ಯಲ್ಲಾಪುರ : ಅಕ್ಟೋಬರ್ 3 ರಂದು ಮುಂಡುಗೋಡ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಶಾಲಾ ಮಟ್ಟದ ಲೆದರ್ ಬಾಲ್ ಕ್ರಿಕೆಟ್ ಆಯ್ಕೆಯಲ್ಲಿ ಯಲ್ಲಾಪುರದ ಯೋಗೇಶ್ ಶಾನಭಾಗ್ ಅವರ ಯೋಗಿ ಕ್ರಿಕೆಟ್ ಅಕಾಡೆಮಿಯ (YOGI CRICKET ACADEMY) ಯ 6 ಆಟಗಾರರು ಅಂಡರ್14 ಮತ್ತು ಅಂಡರ್17 ವಯೋಮಿತಿಯಲ್ಲಿ ಶಿರಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ. ಅಂಡರ್ 14ರಲ್ಲಿ ರೂಹಾನ್ ಅಹ್ಮದ್ ಮತ್ತು ಶಾನೀದ್ ಟಿಪಿ ಆಯ್ಕೆಯಾದರೆ, ಅಂಡರ್ 17 ವಯೋಮಿತಿಯಲ್ಲಿ ವಿಸ್ಮಿತ್ ವಿಶ್ವನಾಥ್ ಹೆಗಡೆ, , ನಾಗರಾಜ ಸದಾನಂದ ಶಾನಭಾಗ, ಗಣೇಶ ಭಟ್ ಮತ್ತು ಹುಸೇಫ್ ಶೇಖ್ ಆಯ್ಕೆ ಆಗಿದ್ದಾರೆ.
ಈ ಮಹತ್ತರ ಸಮಯದಲ್ಲಿ ಮಕ್ಕಳಿಗೆ ವಿಶೇಷ ಪ್ರೋತ್ಸಾಹ ನೀಡಿದ ಯಲ್ಲಾಪುರ ಕ್ರಿಕೆಟ್ ಅಸೋಸಿಯೇಷನ್,ನ ಅಧ್ಯಕ್ಷರಾದ ಸತೀಶ ಬಾಳಾ ನಾಯ್ಕ ಚಿನ್ನಾಪುರ, ಅಕ್ಬರ್ ಅಲಿ, ಅಸಗರ್ ಅಲಿ, ಅಭಿಷೇಕ ಬೋರ್ಕರ್, ಶಿಕ್ಷಕ ಮಾರುತಿ ನಾಯ್ಕ ಮತ್ತು ಹನ್ಸ್ ನ್ಯಾಚುರಲ್ಸ್ ನ ಮಾಲೀಕರಾದ ವಿಶಾಲ ಶಾನಭಾಗ ಮತ್ತು ಫಿಟ್ನೆಸ್ ಕೋಚ್ ಜಿ ಎಂ ತಾಂಡುರಾಯನ್ ಅವರನ್ನು ಯೋಗೇಶ್ ಶಾನಭಾಗ್ ಅವರು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
ಇದರ ಜೊತೆಗೆ ಹಳೆಯ ಆಟಗಾರರಾದ ಕ್ರೀಡಾ ಸಂಗಮದ ಪದ್ಮನಾಭ ಶಾನಭಾಗ, ದ್ವಾರಕಾನಾಥ ಶಾನಭಾಗ, ಆನಂದು ಶಾನಭಾಗ ಮತ್ತು ವಿವೇಕಾನಂದ ಶಾನಭಾಗ ಅವರು ಮಕ್ಕಳ ಸಾಧನೆಗೆ ಮೆಚ್ಚುಗೆ ವ್ಯಕ್ತ ಪಡಿಸಿ, ಮುಂದಿನದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡುವಂತೆ ಹಾರೈಸಿದ್ದಾರೆ.
ಕಳೆದ ಮೇ ತಿಂಗಳಲ್ಲಿ ಯೋಗೇಶ್ ಶಾನಭಾಗ ನೇತೃತ್ವದಲ್ಲಿ ಮತ್ತು ಕೋಚ್ ದರ್ಶನ್ ಪಟಗಾರ ಅವರ ಮಾರ್ಗದರ್ಶನದಲ್ಲಿ ಹಳಿಯಾಳ ಅಂಡರ್16 ಕ್ರಿಕೆಟ್ ಕ್ಲಬ್‌ನ ಆಟಗಾರರನ್ನು ಯಲ್ಲಾಪುರದ ವಿದ್ಯಾರ್ಥಿಗಳು ಸೋಲಿಸಿರುವುದು ಇಲ್ಲಿ ನೆನಪಿಸಿಕೊಳ್ಳಬಹುದು.