Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Thursday, 10 October 2024

ಉಮ್ಮಚಗಿಯಲ್ಲಿ ಮಟಕಾ ಜೂಗಾರದಲ್ಲಿ ಆಡಿಸುತ್ತಿದ್ದವನ ಮೇಲೆ ದಾಳಿ, ಬಂಧನ

IMG-20241010-201049 ಯಲ್ಲಾಪುರ: ಯಲ್ಲಾಪುರ ತಾಲೂಕಿನ ಉಮ್ಮಚಗಿ ಗ್ರಾಮದಲ್ಲಿ ಮಟಕಾ ಜೂಗಾರ ಆಡಿಸುತ್ತಿದ್ದ ವ್ಯಕ್ತಿಯ ಮೇಲೆ ಪೊಲೀಸರು ದಾಳಿ ನಡೆಸಿ ನಗದು ಹಣ ಮತ್ತು ಜೂಗಾರದ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ. 
    ಉಮ್ಮಚಗಿ ಜನತಾ ಕಾಲೋನಿ ನಿವಾಸಿ ಕೂಲಿ ಕಾರ್ಮಿಕ ರಾಘವೇಂದ್ರ ಪಟಗಾರ ಈತ ಅ.10 ರಂದು ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕ ಸ್ಥಳದಲ್ಲಿ ಓ.ಸಿ. ಮಟಕಾ ಜೂಗಾರ ಆಡಿಸುತ್ತಿದ್ದ. ಇವನು 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಆಮಿಷವೊಡ್ಡಿ ಜನರನ್ನು ಆಕರ್ಷಿಸಿ ಹಣವನ್ನು ಪಂತವಾಗಿ ಕಟ್ಟಿಸಿಕೊಳ್ಳುತ್ತಿದ್ದನು. IMG-20241010-201007 ಪಿಎಸ್ಐ ಶೆಡ್ಜಿ ಚವ್ಹಾಣ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು ರಾಘವೇಂದ್ರನಿಂದ 480 ರೂಪಾಯಿ ನಗದು ಮತ್ತು ಮಟಕಾ ಜೂಗಾರದ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ, ಇನ್ನೋರ್ವ ಆರೋಪಿ ಶಿರಸಿ ರಾಮನಗರದ ದಿನೇಶ ಸುಬ್ರಾಯ ನಾಯ್ಕನಿಗೆ ರಾಘವೇಂದ್ರ ಪಟಗಾರ ಹಣ ಮತ್ತು ಚೀಟಿಗಳನ್ನು ಒದಗಿಸುತ್ತಿದ್ದ ಎಂಬ ದೂರು ದಾಖಲಾಗಿದೆ. 
    ಯಲ್ಲಾಪುರ ಪೊಲೀಸ್ ಠಾಣೆಯ ಹೆಡ್ ಕಾನ್ಸಟೇಬಲ್ ಸುಲೋಚನಾ ನಾಯ್ಕ, ಈ ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸುತ್ತಿದ್ದಾರೆ.

