ಯಲ್ಲಾಪುರ : ದುಡಿಮೆಯನ್ನೇ ಸಂಕಲ್ಪವನ್ನಾಗಿಸಿ ಕೊಂಡು ಅಪಾರ ಜನಮನ್ನಣೆಗೆ ಜನರ ಪ್ರೀತಿಗೆ ಪಾತ್ರರಾಗಿದ್ದ ಯಲ್ಲಾಪುರ ಸಬಗೇರಿ ನಿವಾಸಿ ವೆಂಕಟೇಶ ಗಂಗಾಧರ ನಾಯ್ಕ ಶನಿವಾರ ನಸೂಕಿನಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅಕಾಲಿಕವಾಗಿ ನಿಧನರಾದರು ಅವರಿಗೆ 58 ವರ್ಷ ವಯಸ್ಸಾಗಿತ್ತು.
ಬಡತನದಲ್ಲಿ ಹುಟ್ಟಿ ಉನ್ನತ ಉತ್ತಮ ಶಿಕ್ಷಣ ಪಡೆಯಲಾಗದಿದ್ದರೂ, ಕುಟುಂಬ ನಿರ್ವಹಣೆಗಾಗಿ ಸಣ್ಣ ವಯಸ್ಸಿನಲ್ಲಿ ವೆಲ್ಡಿಂಗ್ ವರ್ಕ್ ಶಾಪ್ ನಲ್ಲಿ ಕೆಲಸ ಪ್ರಾರಂಭಿಸಿದ ವೆಂಕಟೇಶ್ ನಾಯ್ಕ, 34 ವರ್ಷಗಳ ಹಿಂದೆ ತಮ್ಮದೇ ಸ್ವಂತ ವೆಲ್ಡಿಂಗ್ ವರ್ಕ್ ಶಾಪ್ ಪ್ರಾರಂಭಿಸಿ, ಗ್ರಾಹಕರಿಗೆ ಗುಣಮಟ್ಟದ ಸೇವೆಯ ಜೊತೆಗೆ, ನಗುಮೊಗದ ಪ್ರೀತಿಯ ಸೇವೆಯನ್ನು ನೀಡುತ್ತಿದ್ದರು. ತಮ್ಮಲ್ಲಿ ಕೆಲಸ ಮಾಡುವ ಕಾರ್ಮಿಕರಿಗೂ ಕೂಡ ಇದೇ ರೀತಿಯ ಸೇವೆ ನೀಡುವಂತೆ ಅವರು ಸೂಚಿಸುತ್ತಿದ್ದರು.
ಆಡು ಮುಟ್ಟಿದ ಸೊಪ್ಪಿಲ್ಲ ವೆಂಕಟೇಶ್ ನಾಯ್ಕ ವೆಲ್ಡಿಂಗ್ ಮಾಡಿದ ಕಟ್ಟಡಗಳು ಇಲ್ಲ ಎನ್ನುವ ಮಟ್ಟಿಗೆ ಯಲ್ಲಾಪುರದ ಹೆಚ್ಚು ಕಡಿಮೆ ಪ್ರತಿ ಮನೆ, ಶಾಪಿಂಗ್ ಕಾಂಪ್ಲೆಕ್ಸ್, ಅಂಗಡಿಗಳು ಗೂಡ ಅಂಗಡಿಗಳು, ತಳ್ಳುಗಾಡಿಗಳು, ನವ ನವೀನ ವಿನ್ಯಾಸದ ಮನೆಯ ಗೇಟುಗಳು, ಅಲ್ಮೆರಾ, ಕಪಾಟುಗಳು, ಅಷ್ಟೇ ಏಕೆ ಯಲ್ಲಾಪುರ ತಾಲೂಕ ಆಸ್ಪತ್ರೆ ಎದುರು ಕೊವಿಡ್ 19ರ ಸಂದರ್ಭದಲ್ಲಿ ನಿರ್ಮಿಸಲಾದ ವ್ಯಾಕ್ಸಿನ್ ಸೆಂಟರ್ ಕೂಡ ವೆಂಕಟೇಶ ನಾಯ್ಕ ವಿನ್ಯಾಸದಲ್ಲಿ ವೆಲ್ಡಿಂಗ್ ನಲ್ಲಿ ಮೂಡಿ ಬಂದಿದ್ದಾಗಿದೆ. ಉದ್ಯಮಿ ವಿವೇಕ್ ಹೆಬ್ಬಾರ್ ಮನೆ ವಿನ್ಯಾಸ ಗೇಟ್, ಉದ್ಯಮಿ ಬಾಲಕೃಷ್ಣ ನಾಯಕ್ ಅವರ ಮನೆಯ ಹಲವಾರು ಕೆಲಸಗಳನ್ನು ಮಾಡಿ ಸೈ ಎನಿಸಿಕೊಂಡಿದ್ದರು.
