ಯಲ್ಲಾಪುರ: ಯಲ್ಲಾಪುರ ತಾಲೂಕಿನ ಜಮಗುಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 14 ವರ್ಷಗಳ ಕಾಲ ಸೇವೆ ಸಲ್ಲಿಸಿದ ಹರೀಶ ನಾಯ್ಕ ಅವರು ವರ್ಗಾವಣೆಗೊಂಡಿರುವುದು ಶಾಲಾ ಮಕ್ಕಳು, ಪಾಲಕರು ಹಾಗೂ ಗ್ರಾಮಸ್ಥರಲ್ಲಿ ದುಃಖ ತಂದಿದೆ. ಇದೇ ರೀತಿ 11 ವರ್ಷಗಳ ಕಾಲ ಶಾಲೆಯಲ್ಲಿ ಸೇವೆ ಸಲ್ಲಿಸಿದ ಭರತ್ ಶಿಕ್ಷಕರು ಕೂಡ 2024ರ ಆಗಸ್ಟ್ 1 ರಂದು ವರ್ಗಾವಣೆಗೊಂಡಿದ್ದಾರೆ.
ಶಾಲೆಯಲ್ಲಿ ಪಠ್ಯದ ಜ್ಞಾನವನ್ನು ನೀಡುವುದರ ಜೊತೆಗೆ, ಬದುಕಿನ ಪಾಠಗಳನ್ನು ಕಲಿಸಿ, ಮಕ್ಕಳಿಗೆ ಆದರ್ಶ ಪ್ರತಿರೂಪವಾಗಿ ಬದುಕುವ ಮೂಲಕ ಮಕ್ಕಳ ಮನಸ್ಸನ್ನು ಗೆದ್ದಿದ್ದ ಶಿಕ್ಷಕರು ಹರೀಶ ನಾಯಕ ಹಾಗೂ ಭರತ ಅವರ ವರ್ಗಾವಣೆಯು ಜಮಗುಳಿ ಗ್ರಾಮಸ್ಥರಲ್ಲಿ ಒಂದು ತೆರನಾದ ಖಾಲಿತನವನ್ನು ಸೃಷ್ಟಿಸಿದೆ. "ಅರ್ಚಕಸ್ಯ ಪ್ರಭಾವೇನ ಶಿಲಾ ಭವತಿ ಶಂಕರ" ಎಂಬಂತೆ, ಮಕ್ಕಳೆಂಬ ಶಿಲೆಯನ್ನು ಶಿವನಾಗಿ ರೂಪಿಸುವ ಕಾರ್ಯವನ್ನು ಶಿಕ್ಷಕರಾದ ಹರೀಶ ನಾಯಕ ಹಾಗೂ ಭರತ ಅವರು ನಿರ್ವಹಿಸಿದ್ದಾರೆ ಎಂದು ಗ್ರಾಮಸ್ಥರು ಅಭಿಪ್ರಾಯಪಡುತ್ತಾರೆ. ಮಕ್ಕಳನ್ನು, ಪಾಲಕರನ್ನು ಹಾಗೂ ಗ್ರಾಮಸ್ಥರನ್ನು ತಮ್ಮವರೆಂದು ಭಾವಿಸಿಕೊಂಡು, ಶಾಲೆಯನ್ನು ತಮ್ಮ ಮನೆಯೆಂದು ಭಾವಿಸಿ ಕಾರ್ಯನಿರ್ವಹಿಸಿದ ಹರೀಶ ಹಾಗೂ ಭರತ ಅವರು, ಶಾಲೆಯ ಸುಧಾರಣೆ ಹಾಗೂ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಶಾಲೆಯ ಚಿತ್ರಣ ಹಾಗೂ ಶೈಕ್ಷಣಿಕ ವಾತಾವರಣವನ್ನು ಮಾದರಿಯಾಗಿ ರೂಪಿಸುವಲ್ಲಿ ಅವರ ಕೊಡುಗೆ ಅಪಾರವಾಗಿದೆ. ಮಕ್ಕಳಿಗೆ ಶಾರದೆಯ ರೂಪದಲ್ಲಿ, ಪೋಷಕರಿಗೆ ಆತ್ಮೀಯರಾಗಿ, ಸಮಾಜಕ್ಕೆ ಉತ್ತಮ ಶಿಕ್ಷಕನಾಗಿ, ಮಕ್ಕಳ ಹೃದಯದಲ್ಲಿ ನೆಲೆಸಿದ ವಿದ್ಯಾದೇವತೆಯಾಗಿ ತಾವು ಮಾಡಿದ ಸೇವೆ ಅನನ್ಯ ಹಾಗೂ ಅಜರಾಮರವಾಗಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ಹರೀಶ ನಾಯಕ ಹಾಗೂ ಭರತ ಅವರ ವ್ಯಕ್ತಿತ್ವ ಹಾಗೂ ಕಾರ್ಯಶೈಲಿ ಜಮಗುಳಿ ಗ್ರಾಮದ ಶೈಕ್ಷಣಿಕ ವಾತಾವರಣವನ್ನು ಉನ್ನತ ಮಟ್ಟಕ್ಕೆ ಏರಿಸಿತ್ತು. ಗ್ರಾಮಸ್ಥರ ಸಹಾಯ ಸಹಕಾರದಿಂದ ಅವರು ಶಾಲೆಯನ್ನು ಉತ್ತಮಗೊಳಿಸಿದ್ದರು. ಸರ್ಕಾರದ ಆದೇಶದ ಪ್ರಕಾರ 10ಕ್ಕಿಂತ ಕಡಿಮೆ ಮಕ್ಕಳು ಇರುವ ಶಾಲೆಗಳನ್ನು ಮುಚ್ಚುವ ನಿರ್ಧಾರದಿಂದಾಗಿ ಜಮಗುಳಿ ಶಾಲೆ ಮುಚ್ಚುವ ಭೀತಿ ಎದುರಿಸುತ್ತಿತ್ತು. ಆದರೆ, ಹರೀಶ ಹಾಗೂ ಭರತ ಅವರು ಇತರ ಊರುಗಳಿಂದ ನಾಲ್ಕು ಮಕ್ಕಳನ್ನು ಶಾಲೆಗೆ ಸೇರಿಸಿ ಶಾಲೆಯನ್ನು ಉಳಿಸಿಕೊಂಡಿದ್ದರು.
