Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Sunday, 11 August 2024

ಮನಸ್ವಿನಿ ಶಾಲೆಯ ಮಕ್ಕಳಿಗೆ ಕೃಷಿಯ ಮಹತ್ವವನ್ನು ಅರಿಯುವ ಅವಕಾಶ!

ಯಲ್ಲಾಪುರ: ತಾಲೂಕಿನ ಉಮ್ಮಚಗಿ ಕೋಟೆಮನೆಯ ಮನಸ್ವಿನೀ ವಿದ್ಯಾನಿಲಯದ ಮಕ್ಕಳು ರವಿವಾರ ಸ್ಥಳೀಯ ಗದ್ದೆ ನೆಟ್ಟಿಯಲ್ಲಿ ಭಾಗವಹಿಸಿದರು. ಈ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಕೃಷಿಯ ಪಾಠಗಳನ್ನು ಕಲಿಸಿಕೊಡಲಾಯಿತು 
 ಮಕ್ಕಳಿಗೆ ಹಳ್ಳಿಯ ಜೀವನದ ಮಹತ್ವವನ್ನು ತಿಳಿಸಲು, ಶಾಲೆಯ ಶಿಕ್ಷಕರು ಹಾಗೂ ಗದ್ದೆಯ ಮಾಲಿಕರಾರ ಸ್ಥಳೀಯ ರೈತ ನಾಗರಾಜ್ ಹೆಗಡೆ ಭತ್ತದ ನಾಟಿ ಮಾಡುವ ವಿಧಾನವನ್ನು ವಿವರಿಸಿದರು. ಮಕ್ಕಳು ನಾಟಿ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮೂಲಕ ಕೃಷಿಯ ಬಗ್ಗೆ ನೇರ ಅನುಭವವನ್ನು ಪಡೆದರು. 
   ಶಾಲೆಯ ಮುಖ್ಯ ಶಿಕ್ಷಕರಾದ ಸವಿತಾ ಭಟ್ ಮತ್ತು ಇತರ ಸಹಶಿಕ್ಷಕರೊಂದಿಗೆ, ಮಕ್ಕಳು ಗದ್ದೆಯಲ್ಲಿ ಸಂತೋಷದಿಂದ ನಾಟಿ ಮಾಡಿದರು. ಕೃಷಿ ಚಟುವಟಿಕೆಗಳು ಮಕ್ಕಳಿಗೆ ಪರಿಸರ ಮತ್ತು ಕೃಷಿಯ ಮಹತ್ವವನ್ನು ಅರಿಯಲು ಸಹಾಯ ಮಾಡುತ್ತವೆ. 
     ಈ ರೀತಿಯ ಚಟುವಟಿಕೆಗಳು ಮಕ್ಕಳಿಗೆ ಕೃಷಿಯ ಪ್ರಾಮುಖ್ಯತೆಯನ್ನು ಮತ್ತು ಪರಿಸರ ಸ್ನೇಹಿತ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತವೆ. ಉದಾಹರಣೆಗೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಶಾಲೆಗಳು ಮಕ್ಕಳಿಗೆ ಕೃಷಿಯ ಪಾಠಗಳನ್ನು ನೀಡುತ್ತವೆ. ದಾವಣಗೆರೆಯಲ್ಲಿಯೂ, ಮಕ್ಕಳಿಗೆ ಭತ್ತದ ನಾಟಿ ಮಾಡುವ ಮೂಲಕ ಕೃಷಿಯ ಮೂಲಭೂತ ತತ್ವಗಳನ್ನು ಕಲಿಸಲಾಗುತ್ತಿದೆ. ‌..... ರೈತ ನಾಗರಾಜ ಹೆಗಡೆ. 
    ಕೃಷಿ ಮತ್ತು ತೋಟಗಾರಿಕೆಯಿಂದ ದೂರವಾಗುತ್ತಿರುವ ಇಂದಿನ ತಲೆಮಾರಿನ ಮಕ್ಕಳಿಗೆ, ಮಳೆಗಾಲದಲ್ಲಿ ಶಾಲೆಯ ಮೂಲಕ ಕೃಷಿಯ ಚಟುವಟಿಕೆಗಳನ್ನು ಪರಿಚಯಿಸುವ ಮತ್ತು ಪಾಲ್ಗೊಳ್ಳುವ ಅವಕಾಶ ನೀಡಲಾಗುತ್ತಿದೆ. ..... ಮುಖ್ಯ ಶಿಕ್ಷಕಿ ರೇಖಾ ಕೋಟೆಮನೆ.
   ಈ ಕಾರ್ಯಕ್ರಮಗಳು ಮಕ್ಕಳಿಗೆ ಕೃಷಿಯ ಬಗ್ಗೆ ಅರಿವು ಮೂಡಿಸುವಲ್ಲಿ ಸಹಾಯ ಮಾಡುತ್ತವೆ ಮತ್ತು ಅವರಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸುತ್ತವೆ. ಇದರಿಂದಾಗಿ, ಮುಂದಿನ ತಲೆಮಾರಿನ ಮಕ್ಕಳಿಗೆ ಕೃಷಿಯ ಮಹತ್ವವನ್ನು ತಿಳಿಯಲು ಮತ್ತು ಪರಿಸರವನ್ನು ಕಾಪಾಡಲು ಪ್ರೇರಣೆ ದೊರಕುತ್ತದೆ.

