಯ ವಿಭಾಗದಲ್ಲಿ ಅಧಿಕಾರಿಗಳಿಗೆ ಬೀಳ್ಕೊಡುಗೆ
ಯಲ್ಲಾಪುರ: ಯಲ್ಲಾಪುರ ಅರಣ್ಯ ವಿಭಾಗವು ಇತ್ತೀಚೆಗೆ ತನ್ನ  ವರ್ಗಾವಣೆಯಾದ ಮತ್ತು ನಿವೃತ್ತರಾದ ಅಧಿಕಾರಿಗಳಿಗೆ ಭವ್ಯವಾದ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಿತು. ಈ ಸಮಾರಂಭವು ಅರಣ್ಯ ಸಭಾಭವನದಲ್ಲಿ ನಡೆಯಿತು. 
  ಸಮಾರಂಭದ ಅಧ್ಯಕ್ಷತೆಯನ್ನು ಯಲ್ಲಾಪುರ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಬಾನು ಜಿ ಪಿ ವಹಿಸಿದ್ದರು.
   ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆನಂದ್ ಎಚ್ ಎ ಅವರು ಯಲ್ಲಾಪುರ ಉಪವಿಭಾಗದಲ್ಲಿ ಸೇವೆ ಸಲ್ಲಿಸಿ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಪದೋನ್ನತಿ ಹೊಂದಿ ಕೋಲಾರ ಸಾಮಾಜಿಕ ಅರಣ್ಯ ವಿಭಾಗಕ್ಕೆ ವರ್ಗಾವಣೆಯಾಗಿದ್ದಾರೆ. 
    ವಲಯ ಅರಣ್ಯ ಅಧಿಕಾರಿ ಎನ್ ಎಲ್ ನದಾಫ್ ಅವರು ಯಲ್ಲಾಪುರ ವಿಭಾಗದ ಕಿರವತ್ತಿ ಅರಣ್ಯ ವಲಯ ಹಾಗೂ ಸರ್ವೆ ವಿಭಾಗದಲ್ಲಿ ಸೇವೆ ಸಲ್ಲಿಸಿ ಹಳಿಯಾಳ ವಿಭಾಗದ ದಾಂಡೇಲಿ ಪ್ರಾದೇಶಿಕ ವಲಯಕ್ಕೆ ವರ್ಗಾವಣೆಯಾಗಿದ್ದಾರೆ. 39 ವರ್ಷಗಳ ಕಾಲ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ವಲಯ ಅರಣ್ಯ ಅಧಿಕಾರಿ ಎಲ್ ಎ ಮಠ ಅವರು ನಿವೃತ್ತಿಯಾಗಿದ್ದಾರೆ.
   ಈ ಮೂವರು ಅಧಿಕಾರಿಗಳನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಅವರ ಕಾರ್ಯದಕ್ಷತೆ, ಸ್ನೇಹಶೀಲತೆ ಮತ್ತು ಸಿಬ್ಬಂದಿಯೊಂದಿಗಿನ ಸಹಕಾರವನ್ನು ಸಹಕಾರಿಗಳು ಹಾಗೂ ಅಧಿಕಾರಿಗಳು ಮೆಚ್ಚುಗೆಯಿಂದ ನೆನೆದರು.
    ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಿಮವತಿ ಭಟ್ ಅವರು ಸರ್ವರಿಗೂ ಶುಭ ಹಾರೈಸಿದರು. ಆನಂದ್ ಎಚ್ ಎ ಅವರು ತಮ್ಮ ಸೇವಾ ಅವಧಿಯಲ್ಲಿ ಎದುರಿಸಿದ ಸವಾಲುಗಳು ಮತ್ತು ತಂಡವಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಬಗ್ಗೆ ಮಾತನಾಡಿದರು. 
   ಎನ್ ಎಲ್ ನದಾಫ್ ಅವರು ಯಲ್ಲಾಪುರದ ಅರಣ್ಯ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿಗಳು, ಕಚೇರಿ ಸಿಬ್ಬಂದಿಗಳು ಮತ್ತು ಮುಂಚೂಣಿ ಸಿಬ್ಬಂದಿಗಳ ಸಹಕಾರವನ್ನು ನೆನೆದರು.
    ನಿವೃತ್ತ ವಲಯ ಅರಣ್ಯ ಅಧಿಕಾರಿ ಎಲ್ ಎ ಮಠ ಅವರು ತಮ್ಮ ಸುದೀರ್ಘ ಸೇವೆಯಲ್ಲಿ ಸಹಕರಿಸಿದ ಸರ್ವರನ್ನು ಅಭಿನಂದಿಸಿದರು.