ಹರೀಶ ನಾಯಕ ಹಾಗೂ ಭರತ ಅವರ ವ್ಯಕ್ತಿತ್ವ ಹಾಗೂ ಕಾರ್ಯಶೈಲಿ ಜಮಗುಳಿ ಗ್ರಾಮದ ಶೈಕ್ಷಣಿಕ ವಾತಾವರಣವನ್ನು ಉನ್ನತ ಮಟ್ಟಕ್ಕೆ ಏರಿಸಿತ್ತು. ಗ್ರಾಮಸ್ಥರ ಸಹಾಯ ಸಹಕಾರದಿಂದ ಅವರು ಶಾಲೆಯನ್ನು ಉತ್ತಮಗೊಳಿಸಿದ್ದರು. ಸರ್ಕಾರದ ಆದೇಶದ ಪ್ರಕಾರ 10ಕ್ಕಿಂತ ಕಡಿಮೆ ಮಕ್ಕಳು ಇರುವ ಶಾಲೆಗಳನ್ನು ಮುಚ್ಚುವ ನಿರ್ಧಾರದಿಂದಾಗಿ ಜಮಗುಳಿ ಶಾಲೆ ಮುಚ್ಚುವ ಭೀತಿ ಎದುರಿಸುತ್ತಿತ್ತು. ಆದರೆ, ಹರೀಶ ಹಾಗೂ ಭರತ ಅವರು ಇತರ ಊರುಗಳಿಂದ ನಾಲ್ಕು ಮಕ್ಕಳನ್ನು ಶಾಲೆಗೆ ಸೇರಿಸಿ ಶಾಲೆಯನ್ನು ಉಳಿಸಿಕೊಂಡಿದ್ದರು. ಹರೀಶ ನಾಯಕ ಮತ್ತು ಭರತ ಅವರ ವರ್ಗಾವಣೆಯು ಶಾಲೆಯ ಮಕ್ಕಳು, ಪಾಲಕರು ಹಾಗೂ ಗ್ರಾಮಸ್ಥರಲ್ಲಿ ದುಃಖವನ್ನುಂಟು ಮಾಡಿದ್ದರೂ, ಅವರ ಸೇವೆ, ಅವರ ವ್ಯಕ್ತಿತ್ವ ಹಾಗೂ ಶಿಕ್ಷಣ ಕ್ಷೇತ್ರದಲ್ಲಿನ ಅಪಾರ ಕೊಡುಗೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರ ವರ್ಗಾವಣೆಯು ನೋವಿನ ಸಂಗತಿಯಾದರೂ, ಅವರ ಅನುಪಮ ಸೇವೆಯ ನೆನಪು ಜಮಗುಳಿ ಶಾಲೆಯಲ್ಲಿ ಶಾಶ್ವತವಾಗಿ ಉಳಿಯಲಿದೆ.
ಹರೀಶ ಹಾಗೂ ಭರತ ಅವರ ಭವಿಷ್ಯದ ಜೀವನ ಸುಖಮಯವಾಗಿರಲಿ ಎಂದು ಪಾಲಕರು, ಗ್ರಾಮಸ್ಥರಾದ ಸುರೇಶ ಗುಂಜೀಕರ, ವಿಶ್ವನಾಥ ಗಾಂವ್ಕರ್, ಆನಂದ ಮರಾಠಿ, ಲೋಕೇಶ ಮರಾಠಿ, ಸಂತೋಷ ಬಿ ಮರಾಠಿ, ಹೊನ್ನಪ್ಪ ಜಮಗುಳಿ, ಸಂತೋಷ ಕೆ ಮರಾಠಿ, ಪ್ರಕಾಶ ಮರಾಠಿ, ಸುರೇಶ ವಿಮರಾಠಿ,ವಿನೋದ ಎಚ್ ರಾಯ್ಕರ ಹಾಗೂ ಶಾಲಾ ಮಕ್ಕಳು ಹಾರೈಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬರುವ ಶಿಕ್ಷಕರು ಶಾಲೆಯ ಅಭಿವೃದ್ಧಿ ಮತ್ತು ಮಕ್ಕಳ ಬೆಳವಣಿಗೆಗೆ ಪೂರಕವಾಗಿ ಕಾರ್ಯನಿರ್ವಹಿಸಲಿ ಎಂಬುದು ಎಲ್ಲರ ಆಶಯವಾಗಿದೆ.
ಹರೀಶ ಹಾಗೂ ಭರತ ಅವರ ಭವಿಷ್ಯದ ಜೀವನ ಸುಖಮಯವಾಗಿರಲಿ ಎಂದು ಪಾಲಕರು, ಗ್ರಾಮಸ್ಥರಾದ ಸುರೇಶ ಗುಂಜೀಕರ, ವಿಶ್ವನಾಥ ಗಾಂವ್ಕರ್, ಆನಂದ ಮರಾಠಿ, ಲೋಕೇಶ ಮರಾಠಿ, ಸಂತೋಷ ಬಿ ಮರಾಠಿ, ಹೊನ್ನಪ್ಪ ಜಮಗುಳಿ, ಸಂತೋಷ ಕೆ ಮರಾಠಿ, ಪ್ರಕಾಶ ಮರಾಠಿ, ಸುರೇಶ ವಿಮರಾಠಿ,ವಿನೋದ ಎಚ್ ರಾಯ್ಕರ ಹಾಗೂ ಶಾಲಾ ಮಕ್ಕಳು ಹಾರೈಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬರುವ ಶಿಕ್ಷಕರು ಶಾಲೆಯ ಅಭಿವೃದ್ಧಿ ಮತ್ತು ಮಕ್ಕಳ ಬೆಳವಣಿಗೆಗೆ ಪೂರಕವಾಗಿ ಕಾರ್ಯನಿರ್ವಹಿಸಲಿ ಎಂಬುದು ಎಲ್ಲರ ಆಶಯವಾಗಿದೆ. ಸುದ್ದಿ : ಕುಮಾರ. ಡಿ. ಮರಾಠಿ, ಯಲ್ಲಾಪುರ.
ಯಲ್ಲಾಪುರ: ಭರತನಹಳ್ಳಿ ಗ್ರಾಮದ ದಂಡಿಗೆಮನೆಯಲ್ಲಿರುವ ಶ್ರೀ ಉದ್ಭವ ಗಣಪತಿ ದೇವಸ್ಥಾನದಲ್ಲಿ ಗಣಹೋಮ ಮತ್ತು ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿವೆ. ಅಕ್ಟೋಬರ್ 20 ರಂದು ನಡೆಯಲಿರುವ ಈ ಧಾರ್ಮಿಕ ಕಾರ್ಯಕ್ರಮಕ್ಕೆ ಎಲ್ಲಾ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರಿಗೆ ತಮ್ಮ ಸೇವೆ ಸಲ್ಲಿಸುವಂತೆ ವಿನಂತಿಸಲಾಗಿದೆ.
ಕುಂದರಗಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಭರತನಹಳ್ಳಿ ಗ್ರಾಮದ ದಂಡಿಗೆಮನೆಯಲ್ಲಿ ಶ್ರೀ ಉದ್ಭವ ಗಣಪತಿಯ ಆರಾಧನೆಯು ನಡೆಯುತ್ತದೆ. ಈ ದೇವಸ್ಥಾನದಲ್ಲಿ ಪ್ರತಿ ವರ್ಷ ಗಣೇಶ ಚತುರ್ಥಿಯಂದು ವಿಶೇಷ ಪೂಜೆಗಳು ನಡೆಯುತ್ತಿದ್ದು, ಈ ಬಾರಿಯೂ ವಿಶೇಷ ಗಣಹೋಮ ಮತ್ತು ಪೂಜೆಗಳನ್ನು ಏರ್ಪಡಿಸಲಾಗಿದೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ಭಕ್ತರು ಶ್ರೀ ಉದ್ಭವ ಗಣಪತಿಯ ಕೃಪೆಗೆ ಪಾತ್ರರಾಗಬಹುದು ಎಂದು ಭಾವಿಸಲಾಗಿದೆ.