ಯಲ್ಲಾಪುರದ ಸೇಜಲ್ ನಾಯ್ಕ ಭಾಗವಹಿಸಿದ್ದ ಕರ್ನಾಟಕ ಸ್ಕೆಟಿಂಗ್ ತಂಡಕ್ಕೆ ರಜತ ಪದಕ; ಜಿಲ್ಲೆಗೆ ಹೆಮ್ಮೆ


ಯಲ್ಲಾಪುರ: ತಮಿಳುನಾಡಿನ ಕೊಯಮತ್ತೂರಿನಲ್ಲಿ ಆಗಸ್ಟ್ 7 ರಿಂದ 11ರವರೆಗೆ ನಡೆದ ಇಂಡಿಯಾ ಸ್ಕೆಟ್ ಗೇಮ್ಸ್ 2024-ಚಾಂಪಿಯನ್‌ಶಿಪ್ ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಮೂವರು ಸ್ಕೇಟರ್ಸ್ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿ ಬೆಳ್ಳಿ ಪದಕ ಪಡೆದು ಜಿಲ್ಲೆಗೆ ಗೌರವ ತಂದಿದ್ದಾರೆ.
   ಯಲ್ಲಾಪುರ ತಾಲೂಕಿನ ವೈಟಿಎಸ್‌ಎಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸೇಜಲ್ ಸತೀಶ ನಾಯ್ಕ, ಕರ್ನಾಟಕ ರಾಜ್ಯ ಸಿನಿಯರ್ ಮಹಿಳಾ ಡರ್ಬಿ ತಂಡವನ್ನು ಪ್ರತಿನಿಧಿಸಿ ರಜತ ಪದಕ ಪಡೆದಿದ್ದಾರೆ. ಸೇಜಲ್ ನಾಯ್ಕ ಪ.ಪಂ. ಸದಸ್ಯ ಸತೀಶ್ ನಾಯ್ಕ ಅವರ ಪುತ್ರಿಯಾಗಿದ್ದು, ಈ ಹಿಂದೆಯೂ ರಾಷ್ಟ್ರಮಟ್ಟದ ಸ್ಕೇಟಿಂಗ್‌ನಲ್ಲಿ ಭಾಗವಹಿಸಿ ಪದಕ ಗಳಿಸಿದ್ದಳು.
   ಈಕೆಯೊಂದಿಗೆ ಶಿರಸಿಯ ಎಮ್ಈಎಸ್ ಕಾಲೇಜಿನ ಅನಘಾ ರಮೇಶ್ ಹೆಗಡೆ, ದಾಂಡೇಲಿಯ ಸಾನಿಕಾ ಉಮೇಶ್ ತೊರತ್ ತಂಡದಲ್ಲಿದ್ದು, ಪದಕಕ್ಕೆ ಭಾಜನರಾಗಿದ್ದಾರೆ. 
  ಕೈಗಾ ರೊಲರ್ ಸ್ಕೇಟಿಂಗ್ ಕ್ಲಬ್‌ನಲ್ಲಿ ಕಳೆದ ನಾಲ್ಕು ವರ್ಷಗಳಿಂದ ತರಬೇತಿಯನ್ನು ಪಡೆಯುತ್ತಿರುವ ಈ ಮೂವರು, ಸತತ ನಾಲ್ಕನೇ ಬಾರಿ ಕರ್ನಾಟಕ ತಂಡದ ಪರವಾಗಿ ಆಡಿದ್ದಾರೆ. ತರಬೇತುದಾರ ದೀಲಿಪ್ ಹಣಬರ್ ಹಾಗೂ ಸಹಾಯಕ ತರಬೇತುದಾರ ಮಂಜಪ್ಪ ನಾಯ್ಕ ಅವರ ಮಾರ್ಗದರ್ಶನದಲ್ಲಿ ಈ ಸಾಧನೆ ಸಾಧ್ಯವಾಗಿದೆ.
   ಸೇಜಲ್ ಸತೀಶ್ ನಾಯ್ಕ ಅವರ ಸಾಧನೆಗೆ ಶಾಸಕ ಶಿವರಾಮ ಹೆಬ್ಬಾರ್, ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಹಿರಿಯ ಕ್ರೀಡಾಪಟುಗಳು, ಜನಪ್ರತಿನಿಧಿಗಳು ಹಾಗೂ ಊರ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಯಲ್ಲಾಪುರ ಬಿಜೆಪಿ ಯುವ ಮೋರ್ಚಾದಿಂದ ಬೈಕ್ ಜಾಥಾ: 13-15 ರವರೆಗೆ ಹರ್ ಘರ್ ತಿರಂಗ್ ಅಭಿಯಾನ