    ಸಮಾರಂಭದ ಅಧ್ಯಕ್ಷತೆವಹಿಸಿದ್ದ ಹರ್ಷಬಾನು ಜಿ ಪಿ ಅವರು ಪದೋನ್ನತಿ ಹೊಂದಿದ, ವರ್ಗಾವಣೆಯಾದ ಮತ್ತು ನಿವೃತ್ತರಾದ ಅಧಿಕಾರಿಗಳಿಗೆ ಶುಭ ಹಾರೈಸಿದರು.
   ಕಾತುರ ವಲಯ ಅರಣ್ಯ ಅಧಿಕಾರಿ ಎಂ ಹೆಚ್ ನಾಯಕ್ ಸ್ವಾಗತಿಸಿದರು ಮತ್ತು ಮುಂಡಗೋಡ ವಲಯ ಅರಣ್ಯ ಅಧಿಕಾರಿ ವಾಗೀಶ ಬಿ ಜೆ ವಂದಿಸಿದರು.

ಕಿರವತ್ತಿ ವಲಯದಲ್ಲಿ ವನಮಹೋತ್ಸವ: ಪರಿಸರ ಸಂರಕ್ಷಣೆಗೆ ಒತ್ತು
ಯಲ್ಲಾಪುರ: ಇತ್ತೀಚೆಗೆ ಯಲ್ಲಾಪುರ ತಾಲೂಕಿನ ಕಿರವತ್ತಿ ಸರಕಾರಿ ಪ್ರೌಢಶಾಲೆಯಲ್ಲಿ ಕಿರವತ್ತಿ ವಲಯದ ವತಿಯಿಂದ ವನಮಹೋತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಶಾಂತರಾಮ್ ಸಿದ್ದಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
  ನಂತರ ಮಾತನಾಡಿದ ಶಾಂತಾರಾಮ ಸಿದ್ದಿ, ಪರಿಸರ ಸಂರಕ್ಷಣೆ, ಗಿಡಮರಗಳ ಸಂರಕ್ಷಣೆ ಹಾಗೂ ಬೆಂಕಿಯಿಂದ ಅರಣ್ಯವನ್ನು ರಕ್ಷಿಸುವ ಕುರಿತು ಜನಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು. 
 ಯಲ್ಲಾಪುರ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಭಾನು ಜಿ.ಪಿ ಭೂಮಿಯ ಮಹತ್ವ ಹಾಗೂ ಅರಣ್ಯ ಸಂರಕ್ಷಣೆಯ ಅಗತ್ಯತೆಯ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
   ಕಾರ್ಯಕ್ರಮದಲ್ಲಿ ಕಿರವತ್ತಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸಂಗೀತಾ ಕೊಕ್ರೆ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಆರ್ ಹೆಗಡೆ, ಯಲ್ಲಾಪುರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಿಮಾವತಿ ಭಟ್, ಧನಗರ ಗೌಳಿ ಸಮಾಜದ ರಾಜ್ಯ ಕಾರ್ಯಾಧ್ಯಕ್ಷ ದೊಂಡು ಪಾಟೀಲ್, ಸರಕಾರಿ ಪ್ರೌಢ ಶಾಲೆ ಕಿರವತ್ತಿಯ ಮುಖ್ಯೋಪಾಧ್ಯಾಯ ಜನಾರ್ದನ ಗಾಂವಕರ್, ಕಿರವತ್ತಿ ವಲಯ ಅರಣ್ಯಾಧಿಕಾರಿ ಡಿ.ಎಲ್ ಮಿರ್ಜಾನಕರ್, ವನವಾಸಿ ಕಲ್ಯಾಣದ ಜಿಲ್ಲಾ ಕಾರ್ಯದರ್ಶಿ ಬೈರು ಜೋರೆ ಸೇರಿದಂತೆ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.

ಯಲ್ಲಾಪುರ: ವಿಶ್ವ ಹಿಂದೂ ಪರಿಷತ್ ನೂತನ ಪದಾಧಿಕಾರಿಗಳು ಆಯ್ಕೆ

ಯಲ್ಲಾಪುರ: ವಿಶ್ವ ಹಿಂದೂ ಪರಿಷತ್ ನೂತನ ಪದಾಧಿಕಾರಿಗಳ ಆಯ್ಕೆ ಗುರುವಾರ ನಡೆದ ಸಭೆಯಲ್ಲಿ ಘೋಷಿಸಲಾಯಿತು. ಯಲ್ಲಾಪುರ ತಾಲೂಕು ಅಧ್ಯಕ್ಷರಾಗಿ ಗಜಾನನ ನಾಯ್ಕ ತಳ್ಳಿಕೇರಿ ಆಯ್ಕೆಯಾದರು. ಈ ಸಭೆಗೆ ರಾಜ್ಯ ಉಪಾಧ್ಯಕ್ಷ ಗಂಗಾಧರ ಹೆಗಡೆ ಮತ್ತು ಜಿಲ್ಲಾಧ್ಯಕ್ಷ ಎಸ್.ಎನ್.ಭಟ್ಟ ಭಾಗವಹಿಸಿದ್ದರು.
