Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Tuesday, 1 October 2024

ಯಲ್ಲಾಪುರದ ಮೂರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿಶ್ವ ರೇಬಿಸ್ ದಿನಾಚರಣೆ

IMG-20241001-185642 ಯಲ್ಲಾಪುರ: ತಾಲೂಕಾ ಆರೋಗ್ಯ ಇಲಾಖೆ ಮತ್ತು ಪಶು ಪಾಲನಾ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಇಂದು ಮೂರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿಶ್ವ ರೇಬಿಸ್ ದಿನಾಚರಣೆ ಆಚರಿಸಲಾಯಿತು. IMG-20241001-185632 ತಾಲೂಕಾ ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ ಅವರು ರೇಬಿಸ್ ರೋಗದ ಬಗ್ಗೆ ಮಾತನಾಡಿ, ರೇಬಿಸ್ ಸೋಂಕಿತ ಪ್ರಾಣಿ ಕಚ್ಚಿದರೆ ತಕ್ಷಣ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದರು. ರೇಬಿಸ್‌ಗೆ ಲಸಿಕೆ ಕಂಡುಹಿಡಿದ ಲೂಯಿಸ್ ಪಾಸ್ಚರ್‌ ಮರಣ ಹೊಂದಿದ ದಿನವನ್ನು ವಿಶ್ವ ರೇಬಿಸ್ ದಿನವೆಂದು ಆಚರಿಸಲಾಗುತ್ತದೆ ಎಂದು ತಿಳಿಸಿದರು. IMG-20241001-185620 ಸಹಾಯಕ ನಿರ್ದೇಶಕ ಡಾ. ಎಸ್. ಸಿ. ಭಟ್ಟ ಅವರು ಪ್ರಾಣಿಗಳಲ್ಲಿ ರೇಬಿಸ್ ಹರಡುವಿಕೆ ಹಾಗೂ ನಿಯಂತ್ರಣ ಕುರಿತು ಮಾಹಿತಿ ನೀಡಿದರು. ಸಾಕು ಪ್ರಾಣಿಗಳಾದ ನಾಯಿ ಹಾಗೂ ಬೆಕ್ಕುಗಳಿಗೆ ಪಶು ಇಲಾಖೆಯಲ್ಲಿ ಉಚಿತವಾಗಿ ರೇಬಿಸ್ ಲಸಿಕೆ ಕೊಡಿಸಲು ತಿಳಿಸಿದರು. 
     ಶಾಲೆಯ ಪ್ರಾಂಶುಪಾಲ ಸಂಜಯ ನಾಯಕ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ತಾಲೂಕಾ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ ತಾಳಿಕೋಟಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿ. ಎಲ್. ಶಿರೂರ, ತಾಲೂಕಾ ಕಾರ್ಯಕ್ರಮ ವ್ಯವಸ್ಥಾಪಕ ಎಸ್. ಎಸ್. ಪಾಟೀಲ, ನಿಲಯ ಪಾಲಕ ಪ್ರವೀಣ, ಎನ್.ಸಿ.ಸಿ ಅಧಿಕಾರಿ ಶಿಲ್ಪಾ, ನರ್ಸಿಂಗ್ ಅಧಿಕಾರಿ ಅಶ್ವಿನಿ ಅಂಕೋಲೆಕರ ಹಾಗೂ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸಿದ್ದಿ ವ್ಯಕ್ತಿಯ ಕೊಲೆ ಸಂಶಯಿಸಿ, ಮೃತ ವ್ಯಕ್ತಿಯ ಪತ್ನಿಯಿಂದ ದೂರು ದಾಖಲು