Description of the image ಯಲ್ಲಾಪುರ ಬಿಜೆಪಿ ಯುವ ಮೋರ್ಚಾದಿಂದ ಬೈಕ್ ಜಾಥಾ: 13-15 ರವರೆಗೆ ಹರ್ ಘರ್ ತಿರಂಗ್ ಅಭಿಯಾನ 
 ಯಲ್ಲಾಪುರ: ಬಿಜೆಪಿ ಯುವ ಮೋರ್ಚಾ ಯಲ್ಲಾಪುರ ವತಿಯಿಂದ ಕಂಪ್ಲಿ ಶಕ್ತಿ ಕೇಂದ್ರದ ಮಂಚೀಕೇರಿ ಮಟ್ಟದಲ್ಲಿ ಬುಧವಾರ ಬೈಕ್ ಜಾಥಾ ಹಮ್ಮಿಕೊಳ್ಳಲಾಗಿತ್ತು.
 ಕಾರ್ಯಕ್ರಮವನ್ನು ಮಂಡಳದ ಅಧ್ಯಕ್ಷ ಪ್ರಸಾದ ಹೆಗಡೆ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಅಭಿಯಾನವು ಸ್ವಾತಂತ್ರ್ಯದ ಹಬ್ಬವನ್ನು ಮನಸ್ಸಿನಲ್ಲೂ ಹಾಗೂ ಮನೆಯಲ್ಲಿಯೂ ಶ್ರದ್ಧಯುತವಾಗಿ ಆಚರಿಸಲು ಉದ್ದೇಶಿಸಲಾಗಿದೆ. ಆ. 13-15 ರವರೆಗೆ ಮನೆ ಮನೆಗೆ, ಮನ ಮನಕ್ಕೂ ತಿರಂಗಾ ಹಾರಿಸುವ ಅಭಿಯಾನವನ್ನು ಸಕ್ರಿಯವಾಗಿ ನಡೆಸುವಂತೆ ಬೂತ್ ಮಟ್ಟದಲ್ಲಿ ಸಂಘಟಕರುಗಳಿಗೆ ಸೂಚನೆ ನೀಡಿದರು.
 ಇದೇ ಸಂದರ್ಭದಲ್ಲಿ ಪಟ್ಟಣದ ಅಂಗಡಿಗಳಿಗೆ ತಿರಂಗಾ ಧ್ವಜಗಳನ್ನು ವಿತರಿಸಲಾಯಿತು. Description of the imageDescription of the image ಈ ಕಾರ್ಯಕ್ರಮದಲ್ಲಿ ಮಂಡಳದ ಉಪಾಧ್ಯಕ್ಷ ಅರುಣ ಕುಮಾರ ಗೌಡರ್, ಯುವ ಮೋರ್ಚಾ ಅಧ್ಯಕ್ಷ ರಜತ್ ಬದ್ದಿ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳು ಪ್ರಭು ಮತ್ತು ರಾಘು ಕುಂದರಗಿ, ಸದಸ್ಯ ನಯನ ಇಂಗಳೆ, ಶಕ್ತಿ ಕೇಂದ್ರದ ಅಧ್ಯಕ್ಷ ವಿನೇಶ್ ಭಟ್, ಪ್ರಧಾನ ಕಾರ್ಯದರ್ಶಿ ಬಾಬಣ್ಣ, ಜಿ ಪಂ ಮಾಜಿ ಸದಸ್ಯ ರಾಘು ಭಟ್, ಗ್ರಾ.ಪಂ ಸದಸ್ಯ ರಘುಪತಿ ಭಟ್ ಮತ್ತು ಎಸ್‌ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅರ್ಜುನ ಬೆಂಗೇರಿ ಉಪಸ್ಥಿತರಿದ್ದರು. bottom