    ತಾಲೂಕು ಉಪಾಧ್ಯಕ್ಷರಾಗಿ ಗುರು ಭಟ್ಟ ಹಾಸಣಗಿ, ಕಾರ್ಯದರ್ಶಿಯಾಗಿ ವಿಶಾಲ ವಾಳಂಬಿ, ಸಹಕಾರ್ಯದರ್ಶಿಯಾಗಿ ಗಿರೀಶ ಭಾಗ್ವತ್ ಆಯ್ಕೆಯಾದರು. ಮಹಿಳಾ ಪ್ರಮುಖೆಯಾಗಿ ವಿನುತಾ ಭಟ್ಟ, ಸಹ ಪ್ರಮುಖೆ ವಿದ್ಯಾ ಭಟ್ಟ, ಸತ್ಸಂಗ ಪ್ರಮುಖರಾಗಿ ರಚನಾ ಭಟ್ಟ, ಸರೋಜಾ ಹೆಗಡೆ, ದುರ್ಗಾವಾಹಿನಿ ಪ್ರಮುಖ ಮಹಾದೇವಿ ಭಟ್ಟ ಮತ್ತು ಸಹ ಪ್ರಮುಖೆಯಾಗಿ ದಮಯಂತಿ ಕೌವಡಿಕೇರಿ ಆಯ್ಕೆಯಾದರು.
   ಯಲ್ಲಾಪುರ ನಗರದ ಅಧ್ಯಕ್ಷರಾಗಿ ಅನಂತ ಗಾಂವ್ಕರ್, ಕಾರ್ಯದರ್ಶಿಯಾಗಿ ಅರುಣ ಶೆಟ್ಟಿ, ಸಹಕಾರ್ಯದರ್ಶಿಯಾಗಿ ವಿಜು ಆಚಾರಿ ಮತ್ತು ಪ್ರಭಾಕರ ನಾಯ್ಕ ಆಯ್ಕೆಯಾದರು. ಸತ್ಸಂಗ ಪ್ರಮುಖರಾಗಿ ಕಲ್ಪನಾ ನಾಯ್ಕ ಕಲ್ಮಠ ಆಯ್ಕೆಯಾದರು.
    ಜಿಲ್ಲಾ ಸಮಿತಿಯ ಉಪಾಧ್ಯಕ್ಷರಾಗಿ ನಾರಾಯಣ ನಾಯ್ಕ ಮತ್ತು ಕೋಶಾಧ್ಯಕ್ಷರಾಗಿ ನಾಗರಾಜ ಮದ್ಗುಣಿ ಆಯ್ಕೆಯಾದರು.

ಯಲ್ಲಾಪುರದಲ್ಲಿ ರಿಯಲ್ ಎಸ್ಟೇಟ್ ದಂದೆ, ಭೂಮಿ ಕಬಳಿಕೆ, ಮಾರಾಟ, ಮೋಸ: ಗಂಭೀರ ಸಮಸ್ಯೆ

ಯಲ್ಲಾಪುರ ; ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ಭೂಮಿ ಕಬಳಿಕೆ ಕುರಿತು ಬೆಳಕಿಗೆ ಬಂದಿರುವ ಆರೋಪಗಳು ಬಹಳ ಗಂಭೀರವಾಗಿವೆ. ಬೆಂಗಳೂರಿನಂತಹ ಮಹಾನಗರದಲ್ಲಿ ಕೆರೆಗಳನ್ನು ಒತ್ತುವರಿ ಮಾಡುವುದು ಸಾಮಾನ್ಯವಾಗಿದ್ದರೆ, ಯಲ್ಲಾಪುರದಲ್ಲಿ ಹಣದಾಸೆಯಿಂದ ಅರಣ್ಯ, ಸರ್ಕಾರಿ ಭೂಮಿ ಹಾಗೂ ಖಾಸಗಿ ಜಮೀನುಗಳನ್ನು ಒತ್ತುವರಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.