ಕೋಟಿ ಸಸ್ಯಪಾಲಕ ಸಬಗೇರಿಯ ಗಣಪತಿ ಹಾಲುಕುರುಬ ಇವರಿಗೆ ಅರಣ್ಯ ಸಚಿವರಿಂದ ಸನ್ಮಾನ

IMG-20241010-184235 ಯಲ್ಲಾಪುರ : ದಾಂಡೇಲಿಯ ಹಾರ್ನ್ ಬಿಲ್ ಸಭಾಭವನದಲ್ಲಿ ನಡೆದ 70ನೇ ವನ್ಯಜೀವಿ ಸಪ್ತಾಹದ ಸಮಾರೋಪ ಸಮಾರಂಭದ ಅಂಗವಾಗಿ ಆಗಮಿಸಿದ ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಕೆನರಾ ವೃತ್ತದಲ್ಲಿ ಅತ್ಯುತ್ತಮವಾಗಿ ಸಸ್ಯ ಪಾಲನಾಲಯವನ್ನು ನಿರ್ವಹಿಸಿದ ಅರಣ್ಯ ವೀಕ್ಷಕರಿಗೆ ಹಾಗೂ ಸಿಬ್ಬಂದಿಗಳಿಗೆ ಸನ್ಮಾನಿಸಿದರು. IMG-20241010-184227 ಸನ್ಮಾನಿತರಲ್ಲಿ ಯಲ್ಲಾಪುರ ವಲಯದ ಸಬಗೇರಿ ಸಸ್ಯಪಾಲನಾಲಯದ ಅರಣ್ಯ ಕಾವಲುಗಾರರಾದ ಗಣಪತಿ ತುಕಾರಾಮ ಹಾಲುಕುರುಬ ಒಬ್ಬರಾಗಿದ್ದು, ಇವರು ಪ್ರಾರಂಭದ ಹತ್ತು ವರ್ಷ ದಿನಗೂಲಿ ನೌಕರನಾಗಿ ವಡೆಹುಕ್ಕಳಿ ಹಾಗೂ ಬಿಸಗೋಡ ಭಾಗದಲ್ಲಿ ಅರಣ್ಯ ಕಾವಲುಗಾರನಾಗಿ ಕೆಲಸ ನಿರ್ವಹಿಸಿದ್ದರು. ನಂತರ ಸುಮಾರು 27 ವರ್ಷಗಳಿಂದ ಸಬಗೇರಿ ಸಸ್ಯಪಾಲನಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತ ಇಲ್ಲಿಯವರೆಗೂ ಸುಮಾರು ಒಂದು ಕೋಟಿಗಿಂತಲೂ ಹೆಚ್ಚು ಸಸಿಗಳನ್ನು ಪಾಲನೆ ಪೋಷಣೆ ಮಾಡಿ, ಮೇಲಾಧಿಕಾರಿಗಳ ಮೆಚ್ಚುಗೆಗೆ ಹಾಗೂ ಹೆಗ್ಗಳಿಕೆಗೆ ಪಾತ್ರರಾಗಿ 'ಕೋಟಿ ಸಸ್ಯಪಾಲಕ' ಎಂದು ಗುರುತಿಸಿಕೊಂಡಿದ್ದಾರೆ. ಇವರಿಗೆ ಸಚಿವ ಖಂಡ್ರೆ ಸನ್ಮಾನಿಸಿದ್ದು ಯಲ್ಲಾಪುರ ವಿಭಾಗಕ್ಕೆ ಹೆಮ್ಮೆ ಸಂಗತಿಯಾಗಿದೆ. IMG-20241010-184216 ಈ ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ಎಸ್ ವೈದ್ಯ, ಅರಣ್ಯ ಇಲಾಖೆಯ ವಿವಿಧ ಸ್ಥರದ ಮೇಲಾಧಿಕಾರಿಗಳು ಉಪಸ್ಥಿತರಿದ್ದು ಸನ್ಮಾನಿತರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. 
(ವರದಿ : ಎಫ್ ಜಿ ಶಾನವಾಜ್ ಅರಣ್ಯ ಇಲಾಖೆ)
.
.

