Adv

news21 ‌ ‌YELLAPURNews prakatane --------- ‌ ‌patanakaroct10to17pydkumar Oct9to15 ‌ ‌ ‌ ‌ ‌ oct5to15-pyd ‌‌ ‌ Vishal-sep13to-unlimited ‌ ‌ ‌ ‌ IMG-20241009-195526

Tuesday 8 October 2024

ಶ್ರೀ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿ ಶಾಖೆ ಉದ್ಘಾಟನೆ ಜಿಲ್ಲೆಯ ಬಂಡವಾಳ - ಜಿಲ್ಲೆಯ ನಿರುದ್ಯೋಗಿಗಳಿಗೆ ಹಾಗೂ ರೈತರಿಗೆ ಬಳಸಿ: ಶಿವರಾಮ ಹೆಬ್ಬಾರ್

IMG-20241008-125607 ಯಲ್ಲಾಪುರ: ಜಿಲ್ಲೆಯ ಬಂಡವಾಳವನ್ನು ಜಿಲ್ಲೆಯ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸುವ ಮತ್ತು ರೈತರ ಏಳಿಗೆಗಾಗಿ ಬಳಸಬೇಕೆಂದು ಶಾಸಕ ಶಿವರಾಮ ಹೆಬ್ಬಾರ್ ಶ್ರೀ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿ ಪ್ರಮುಖರಿಗೆ ಕರೆ ನೀಡಿದರು. IMG-20241008-125555 ಮಂಗಳವಾರ ಬೆಳಿಗ್ಗೆ ಪಟ್ಟಣದ ಎಲ್‌ಎಸ್ಎಂಪಿ ವಾಣಿಜ್ಯ ಸಂಕೀರ್ಣದಲ್ಲಿ ಶ್ರೀ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿಯ 213ನೇ ಶಾಖೆಯ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು, ಉತ್ತರ ಕನ್ನಡ ಜಿಲ್ಲೆಯು ಸಹಕಾರಿ ಕ್ಷೇತ್ರದಲ್ಲಿ ಹೊಸದಲ್ಲ ಎಂದು ಹೇಳಿದರು. ಗದಗ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ಹುಟ್ಟಿದ್ದರೂ, ಉತ್ತರ ಕನ್ನಡ ಜಿಲ್ಲೆಯು ಈ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ನೂರಾರು ಸಹಕಾರಿ ಸಂಘ-ಸಂಸ್ಥೆಗಳು