ಯಲ್ಲಾಪುರ : ಭಗತ್ ಸಿಂಗ್ ಅಟೋ ಚಾಲಕ ಮತ್ತು ಮಾಲಕರ ಸಂಘ, ಗ್ರಾಮದೇವಿ ಟ್ಯಾಕ್ಸಿ ಚಾಲಕ ಮತ್ತು ಮಾಲಕರ ಸಂಘ, ಲಾರಿ ಚಾಲಕರ ಸಂಘ, ಬಸವೇಶ್ವರ ಗೂಡ್ಸ್ ಲಕ್ಷಾ ಚಾಲಕ ಮತ್ತು ಮಾಲಕರ ಸಂಘ ಹಾಗೂ ಕನ್ನಡ ಪರ ಸಂಘಟನೆ ಸಹಯೋಗದಲ್ಲಿ ನವರಾತ್ರಿಯ ನಿಮಿತ್ತವಾಗಿ ಶ್ರೀ ಗ್ರಾಮದೇವಿ ದೇವಸ್ಥಾನದಲ್ಲಿ ಮಂಗಳವಾರ ರಾಜಸ್ಥಾನಿ ವಿಷ್ಣು ಸಮಾಜ ಹಮ್ಮಿಕೊಂಡಿದ್ದ ಅನ್ನ ಪ್ರಸಾದ ವಿತರಣೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಆರು ಸಾವಿರಾರಕ್ಕೂ ಹೆಚ್ಚು ಜನ ಭಕ್ತರು ಅನ್ನ ಪ್ರಸಾದವನ್ನು ಸ್ವೀಕರಿಸಿದರು.
ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಶ್ರೀ ಗ್ರಾಮದೇವಿ ದೇವಸ್ಥಾನದಲ್ಲಿ ನಡೆಯುತ್ತಿರುವ ವೈಭವದ ನವರಾತ್ರಿ ಉತ್ಸವದಲ್ಲಿ ಭಕ್ತಾದಿಗಳಿಗೆ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು, ವಿವಿಧ ಸಂಘಟನೆಗಳ ಮುಖಂಡರಾಗಿರುವ ಸಂತೋಷ ನಾರಾಯಣ ನಾಯ್ಕ ನೇತೃತ್ವದಲ್ಲಿ ಅನ್ನಪ್ರಸಾದ ವಿತರಣಾ ಕಾರ್ಯಕ್ರಮ ಜರಗಿತ್ತು.
ಈ ಅನ್ನ ಪ್ರಸಾದ ವಿತರಣಾ ಕಾರ್ಯಕ್ರಮದಲ್ಲಿ ಬಡವರು ಶ್ರೀಮಂತರು, ಜಾತಿ ಭೇದ ಭಾವ ಇಲ್ಲದೆ ಸರತಿಯಲ್ಲಿ ನಿಂತು ಅನ್ನ ಪ್ರಸಾದವನ್ನು ಭಕ್ತರು ಸ್ವೀಕರಿಸಿದರು.
ಅಕ್ಟೋಬರ್ 4ರಂದು ಶುಕ್ರವಾರ ಮಧ್ಯಾಹ್ನ 12:30ರಿಂದ 3:30ರ ವರೆಗೆ ಮೊದಲ ಹಂತದ ಅನ್ನಸಂತರ್ಪಣೆ ನಡೆದರೇ, ಅಕ್ಟೋಬರ್ 8ರ ಮಂಗಳವಾರ ಮಧ್ಯಾಹ್ನ 12:30ರಿಂದ 3:30ರ ವರೆಗೆ ರಾಜಸ್ಥಾನಿ ವಿಷ್ಣು ಸಮಾಜ ಯಲ್ಲಾಪುರದ ಸಹಯೋಗದೊಂದಿಗೆ ಕನ್ನಡ ಪರ ಸಂಘಟನೆ ಯಲ್ಲಾಪುರದ ನೇತೃತ್ವದಲ್ಲಿ ಎರಡನೇ ಹಂತದ ಅನ್ನಸಂತರ್ಪಣೆ ಕಾರ್ಯಕ್ರಮಗಳು ಜರುಗಿತು.
ಗ್ರಾಮದೇವಿ ದೇವಸ್ಥಾನ ಕಮಿಟಿ ಅಧ್ಯಕ್ಷ ರಾಜೇಂದ್ರಪ್ರಸಾದ ಭಟ್ಟ ಸೇರಿದಂತೆ ಯಲ್ಲಾಪುರದ ಪ್ರಮುಖ ಗಣ್ಯರು ಅನ್ನ ಪ್ರಸಾದವನ್ನು ಸ್ವೀಕರಿಸಿದರು. ಪಟ್ಟಣ ಪಂಚಾಯತ ಸದಸ್ಯ ಸೋಮೇಶ್ವರ ನಾಯ್ಕ, ವಿವಿಧ ಸಂಘಟನೆಯ ಪ್ರಮುಖರಾದ ಸಂಜೀವ ಜಾದವ್, ತೋಲಾರಾಮ ಅತ್ತರವಾಲ, ಪ್ರಶಾಂತ ಅಂಕೋಲೆಕರ, ಪ್ರಕಾಶ ನಾಯ್ಕ, ರತ್ನಾ ನಾಯ್ಕ,ಶೋಭಾ ಹುಲಿಮನಿ, ಮಂಜುಳಾ ನಾಯ್ಕ ಇನ್ನೂ ಅನೇಕ ಜನ ನನ್ನ ಪ್ರಸಾದ ವಿತರಣೆಯಲ್ಲಿ ಸಹಕರಿಸಿದರು.