Adv

news21 ‌ ‌YELLAPURNews prakatane --------- ‌ ‌patanakaroct10to17pydkumar Oct9to15 ‌ ‌ ‌ ‌ ‌ oct5to15-pyd ‌‌ ‌ Vishal-sep13to-unlimited ‌ ‌ ‌ ‌ IMG-20241009-195526

Sunday 6 October 2024

ಯಲ್ಲಾಪುರದ ವಿಕಾಸ್ ನಾಯ್ಕರಿಗೆ ಭೂ ನ್ಯಾಯ ಮಂಡಳಿ ಸದಸ್ಯತ್ವ

IMG-20241006-135243 ಯಲ್ಲಾಪುರ: ಕ್ರಿಕೆಟ್ ಮತ್ತು ರಂಗಭೂಮಿಯಲ್ಲಿ ತಮ್ಮದೇ ಆದ ಅನನ್ಯ ಗುರುತು ಮೂಡಿಸಿಕೊಂಡಿರುವ ಮಂಚಿಕೇರಿಯ ವಿಕಾಸ್ ನಾಯ್ಕ, ಈಗ ಭೂ ನ್ಯಾಯ ಮಂಡಳಿಯ ಸದಸ್ಯತ್ವವನ್ನು ಪಡೆದುಕೊಂಡು ಹೊಸ ಜವಾಬ್ದಾರಿಯನ್ನು ನಿಭಾಯಿಸಲು ಸಜ್ಜಾಗಿದ್ದಾರೆ. 
    ಪಿಯುಸಿ ವರೆಗೆ ವಿದ್ಯಾಭ್ಯಾಸ ಪಡೆದ ವಿಕಾಸ್ ನಾಯ್ಕ, ಮಂಚಿಕೇರಿ ಕಾಂಗ್ರೆಸ್ ಘಟಕದ ಕಾರ್ಯದರ್ಶಿಯಾಗಿ ಮತ್ತು ವಿವಿಧ ಸ್ವಯಂ ಸೇವಾ ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಾರವಾರದ ಬಾಪೂಜಿ ಗ್ರಾಮೀಣ ವಿಕಾಸ ಸಂಸ್ಥೆ, ಮಂಚಿಕೇರಿಯ ವಿಕಾಸ್ ಸೇವಾ ಸಂಸ್ಥೆ ಹಾಗೂ ಶಿರಸಿಯ ಮನು ವಿಕಾಸ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿರುವ ಅವರು, ಸಂಘಟನಾ ಚಾತುರ್ಯ ಮತ್ತು ನಾಯಕತ್ವದ ಗುಣಗಳಿಂದಾಗಿ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. IMG-20241006-135237 ಕೆಲವು ದಶಕಗಳಿಂದ ಮುಂಡಗೋಡ, ಯಲ್ಲಾಪುರ, ಕಾರವಾರ ಮತ್ತು ಮಂಚಿಕೇರಿಯ ಕ್ರಿಕೆಟ್ ಮೈದಾನಗಳಲ್ಲಿ ವಿಕಾಸ್ ನಾಯ್ಕ ಹೆಸರು ಪ್ರಸಿದ್ಧವಾಗಿದೆ. ಯಲ್ಲಾಪುರ ಪ್ರೀಮಿಯರ್ ಲೀಗ್ ನ ಸದಸ್ಯರಾಗಿರುವ ಅವರು, ರಂಗಭೂಮಿಯಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಎಂ ಕೆ ಭಟ್ ಯಡಳ್ಳಿ ಅವರ ತಂಡದಲ್ಲಿ ರಂಗ ಕಲಾವಿದರಾಗಿ ಗುರುತಿಸಿಕೊಂಡಿರುವ ವಿಕಾಸ್, ಕೆಲವು ಕಲಾತ್ಮಕ ಚಲನಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ. 
    ವಿಕಾಸ್ ನಾಯ್ಕರ ಸಂಘಟನಾ ಚಾತುರ್ಯ ಮತ್ತು ನಾಯಕತ್ವದ ಗುಣಗಳನ್ನು ಗುರುತಿಸಿ ಸರ್ಕಾರವು ಅವರಿಗೆ ಯಲ್ಲಾಪುರ ಭೂ ನ್ಯಾಯ ಮಂಡಳಿಯ ಸದಸ್ಯತ್ವವನ್ನು ನೀಡಿ ಗೌರವಿಸಿದೆ. ಈ ಸದಸ್ಯತ್ವ ಪಡೆಯಲು ಇತ್ತೀಚೆಗೆ ನಿಧನರಾದ ಕಾಂಗ್ರೆಸ್ ವಕ್ತಾರ ರವೀಂದ್ರ ನಾಯ್ಕ ಕಾಳಮ್ಮನಗರ, ಶಾಸಕ ಶಿವರಾಮ ಹೆಬ್ಬಾರ್, ಮಾಜಿ ಶಾಸಕ ವಿ ಎಸ್ ಪಾಟೀಲ್, ಕೆಪಿಸಿಸಿ ಸದಸ್ಯ ವಿವೇಕ್ ಹೆಬ್ಬಾರ್, ಪಂಚ ಯೋಜನೆ ಅನುಷ್ಠಾಅನ ಸಮಿತಿ ತಾಲೂಕಾ ಅಧ್ಯಕ್ಷ ಉಲ್ಲಾಸ ಶಾನಭಾಗ, ಬಿಸಿಸಿ ಅಧ್ಯಕ್ಷ ಎನ್ ಕೆ ಭಟ್ಟ ಮೆಣಸುಪಾಲ, ಬಿಸಿಸಿ ಮಾಜಿ ಅಧ್ಯಕ್ಷ ಡಿ ಎನ್ ಗಾಂವ್ಕರ್ ಮುಂತಾದವರು ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಹೇಳುತ್ತಾರೆ.IMG-20241006-132109  
    ಭೂ ನ್ಯಾಯ ಮಂಡಳಿಯಲ್ಲಿ ಪಾರದರ್ಶಕತೆ ಮತ್ತು ನ್ಯಾಯದ ಪರವಾಗಿ ತಮ್ಮ ನಿರ್ಣಯಗಳನ್ನು ಮಂಡಿಸುವುದಾಗಿ ವಿಕಾಸ್ ಭರವಸೆ ನೀಡಿದ್ದಾರೆ. ಭೂ ನ್ಯಾಯ ಮಂಡಳಿ ಸದಸ್ಯತ್ವದ ಮೂಲಕ ಹೊಸ ಜವಾಬ್ದಾರಿಯನ್ನು ನಿಭಾಯಿಸಲು ಸಜ್ಜಾಗಿರುವ ವಿಕಾಸ್ ನಾಯ್ಕ, ತಮ್ಮ ಅನುಭವ ಮತ್ತು ಕೌಶಲ್ಯಗಳನ್ನು ಉಪಯೋಗಿಸಿಕೊಂಡು ಸಮಾಜಕ್ಕೆ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವುದಾಗಿ ತಿಳಿಸಿದ್ದಾರೆ. ಅವರ ಈ ಪ್ರಯತ್ನವು ಸಮಾಜಕ್ಕೆ ಒಳ್ಳೆಯದನ್ನು ಮಾಡಲಿ ಎಂಬುದು ಎಲ್ಲರ ಆಶಯ.