ತೇಲಂಗಾರಿನ ಶಾರದೋತ್ಸವ ಕಾರ್ಯಕ್ರಮಕ್ಕೆ ವಿಜೃಂಭಣೆಯ ಆರಂಭ

IMG-20241010-174709 ಯಲ್ಲಾಪುರ: ತಾಲೂಕಿನ ತೇಲಂಗಾರಿನಲ್ಲಿ ಮೈತ್ರಿ ಕಲಾಬಳಗ, ಮಾತೃ ಮಂಡಳಿ, ವನಸಿರಿ ಕಲಾಕೂಟಗಳ ಸಹಯೋಗದೊಂದಿಗೆ 2 ದಿನಗಳ ಶಾರದೋತ್ಸವಕ್ಕೆ ಅಕ್ಟೋಬರ್ 9 ರಂದು ಚಾಲನೆ ನೀಡಲಾಯಿತು. ಚಿತ್ರಕಲೆ, ರಂಗೋಲಿ, ಗುರಿ ಹೊಡೆಯುವುದು, ಚೆಸ್ ಸ್ಪರ್ಧೆಗಳೊಂದಿಗೆ ಉದ್ಘಾಟನೆ ಆರಂಭವಾಯಿತು. ಕೃಷ್ಣ ಭಟ್ಟ ಮುಂಡಗೆತಗ್ಗು ಶಾರದಾ ಸ್ಥಾಪನೆ ನೆರವೇರಿಸಿದರು. IMG-20241010-174701 ಮಧ್ಯಾಹ್ನ ಸೀಮಾ ಮಹಿಳೆಯರಿಂದ ಭಕ್ತಿಗೀತೆ, ಭಜನೆಗಳು ನಡೆದವು. ಮೈತ್ರಿ ಮಹಿಳಾ ತಾಳಮದ್ದಳೆ ಕೂಟದಿಂದ 'ಭೀಷ್ಮ ವಿಜಯ' ತಾಳಮದ್ದಳೆ ಪ್ರದರ್ಶನ ನಡೆಯಿತು. ವೆಂಕಟ್ರಮಣ ಭಟ್ಟ ಚಂದಗುಳಿ (ಭಾಗವತ), ನಾಗಪ್ಪ ಕೋಮಾರ (ಮದ್ದಲೆ) ಹಾಗೂ ಸಂಜಯ ಕೋಮಾರ (ಚಂಡೆ) ಹಿಮ್ಮೇಳದಲ್ಲಿ ಭಾಗವಹಿಸಿದರು. ಹೊಸ ಪ್ರತಿಭೆ ಗಣೇಶ ಗಾಂವ್ಕರ ಸೆಳೆಮನೆ ಕೂಡ ಮದ್ದಲೆ ನುಡಿಸಿದರು. 
    ನಾರಾಯಣ ಗಾಂವಕರ ಗೋಡೆಪಾಲ, ಟಿ.ವಿ.ಕೋಮಾರ, ಗಣಪತಿ ಕಂಚಿಪಾಲ, ಮಂಜುನಾಥ ಮೂಲೆಮನೆ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹಿರಿಯ‌ ನಾಗರಿಕರ ದಿನಾಚರಣೆ: ಮಾರ್ಗದರ್ಶನ ಪಡೆಯಲು ಹಾಗೂ ಸಂಸ್ಕೃತಿ ಪಾಲಿಸಲು ದಿನಾಚರಣೆ : ನ್ಯಾ. ಜಿ.ಬಿ ಹಳ್ಳಾಕಾಯಿ