ಜಿಲ್ಲೆಯಲ್ಲಿ ಶತಮಾನಗಳಿಂದ ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯಲ್ಲಿ ಠೇವಣಿದಾರರಿಗೆ ಯಾವುದೇ ಕೊರತೆ ಇಲ್ಲ. 14 ಸಾವಿರ ಕೋಟಿ ರೂಪಾಯಿಗಿಂತ ಹೆಚ್ಚು ಠೇವಣಿ ಇಡಲಾಗಿದೆ. ಆದರೆ, ಸಾಲಗಾರರ ಕೊರತೆಯಿದೆ ಎಂದು ಅವರು ತಿಳಿಸಿದರು. IMG-20241008-125546 ಸಹಕಾರಿ ಕ್ಷೇತ್ರದಲ್ಲಿ ಎಲ್ಲ ಸಂಸ್ಥೆಗಳಿಗೂ ಕೆಲವು ನಿರ್ಬಂಧಗಳು ಇವೆ. ಆದರೆ, ಬಹು ರಾಜ್ಯಗಳಲ್ಲಿ ವ್ಯವಹಾರ ಹೊಂದಿರುವ ಬೀರೇಶ್ವರ ಸಂಸ್ಥೆಗೆ ತನ್ನದೇ ಆದ ನಿಯಂತ್ರಣವಿದೆ ಎಂದೂ ಅವರು ಗಮನಿಸಿದರು. ಉತ್ತರ ಕನ್ನಡ ಜಿಲ್ಲೆಯು ಬಹುದೊಡ್ಡ ಪ್ರಮಾಣದಲ್ಲಿ ಕೃಷಿಕರನ್ನು ಹೊಂದಿದೆ. ಕೃಷಿಕರ ಸಮಸ್ಯೆಗಳನ್ನು ಆಲಿಸದೇ ಹೋದರೆ ಸಹಕಾರಿ ಸಂಸ್ಥೆಗಳು ಬೆಳೆಯಲು ಸಾಧ್ಯವಿಲ್ಲ. ಸಹಕಾರಿ ಕ್ಷೇತ್ರ ಜೀವಂತಿಕೆಯಿದ್ದ ಜಿಲ್ಲೆಗಳಲ್ಲಿ ರೈತರು ಆರ್ಥಿಕವಾಗಿ ಸಬಲರಾಗಿದ್ದಾರೆ ಎಂದು ಹೇಳಿದರು. IMG-20241008-125536 ರೈತರಿಗೆ ಸಾಲ ನೀಡಲು ಯಾವುದೇ ಸಂಸ್ಥೆ ಮುಂದೆ ಬರುವುದಿಲ್ಲ. ಬಡ್ಡಿ ಹೆಚ್ಚು ಸಿಗುತ್ತದೆ ಎಂದು ಬೇರೆ ಬ್ಯಾಂಕುಗಳಲ್ಲಿ ಠೇವಣಿ ಇಡುವುದು, ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯಲು ಇನ್ನೊಂದು ಬ್ಯಾಂಕಿಗೆ ಹೋಗುವುದು ಸಾಮಾನ್ಯ ಪರಿಸ್ಥಿತಿ. ಆದರೆ, ಇದರಿಂದ ಅಸಮತೋಲನ ಸೃಷ್ಟಿಯಾಗುತ್ತದೆ ಮತ್ತು ಸಹಕಾರಿ ಸಂಸ್ಥೆಗಳಿಗೆ ಹಾನಿಯಾಗುತ್ತದೆ. ಹೀಗಾಗಿ, ಸಹಕಾರಿ ಸಂಸ್ಥೆಗಳ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಅಗತ್ಯ ಎಂದು ಶಾಸಕರು ಅಭಿಪ್ರಾಯಪಟ್ಟರು. 