IMG-20241001-054646 ಯಲ್ಲಾಪುರ: ಮದನೂರು ಗ್ರಾಮದಲ್ಲಿ ಸಿದ್ದಿ ಸಮುದಾಯದ ವ್ಯಕ್ತಿಯೊಬ್ಬರ ಕೊಲೆಯಾಗಿರುವ ಘಟನೆ ನಡೆದಿದ್ದು, ಆರೋಪಿಯನ್ನು ಬಂಧಿಸಲು ಪೊಲೀಸರು ತನಿಖೆ ಆರಂಭಿಸಿದ್ದಾರೆ. 
   ತಾವರಕಟ್ಟಾ ಮದನೂರು ಗ್ರಾಮದ ಮಂಗಲಾ ಪಾವ್ಲು ಸಿದ್ದಿ ನೀಡಿರುವ ದೂರಿನ ಪ್ರಕಾರ, ಸೆಪ್ಟೆಂಬರ್ 28 ರಂದು ಬಸಳೆಬೈಲ್ ನಿವಾಸಿ ಆರೋಪಿತ ಸುರೇಶ ಪವಾರ, ತನ್ನ ಅಂಗವಿಕಲರ ತ್ರಿಚಕ್ರ ವಾಹನದಲ್ಲಿ ಪಾವ್ಲು ಸಿದ್ದಿ ಅವರನ್ನು ಕೂಡಿಸಿಕೊಂಡು ಹೋಗಿದ್ದನು. ಸಂಜೆಯಾದರೂ ಪಾವ್ಲು ಸಿದ್ದಿ ಮನೆಗೆ ವಾಪಸ್ ಬಾರದಿದ್ದರಿಂದ ಮಂಗಲಾ ಅವರು, ಸುರೇಶನ ಮನೆಗೆ ಹೋಗಿ ತನ್ನ ಪತಿಯ ಬಗ್ಗೆ ವಿಚಾರಿಸಿದ್ದರು. ಆಗ ಸುರೇಶ ಪಾವ್ಲು ಸಿದ್ದಿಯನ್ನು ಕಳಸೂರು ಕತ್ರಿಗೆ ಬಿಟ್ಟು ಹೋಗಿರುವುದಾಗಿ ಹೇಳಿದ್ದನು. IMG-20241001-054540 ಮರುದಿನವೂ ಪಾವ್ಲು ಸಿದ್ದಿ ಮನೆಗೆ ಬಾರದಿದ್ದರಿಂದ ಮಂಗಲಾ ಪುನಃ ಸುರೇಶನ ಮನೆಗೆ ಹೋಗಿ ವಿಚಾರಿಸಿದಾಗ, ಸುರೇಶ ಆಕೆಯನ್ನು ಬೈದು, ಜಾತಿ ನಿಂದನೆ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸೆಪ್ಟೆಂಬರ್ 30 ರಂದು ಬೆಳಗ್ಗೆ ಪಾವ್ಲು ಸಿದ್ದಿ ಶವವು ಮದನೂರು ಗ್ರಾಮದ ಯಳ್ಳಂಬಿ ಹಳ್ಳದಲ್ಲಿ ಪತ್ತೆಯಾಗಿದೆ ಎಂಬ ಮಾಹಿತಿ ಪಡೆದ ಮಂಗಲಾ ಸ್ಥಳಕ್ಕೆ ತೆರಳಿ ನೋಡಿದಾಗ ಪತಿಯ ಶವವನ್ನು ಕೆರೆಯಲ್ಲಿ ಕಂಡಿದ್ದಾಳೆ. 
   ಮಂಗಲಾ ಆರೋಪಿ ಸುರೇಶನೇ ತನ್ನ ಪತಿಯನ್ನು ಕೊಲೆ ಮಾಡಿ, ಆತನ ಶವವನ್ನು ಹಳ್ಳದಲ್ಲಿ ಬಿಸಾಡಿರುವುದಾಗಿ ಆರೋಪಿಸಿ ದೂರು ನೀಡಿದ್ದಾಳೆ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯಲ್ಲಾಪುರ ಪಿಎಸ್ಐ ನಸ್ರೀನ್ ತಾಚ್ ಚಟ್ಟರಗಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
.