ಜಕ್ಕೊಳ್ಳಿಯ ರಮೇಶ ಜಿ. ಭಟ್ಟ ಜಕ್ಕೊಳ್ಳಿ ಹಾಗೂ ಸಂಕದಗುಂಡಿಯ ರಾಮಕೃಷ್ಣ ವಿ. ಹೆಗಡೆ ಅವರು ಈ ಕುರಿತು ಭಕ್ತರಿಗೆ ವಿನಂತಿಸಿದ್ದಾರೆ. ಎಲ್ಲಾ ಭಕ್ತರು ಈ ಪವಿತ್ರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ಉದ್ಭವ ಗಣಪತಿಯ ಆಶೀರ್ವಾದ ಪಡೆಯಲು ಈ ಸಂದರ್ಭವನ್ನು ಉಪಸ್ಥಿತರಿರಬೇಕೆಂದು ವಿನಂತಿಸಿದ್ದಾರೆ.
ಯಲ್ಲಾಪುರ: ಮುಂಡಗೋಳ ಹಾಗೂ ಯಲ್ಲಾಪುರ ಭಾಗದಲ್ಲಿ ಅಪಾರ ಮಳೆಯು ಸುರಿದ ಪರಿಣಾಮ ಸಿಡ್ಲಗುಂಡಿ ಹಳ್ಳವು ಮತ್ತೆ ತುಂಬಿ ಹರಿಯುತ್ತಿದೆ. ಈ ಭಾಗದಲ್ಲಿ ನಿರಂತರವಾಗಿ ಆಗುತ್ತಿರುವ ಮಳೆಯಿಂದಾಗಿ ನದಿಗಳು ಹಾಗೂ ಹಳ್ಳಗಳು ತುಂಬಿ ಹರಿಯುತ್ತಿದೆ.
ಸಿಡ್ಲಗುಂಡಿ ನಿವಾಸಿ ಮಂಜುನಾಥ ಭಟ್ಟ ಬುಧವಾರ ಮಧ್ಯರಾತ್ರಿಯಿಂದಲೇ ಸಿಡ್ಲಗುಂಡಿ ಹಳ್ಳ ತುಂಬಿ ಹರಿಯಲು ಆರಂಭಿಸಿದೆ ಎಂದು ತಿಳಿಸಿದ್ದಾರೆ. ಸಾಮಾನ್ಯವಾಗಿ ಹರಿಯುತ್ತಿದ್ದ ಹಳ್ಳವು ಗುರುವಾರ ಬೆಳಿಗ್ಗೆಯಿಂದಲೇ ತುಂಬಿ ಹರಿಯತೊಡಗಿತು. ಗುರುವಾರ ಸಂಜೆಯ ವೇಳೆಗೆ ನೀರಿನ ಪ್ರಮಾಣ ಇನ್ನಷ್ಟು ಹೆಚ್ಚಾಗಿದೆ, ಅರಣ್ಯದಲ್ಲಿಯ ಮರ ಹಾಗೂ ದಿಮ್ಮೆಗಳು ನೀರಿಗೆ ತೇಲಿ ಬರುತ್ತಿವೆ ಎಂದು ಅವರು ಹೇಳಿದ್ದಾರೆ.
ಸಿಡ್ಲಗುಂಡಿ ಹಳ್ಳದ ನೀರು ಬೇಡ್ತಿ ನದಿಯನ್ನು ಸೇರಿ, ನಂತರ ಗಂಗಾವಳಿ ನದಿಯಾಗಿ ಪರಿವರ್ತನೆಯಾಗುತ್ತದೆ. ಈಗಾಗಲೇ ಬೆಡ್ತಿ ನದಿಯಲ್ಲೂ ಹೆಚ್ಚಿನ ಪ್ರಮಾಣದ ನೀರು ಹರಿಯುತ್ತಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮಳೆಗಾಲ ಕಳೆದು ಚಳಿಗಾಲ ಪ್ರಾರಂಭವಾಗುವ ದಿನ ಬಂದರು, ಅಕ್ಟೋಬರ್ ಮಧ್ಯ ಭಾಗದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿಲ್ಲ. ಯಲ್ಲಾಪುರದಲ್ಲಿ ಗುರುವಾರ ಬೆಳಿಗ್ಗೆವರೆಗೆ ಕಳೆದ 24 ಗಂಟೆಯಲ್ಲಿ 32.4 ಮಿ.ಮೀ ಮಳೆ ಸುರಿದಿದೆ. ಇಂತಹ ನದಿಗಳು ಹಾಗೂ ಹಳ್ಳಗಳಲ್ಲಿ ನೀರಿನ ಮಟ್ಟ ಏರಿಕೆಯಾಗುವುದು ಸಾಮಾನ್ಯ ಎಂದು ಹೇಳಲಾಗುತ್ತದೆ. ಆದರೆ, ಈ ಬಾರಿಯ ಮಳೆಯು ಸಾಮಾನ್ಯಕ್ಕಿಂತ ಹೆಚ್ಚು ಆಗಿದ್ದು, ಇದರಿಂದಾಗಿ ನದಿಗಳು ಹಾಗೂ ಹಳ್ಳಗಳು ತುಂಬಿ ಹರಿಯುತ್ತಿವೆ.
ಪಟ್ಟಣದ ಐಬಿ ರಸ್ತೆಯ ಮೂಲಕ ತಾಲೂಕ ಆಸ್ಪತ್ರೆ ಲೋಕೋಪಯೋಗಿ ಇಲಾಖೆ ಕಚೇರಿ, ಜಿಲ್ಲಾ ಪಂಚಾಯತಿ ಇಂಜಿನಿಯರಿಂಗ್ ಕಚೇರಿ, ಹೆಬ್ಬಾರ್ ವಸತಿ ಬಡಾವಣೆ, ಮಂಜುನಾಥ ನಗರ ಕಡೆಗೆ ಹೊಇಗಿ ಬರಲು ಬಸ್ ನಿಲ್ದಾಣದ ಕಡೆಗೆ ಅತಿ ಸಮೀಪದ ರಸ್ತೆ ಐಬಿ ರಸ್ತೆಯಾಗಿದೆ. ಈಗಾಗಲೇ ಈ ರಸ್ತೆಯಲ್ಲಿ ಬ್ಯಾಂಕ್, ಟ್ರಾವೆಲರ್ಸ್, ಶಾಪಿಂಗ್ ಕಾಂಪ್ಲೆಕ್ಸ್, ಸಂಗ್ರಹಿಸೋ ಗುಡಾಣ ಮುಂತಾದ ವಾಣಿಜ್ಯ ಉದ್ದೇಶದ ಕಟ್ಟಡಗಳು ತಲೆಯೆತ್ತಿದ್ದು. ಈ ಕಟ್ಟಡಗಳ ನಿರ್ಮಾಣದಲ್ಲಿ ವಾಹನ ನಿಲುಗಡೆಗೆ ಸ್ಥಳ ಮೀಸಲಿಡದೆ, ಕೇವಲ ಕಟ್ಟಡಗಳಿಗಷ್ಟೇ ಜಾಗ ಎನ್ನುವಂತೆ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದೆ. ಈ ರಸ್ತೆಯಲ್ಲಿ ಪಾದಚಾರಿಗಳಿಗೆ ಮೀಸಲಿಟ್ಟ ಸ್ಥಳದಲ್ಲಿ ಹಲವಾರು ವಾಹನಗಳು ದಿನದ 24 ಗಂಟದ ನಿಂತಿರುವುದರಿಂದ ಸಾರ್ವಜನಿಕರು ರಸ್ತೆಯ ಪಕ್ಕದಲ್ಲಿ ಓಡಾಡಲು ಸಮಸ್ಯೆಯಾಗುತ್ತಿದೆ.