ಯಲ್ಲಾಪುರ: ಭಜನಾ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನ

 

Description of the image ಯಲ್ಲಾಪುರ: ಭಜನಾ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನ ಯಲ್ಲಾಪುರ: ಶ್ರೀ ರಾಮ ಭಕ್ತ ಭಜನಾ ಮಂಡಳಿ ಮಂಜುನಾಥ ನಗರದಲ್ಲಿ 27ನೇ ವಾರದ ಭಜನಾ ಕಾರ್ಯಕ್ರಮ ರವಿವಾರ ಯಶಸ್ವಿಯಾಗಿ ನಡೆಯಿತು. 
 ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ತಿನ ತಾಲ್ಲೂಕಾ ಅಧ್ಯಕ್ಷ ಗಜಾನನ ಟಿ. ನಾಯ್ಕ ತಳ್ಳಿಕೇರಿ ಮತ್ತು ನಗರಾಧ್ಯಕ್ಷ ಅನಂತ ಗಾಂವ್ಕರ್ ಉಪಸ್ಥಿತರಿದ್ದರು. 
 ಭಜನಾ ಕಾರ್ಯಕ್ರಮವು ಗಣೇಶ ಸ್ತುತಿಯೊಂದಿಗೆ ಆರಂಭವಾಯಿತು. ನಂತರ ರಾಮಸ್ತುತಿ, ರಾಘವೇಂದ್ರ ಸ್ತುತಿ, ಬ್ರಹ್ಮಮುರಾರಿ ತ್ರಿಪುರಾಂತಕ ಲಿಂಗಾಷ್ಟಕಂ, ಸುಬ್ರಹ್ಮಣ್ಯ ಸ್ತುತಿ, ಮತ್ತು ರಾಧಾಕೃಷ್ಣ ಸ್ತುತಿ ಸೇರಿದಂತೆ ಹಲವಾರು ಭಜನಾ ಗೀತೆಗಳನ್ನು ಪ್ರಸ್ತುತ ಪಡಿಸಲಾಯಿತು. Description of the image ಕೊನೆಗೆ, ಶಾಂತಿಮಂತ್ರ ಮತ್ತು ಆರತಿ ಗೀತೆಯೊಂದಿಗೆ ದೇವರಿಗೆ ಮಹಾಮಂಗಳಾರತಿ ಸಲ್ಲಿಸಲಾಯಿತು. 
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷರಿಗೆ ರಜನಿ ಚಂದ್ರಶೇಖರರವರ ನೇತೃತ್ವದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕೇಬಲ್ ನಾಗೇಶ ಕುಟುಂಬ ಹಾಗೂ ರವಿಶಂಕರ ಕುಟುಂಬದವರು, ಹಾಗೂ 50 ಕ್ಕೂ ಹೆಚ್ಚು ಭಕ್ತಾದಿಗಳು ಭಾಗವಹಿಸಿದ್ದರು, ಇದು ಸಮುದಾಯದ ಧಾರ್ಮಿಕ ಏಕತೆ ಮತ್ತು ಭಕ್ತಿ ಭಾವನೆಗೆ ಸಾಕ್ಷಿಯಾಗಿದೆ. bottom

ಯಲ್ಲಾಪುರದಲ್ಲಿ ಮಳೆ ತಗ್ಗಿ, ಸೂರ್ಯನ ದರ್ಶನ: ಜನರಲ್ಲಿ ನೆಮ್ಮದಿಯ ನಿಟ್ಟುಸಿರು!