IMG-20241010-135142 ಯಲ್ಲಾಪುರ : ಹಿರಿಯರ ಮಾರ್ಗದರ್ಶನ ಮತ್ತು ಸಂಸ್ಕೃತಿಯನ್ನು ಪಾಲಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಸಮಿತಿ ತಾಲೂಕ ಅಧ್ಯಕ್ಷರು ಗುಡ್ಡಪ್ಪ ಬಸವಣ್ಣೆಪ್ಪ ಹಳ್ಳಾಕಾಯಿ ಹೇಳಿದರು. IMG-20241010-135112 ಅವರು, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಆರೋಗ್ಯ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳ ಸಹಯೋಗದಲ್ಲಿ ಅ 10 ರಂದು ತಾಲೂಕು ಆಸ್ಪತ್ರೆ ಸಭಾಭವನದಲ್ಲಿ 'ಹಿರಿಯ ನಾಗರಿಕ ದಿನಾಚರಣೆ ಹಾಗೂ ಮಾನಸಿಕ ಆರೋಗ್ಯ ದಿನಾಚರಣೆ' ಬೇಟಿ ಬಚಾವೋ ಬೇಟಿ ಪಡಾವೊ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ವಿಶ್ವ ಹಿರಿಯರ ನಾಗರಿಕರ ದಿನಾಚರಣೆಯ ಪ್ರಾಮುಖ್ಯತೆಯನ್ನು ಎತ್ತಿ ತೋರಿದರು. IMG-20241010-135124 ಈ ದಿನ ವಿಶ್ವ ಮಾನಸಿಕ ಆರೋಗ್ಯ ಹಾಗೂ ಬೇಟಿ ಬಚಾವೋ ಬೇಟಿ ಪಡಾವೋ ದಿನಾಚರಣೆಯನ್ನೂ ಆಚರಿಸಲಾಗುತ್ತಿದೆ. ಸರ್ಕಾರ ಹಿರಿಯ ನಾಗರಿಕರ ಅರ್ಥಿಕ ಸುರಕ್ಷತೆಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಮಾನಸಿಕ ಅಸ್ವಸ್ಥತೆಯುಳ್ಳವರನ್ನು ಕೀಳಾಗಿ ಕಾಣಬಾರದು ಎಂದು ಹೇಳಿ, ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸುವಂತೆ ಕರೆ ನೀಡಿದರು. ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ ಅವರ ಅಭಿವೃದ್ಧಿಗೆ ಪ್ರೋತ್ಸಾಹಿಸಬೇಕು, ಮಹಿಳೆಯರನ್ನು ಗೌರವದಿಂದ ಕಾಣುವಂತೆ ಕರೆ ನೀಡಿದರು. IMG-20241010-135059 ಅಪರ ಸರ್ಕಾರಿ ವಕೀಲ ಎನ್.ಟಿ. ಗಾಂವ್ಕರ್ ಮಾತನಾಡಿ, ಭಾರತೀಯ ಸಂಸ್ಕೃತಿ ಹಿರಿಯ ನಾಗರಿಕರಿಗೆ ಅಪಾರ ಗೌರವ ನೀಡುತ್ತದೆ ಎಂದು ಹೇಳಿದರು. ಸಮಾಜದಲ್ಲಿ ನೈತಿಕತೆ ಕಡಿಮೆಯಾದಾಗ ಕಾನೂನಿನ ಅಗತ್ಯ ಉದ್ಭವಿಸುತ್ತದೆ. ವೃದ್ಧರನ್ನು ನೋಡಿಕೊಳ್ಳುವುದು ಮುಂದಿನ ಪೀಳಿಗೆಯ ಜವಾಬ್ದಾರಿಯಾಗಿದ್ದು, ಕಾನೂನು ಹಿರಿಯ ನಾಗರಿಕರಿಗೆ ಸುರಕ್ಷತಾ ಹಕ್ಕನ್ನು ನೀಡಿದೆ ಎಂದು ಅವರು ತಿಳಿಸಿದರು. 
   ವಕೀಲ ಆರ್.ಕೆ. ಭಟ್ ಉಪನ್ಯಾಸ ನೀಡಿ, ಕುಟುಂಬದಲ್ಲಿ ಸದಸ್ಯರ ಸಂಖ್ಯೆ ಕಡಿಮೆಯಾಗುತ್ತಿರುವುದು ಹಾಗೂ ಉದ್ಯೋಗಕ್ಕಾಗಿ ಬೇರೆಡೆ ವಲಸೆ ಹೋಗುವುದರಿಂದ ದೇಶದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿದೆ ಎಂದರು. ಈ ಪ್ರವೃತ್ತಿ ಒಳ್ಳೆಯದಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. 