ಎಲ್ಲಕ್ಕಿಂತ ಮುಖ್ಯವಾಗಿ ತಾಲೂಕ ಆಸ್ಪತ್ರೆಗೆ ಹೋಗಿ ಬರುವ ರೋಗಿಗಳು, ಗರ್ಭಿಣಿಯರು ತಮ್ಮ ಆರೋಗ್ಯದ ದೃಷ್ಟಿಯಿಂದ ಆಸ್ಪತ್ರೆಗೆ ಹೋಗುತ್ತಿದ್ದರೆ ಆಸ್ಪತ್ರೆಗೆ ಹೋಗುವ ದಾರಿಯಲ್ಲಿಯೇ ಅಪಾಯಗಳು ಅಡ್ಡಿಯಾಗಿವೆ. ಗ್ರಾಮೀಣ ಭಾಗದಿಂದ ಆಸ್ಪತ್ರೆಗೆ ಬರುವ ಗರ್ಭಿಣಿ ಮಹಿಳೆಯ ಹೊಟ್ಟೆಯಲ್ಲಿ ಒಂದು ಮಗು ಅಕ್ಕಪಕ್ಕದಲ್ಲಿ ಇನ್ನೆರಡು ಮಕ್ಕಳನ್ನು ಇಟ್ಟುಕೊಂಡು ಆಸ್ಪತ್ರೆಗೆ ಸಾಗಬೇಕಾಗಿದೆ. ರಸ್ತೆಯ ಮಧ್ಯದಲ್ಲಿ ಓಡಾಡುವ ಕಾರು ಬೈಕುಗಳ ಕಾರಣಕ್ಕಾಗಿ ಮಕ್ಕಳನ್ನು ವಯಸ್ಸಾದರೂ ಅವರನ್ನು ಸಂಭಾಳಿಸುವುದೇ ಕಷ್ಟವಾಗಿದೆ.
ಯಲ್ಲಾಪುರ: ಅರಬೈಲ್ ಘಟ್ಟದಲ್ಲಿ ಪೇಪರ್ ಸಾಗಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ ಗುರುವಾರ ಬೆಳಿಗ್ಗೆ 7.15ರಿಂದ ಸಂಚಾರ ಸ್ಥಗಿತಗೊಂಡಿತ್ತು. ಲಾರಿಯನ್ನು ಎರಡು ಜೆಸಿಬಿಗಳ ಮೂಲಕ ತೆರವುಗೊಳಿಸಿ ಸುಮಾರು ಮೂರು ಗಂಟೆಗಳ ಕಾಲ ಸ್ಥಗಿತಗೊಂಡಿದ್ದ ಸಂಚಾರವನ್ನು ಪುನಃ ಸ್ಥಾಪಿಸಲಾಗಿದೆ.
ಬೆಳಿಗ್ಗೆ 7.15ರ ಸುಮಾರಿಗೆ ಘಟನೆ ನಡೆದಿದ್ದು, ರಸ್ತೆಯ ಮಧ್ಯದಲ್ಲಿ ಉರುಳಿ ಬಿದ್ದ ಲಾರಿ ಪಕ್ಕದಿಂದ ದಾಟಲು ಪ್ರಯತ್ನಿಸುತ್ತಿದ್ದ ಬಸ್ಸೊಂದು ಸಿಕ್ಕಿಕೊಂಡಿತ್ತು. ಇದರಿಂದಾಗಿ ಪರಿಸ್ಥಿತಿ ಇನ್ನಷ್ಟು ಜಟಿಲಗೊಂಡಿತ್ತು. ಘಟನೆಯಿಂದಾಗಿ ರಸ್ತೆಯ ಎರಡೂ ಬದಿಗಳಲ್ಲಿ ಸಾವಿರಾರು ವಾಹನಗಳು ಸಿಲುಕಿಕೊಂಡು ತೀವ್ರ ಸಂಚಾರ ದಟ್ಟಣೆ ಉಂಟಾಗಿತ್ತು. ಬೆಳಗ್ಗೆಯಿಂದಲೇ ಸಿಲುಕಿಕೊಂಡಿರುವ ವಾಹನಗಳಿಂದಾಗಿ ಜೆಸಿಬಿ ಅಥವಾ ಟ್ರೋಲಿಗಳು ಘಟನಾ ಸ್ಥಳಕ್ಕೆ ತಲುಪಲು ತೊಂದರೆ ಎದುರಾಗಿತ್ತು.
ಹೆದ್ದಾರಿ ನಿರ್ವಹಣಾ ಪ್ರಮುಖರು ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಎರಡು ಜೆಸಿಬಿಗಳನ್ನು ಘಟನಾ ಸ್ಥಳಕ್ಕೆ ತಲುಪಿಸಲು ಯಶಸ್ವಿಯಾಗಿದ್ದರು. ನಂತರ ಬಿದ್ದಿರುವ ಲಾರಿಯನ್ನು ಜೆಸಿಬಿಗಳ ಸಹಾಯದಿಂದ ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಮುಕ್ತಗೊಳಿಸಲಾಯಿತು.
ಆದರೂ ಕೂಡ ಸಾವಿರಾರು ವಾಹನಗಳು ರಸ್ತೆಯ ಎರಡು ಬದಿಗಳಲ್ಲಿ ನಿಂತಿರುವುದರಿಂದ ವಾಹನಗಳ ಓಡಾಟದ ವೇಗದಲ್ಲಿ ಹಿನ್ನಡೆಯಾಗಿದೆ. ಹತ್ತಾರು ಕಿಲೋಮೀಟರ್ ಅಂತರವನ್ನು ದಾಟಲು ಗಂಟೆಗಳ ಸಮಯ ಬೇಕಾಗುತ್ತಿದೆ. ಹಾಳಾಗಿರುವ ರಸ್ತೆ ಹಾಗೂ ವಾಹನಗಳ ಮಧ್ಯ ತೂರಿ ಮುಂದೆ ಹೋಗಲು ಚಾಲಕರು ಹರಸಾಹಸ ಪಡಬೇಕಾಗಿದೆ. ಈ ಘಟನೆಯಿಂದಾಗಿ ಪ್ರಯಾಣಿಕರು ಮತ್ತು ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಯಲ್ಲಾಪುರ: ಅರಬೈಲ್ ಘಟ್ಟದಲ್ಲಿ ನಡೆದ ಲಾರಿ ಪಲ್ಟಿ ಘಟನೆಯಿಂದ ಗುರುವಾರ (ಇಂದು) ಬೆಳಿಗ್ಗೆ 7.15ರಿಂದಲೇ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಒಂದು ಪೇಪರ್ ಸಾಗಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಮಧ್ಯದಲ್ಲಿ ಉರುಳಿ ಬಿದ್ದಿದೆ. ಈ ಘಟನೆಯಲ್ಲಿ, ಲಾರಿಯನ್ನು ದಾಟಲು ಪ್ರಯತ್ನಿಸುತ್ತಿದ್ದ ಬಸ್ಸಿನ ಚಾಲಕನೊಬ್ಬ ಸಿಕ್ಕಿಕೊಂಡಿದ್ದು, ಪರಿಸ್ಥಿತಿ ಇನ್ನಷ್ಟು ಜಟಿಲಗೊಂಡಿದೆ.
