
ತೆಲಂಗಾರದಲ್ಲಿ ಮೈತ್ರಿ ಕಲಾ ಬಳಗ, ಮಾತೃ ಮಂಡಳಿ ಚಿನ್ನಾಪುರ, ಸೀಮಾ ಮೇಲ್ತರ್ಪು, ಚಿಮನಳ್ಳಿಯ ವನಸಿರಿ ಕಲಾ ಕೂಟ ಆಯೋಜಿಸಿದ್ದ ಶಾರದೋತ್ಸವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದ ಅವರು, ನಡೆ-ನುಡಿ ಶುದ್ಧವಾಗಿರುವವರನ್ನು ಮಾತ್ರ ಸಮಾಜ ಗೌರವಿಸುತ್ತದೆ ಎಂದರು. ಗಳಿಸಿದ ವಿದ್ಯೆಯನ್ನು ಮಕ್ಕಳಿಗೆ ಸರಿಯಾಗಿ ಹಂಚಿ, ಅವರು ಸತ್ಪ್ರಜೆಯಾದಾಗ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಪ್ರಶಸ್ತಿ ಪಡೆದ ಸುಚೇತಾ ಮಿರಾಶಿ, ತೇಲಂಗಾರ ಸಾಂಸ್ಕೃತಿಕ ತಾಣವಾಗಿದೆ ಮತ್ತು ಮಕ್ಕಳ ಶಿಕ್ಷಣ ಅಭಿವೃದ್ಧಿಯೇ ನಮ್ಮ ಗುರಿ ಎಂದರು. ಎಲ್ಲರನ್ನೂ ಗುರುತಿಸಿ ನಡೆವ ಮೈತ್ರಿ ಬಳಗ ಸಮಾಜ ಮುಖಿಯಾಗಿದೆ ಎಂದು ಅವರು ಹೇಳಿದರು.

ಕೈಗಾದ ಅಧಿಕಾರಿ ವಿಶ್ವೇಶ್ವರ ಗಾಂವ್ಕರ ಮಾತನಾಡಿ, ಶಿಕ್ಷಕ ವೃತ್ತಿಯಲ್ಲಿ ಆತ್ಮ ತೃಪ್ತಿ ಸಿಗುತ್ತದೆ. ಇಂಜಿನಿಯರ್ ಅಥವಾ ಇತರೆ ವೃತ್ತಿಗಳಲ್ಲಿ ಹಣ ಗಳಿಸಬಹುದು, ಆದರೆ ಸಾಮಾಜಿಕ ಮನ್ನಣೆ ಸಿಗುವುದು ಶಿಕ್ಷಕರಿಗೆ ಮಾತ್ರ ಎಂದರು.
ಶಾರದೋತ್ಸವದಲ್ಲಿ ಸನ್ಮಾನ ಸಮಾರಂಭ ಹಾಗೂ ವಿದ್ಯಾರ್ಥಿಗಳಿಗಾಗಿ ಚಿತ್ರಕಲೆ, ರಂಗೋಲಿ, ಗುರಿಹೊಡೆಯುವುದು, ಸಂಗೀತ ಖುರ್ಚಿ, ಚೆಸ್, ಭಕ್ತಿ ಗೀತೆ ಸ್ಪರ್ಧೆಗಳ ಬಹುಮಾನ ವಿತರಣೆ ನಡೆಯಿತು. ಸಂತೋಷ ಕೊಳಗೇರಿ ಹಾಗೂ ಸುಚೇತಾ ಮಿರಾಶಿ ದಂಪತಿಗಳಿಗೆ ಮೈತ್ರಿ ಶಿಕ್ಷಕ ರತ್ನ ಬಿರುದು ನೀಡಿ ಸನ್ಮಾನಿಸಲಾಯಿತು.

ಅಶ್ವಿನಿ ಮತ್ತು ವೈಭವಿ ಸ್ವಾಗತಗೀತೆ ಹಾಡಿದರು. ಬಳಗದ ಗೌರವ ನಿರ್ದೇಶಕ ಜಿ,ಎನ್,ಅರುಣಕುಮಾರ ಸ್ವಾಗತಿಸಿದರು. ಸತ್ಯನಾರಾಯಣ ಚಿಮನಳ್ಳಿ ವಂದಿಸಿದರು. ಬಳಗದ ಕಾರ್ಯದರ್ಶಿ ಮಂಜುನಾಥ ಮೂಲೆಮನೆ, ಶಿಕ್ಷಕಿ ವಿದ್ಯಾ ನಾಯ್ಕ ನಿರೂಪಿಸಿದರು.