   ಈ ಕೃತ್ಯದಲ್ಲಿ ಹಲವು ಇಲಾಖೆಗಳ ಸಿಬ್ಬಂದಿಗಳು ಭಾಗಿಯಾಗಿದ್ದಾರೆ ಆರೋಪಗಳು ಕೇಳಿಬಂದಿವೆ. ಹಣ ಮಾಡುವ ಉದ್ದೇಶದಿಂದ ಓಣಿಗೊಬ್ಬ ಎಜೆಂಟ್ ಸೃಷ್ಟಿಯಾಗಿ, ಭೂಮಿ ಕೊಳ್ಳುವವರನ್ನು ಮೋಸ ಮಾಡುತ್ತಿದ್ದಾನೆ ಎಂಬ ಆರೋಪವೂ ಇದೆ.
    ಲೇಔಟ್‌ಗಳಲ್ಲಿ ಕಡ್ಡಾಯವಾಗಿ ಇರಬೇಕಾದ ಪಾರ್ಕಿಂಗ್, ಗಾರ್ಡನ್‌ಗಳು ಇಲ್ಲದೆ ಪ್ಲಾಟ್‌ಗಳನ್ನು ಮಾರಿ, ಅಕ್ರಮವಾಗಿ ಅರಣ್ಯ ಭೂಮಿಯನ್ನು ತೋರಿಸಿ ದುಡ್ಡು ಮಾಡುವ ದಂಧೆ ನಡೆಯುತ್ತಿದೆ. ಅತಿಕ್ರಮ ಸಕ್ರಮದಲ್ಲಿ ಮಂಜೂರಾದ ಭೂಮಿಯನ್ನು ನಿಯಮಗಳನ್ನು ಉಲ್ಲಂಘಿಸಿ ಮಾರಾಟ ಮಾಡಲಾಗುತ್ತಿದೆ. ದೇವಸ್ಥಾನದ ಜಾಗವನ್ನು ಕೂಡ ಅತಿಕ್ರಮಿಸಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
   ಈ ಸಮಸ್ಯೆಯನ್ನು ನಿಭಾಯಿಸಲು ಕಠಿಣ ಕಾನೂನು ರೂಪಿಸುವ ಅಗತ್ಯವಿದೆ. ಪಟ್ಟಣ ಪಂಚಾಯತಿ, ಕಂದಾಯ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಸಮಿತಿ ರಚಿಸಿ, ಒಮ್ಮೆ ಸೂಕ್ತವಾಗಿ ಪರಿಶೀಲನೆ ನಡೆಸಿದ ನಂತರ ಮಾತ್ರ ಭೂಮಿ ಮಾರಾಟಕ್ಕೆ ಅವಕಾಶ ನೀಡಬೇಕು. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಕೋರುತ್ತೇವೆ.

ಯಲ್ಲಾಪುರದಲ್ಲಿ ಭೂಮಿ ವಂಚನೆ: ಸರ್ಕಾರಿ ನೌಕರನ ದೂರು ವೈರಲ್
ಯಲ್ಲಾಪುರದ ಈಶ್ವರ ದೇವಸ್ಥಾನ ಎದುರಿನ ಭೂಮಿ ಮಾರಾಟದಲ್ಲಿ ಸರ್ಕಾರಿ ನೌಕರನೊಬ್ಬನಿಗೆ ಮೋಸವಾಗಿದೆ ಎಂಬ ಆರೋಪ ಕೇಳಿಬಂದಿದೆ. ಮಧ್ಯವರ್ತಿಯೊಬ್ಬ 18.5 ಲಕ್ಷ ರೂಪಾಯಿ ಮೌಲ್ಯದ ಭೂಮಿಯ ವ್ಯವಹಾರದಲ್ಲಿ 5 ಲಕ್ಷ ರೂಪಾಯಿ ಪಡೆದು, ಸಂಪೂರ್ಣ ದಾಖಲೆಗಳಿಲ್ಲದೆ ಭೂಮಿಯನ್ನು ಮಾರಾಟ ಮಾಡಿರುವುದಾಗಿ ಆರೋಪಿಸಲಾಗಿದೆ. ಈ ಕುರಿತು ಸರ್ಕಾರಿ ನೌಕರರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ದೂರಿನ ಪ್ರತಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
   ಈ ಘಟನೆಯು ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಭೂಮಿ ವಂಚನೆ ಪ್ರಕರಣಗಳನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜನರು ಆಗ್ರಹಿಸುತ್ತಿದ್ದಾರೆ. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ನಡೆಸುತ್ತಿದ್ದಾರೆ.

ಭೂಮಿ ಮಾರಾಟ ವಿರುದ್ಧ ಮತ್ತೊಂದು ಹೋರಾಟ: ಅಕ್ರಮ ಭೂಮಿ ಮಾರಾಟ ರದ್ದು!