    ತಾಲೂಕಾ ಆಸ್ಪತ್ರೆಯ ತಜ್ಞ ವೈದ್ಯ ಡಾ. ಸೌಮ್ಯ ಕೆ.ವಿ. ಉಪನ್ಯಾಸ ನೀಡಿ, ಮನಸ್ಸು ಆರೋಗ್ಯಕ್ಕೆ ಮುಖ್ಯ ಕಾರಣ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ದೇಹ ಹಾಗೂ ಮನಸ್ಸು ಎರಡೂ ಸ್ವಸ್ಥವಾಗಿರಬೇಕು. ಇತ್ತೀಚಿನ ವರ್ಷಗಳಲ್ಲಿ ದೈಹಿಕ ರೋಗಗಳ ಮೇಲೆ ನಿಯಂತ್ರಣ ಸಾಧಿಸಿದರೂ, ಮಾನಸಿಕ ಅನಾರೋಗ್ಯ ಹೆಚ್ಚುತ್ತಿದೆ. ಹೀಗಾಗಿ, ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯದ ಕಡೆಗೂ ಗಮನ ನೀಡಬೇಕು. ಪಾಲಕರು ಮಕ್ಕಳ ಮೇಲೆ ಅತಿಯಾದ ಒತ್ತಡ ಹೇರಬಾರದು. ಸೋಲುಗಳನ್ನು ಸಹಿಸಿಕೊಳ್ಳುವುದನ್ನು ಮಕ್ಕಳಿಗೆ ಕಲಿಸಬೇಕು. ಯೋಗಾಸನ, ಪ್ರಾಣಾಯಾಮ, ಉತ್ತಮ ಆಹಾರ, ಸಾಕು ಪ್ರಾಣಿಗಳ ಜೊತೆ ಕಾಲ ಕಳೆಯುವುದು ನಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ ಎಂದು ಸಲಹೆ ನೀಡಿದರು. 
    ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀದೇವಿ ಪಾಟೀಲ್ ಮಾತನಾಡಿ, ಹೆಣ್ಣು ಮಕ್ಕಳನ್ನು ಅವರ ಸಾಧನೆಗೆ ಪ್ರೋತ್ಸಾಹಿಸಬೇಕೆಂದು ಅಭಿಪ್ರಾಯಪಟ್ಟರು. 
    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕಾ ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ ಮಾತನಾಡಿ, ವಸತಿ ಶಾಲೆಗಳಲ್ಲಿ ಮಕ್ಕಳನ್ನು ಓದಿಸುವ ಪಾಲಕರು, ಅದೇ ಮಕ್ಕಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿ ವೃದ್ಧಾಶ್ರಮ‌ ಸೇರುತ್ತಿದ್ದಾರೆ. ಕೌಟಂಬಿಕ ವ್ಯವಸ್ಥೆ ಸುಸ್ಥಿಯಲ್ಲಿರಬೇಕು. ವೃದ್ಧರ ಹಠಮಾರಿತನವನ್ನು ಚಿಕ್ಕ‌ ಮಕ್ಕಳಂತೆ ಸಹಿಸಿಕೊಳ್ಳಬೇಕು. ನಮ್ಮ ಪೋಷಕರು ನಮ್ಮನ್ನು ನೋಡಿಕೊಂಡಂತೆ ನಾವು ಅವರನ್ನು ನೋಡಿಕೊಳ್ಳುವುದು ನಮ್ಮ ಕರ್ತವ್ಯ ಎಂದು ಹೇಳಿದರು. IMG-20241010-134159 ವಕೀಲರ ಸಂಘದ ಅಧ್ಯಕ್ಷೆ ಸರಸ್ವತಿ ಜಿ ಭಟ್, ಪೊಲೀಸ್ ಉಪ ನಿರೀಕ್ಷಕ ಮಹಾವೀರ ಕಾಂಬಳೆ, ಅಬಕಾರಿ ಉಪ ನಿರೀಕ್ಷಕ ಮಂಜುನಾಥ ಜೋಗಳೆಕರ, ಸಮಾಜ‌ ಕಲ್ಯಾಣ ಇಲಾಖೆ ಪ್ರಬಾರ ಸಹಾಯಕ ನಿರ್ದೇಶಕಿ ಜ್ಯೋತಿ ಬಿ ನರೋಟ, ಪ್ಯಾನಲ್ ವಕೀಲರಾದ ಬೇಬಿ ಅಮೀನಾ, ವೇದಿಕೆಯಲ್ಲಿದ್ದರು. 
    ಅಂಗನವಾಡಿ ಕಾರ್ಯಕರ್ತೆ ರೇಣುಕಾ ಪ್ರಾರ್ಥಿಸಿದರು, ಹಿರಿಯ ಸಹಾಯಕ ಆರೋಗ್ಯಾಧಿಕಾರಿ ಮಹೇಶ ತಾಳೀಕೊಟೆ ಸ್ವಾಗತಿಸಿದರು, ಅರೆ ಕಾಲಿಕ ಸ್ವಯಂ ಸೇವಕರುಗಳಾದ ಸುಧಾಕರ ನಾಯಕ ನಿರೂಪಿಸಿದರು, ಸಂಜೀವ ಹೊಸ್ಕೇರಿ ಕೊನೆಯಲ್ಲಿ ವಂದಿಸಿದರು.
.