ಯಲ್ಲಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜದಲ್ಲಿ ಸರಸ್ವತಿ ವಿಗ್ರಹ ಅನಾವರಣ ಮತ್ತು ವಿದ್ಯಾರ್ಥಿ ಪರಿಷತ್ ಉದ್ಘಾಟನೆ

IMG-20241001-044919 ಯಲ್ಲಾಪುರ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಯಲ್ಲಾಪುರದಲ್ಲಿ 2024-25ನೇ ಸಾಲಿನ ವಿದ್ಯಾರ್ಥಿ ಪರಿಷತ್ ಹಾಗೂ ವಿವಿಧ ವೇದಿಕೆಗಳ ಉದ್ಘಾಟನಾ ಸಮಾರಂಭವನ್ನು ಸೆಪ್ಟೆಂಬರ್ 30, ರಂದು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ನೂತನವಾಗಿ ಸ್ಥಾಪಿಸಿದ ಸರಸ್ವತಿ ವಿಗ್ರಹವನ್ನು ಶಾಸಕರಾದ ಶಿವರಾಮ ಹೆಬ್ಬಾರ ಅನಾವರಣಗೊಳಿಸಿದರು. ನಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಉತ್ತರ ಕನ್ನಡ ಜಿಲ್ಲೆಗೆ ದಿನಕರ ದೇಸಾಯಿಯವರು ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡಿರುವ ಕುರಿತು ಅಭಿಮಾನ ವ್ಯಕ್ತಪಡಿಸಿದರು. "ಅವರ ಶೈಕ್ಷಣಿಕ ತಳಹದಿಯು ನಮಗೆಲ್ಲ ಆದರ್ಶವಾಗಬೇಕು," ಎಂದು ಅವರು ಹೇಳಿದರು. IMG-20241001-044909 ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಾಗರ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ಸಹ ಪ್ರಾಧ್ಯಾಪಕರಾಗಿರುವ ಡಾ. ಮಹಾವೀರ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಸಕಾರಾತ್ಮಕ ಮನೋಭಾವವನ್ನು ಬೆಳೆಸಿಕೊಂಡು, ಸುಂದರ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲರಾದ ಡಾ. ಆರ್. ಡಿ. ಜನಾರ್ಧನ್ ಅವರು, "ಈ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಸಿದ್ಧಾಂತಗಳನ್ನು ತಂತ್ರಜ್ಞಾನದ ಮಟ್ಟಕ್ಕೆ ಕೊಂಡೊಯ್ಯುವ ಶಕ್ತಿಯನ್ನು ಬೆಳೆಸಬೇಕು," ಎಂದು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು. 
    ಐ.ಕ್ಯೂ.ಎ.ಸಿ ಸಂಚಾಲಕರಾದ ಶರತ್ ಕುಮಾರ್ ವಿದ್ಯಾರ್ಥಿ ಪರಿಷತ್ ಪರಿಚಯಿಸಿ, ಪ್ರತಿಜ್ಞಾವಿಧಿ ಬೋಧಿಸಿದರು. 
   ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ವಿಜಯ ಮಿರಾಶಿ, ಗೋಪಾಲಕೃಷ್ಣ ಜಿ ನೇತ್ರೇಕರ, ಸುನಂದಾ ದಾಸ್ ಹಾಗೂ ಅನೇಕ ಗಣ್ಯರು ಹಾಗೂ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿಗಳು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. 
     ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿಗಳಾದ ಸವಿತಾ ನಾಯ್ಕ ಸ್ವಾಗತಿಸಿ, ವೇದಾ ಭಟ್ಟ ಪ್ರಾರ್ಥನೆ ಸಲ್ಲಿಸಿದರು. ಮೇಘಾ ದೇವಳಿ ವಂದನೆ ಸಲ್ಲಿಸಿದರು, ಹಾಗೂ ಆಶಾ ನಾಯ್ಕ ಕಾರ್ಯಕ್ರಮವನ್ನು ನಿರ್ವಹಿಸಿದರು.