25 ವರ್ಷಗಳ ಕಾಲ ಮಾರಾಟ ಮಾಡುವಂತಿಲ್ಲ ಎಂಬ ಸರ್ಕಾರದ ಸ್ಪಷ್ಟ ನಿರ್ದೇಶನವಿದ್ದರೂ, ಅಕ್ರಮ ಸಕ್ರಮದಲ್ಲಿ ಪಡೆದ ಭೂಮಿಯನ್ನು ಬೇರೊಬ್ಬರಿಗೆ ಮಾರಾಟ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಮೂರನೇ ವ್ಯಕ್ತಿಯೊಬ್ಬರು ತಹಶೀಲ್ದಾರ ಮತ್ತು ಪಟ್ಟಣ ಪಂಚಾಯತಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
   ತಹಶೀಲ್ದಾರರ ಸೂಚನೆಯಂತೆ ಪಟ್ಟಣ ಪಂಚಾಯತಿ ಅಧಿಕಾರಿಗಳು ಭೂಮಿ ಖರೀದಿಸಿದ ಮತ್ತು ಮಾರಾಟ ಮಾಡಿದ ಇಬ್ಬರನ್ನೂ ನೋಟಿಸ್ ಜಾರಿ ಮಾಡಿದ್ದಾರೆ. ಈ ಮೂಲಕ ಅಕ್ರಮವಾಗಿ ನಡೆದ ಈ ಭೂಮಿ ವ್ಯವಹಾರವನ್ನು ರದ್ದುಪಡಿಸಲಾಗಿದೆ. ಈ ಘಟನೆ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಒಂದು ಉದಾಹರಣೆಯಾಗಿದೆ. ಅಕ್ರಮ ಸಕ್ರಮದಲ್ಲೊ ಪಡೆದ ಭೂಮಿಯನ್ನು ಮಾರಾಟ ಮಾಡುವುದು ಕಾನೂನುಬಾಹಿರವಾಗಿದ್ದು, ಇಂತಹ ಕೃತ್ಯಗಳಿಗೆ ಕಾನೂನಿನ ಕಡಿವಾಣ ಹಾಕುವುದು ಅನಿವಾರ್ಯವಾಗಿದೆ.

ಯಲ್ಲಾಪುರದಲ್ಲಿ ವಸತಿ ಲೇಔಟ್ ಮೋಸ: ಶಾಸಕರ ಎಚ್ಚರಿಕೆ
ಯಲ್ಲಾಪುರ ಪಟ್ಟಣ ಮತ್ತು ಸುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ವಸತಿ ಯೋಜನೆಗಳಲ್ಲಿ ಜನರು ಮೋಸ ಹೋಗುತ್ತಿರುವ ಬಗ್ಗೆ ಶಾಸಕ ಶಿವರಾಮ ಹೆಬ್ಬಾರ್ ಅವರು ಗಂಭೀರ ಆತಂಕ ವ್ಯಕ್ತಪಡಿಸಿದ್ದಾರೆ.
  ಕೆಲವು ದಿನಗಳ ಹಿಂದೆ ನಡೆದ ಜನಸ್ಪಂಧನ ಸಭೆಯಲ್ಲಿ ಮಾತನಾಡಿದ ಅವರು, ವಸತಿ ಯೋಜನೆಗಳಲ್ಲಿ ಭೂಮಿಯನ್ನು ಖರೀದಿಸುವಾಗ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು. ನಿಯಮಗಳ ಪ್ರಕಾರ ಬಡಾವಣೆ ನಿರ್ಮಿಸುವಾ ರಸ್ತೆ, ಚರಂಡಿ, ವಿದ್ಯುತ್ ಸಂಪರ್ಕ, ಆಟದ ಮೈದಾನ, ಪಾರ್ಕ್ ಇತ್ಯಾದಿ ಸೌಲಭ್ಯಗಳನ್ನು ಕಡ್ಡಾಯವಾಗಿ ಒದಗಿಸಬೇಕು. ಆದರೆ, ಹಲವು ವಸತಿ ಯೋಜನೆಗಳಲ್ಲಿ ಈ ನಿಯಮಗಳನ್ನು ಉಲ್ಲಂಘಿಸಿ, ಭೂಮಿಯನ್ನು ವಿಭಜಿಸಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ಜನರು ತಮ್ಮ ಜೀವನಪರ್ಯಂತ ದುಡಿದ ಹಣವನ್ನು ಕಳೆದುಕೊಳ್ಳುವ ಸಂಭವವಿದೆ.