 

Description of the image ಯಲ್ಲಾಪುರದಲ್ಲಿ ಮಳೆ ತಗ್ಗಿ, ಸೂರ್ಯನ ದರ್ಶನ: ಜನರಲ್ಲಿ ನೆಮ್ಮದಿಯ ನಿಟ್ಟುಸಿರು! 
 ಯಲ್ಲಾಪುರ: ಕಳೆದ ಒಂದು ತಿಂಗಳಿಂದ ಬಿಟ್ಟು ಬಿಡದೇ ಸುರಿದ ಭಾರೀ ಮಳೆ ತಣ್ಣಗಾಗಿದ್ದು, ಕಳೆದ ಮೂರು ನಾಲ್ಕು ದಿನಗಳಿಂದ ಸೂರ್ಯನ ದರ್ಶನವಾಗುತ್ತಿದೆ. ಆಗಾಗ ತುಂತುರು ಮಳೆ ಸುರಿಯುತ್ತಿದೆಯಾದರೂ ಜನರಿಗೆ ಯಾವುದೇ ಸಮಸ್ಯೆಯಾಗಿಲ್ಲ. ಮಲೆನಾಡಿನಲ್ಲಿ ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದಾಗಿ ಜನರು ಹಲವು ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. 
ಮಳೆಯಿಂದಾಗಿ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಜನರು ತಮ್ಮ ದಿನನಿತ್ಯದ ಕಾರ್ಯಗಳಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಕೃಷಿ ಭೂಮಿಗೆ ಹಿನ್ನಡೆಯಾಗಿದ್ದು, ಅಡಿಕೆ ಬೆಳೆಗಳಿಗೆ ಕೊಳೆ ರೋಗ ಬಾಧಿಸಿದೆ. ಕೆರೆಕಟ್ಟೆಗಳು ಮತ್ತು ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಜನರು ತಮ್ಮ ಮನೆಗಳನ್ನು ತಲುಪಲು ಕಷ್ಟಪಡುತ್ತಿದ್ದಾರೆ. ವಿದ್ಯುತ್ ವ್ಯತ್ಯಯ ಮತ್ತು ದೂರಸಂಪರ್ಕ ಸ್ಥಗಿತಗೊಂಡಿದ್ದು, ಜನರು ತಾತ್ಕಾಲಿಕವಾಗಿ ಸಂಪರ್ಕ ಮಾಡಲಾಗಿದೆ. Description of the image ಯಲ್ಲಾಪುರದಲ್ಲಿನ ಜನರು ಅನುಭವಿಸುತ್ತಿರುವ ಸಂಕಷ್ಟಗಳು ಮುಂದಿನ ದಿನಗಳಲ್ಲಿ ಪರಿಹಾರವಾಗುವ ನಿರೀಕ್ಷೆಯಿದೆ. ಕಳೆದ ಮೂರು ನಾಲ್ಕು ದಿನಗಳಿಂದ ಮಳೆ ನಿಂತು, ಬಿಸಿಲು ಬಿದ್ದಿರುವುದರಿಂದ ಯಲ್ಲಾಪುರ ತಾಲೂಕಿನ ಜನರಿಗೆ ಹಲವು ನೆಮ್ಮದಿ ಉಂಟಾಗಿವೆ. ಮಳೆ ನಿಂತು ಬಿಸಿಲು ಬಿದ್ದಿರುವುದರಿಂದ ಬೆಳೆಗಳಿಗೆ ಹಾನಿ ಆಗುವ ಸಾಧ್ಯತೆ ಕಡಿಮೆಯಾಗುತ್ತದೆ. ಬೆಳೆಗಳು ಚೆನ್ನಾಗಿ ಬೆಳೆಯಲಿವೆ ಎನ್ನಲಾಗಿದೆ. ಮಳೆ ನಿಂತಿರುವುದರಿಂದ ಬೀದಿ ಬದಿಯ ವ್ಯಾಪಾರಸ್ಥರು ತಮ್ಮ ವ್ಯಾಪಾರವನ್ನು ಸುಗಮವಾಗಿ ನಡೆಸುತ್ತಿದ್ದಾರೆ. ಚನ್ನಾಗಿ ಬಿಸಿಲು ಬಿದ್ದಿರುವುದರಿಂದ ಶಾಲಾ ವಿದ್ಯಾರ್ಥಿಗಳು ಸುಲಭವಾಗಿ ಶಾಲೆಗೆ ಹೋಗಿ ಬರಬಹುದಾಗಿದೆ. 