ವಿಶಾಲವಾದ ಸಮಾಜದಲ್ಲಿ ಉನ್ನತ ಹುದ್ದೆಯನ್ನು ಹೊಂದಿರುವ ಅನೇಕ ಸ್ನೇಹಿತರನ್ನು ಹೊಂದಿದ್ದ ವೆಂಕಟೇಶ ನಾಯ್ಕ ತಮ್ಮ ಹಳೆಯ ಸ್ನೇಹಿತರು ಭೇಟಿಯಾದರೆ ಅದೇ ಸ್ನೇಹ ಪರತೆ ಪ್ರೀತಿ ಪೂರ್ವಕವಾಗಿ ಮಾತನಾಡುವುದರ ಮೂಲಕ ಹಳೆಯ ನೆನಪುಗಳನ್ನು ಮೆಲಕು ಹಾಕುವಂತೆ ಮಾಡುತ್ತಿದ್ದರು. 58 ವರ್ಷಗಳಲ್ಲಿ ಎಂದಿಗೂ ಕೂಡ ಕಾಯಿಲೆ ಬೀಳದೆ ಸದೃಢ ಕಾರ್ಮಿಕರಾಗಿದ್ದ ವೆಂಕಟೇಶ್ ನಾಯ್ಕಗೆ ಕಳೆದ ಎರಡು ದಿನಗಳ ಹಿಂದೆ ಇಲ್ಲಿಯ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ನಂತರ ಡಿಸ್ಚಾರ್ಜ್ ಮಾಡಿ ಮನೆಗೆ ಕಳಿಸಲಾಗಿತ್ತು. ಮನೆಯಲ್ಲಿ ಆರೋಗ್ಯ ಸ್ಥಿತಿ ಏರುಪೇರು ಆಗಿದ್ದರಿಂದ ಶುಕ್ರವಾರ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಅಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಅಲ್ಲಿಯವರು ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಕೊನೆಯುಸಿರು ಎಳೆದಿದ್ದಾರೆ.
ಮೃತರು ತಾಯಿ, ಸಾಮಾಜಿಕ ಕಾರ್ಯಕರ್ತೆ ಹಾಗೂ ಬಿಜೆಪಿ ಮಹಿಳಾ ಪ್ರಮುಖೆ ಪತ್ನಿ ನಿರ್ಮಲಾ ನಾಯ್ಕ, ಓರ್ವ ಪುತ್ರ, ಮೊಮ್ಮಗ, ಓರ್ವ ಪುತ್ರಿ, ಸಹೋದರಿಯರು, ಅಪಾರ ಬಂದು ಬಳಗ ಮಿತ್ರರನ್ನು ಅಗಲಿದ್ದಾರೆ.
ವೆಂಕಟೇಶ್ ನಾಯ್ಕ ಅಕಾಲಿಕ ನಿಧನಕ್ಕೆ ಶಾಸಕ ಶಿವರಾಮ ಹೆಬ್ಬಾರ್, ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ, ಉದ್ಯಮಿಗಳಾದ ವಿವೇಕ ಹೆಬ್ಬಾರ್, ಬಾಲಕೃಷ್ಣ ನಾಯಕ, ವಿಜಯ ಮಿರಾಶಿ, ಸಮಗ್ರ ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ನರಸಿಂಹ ನಾಯ್ಕ, ಪಟ್ಟಣ ಪಂಚಾಯಿತಿ ಸದಸ್ಯರಾದ ರಾಜು ನಾಯ್ಕ ಸಬಗೇರಿ, ಸತೀಶ ಶಿವಾನಂದ ನಾಯ್ಕ ಮಂಜುನಾಥ ನಗರ, ಕಲ್ಪನಾ ನಾಯ್ಕ ತಳ್ಳಿಕೇರಿ, ಸೋಮೇಶ್ವರ ನಾಯ್ಕ ರವೀಂದ್ರನಗರ, ಸ್ನೇಹಿತರಾದ ನಾಗರಾಜ ಮದ್ಗುಣಿ, ನಾಗರಾಜ ಮಲ್ಲಾಪುರ, ನಾಗರಾಜ ನಾಯಕ, ಜಗದೀಶ ನಾಯಕ, ಮಾದವ ನಾಯಕ, ಗಜಾನನ ನಾಯ್ಕ ತಳ್ಳಿಕೇರಿ, ನವೀನ ಗುಣವಂತ ನಾಯ್ಕ, ಎಂ ಆರ್ ಹೆಗಡೆ ಕುಂಬ್ರಿಗುಡ್ಡೆ, ಯಲ್ಲಾಪುರ ಆಟೋ ಯೂನಿಯನ್ ಅಧ್ಯಕ್ಷ ಸಂತೋಷ ನಾಯ್ಕ ಮುಂತಾದವರು ಶೋಕ ವ್ಯಕ್ತಪಡಿಸಿದ್ದಾರೆ.