  ಅಲ್ಲದೆ, ಹಲವು ವಸತಿ ಯೋಜನೆಗಳನ್ನು ಅರಣ್ಯ ಭೂಮಿ, ಸರಕಾರಿ ಜಮೀನು ಅಥವಾ ಇತರ ಖಾಸಗಿ ಜಮೀನುಗಳಲ್ಲಿ ಅಕ್ರಮವಾಗಿ ನಿರ್ಮಿಸಲಾಗುತ್ತಿದೆ. ಇದರಿಂದ ಭವಿಷ್ಯದಲ್ಲಿ ಈ ಯೋಜನೆಗಳು ಕಾನೂನು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
  ಈ ಸಮಸ್ಯೆಗೆ ಪರಿಹಾರವಾಗಿ, ಶಾಸಕರು ಅರಣ್ಯ ಇಲಾಖೆ, ಕಂದಾಯ ಇಲಾಖೆ, ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಿ, ವಸತಿ ಯೋಜನೆಗಳನ್ನು ನಿರ್ಮಿಸುವಾಗ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಭೆಯಲ್ಲಿ ಸಲಹೆ ನೀಡಿದ್ದರು.
    ಜನರು ವಸತಿ ಯೋಜನೆಗಳಲ್ಲಿ ಭೂಮಿಯನ್ನು ಖರೀದಿಸುವ ಮುನ್ನ ಎಚ್ಚರಿಕೆಯಿಂದ ಪರಿಶೀಲಿಸಿ, ಅಗತ್ಯ ದಾಖಲೆಗಳನ್ನು ಪಡೆದುಕೊಳ್ಳಬೇಕು ಎಂದು ಶಾಸಕರು ಹೇಳಿದ್ದಾರೆ.
  ಯಲ್ಲಾಪುರದಲ್ಲಿ ನಡೆಯುತ್ತಿರುವ ಭೂ ಕಬಳಿಕೆಯ ಸಮಸ್ಯೆಯು ಸರಳವಾಗಿ ಒಂದು ಸ್ಥಳೀಯ ಸಮಸ್ಯೆಯಲ್ಲ; ಇದು ಹಲವಾರು ಭಾಗಗಳಲ್ಲಿ ವ್ಯಾಪಕವಾಗಿ ಹರಡಿರುವ ಒಂದು ಜಟಿಲವಾದ ಸಮಸ್ಯೆಯಾಗಿದೆ. ಈ ಸಮಸ್ಯೆಗೆ ಕಾರಣಗಳು ಬಹುಮುಖಿಯಾಗಿದ್ದು, ಅವುಗಳಲ್ಲಿ ಕೆಲವು ಕೆಳಕಂಡಂತಿವೆ, ಜನಸಂಖ್ಯೆ ಹೆಚ್ಚಾಗುತ್ತಿದ್ದಂತೆ ಭೂಮಿಯ ಬೇಡಿಕೆ ಹೆಚ್ಚಾಗುತ್ತಿದೆ. ಇದರಿಂದಾಗಿ ಭೂಮಿಯ ಬೆಲೆ ಏರಿಕೆಯಾಗುತ್ತಿದೆ ಮತ್ತು ಭೂ ಕಬಳಿಕೆಗೆ ಪ್ರಚೋದನೆ ನೀಡುತ್ತಿದೆ. ಭೂ ಸಂಬಂಧಿ ಕಾನೂನುಗಳು ಸಾಕಷ್ಟು ಸ್ಪಷ್ಟವಾಗಿಲ್ಲ ಮತ್ತು ಅವುಗಳನ್ನು ಸುಲಭವಾಗಿ ದುರುಪಯೋಗಪಡಿಸಿಕೊಳ್ಳಬಹುದು. ಕೆಲವು ಸರ್ಕಾರಿ ಅಧಿಕಾರಿಗಳು ಭೂ ಕಬಳಿಕೆದಾರರೊಂದಿಗೆ ಸೇರಿಕೊಂಡು ಭ್ರಷ್ಟಾಚಾರ ಮಾಡುತ್ತಿದ್ದಾರೆ. ಹಲವಾರು ಜನರು ಭೂ ಕಬಳಿಕೆಯ ಅಪಾಯಗಳ ಬಗ್ಗೆ ತಿಳಿದಿರುವುದಿಲ್ಲ ಮತ್ತು ಅವರ ಹಕ್ಕುಗಳನ್ನು ರಕ್ಷಿಸಿಕೊಳ್ಳುವುದು ಹೇಗೆ ಎಂದು ಕೂಡ ತಿಳಿದಿರುವುದಿಲ್ಲ.