ಜನರು ತಮ್ಮ ದೈನಂದಿನ ಕೆಲಸಗಳನ್ನು ಸುಲಭವಾಗಿ ನಿರ್ವಹಿಸಬಹುದಾಗಿದೆ. ಮಳೆಯಿಂದಾಗಿ ಉಂಟಾಗುವ ತೊಂದರೆಗಳು ಕಡಿಮೆಯಾಗುತ್ತವೆ. ಒಟ್ಟಾರೆ, ಕಳೆದ ಒಂದು ತಿಂಗಳಿಂದ ಯಲ್ಲಾಪುರ ತಾಲೂಕು ವ್ಯಾಪ್ತಿಯಲ್ಲಿ ಸುರಿಯುತ್ತಿದ್ದ ಭಾರೀ ಮಳೆ ತಾಲೂಕಿನಲ್ಲಿ ಹಲವಾರು ಅವಾಂತರಗಳನ್ನು ಸೃಷ್ಟಿ ಮಾಡಿತ್ತು. ಹಲವಾರು ಕಡೆಗಳಲ್ಲಿ ಗುಡ್ಡ ಕುಸಿತ, ಮಣ್ಣು ಕುಸಿತ ಸಂಭವಿಸಿದ್ದು, ರಸ್ತೆಗಳು ಕೊಚ್ಚಿ ಹೋಗಿ, ಮೇಲ್ಮೈಭಾಗ ಕಿತ್ತು ಹೊಂಡ ಗುಂಡಿಗಳು ಬಿದ್ದಿದ್ದವು. ಅತಿಯಾದ ಮಳೆಯಿಂದಾಗಿ ಅಡಿಕೆ ಬೆಳೆಗೆ ಕೊಳೆ ರೋಗ ಅಂಟಿಕೊಂಡಿತ್ತು. ಹುಣಶೆಟ್ಟಿಕೊಪ್ಪ ಭಾಗದಲ್ಲಿ ನಾಟಿಗಾಗಿ ಕಾದಿಟ್ಟ ಸಸಿಗಳು ವಿಪರೀತವಾದ ಮಳೆಯಿಂದಾಗಿ ಕೊಳೆತು ಹೋಗಿದ್ದವು. ಮಳೆಯಿಂದಾಗಿ ಮುರಿದು ಬಿಳುತ್ತಿರುವ ಮರಗಳು ಮತ್ತು ಮರದ ಟೊಂಗೆಗಳು ಸಮರ್ಪಕ ವಿದ್ಯುತ್ ವ್ಯತ್ಯಯವನ್ನು ಉಂಟುಮಾಡಿದ್ದವು.
  ವಿದ್ಯುತ್ ಕಂಬಗಳು ಮರಿದುಬೀಳುವುದು, ತಂತಿಗಳು ಹರಿದು ಬೀಳುವುದು ನಡೆದು ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಪ್ರತ್ಯೇಕ ಕಾರಣವಾಗಿತ್ತು. ಮಳೆಯಿಂದಾಗಿ ಗ್ರಾಮೀಣ ಭಾಗದ ದೂರ ಸಂಪರ್ಕ ವ್ಯವಸ್ಥೆಯು ಕೂಡ ಹದಗೆಟ್ಟು ಹೋಗಿತ್ತು. ಹೀಗಾಗಿ, ಒಬ್ಬರನ್ನೊಬ್ಬರು ಸಂಪರ್ಕಿಸಲು ಹೆಣಕಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ತಿಂಗಳು ಗಟ್ಟಲೆ ಬಿಟ್ಟು ಬಿಡದೇ ಸುರಿದ ಭಾರೀ ಮಳೆ ಜನರಲ್ಲಿ ಆತಂಕ ಮೂಡಿಸಿದ್ದರೆ, ಕಳೆದ ಐದಾರು ದಿನಗಳಿಂದ ಕಾಣಿಸಿಕೊಂಡ ಸೂರ್ಯ ಆತಂಕವನ್ನು ದೂರ ಮಾಡಿ ಮಂದಹಾಸ ಮೂಡಿಸಿದ್ದಾನೆ. ಜನ ನಿರ್ಭೀತಿಯಿಂದ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. Bottom ; bottom