ಘಟನೆಯಿಂದಾಗಿ ರಸ್ತೆಯ ಎರಡು ಬದಿಗಳಲ್ಲೂ ಸಾವಿರಾರು ವಾಹನಗಳು ಸಿಲುಕಿಕೊಂಡು ರಸ್ತೆ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ಬೆಳಗ್ಗೆಯಿಂದಲೇ ಸಿಲುಕಿಕೊಂಡಿರುವ ವಾಹನಗಳ ಕಾರಣ, ಜೆಸಿಬಿ ಅಥವಾ ಟ್ರೋಲಿಗಳು ಘಟನಾ ಸ್ಥಳಕ್ಕೆ ತಲುಪಲು ಸಾಧ್ಯವಾಗದೆ ತೊಂದರೆ ಎದುರಾಗಿದೆ. ಹೆದ್ದಾರಿ ನಿರ್ವಹಣಾ ಪ್ರಮುಖರು ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ರಸ್ತೆಯನ್ನು ಮುಕ್ತಗೊಳಿಸಲು ಹರಸಾಹಸ ಪಡುತ್ತಿದ್ದಾರೆ.
ಘಟನೆ ನಡೆದ ಬೆಳಿಗ್ಗೆ 7:00ರಿಂದಲೇ ಹಲವಾರು ವಾಹನ ಸವಾರರು ಮತ್ತು ಪ್ರಯಾಣಿಕರು ಯಲ್ಲಾಪುರ ಮತ್ತು ಅಂಕೋಲದ ನಡುವೆ ಪ್ರಯಾಣಿಸಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ. ಬೆಳಿಗ್ಗೆ 10:30ರ ವೇಳೆಗೂ ಪರಿಸ್ಥಿತಿ ಸುಧಾರಿಸದಿರುವುದು ಜನರನ್ನು ಕಂಗಾಲಾಗಿಸಿದೆ. ಹುಬ್ಬಳ್ಳಿ ಆಸ್ಪತ್ರೆಗೆ ತುರ್ತು ಚಿಕಿತ್ಸೆಗಾಗಿ ಕಾರಿನಲ್ಲಿ ಹೋಗಬೇಕಾದವರು ಕೂಡ ರಸ್ತೆ ತೆರವಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಲಾರಿಯ ಪಲ್ಟಿಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ, ಹದಗೆಟ್ಟಿರುವ ಅರಬೈಲ್ ಘಟ್ಟದಲ್ಲಿ ಸಂಚರಿಸಲು ಚಾಲಕರು ಹರಸಾಹಸ ಪಡಬೇಕಾಗಿದ್ದು, ಚಾಲಕನ ಅಜಾಗರೂಕತೆಯಿಂದ ಅಥವಾ ಹಾಳಾಗಿರುವ ರಸ್ತೆಯಿಂದ ಘಟನೆ ಸಂಭವಿಸಿರಬಹುದು ಎಂದು ಶಂಕಿಸಲಾಗುತ್ತಿದೆ. ಈ ಘಟನೆಯಿಂದಾಗಿ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ. ವಾಹನ ಚಾಲಕರು ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಜವಾಬ್ದಾರಿಯುತವಾಗಿ ವಾಹನಗಳನ್ನು ಚಲಾಯಿಸಬೇಕು. ಹೆದ್ದಾರಿ ನಿರ್ವಹಣಾ ಪ್ರಾಧಿಕಾರಗಳು ರಸ್ತೆ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಈ ರೀತಿಯ ಘಟನೆಗಳು ಮುಂದೆ ನಡೆಯದಂತೆ ತಡೆಯಲು ಕ್ರಮ ಕೈಗೊಳ್ಳುವುದು ಅತ್ಯಗತ್ಯ.
ಯಲ್ಲಾಪುರ: ಯಲ್ಲಾಪುರ ಕ್ರಿಕೆಟ್ ಅಸೋಸಿಯೇಷನ್ ವೈಪಿಎಲ್ ಸೀಸನ್ 04 ಅನ್ನು ಈ ಬರುವ ಡಿಸೆಂಬರ್ ನಲ್ಲಿ ಆರಂಭಿಸಲು ಸಜ್ಜಾಗಿದೆ. ಹಿಂದಿನ ಮೂರು ಸೀಸನ್ ಗಳಲ್ಲಿ ಅಪಾರ ಜನಪ್ರಿಯತೆ ಗಳಿಸಿ ಯಲ್ಲಾಪುರದ ಕ್ರಿಕೆಟ್ ಕ್ಷೇತ್ರದಲ್ಲಿ ಹೊಸ ಇತಿಹಾಸವನ್ನು ಬರೆದಿರುವ ಈ ಅಸೋಸಿಯೇಷನ್, ಈಗ ಸೀಸನ್ 04 ರ ಯಶಸ್ವಿ ಆಯೋಜನೆಗೆ ತಯಾರಿ ನಡೆಸುತ್ತಿದೆ. ಈ ಸೀಸನ್ ನ ಆಟಗಾರರ ಆಯ್ಕೆ ಪ್ರಕ್ರಿಯೆ, 'ಬಿಲ್ಡಿಂಗ್' ಮೂಲಕ ಇದೇ ನವೆಂಬರ್ 24 ರಂದು ಆರಂಭವಾಗಲಿದೆ.
ಯಲ್ಲಾಪುರ ಕ್ರಿಕೆಟ್ ಪ್ರೇಮಿಗಳ ಮನ ಗೆದ್ದಿರುವ ಯಲ್ಲಾಪುರ ಕ್ರಿಕೆಟ್ ಅಸೋಸಿಯೇಷನ್ ಕಮಿಟಿ, ಪ್ರತಿ ಸೀಸನ್ ನಲ್ಲೂ ಹೊಸ ಪ್ರಾಯೋಜಕರನ್ನು ಪಡೆದುಕೊಂಡು ಯಲ್ಲಾಪುರದ ಕ್ರಿಕೆಟ್ ಅನ್ನು ಹೊಸ ಎತ್ತರಕ್ಕೆ ಏರಿಸುತ್ತಾ ಬಂದಿದೆ. ವೈಪಿಎಲ್ ಸೀಸನ್ 3 ರಲ್ಲಿ ಯೂಟ್ಯೂಬ್ ಮೂಲಕ ನೇರ ಪ್ರಸಾರ ಮತ್ತು ಅಂತರಾಷ್ಟ್ರೀಯ ಮಾಜಿ ಕ್ರಿಕೆಟ್ ಆಟಗಾರ ಡಿ. ಗಣೇಶ್ ರವರನ್ನು ಯಲ್ಲಾಪುರಕ್ಕೆ ಆಹ್ವಾನಿಸಿ ಬಹುಮಾನ ವಿತರಣಾ ಸಮಾರಂಭವನ್ನು ಯಶಸ್ವಿಯಾಗಿ ನಡೆಸಿತ್ತು.