   ಪರಿಹಾರವಾಗಿ, ಭೂ ಕಬಳಿಕೆಯಲ್ಲಿ ಭಾಗಿಯಾಗಿರುವ ಎಲ್ಲಾ ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕಾನೂನಿನ ಸಂಪೂರ್ಣ ಬಲದಿಂದ ಕ್ರಮ ಕೈಗೊಳ್ಳಬೇಕು. ಭೂ ಸಂಬಂಧಿ ಕಾನೂನುಗಳನ್ನು ಸರಳೀಕರಿಸಬೇಕು ಮತ್ತು ಅವುಗಳನ್ನು ಪಾರದರ್ಶಕವಾಗಿ ಮಾಡಬೇಕು. ಭೂ ಕಬಳಿಕೆ ತಡೆಗಟ್ಟಲು ಹೊಸ ಕಾನೂನುಗಳನ್ನು ರಚಿಸಬೇಕು. ಭೂ ದಾಖಲೆಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಿ, ಪಾರದರ್ಶಕ ವ್ಯವಸ್ಥೆಯನ್ನು ಸ್ಥಾಪಿಸಬೇಕು. ಇದರಿಂದ ಭೂ ಕಬಳಿಕೆಗೆ ಅವಕಾಶವಿಲ್ಲದಂತೆ ತಡೆಯಬಹುದು. ಸಾರ್ವಜನಿಕರಲ್ಲಿ ಭೂ ಕಬಳಿಕೆಯ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸಲು ವ್ಯಾಪಕವಾದ ಜಾಗೃತಿ ಅಭಿಯಾನಗಳನ್ನು ನಡೆಸಬೇಕು. ಸರ್ಕಾರಿ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿ ಮಾಡಬೇಕು ಮತ್ತು ಭ್ರಷ್ಟಾಚಾರವನ್ನು ತಡೆಗಟ್ಟಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಸಾಮಾಜಿಕ ಸಂಘಟನೆಗಳು ಭೂ ಕಬಳಿಕೆ ವಿರುದ್ಧ ಹೋರಾಟ ನಡೆಸಲು ಮತ್ತು ಸರ್ಕಾರಕ್ಕೆ ಒತ್ತಡ ಹೇರಲು ಮುಂದಾಗಬೇಕು.

IMG-20240804-111508 ಯಲ್ಲಾಪುರದ ಕೆಲವು ರಿಯಲ್ ಎಸ್ಟೇಟ್ ಎಜೆಂಟರು ನೈತಿಕತೆಯನ್ನು ಉಳಿಸಿಕೊಂಡಿದ್ದಾರೆ :  
ಯಲ್ಲಾಪುರದ ರಿಯಲ್ ಎಸ್ಟೇಟ್ ಕ್ಷೇತ್ರವು ಗ್ರಾಹಕರ ವಿಶ್ವಾಸವನ್ನು ಗಳಿಸುವ ನಿಟ್ಟಿನಲ್ಲಿ ಗಮನಾರ್ಹ ಪ್ರಗತಿ ಸಾಧಿಸುತ್ತಿದೆ. ಹಲವು ಮಧ್ಯವರ್ತಿಗಳು ಮತ್ತು ಏಜೆಂಟ್‌ಗಳು ಪಾರದರ್ಶಕ ವ್ಯವಹಾರಗಳು, ಸಂಪೂರ್ಣ ದಾಖಲಾತಿ ಮತ್ತು ಗ್ರಾಹಕರ ಹಿತಾಸಕ್ತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಇದು ಕ್ಷೇತ್ರದಲ್ಲಿ ನೈತಿಕ ಮೌಲ್ಯಗಳನ್ನು ಪುನರುಚ್ಚಾತಿಸುವ ಒಂದು ಸಕಾರಾತ್ಮಕ ಬದಲಾವಣೆಯ ಸಂಕೇತವಾಗಿದೆ.

ಗ್ರಾಹಕರ ವಿಶ್ವಾಸಕ್ಕೆ ಆದ್ಯತೆ:
ಈ ಮಧ್ಯವರ್ತಿಗಳು ಕೇವಲ ಒಂದು ವಹಿವಾಟನ್ನು ಪೂರ್ಣಗೊಳಿಸುವುದನ್ನು ಗುರಿಯಾಗಿರಿಸಿಕೊಂಡಿಲ್ಲ. ಬದಲಾಗಿ, ದೀರ್ಘಕಾಲದ ಗ್ರಾಹಕ ಸಂಬಂಧಗಳನ್ನು ನಿರ್ಮಿಸುವತ್ತ ಗಮನ ಹರಿಸಿದ್ದಾರೆ. ಪ್ರತಿಯೊಬ್ಬ ಗ್ರಾಹಕರ ಅಗತ್ಯತೆಗಳನ್ನು ಅರ್ಥಮಾಡಿಕೊಂಡು, ಅವರಿಗೆ ಸೂಕ್ತವಾದ ಆಸ್ತಿಯನ್ನು ಕಂಡುಹಿಡಿಯಲು ಸಹಾಯ ಮಾಡುವುದು ಅವರ ಮುಖ್ಯ ಗುರಿಯಾಗಿದೆ.

