Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Friday, 11 October 2024

ನಾಯಕರ ಹೆಸರಿಗೆ 'ಬಾಸ್', 'ಕಿಂಗ್' ಎಂಬ ಪದಗಳ ಬಳಕೆ ನಿಲ್ಲಿಸಿ: ಡಿಕೆ ಶಿವಕುಮಾರ್

IMG-20241011-130944 ಯಲ್ಲಾಪುರ/ ಬೆಂಗಳೂರು : ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳ ಪ್ರಚಾರದ ವೇಳೆ ನಾಯಕರ ಹೆಸರಿಗೆ 'ಬಾಸ್', 'ಕಿಂಗ್', 'ಟೈಗರ್' ಇತ್ಯಾದಿ ಪದಗಳನ್ನು ಬಳಸುವುದು ಹಾಗೂ ಪ್ರಾಣಿಗಳ ಚಿತ್ರಗಳೊಂದಿಗೆ ನಾಯಕರ ಫೋಟೋಗಳನ್ನು ಸೇರಿಸುವುದನ್ನು ಕೂಡಲೇ ನಿಲ್ಲಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ. IMG-20241011-130809 ಪಕ್ಷದ ಕಾರ್ಯಕರ್ತರು, ಮುಖಂಡರು ಹಾಗೂ ಅಭಿಮಾನಿಗಳಿಗೆ ಬರೆದಿರುವ ಪತ್ರದಲ್ಲಿ, ಪ್ಲೆಕ್ಸ್, ಬ್ಯಾನರ್, ಡ್ರಾಪ್ಸ್, ಕಟೌಟ್, ಹೊರ್ಡಿಂಗ್ಸ್ ಮುಂತಾದ ಪ್ರಚಾರ ಸಾಧನಗಳಲ್ಲಿ ನಾಯಕರ ಹೆಸರಿಗೆ ಅತಿರೇಕದ ಪದಗಳನ್ನು ಬಳಸಿ, ಮುಜುಗರ ಉಂಟು ಮಾಡಲಾಗುತ್ತಿದೆ ಎಂದು ಅವರು ಗಮನಿಸಿದ್ದಾರೆ. 
    ಕಾಂಗ್ರೆಸ್ ಪಕ್ಷದ ಸಿದ್ಧಾಂತಕ್ಕೆ ಈ ರೀತಿಯ ಪದಪ್ರಯೋಗಗಳು ಮತ್ತು ಪ್ರದರ್ಶನಗಳು ವಿರುದ್ಧವಾಗಿವೆ ಎಂದು ಹೇಳಿರುವ ಅವರು, ಇದರಿಂದಾಗಿ ಸಾರ್ವಜನಿಕರಲ್ಲಿ ನಾಯಕರು ಮತ್ತು ಪಕ್ಷದ ಬಗ್ಗೆ ನಕಾರಾತ್ಮಕ ಅಭಿಪ್ರಾಯ ಮೂಡಲು ಅವಕಾಶ ಮಾಡಿಕೊಡುವಂತಾಗುತ್ತದೆ ಎಂದು ಎಚ್ಚರಿಸಿದ್ದಾರೆ. IMG-20241011-130758 ಪಕ್ಷದ ಕಾರ್ಯಕ್ರಮಗಳ ಪ್ರಚಾರಕ್ಕೆ ಸದ್ಭಾವನೆ ಮೂಡುವ ಪದಗಳನ್ನು ಬಳಸುವಂತೆ ಡಿಕೆ ಶಿವಕುಮಾರ್ ಕೋರಿದ್ದಾರೆ. 'ನಾಯಕರು', 'ಸಾಧಕರು', 'ಹಿರಿಯರು', 'ಹಿರಿಯ ನಾಯಕರು' ಇತ್ಯಾದಿ ಪದಗಳನ್ನು ಬಳಸುವುದು ಸೂಕ್ತ ಎಂದು ಅವರು ಸಲಹೆ ನೀಡಿದ್ದಾರೆ. ಈ ಮೂಲಕ ಪಕ್ಷ ಹಾಗೂ ನಾಯಕರ ಘನತೆ ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಅವರು ತಿಳಿಸಿದ್ದಾರೆ.