ಈ ಯಶಸ್ಸಿಗೆ ಯಲ್ಲಾಪುರ ಕ್ರಿಕೆಟ್ ಅಸೋಸಿಯೇಷನ್ ಮತ್ತು ಯಲ್ಲಾಪುರ ಕ್ರಿಕೆಟ್ ಪ್ರೇಮಿಗಳ ಜೊತೆಗೆ ಯಲ್ಲಾಪುರದ ಜನಪ್ರಿಯ ಶಾಸಕ ಶಿವರಾಮ್ ಹೆಬ್ಬಾರ್, ಶ್ರೀ ರಾಮನಾಥ್ ಡೆವಲಪರ್ಸ್ ನ ಬಾಲಕೃಷ್ಣ ನಾಯಕ್, ಹನ್ಸ್ ನ ವಿಶಾಲ ಶಾನಭಾಗ ಅವರ ಸಹಕಾರವೂ ಹೆಚ್ಚಿನ ಪಾತ್ರ ವಹಿಸಿದೆ.
ಈ ಬಾರಿ ಯಲ್ಲಾಪುರ ಕ್ರಿಕೆಟ್ ಅಸೋಸಿಯೇಷನ್ ಇನ್ನೊಂದು ಹೆಜ್ಜೆ ಮುಂದಿಟ್ಟಿದೆ. ಭಾರಿ ಬೇಡಿಕೆಯ ಮಧ್ಯೆ, ಈ ಹಿಂದೆ ಎಂಟು ತಂಡಗಳೊಂದಿಗೆ ನಡೆಯುತ್ತಿದ್ದ ಪಂದ್ಯಾವಳಿಗೆ ಈ ಬಾರಿ ಒಂಬತ್ತನೇ ತಂಡವನ್ನು ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ. ಈ ಒಂಬತ್ತನೇ ತಂಡದ ಆಟಗಾರರನ್ನು ಬಿಲ್ಡಿಂಗ್ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಲಾಗುವುದು ಎಂದು ಯಲ್ಲಾಪುರ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಸತೀಶ್ ನಾಯ್ಕ ಇಡಗುಂದಿ ತಿಳಿಸಿದ್ದಾರೆ.
ತಂಡದ ಆಯ್ಕೆ ಸಂಬಂಧಿತ ಬಿಡ್ಡಿಂಗ್ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ತಿಳಿಸಿರುವ ಕಮಿಟಿ, ಆಸಕ್ತರು ಕೆಳಗಿನ ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸಿ ಮಾಹಿತಿ ಪಡೆಯುವಂತೆ ಕೋರಿದೆ.
9902610438, 9844852345, 8147824003, 9972520717, 9481680407.
ಯಲ್ಲಾಪುರದ ಕ್ರಿಕೆಟ್ ಅಭಿಮಾನಿಗಳಿಗೆ ವೈಪಿಎಲ್ ಸೀಸನ್ 04 ಒಂದು ಉತ್ತಮ ಮನರಂಜನೆಯ ಅವಕಾಶವನ್ನು ನೀಡಲಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.
ಯಲ್ಲಾಪುರ : ತಾಲೂಕಿನ ಹುಣಶೇಟ್ಟಿಕೊಪ್ಪ ಡೊಮಗೆರಿ ಕ್ರಾಸ್ ಬಳಿ ಓಸಿ ಮಟ್ಕಾ ಜೂಗಾರ ಆಡಿಸುತ್ತಿದ್ದ ಹುಣಶೆಟ್ಟಿಕೊಪ್ಪ ನಿವಾಸಿ, ಕಿರಾಣಿ ಅಂಗಡಿ ವ್ಯಾಪಾರಿ ಸಂತೋಷ ಸಿ.ಎಮ್ ಮೋಹನದಾಸ(40) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಅಕ್ಟೋಬರ್ 15 ರಾತ್ರಿ 8.00 ಗಂಟೆಗೆ ನಡೆದಿದೆ.
ಡೋಮಗೇರಿ ಕ್ರಾಸ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಸಂತೋಷ 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಓ.ಸಿ, ಮಟಕಾ ಎಂಬ ಜುಗಾರಾಟದ ಬಗ್ಗೆ ಜನರಿಗೆ ಆಸೆ ತೋರಿಸುತ್ತಿದ್ದನು. ಜನರನ್ನು ಸೇರಿಸಿಕೊಂಡು ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂತವಾಗಿ ಕಟ್ಟಿಸಿಕೊಂಡು ಓ.ಸಿ ಎಂಬ ಜುಗಾರಾಟ ಆಡಿಸುತ್ತಿದ್ದಾಗ ಪೊಲೀಸ್ ನಿರೀಕ್ಷಕರಾದ ರಮೇಶ ಹಾನಾಪುರ ತಮ್ಮ ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿದರು.
ಯಲ್ಲಾಪುರ: ತಾಲೂಕಿನ ಮದನೂರು ಗ್ರಾಮದ ಹುಣಶೆಟ್ಟಿಕೊಪ್ಪದ ಚಂದ್ರಕಾಂತ ನಾರಾಯಣ ತಿನೇಕರ ಎಂಬಾತನನ್ನು ಪೊಲೀಸರು ಓ.ಸಿ. ಮಟಕಾ ಜೂಗಾರ ಆಡಿಸುತ್ತಿದ್ದ ಆರೋಪದ ಮೇಲೆ ಬಂಧಿಸಿದ್ದಾರೆ.
ಯಲ್ಲಾಪುರ: ಮಹಿಳೆಯರು ಕೃಷಿ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಉದ್ಯಮಶೀಲರಾಗಬೇಕು ಎಂದು ಕುಂದರಗಿ ಗ್ರಾ.ಪಂ. ಸದಸ್ಯ ಗಣೇಶ ಹೆಗಡೆ ಅಭಿಪ್ರಾಯಪಟ್ಟರು.
ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರವಿ ಪಟಗಾರ, ಕೃಷಿ ಪರಿವರ್ತನೆಯಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದ್ದು, ರೈತರಿಗೆ ಸಹಕಾರ ನೀಡುವ ಮೂಲಕ ಉದ್ಯಮಶೀಲತೆಯನ್ನು ಯಶಸ್ವಿಗೊಳಿಸಬಹುದು ಎಂದರು.
ಯಲ್ಲಾಪುರ: ತಾಲೂಕಿನ ಉಮ್ಮಚಗಿಯಲ್ಲಿ ಅಕ್ಟೋಬರ್ 20 ರಂದು ರಾಜ್ಯಮಟ್ಟದ ಮಕ್ಕಳ ಗೋಷ್ಟಿಯನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಆಯೋಜಿಸಿದೆ. ಯಲ್ಲಾಪುರದ ಜೀವನಶೈಲಿ, ಸಂಸ್ಕೃತಿ ಮತ್ತು ಪರಂಪರೆಯನ್ನು ರಾಜ್ಯಾದ್ಯಂತ ಪಸರಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಘುನಂದನ ಭಟ್ಟ ಹೇಳಿದರು.