ಪಾರದರ್ಶಕ ವ್ಯವಹಾರಗಳು:
ಈ ಮಧ್ಯವರ್ತಿಗಳು ಎಲ್ಲಾ ವಹಿವಾಟುಗಳಲ್ಲಿ ಪಾರದರ್ಶಕತೆಯನ್ನು ಕಾಪಾಡುತ್ತಾರೆ. ಆಸ್ತಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಗ್ರಾಹಕರಿಗೆ ಒದಗಿಸುವುದು, ಯಾವುದೇ ರೀತಿಯ ತಪ್ಪು ಮಾಹಿತಿ ನೀಡದಿರುವುದು ಮತ್ತು ಎಲ್ಲಾ ಒಪ್ಪಂದಗಳನ್ನು ಲಿಖಿತ ರೂಪದಲ್ಲಿ ಮಾಡುವುದು ಇದರ ಭಾಗವಾಗಿದೆ.

ಸಂಪೂರ್ಣ ದಾಖಲಾತಿ:
ಈ ಮಧ್ಯವರ್ತಿಗಳು ಎಲ್ಲಾ ವಹಿವಾಟುಗಳಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಂರಕ್ಷಿಸುತ್ತಾರೆ. ಇದು ಭವಿಷ್ಯದಲ್ಲಿ ಯಾವುದೇ ವಿವಾದ ಉಂಟಾದಲ್ಲಿ ಸಹಾಯಕವಾಗುತ್ತದೆ.

ಗ್ರಾಹಕರ ಹಿತಾಸಕ್ತಿಯ ರಕ್ಷಣೆ:
ಈ ಮಧ್ಯವರ್ತಿಗಳು ಗ್ರಾಹಕರ ಹಿತಾಸಕ್ತಿಯನ್ನು ರಕ್ಷಿಸುವಲ್ಲಿ ಅತ್ಯಂತ ಗಮನ ಹರಿಸುತ್ತಾರೆ. ಯಾವುದೇ ರೀತಿಯ ಮೋಸ ಅಥವಾ ವಂಚನೆಗೆ ತಾವು ಒಳಗಾಗದಂತೆ ಗ್ರಾಹಕರು ಎಚ್ಚರಿಕೆಯಿಂದಿರಬೇಕು ಎಂದು ತಿಳಿಸುತ್ತಾರೆ.

ಕ್ಷೇತ್ರದಲ್ಲಿನ ಸಕಾರಾತ್ಮಕ ಬದಲಾವಣೆ:
ಈ ಮಧ್ಯವರ್ತಿಗಳ ಪ್ರಯತ್ನದಿಂದ ಯಲ್ಲಾಪುರದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಗಮನಾರ್ಹವಾದ ಸಕಾರಾತ್ಮಕ ಬದಲಾವಣೆ ಕಂಡುಬಂದಿದೆ. ಗ್ರಾಹಕರ ವಿಶ್ವಾಸ ಹೆಚ್ಚಾಗಿದೆ ಮತ್ತು ಕ್ಷೇತ್ರದಲ್ಲಿ ಆರೋಗ್ಯಕರ ಸ್ಪರ್ಧೆ ಹೆಚ್ಚಾಗಿದೆ.
    ಯಲ್ಲಾಪುರದ ಭೂ ಕಬಳಿಕೆ ಸಮಸ್ಯೆಯನ್ನು ಪರಿಹರಿಸಲು ಸಮಗ್ರ ಮತ್ತು ದೀರ್ಘಕಾಲೀನ ಪರಿಹಾರಗಳನ್ನು ಕಂಡುಕೊಳ್ಳುವುದು ಅತ್ಯಂತ ಮುಖ್ಯ. ಈ ಸಮಸ್ಯೆಯನ್ನು ನಿರ್ಲಕ್ಷಿಸಿದರೆ, ಅದು ಭವಿಷ್ಯದಲ್ಲಿ ದೊಡ್ಡ ಸಮಸ್ಯೆಯಾಗಿ ಬದಲಾಗಬಹುದು.