ಸಹಕಾರ ಮಾನವೀಯತೆಯ ಸಂಕೇತ IMG-20241008-125524 ಹುಬ್ಬಳ್ಳಿ ಹಾನಗಲ್ ವಿರಕ್ತಮಠದ ಜಗದ್ಗುರು ಮೂರುಸಾವಿರಮಠ ಮಹಾಸಂಸ್ಥಾನದ ಪೂಜ್ಯ ನಿರಂಜನ ಜಗದ್ಗುರು ಡಾ. ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು ಮುಖ್ಯ ಅತಿಥಿಗಕಲಾಗಿ ಮಾತನಾಡಿ, ಸಹಕಾರ ತತ್ವವು ಮಾನವೀಯತೆಯ ಸಂಕೇತವಾಗಿದೆ. ಸಹಕಾರ ಇದ್ದಲ್ಲಿ ಸಹಬಾಳ್ವೆ ಮತ್ತು ಸಂತೋಷ ಇರುತ್ತದೆ ಎಂದು ತಿಳಿಸಿದರು. ಈ ಸಹಕಾರ ಭಾವನೆಯಿಂದ ನಾವೆಲ್ಲರೂ ಜೀವನ ಮಾಡುವುದು ಶ್ರೇಷ್ಟವಾದುದಾಗಿದೆ ಎಂದು ಅವರು ಪ್ರತಿಪಾದಿಸಿದರು. ನಮ್ಮ ದೇಶದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಸಹಕಾರ ಭಾವನೆ ವ್ಯಾಪಕವಾಗಿ ಬೆಳೆದಿದೆ ಎಂದು ಶ್ರೀಗಳು, ಸಹಕಾರಿ ಕ್ಷೇತ್ರದ ಮೂಲಕ ಹಲವಾರು ಕ್ಷೇತ್ರಗಳು ಬೆಳೆದಿವೆ ಎಂದು ಸ್ಮರಿಸಿದರು. ಆದರೆ ಕೆಲವು ಸಹಕಾರಿ ಕ್ಷೇತ್ರಗಳು ಸಂಕಷ್ಟದಲ್ಲಿರುವುದನ್ನು ಗಮನಿಸಬಹುದಾಗಿದೆ ಎಂದೂ ಹೇಳಿದರು. ಪ್ರಾಮಾಣಿಕತೆ ಮತ್ತು ನಿಷ್ಕಲ್ಮಷತೆ ಇದ್ದರೆ ಮಾತ್ರ ಈ ಕ್ಷೇತ್ರ ಬೆಳೆಯಲು ಸಾಧ್ಯ ಎಂದು ಅವರು ಒತ್ತಿ ಹೇಳಿದರು. 
    ಈ ಭಾಗದಲ್ಲಿ ಹಲವು ಸಂಸ್ಥೆಗಳನ್ನು ಕಟ್ಟಿ ಬೆಳೆಸಿರುವ ಮತ್ತು ಸಹಕಾರಿ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಶಾಸಕ ಶಿವರಾಮ ಹೆಬ್ಬಾರ್ ಅವರ ಸಲಹೆಗಳನ್ನು ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿಯವರು ತಪ್ಪದೇ ಅನುಸರಿಸಬೇಕು ಎಂದು ಸ್ವಾಮಿಗಳು ಕರೆ ನೀಡಿದರು. 
   ಪ.ಪಂ ಉಪಾಧ್ಯಕ್ಷ ಅಮೀತ ಅಂಗಡಿ, ಸಾಮಾಜಿಕ ಕಾರ್ಯಕರ್ತ ಶಿವಲಿಂಗಯ್ಯ ಅಲ್ಲಯ್ಯಮಠ, ವಿಕಾಸ ಅರ್ಬನ್ ಬ್ಯಾಂಕ್ ಅಧ್ಯಕ್ಷ ಮುರುಳಿ ಹೆಗಡೆ, ಉದ್ಯಮಿ ರಾಜೇಂದ್ರ ಬದ್ದಿ, ಉದ್ಯಮಿ ಮಹೇಶ ಗೌಳಿ, ವೆಂಕಟ್ರಮಣ ಮಠದ ಅಧ್ಯಕ್ಷ ವಿನಾಯಕ ಪೈ, ಪ.ಪಂ ಸದಸ್ಯ ಸೋಮೇಶ್ವರ ನಾಯ್ಕ, ಎಲ್ಎಸ್ಎಂಪಿ ಸೋಸೈಟಿಯ ಟಿ ಅರ್ ಹೆಗಡೆ, ಶ್ರೀಧರ ಶೆಟ್ಟಿ, ಪುಷ್ಪಾವತಿ ಜೋಗಾರಶೆಟ್ಟಿ, ವ್ಯಾಪಾರಸ್ಥ ರಾಘವೇಂದ್ರ ಹೆಗಡೆ ಮುಂತಾದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 
   ಶಾಲಿನಿ ಭಟ್ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಉಪ ಪ್ರಧಾನ ವ್ಯವಸ್ಥಾಪಕ ಮಹಾದೇವ ಮಂಗಾವತೆ ಮಾತನಾಡಿದರು. ಶಾಲಿನಿ ಹಾಗೂ ಸೀಮಾ ಪ್ರಾರ್ಥನೆ ಸಲ್ಲಿಸಿದರು. ಸಿದ್ಧಾರ್ಥ ನಂದೊಳ್ಳಿಮಠ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
.
.