ವ್ಯಾಸ ವಿರಚಿತ ಶ್ರೀಮದ್ಭಾಗವತವನ್ನು ಆಧರಿಸಿ 'ಮರಳಿ ಮಡಿಲಿಗೆ' ಎಂಬ ವಿಷಯದ ಕುರಿತು ನಡೆಯಲಿರುವ ಈ ಗೋಷ್ಟಿಯಲ್ಲಿ, ರಾಜ್ಯದ 19 ಜಿಲ್ಲೆಗಳ 30 ಮಕ್ಕಳು ಭಾಗವಹಿಸಲಿದ್ದಾರೆ. ಭಾರತೀಯ ಸಾಹಿತ್ಯದ ಹಿನ್ನೆಲೆಯಲ್ಲಿ, 10 ನೇ ತರಗತಿಯೊಳಗಿನ ಮಕ್ಕಳು ನಿರ್ದಿಷ್ಟ ವಿಷಯದ ಕುರಿತು ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ. ಉಮ್ಮಚಗಿಯಂತಹ ಗ್ರಾಮೀಣ ಪ್ರದೇಶಗಳಲ್ಲಿ ಸಾಂಸ್ಕೃತಿಕ ಪರಿಸರ ಪೂರಕವಾಗಿರುವುದರಿಂದ ಈ ಕಾರ್ಯಕ್ರಮವನ್ನು ಇಲ್ಲಿ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ಯಲ್ಲಾಪುರ: ತಾಲೂಕಿನ ಅಲ್ಕೇರಿಯ ಶಿಕ್ಷಕ ಗಂಗಾಧರ ಲಮಾಣಿ ಅವರಿಗೆ ‘ಸೂರ್ಯ ಫೌಂಡೇಶನ್’ ಮತ್ತು ‘ಸ್ಪಾರ್ಕ್ ಅಕಾಡೆಮಿ’ ಸಂಸ್ಥೆಗಳು ಜಂಟಿಯಾಗಿ ನೀಡುವ ಪ್ರತಿಷ್ಠಿತ ‘ಶಿಕ್ಷಣ ಪ್ರಕಾಶ’ ಪ್ರಶಸ್ತಿ ದೊರೆತಿದೆ. ಈ ರಾಜ್ಯಮಟ್ಟದ ಪ್ರಶಸ್ತಿಯು ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಶಿಕ್ಷಕರನ್ನು ಗೌರವಿಸುವ ಉದ್ದೇಶ ಹೊಂದಿದೆ.
ಗಂಗಾಧರ ಲಮಾಣಿ ಅವರು ತಮಗೆ ದೊರೆತಿರುವ ಈ ಪ್ರಶಸ್ತಿಯನ್ನು ಅಲ್ಕೇರಿ ಹಾಗೂ ತೆಂಗಿನಗೇರಿ ಶಾಲೆಯ ವಿದ್ಯಾರ್ಥಿಗಳಿಗೆ, ಇದೇ ಊರಿನ ನಾಗರಿಕರಿಗೆ ಹಾಗೂ ಪಾಲಕರಿಗೆ ಅರ್ಪಿಸಿದ್ದಾರೆ ಎಂದು ತಿಳಿಸಿದ್ದಾರೆ. ಅವರ ಈ ಸಾಧನೆಗೆ ಯಲ್ಲಾಪುರ ತಾಲೂಕು ಹಾಗೂ ಅಲ್ಕೇರಿ ಮತ್ತು ತೆಂಗಿನಗೇರಿ ಗ್ರಾಮದ ಜನರು ಹೆಮ್ಮೆ ಪಡುತ್ತಿದ್ದಾರೆ.
ಪ್ರಶಸ್ತಿ ಪತ್ರ ವಿತರಣಾ ಸಮಾರಂಭದಲ್ಲಿ ಇಂಡೊಗ್ಲೋಬ್ ಇನ್ ಸ್ಟಿಟ್ಯೂಷನ್ಸ್, ಬೆಂಗಳೂರಿನ ಸಂಸ್ಥಾಪಕ ಬಿ.ಎಂ. ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಮಾರಂಭದಲ್ಲಿ ಮೈಸೂರು ಎಎಂಸಿಎಡಿ ಸೆಂಟರ್ ಆಫ್ ಎಕ್ಸಲೆನ್ಸ್, ಅಂತರಾಷ್ಟ್ರೀಯ ಜೀವನ ಕೌಶಲ್ಯ ತರಬೇತುದಾರ ಚೇತನ್ರಾಮ್ ಆರ್.ಎ, ಇಂಡೋಗ್ಲೋಬ್ ಇನ್ಸಿಟ್ಯೂಷನ್ಸ್ ಬೆಂಗಳೂರಿನ ಕಾರ್ಯದರ್ಶಿ ಸಂಗೀತಾ ಎಸ್. ಬಿ, ಸುವರ್ಣ ಕರ್ನಾಟಕ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಸಂಪಾದಕ ಗಂಡಸಿ ಸದಾನಂದಸ್ವಾಮಿ, ನವೋದಯ ಸಂಸ್ಥಾಪಕರು, ಸೂರ್ಯ ಫೌಂಡೇಶನ್ ಮತ್ತು ಸ್ಪಾರ್ಕ್ ಅಕಾಡೆಮಿ ಅಧ್ಯಕ್ಷ ಹಾಗೂ ಬೆಂಗಳೂರಿನ ಶಿಕ್ಷಣ ಸೌರಭ ಪತ್ರಿಕೆ ಸಂಪಾದಕ ಸೋಮೇಶ್, ಎಜಿಎಸ್ ಕಾರ್ಟ್ ಪ್ರೈ ಲಿ ಸಂಸ್ಥಾಪಕ ವಿನಯ್ ಕುಮಾರ್, ಎಜಿಎಸ್ ಕಾರ್ಟ್ ಪ್ರೈ ಲಿ ಸಂಸ್ಥಾಪಕ ದಿಲೀಪ್ ಕುಮಾರ್, ವೃದ್ಧಿ ಲರ್ನಿಂಗ್ ಎಕ್ಸ್ಚೇಂಜ್ ಬಿಸಿನೆಸ್ ಕೋಚ್ ಸಂದೀಪ್ ವಿಜಯನ್, ಕೊಪ್ಪ ಶಾಲಾ ಶಿಕ್ಷಣ ಇಲಾಖೆ ಸಂಪನ್ಮೂಲ ವ್ಯಕ್ತಿ ಆರ್.ಡಿ. ರವೀಂದ್ರ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಪ್ರಶಸ್ತಿ ಪ್ರಧಾನ ಮಾಡಿದರು.
ಗಂಗಾಧರ ಲಮಾಣಿ ಅವರು ಅಲ್ಕೇರಿ ಹಾಗೂ ತೆಂಗಿನಗೇರಿಯ ಸರ್ಕಾರಿ ಶಾಲೆಗಳ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಅವಿರತ ಪರಿಶ್ರಮ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ನೀಡಿದ ಕೊಡುಗೆ ಮತ್ತು ಶಾಲೆಯ ಅಭಿವೃದ್ಧಿಗೆ ನೀಡಿರುವ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಯಲ್ಲಾಪುರ: ತಾಲೂಕಿನ ಬಿಸಗೋಡ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ರವಿಕುಮಾರ ಕೆ.ಎನ್. ಅವರ ಅಪಾರ ಶಿಕ್ಷಣ ಸೇವೆಯನ್ನು ಗುರುತಿಸಿ, ಅವರಿಗೆ ‘ಶಿಕ್ಷಣ ರತ್ನ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ. ಬೆಂಗಳೂರಿನ ‘ಸೂರ್ಯ ಫೌಂಡೇಶನ್’ ಮತ್ತು ‘ಸ್ಪಾರ್ಕ್ ಅಕಾಡೆಮಿ’ ವತಿಯಿಂದ ಹುರಳಿಚಿಕ್ಕನಹಳ್ಳಿ, ಹೆಸರಘಟ್ಟ ಇಂಡೋಗ್ಲೋಬ್ ಪಿಯು ಕಾಲೇಜಿನಲ್ಲಿ ಆಯೋಜಿಸಲಾದ ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ ಅಕ್ಟೋಬರ್ 15ರಂದು ಈ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.
ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕೆರೆಸಂತೆ ಗ್ರಾಮದ ನಿವಾಸಿಯಾದ ರವಿಕುಮಾರ, ಕಳೆದ 16 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದ ಹಳ್ಳಿ ಶಾಲೆಗಳಲ್ಲಿಯೂ ಅವರು ಉತ್ತಮ ಶಿಕ್ಷಕರಾಗಿ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಯಲ್ಲಾಪುರದ ಬಿಸಗೋಡ ಪ್ರೌಢಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಮೈಸೂರು ಎಎಂಸಿಎಡಿ ಸೆಂಟರ್ ಆಫ್ ಎಕ್ಸಲೆನ್ಸ್, ಅಂತರಾಷ್ಟ್ರೀಯ ಜೀವನ ಕೌಶಲ್ಯ ತರಬೇತುದಾರ ಚೇತನ್ರಾಮ್ ಆರ್.ಎ, ಇಂಡೋಗ್ಲೋಬ್ ಇನ್ಸ್ಟಿಟ್ಯೂಷನ್ಸ್ ಬೆಂಗಳೂರಿನ ಕಾರ್ಯದರ್ಶಿ ಸಂಗೀತಾ ಎಸ್. ಬಿ, ಸುವರ್ಣ ಕರ್ನಾಟಕ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಸಂಪಾದಕ ಗಂಡಸಿ ಸದಾನಂದಸ್ವಾಮಿ, ನವೋದಯ ಸಂಸ್ಥಾಪಕರು, ಸೂರ್ಯ ಫೌಂಡೇಶನ್ ಮತ್ತು ಸ್ಪಾರ್ಕ್ ಅಕಾಡೆಮಿ ಅಧ್ಯಕ್ಷ ಹಾಗೂ ಬೆಂಗಳೂರಿನ ಶಿಕ್ಷಣ ಸೌರಭ ಪತ್ರಿಕೆ ಸಂಪಾದಕ ಸೋಮೇಶ್, ಎಜಿಎಸ್ ಕಾರ್ಟ್ ಪ್ರೈ ಲಿ ಸಂಸ್ಥಾಪಕರು ವಿನಯ್ ಕುಮಾರ್ ಮತ್ತು ದಿಲೀಪ್ ಕುಮಾರ್, ವೃದ್ಧಿ ಲರ್ನಿಂಗ್ ಎಕ್ಸ್ಚೇಂಜ್ ಬಿಸಿನೆಸ್ ಕೋಚ್ ಸಂದೀಪ್ ವಿಜಯನ್, ಕೊಪ್ಪ ಶಾಲಾ ಶಿಕ್ಷಣ ಇಲಾಖೆ ಸಂಪನ್ಮೂಲ ವ್ಯಕ್ತಿ ಆರ್.ಡಿ. ರವೀಂದ್ರ ಮುಂತಾದ ಗಣ್ಯರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಯಲ್ಲಾಪುರ : 'ಪ್ರತಿಯೊಂದು ಜೀವನದ ಘಟ್ಟದಲ್ಲಿಯೂ ಪ್ರತಿಭೆಯ ಆಧಾರದ ಮೇಲೆ ಯಶಸ್ಸು ಕಾದಿದೆ. ಯಾವ ಕಂಪನಿಯ ಅನ್ನವನ್ನು ತಿನ್ನುತ್ತೇವೆಯೋ ಅದರ ಋಣವನ್ನು ತೀರಿಸುವ ಭಾವನೆ ನಿಮ್ಮಲ್ಲಿರಲಿ' ಎಂದು ಶಾಸಕ ಶಿವರಾಮ ಹೆಬ್ಬಾರ್ ಉದ್ಯೋಗಾಕಾಂಕ್ಷಿಗಳಿಗೆ ಕರೆ ನೀಡಿದರು.
ಶಾಸಕ ಶಿವರಾಮ ಹೆಬ್ಬಾರ್ ಮಾರ್ಗದರ್ಶನದಲ್ಲಿ ಅಕ್ಟೋಬರ್ 15ರಂದು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕ್ರಿಯೇಟಿವ್ ಕಂಪ್ಯೂಟರ್ಸ, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬಾಸ್ ಕಂಪನಿಯ ನೇತ್ರತ್ವದಲ್ಲಿ ನಡೆದ ಬಾಸ್ ಬ್ರಿಡ್ಜ್ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರಕಾರಿ ಸೇವೆಗೂ ಖಾಸಗಿ ಸೇವೆಗೂ ಸಾಕಷ್ಟು ವ್ಯತ್ಯಾಸವಿದೆ. ಖಾಸಗಿ ಕಂಪನಿಗಳು ಅನುಭವದ ಕೆಲಸಗಾರರ ಮೂಲಕವೇ ಕಂಪನಿಯನ್ನು ಅಭಿವೃದ್ಧಿ ಮಾಡಿಕೊಳ್ಳಬೇಕಿದೆ. ಅವರು ಕೌಶಲ್ಯಕ್ಕೆ ಆಧ್ಯತೆ ನೀಡುತ್ತಾರೆ. ಹೀಗಾಗಿ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳುವ ಅಗತ್ಯತೆ ಇದೆ ಎಂದರು.
ಪ್ರಾಂಶುಪಾಲ ಡಾ. ಆರ್.ಡಿ.ಜನಾರ್ಧನ ಮಾತನಾಡಿ, 'ಉದ್ಯೋಗ ಮೇಳದ ಯಶಸ್ಸಿಗೆ ಸಾಕಷ್ಟು ಪ್ರಯತ್ನಪಟ್ಟಿದ್ದೇವೆ. ಕೌಶಲ್ಯ ಇರುವ ಪ್ರತಿಭಾವಂತರಿಗೆ ಉದ್ಯೋಗ ನೀಡಲು ಬಾಸ್ ಕಂಪನಿ ವೇದಿಕೆ ಕಲ್ಪಿಸಿದೆ ' ಎಂದರು.
ಇದೇ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿರುವ ಶಾಸಕ ಶಿವರಾಮ ಹೆಬ್ಬಾರ್ ಅವರನ್ನುಗಣ್ಯರು ಸನ್ಮಾನಿಸಿ ಗೌರವಿಸಿದರು.
ವಿವಿದ ಜಿಲ್ಲೆಗಳ 846 ಅಭ್ಯರ್ಥಿಗಳು ಮೇಳದಲ್ಲಿ ಭಾಗವಹಿಸಿದ್ದರು. 297 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಲಾಯಿತು. ಉದ್ಯೋಗ ಮೇಳದಲ್ಲಿ 27 ಪ್ರತಿಷ್ಠಿತ ಕಂಪನಿಗಳು ಭಾಗವಹಿಸಿದ್ದವು.
ವೇದಾ ಭಟ್ಟ ಪ್ರಾರ್ಥಿಸಿದರು, ಶರತಕುಮಾರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು, ನಂದಿತಾ ಭಾಗ್ವತ್ ನಿರೂಪಿಸಿದರು, ಮೇಘಾ ದೇವಳಿ ವಂದಿಸಿದರು.