ಸಮಾಜ ಸೇವಕ, ಹಾಗೂ ಭಾರತದ ನಿರ್ಮಾತ ಉದ್ಯಮಿ ರತನ‌ ಟಾಟಾ ನಿಧನ !*

IMG-20241010-075509

ಯಲ್ಲಾಪುರ : ಭಾರತದ ಅತಿದೊಡ್ಡ ಸಂಘಟಿತ ಸಂಸ್ಥೆಗಳಲ್ಲಿ ಒಂದಾದ ಟಾಟಾ ಸನ್ಸ್‌ನ ಅಧ್ಯಕ್ಷ ರತನ್ ಟಾಟಾ ಅವರು 86 ನೇ ವಯಸ್ಸಿನಲ್ಲಿ ನಿಧನರಾದರು. ಸೋಮವಾರವಷ್ಟೇ, ಸಾಮಾಜಿಕ ಮಾಧ್ಯಮದ ಪೋಸ್ಟ್‌ನಲ್ಲಿ ಕೈಗಾರಿಕೋದ್ಯಮಿ ತಮ್ಮ ಆರೋಗ್ಯದ ಬಗ್ಗೆ ಊಹಾಪೋಹಗಳನ್ನು ತಳ್ಳಿಹಾಕಿದ್ದರು.  ವಯೋಸಹಜ ಕಾಯಿಲೆಯ ಕಾರಣದಿಂದಾಗಿ ಅವರು ವಾಡಿಕೆಯ ವೈದ್ಯಕೀಯ ತನಿಖೆಗೆ ಒಳಗಾಗುತ್ತಿದ್ದಾರೆ ಎಂದು ಹೇಳಿದ್ದರು. ಅಕ್ಟೋಬರ್ 9ರ ನಸೂಕಿನಲ್ಲಿ ಅವರು ನಿಧನರಾದರು. IMG-20241010-075239

ಭಾರತದ ಹೆಮ್ಮೆಯ ಉದ್ಯಮಿ ಹಾಗೂ ಖ್ಯಾತಿ ಪಡೆದ ಸಮಾಜ ಸೇವಕ, ರತನ್ ಟಾಟಾ, ತಮ್ಮ ಜೀವನದಲ್ಲಿ ಅನೇಕ ಹಂತಗಳನ್ನು ಮೀರಿ ಸಾಗಿದ್ದು, ಭಾರತದ ಉದ್ಯಮ ಜಗತ್ತಿಗೆ ವಿಶೇಷ ಕೊಡುಗೆಯನ್ನು ನೀಡಿದ್ದಾರೆ. ಅವರ ಜನನ, ಬಾಲ್ಯ, ಉದ್ಯಮಿಯಾಗಿರುವ ಹಿನ್ನಲೆ, ಮತ್ತು ವೈಯಕ್ತಿಕ ಜೀವನದ ಮೆಲುಕುಗಳ ಮೂಲಕ ಅವರು ಹೇಗೆ ಭಾರತವನ್ನು ಹೊಸ ಹಾದಿಯ ಮೇಲೆ ಕೊಂಡೊಯ್ದರು ಎಂಬುದನ್ನು ಈ ಲೇಖನದಲ್ಲಿ ಆವಲಂಬಿಸಲಾಗಿದೆ.

IMG-20241010-075216

ಜನನ ಮತ್ತು ಬಾಲ್ಯ:

ರತನ್ ಟಾಟಾ ಜನಿಸಿದರು 1937ರ ಡಿಸೆಂಬರ್ 28 ರಂದು ಮುಂಬೈನಲ್ಲಿ. ತಂದೆ ನವಜೀಭಾಯ್ ಟಾಟಾ ಮತ್ತು ತಾಯಿ ಸುನಿ ಟಾಟಾ ಅವರ ಮಗನಾಗಿ ಜನಿಸಿದ ಅವರು, ಪೋಷಕರಿಂದ ಪ್ರೇರಣೆಯನ್ನು ಪಡೆದರು. ಬಾಲ್ಯದಲ್ಲಿ ಹಲವು ಸವಾಲುಗಳನ್ನು ಎದುರಿಸಿದ ರತನ್, ಕುಟುಂಬದಲ್ಲೇ ತನ್ನ ಮೊದಲ ಪಾಠವನ್ನು ಕಲಿತುಕೊಂಡರು - ಮಾನವೀಯತೆ, ನೈತಿಕತೆ ಮತ್ತು ತಾಳ್ಮೆ. ಇವುಗಳೇ ಅವರ ಜೀವನದ ಪುಟ್ಟ ಕಲ್ಲುಗಳಲ್ಲಿ ಒಂದಾಗಿತ್ತು.

ಶಿಕ್ಷಣ ಮತ್ತು ಹಿನ್ನಲೆ:

ರತನ್ ಟಾಟಾ ತಮ್ಮ ಪ್ರಾಥಮಿಕ ಮತ್ತು ಮಧ್ಯಮ ಶಿಕ್ಷಣವನ್ನು ಮುಂಬೈಯಲ್ಲಿ ಪೂರೈಸಿ, ನಂತರ ಕಾನ್ಸ್ಟಾನ್ಸ್ ಮತ್ತು ಕಂಪನಿ ತಾಂತ್ರಿಕ ವಿದ್ಯಾಲಯದಲ್ಲಿ ತಾಂತ್ರಿಕ ಶಿಕ್ಷಣವನ್ನು ಪಡೆದು, ನಂತರ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಬೃಹತ್ ಉದ್ಯಮ ಶಾಸ್ತ್ರದ ಅಧ್ಯಯನ ಮಾಡಿದರು. ಬೃಹತ್ ಶಿಕ್ಷಣದಿಂದ ಅರ್ಥಶಾಸ್ತ್ರ ಮತ್ತು ತಂತ್ರಜ್ಞಾನದ ಅಧ್ಯಯನಕ್ಕೆ ಸಂಬಂಧಿಸಿದಂತೆ ಅನೇಕ ಆಕರ್ಷಕ ಮಾರ್ಗಗಳನ್ನು ತೆರೆಯುವುದರೊಂದಿಗೆ, ರತನ್ ಭಾರತವನ್ನು ಆರ್ಥಿಕವಾಗಿ ಬಲಿಷ್ಠಗೊಳಿಸಲು ಪ್ರಯತ್ನಿಸಿದರು.

ಉದ್ಯಮಿಯಾಗಿ: ಟಾಟಾ ಗುಂಪುಗಳಲ್ಲಿ ಹಿರಿಮೆ :

ರತನ್ ಟಾಟಾ ತಮ್ಮ ವೃತ್ತಿಜೀವನವನ್ನು 1961ರಲ್ಲಿ ಟಾಟಾ ಗ್ರೂಪ್‌ನಲ್ಲಿ ಆರಂಭಿಸಿದರು. ಅವರು ಮೊದಲಿಗೆ ಸ್ಟೀಲ್ ವಿಭಾಗದಲ್ಲಿ ಕೆಲಸಮಾಡಿದ್ದು, ನಂತರ 1991ರಲ್ಲಿ ಟಾಟಾ ಗ್ರೂಪ್‌ನ ಮುಖ್ಯಸ್ಥರಾಗಿ ನೇಮಕಗೊಂಡರು. ಈ ಹುದ್ದೆಯನ್ನು ಅಲಂಕರಿಸುವ ಮೂಲಕ ರತನ್ ಅವರು ತಮ್ಮ ನೇತೃತ್ವದಲ್ಲಿ ಅನೇಕ ಉದ್ಯಮಗಳನ್ನು ವಿಭಜಿಸಿ, ಪುನರುಜ್ಜೀವನ ನೀಡಿದರು. ಟಾಟಾ ಮೋಟಾರ್ಸ್, ಟಾಟಾ ಸ್ಟೀಲ್, ಟಾಟಾ ಕಮ್ಯುನಿಕೇಷನ್ಸ್ ಮುಂತಾದವುಗಳಲ್ಲಿ ಅವರ ನಿರಂತರ ಮಾರ್ಗದರ್ಶನವು ಉದ್ಯಮದ ಬೆಳವಣಿಗೆಗೆ ಮಹತ್ವದ ಕೊಡುಗೆಯನ್ನು ನೀಡಿತು.

ಸಮಾಜ ಸೇವಕ ಮತ್ತು ಭಾರತೀಯ ನಿರ್ಮಾತ ರತನ್ ಟಾಟಾ :

ಉದ್ಯಮಿಯಾಗಿ ಮಾತ್ರವಲ್ಲದೆ, ನಿಷ್ಠೆಯುಳ್ಳ ಸಮಾಜ ಸೇವಕನಾಗಿಯೂ ಗುರುತಿಸಿಕೊಂಡಿದ್ದಾರೆ. ಸಾಮಾಜಿಕ ಸೇವೆಗಳತ್ತ ತಮ್ಮ ಒಲವನ್ನು ತೋರಿಸಿ, ಟಾಟಾ ಟ್ರಸ್ಟ್ ಮೂಲಕ ಅನೇಕ ಪ್ರಗತಿಪರ ಯೋಜನೆಗಳನ್ನು ರೂಪಿಸಿದರು. ರತನ್ ಟಾಟಾ ಶಿಕ್ಷಣ, ಆರೋಗ್ಯ, ಕೃಷಿ ಅಭಿವೃದ್ಧಿ, ಮತ್ತು ಯುವಜನರ ಸಬಲೀಕರಣದಂತಹ ಕ್ಷೇತ್ರಗಳಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಟಾಟಾ ಸಂಸ್ಥೆಯು ಅನೇಕ ಸಾಮಾಜಿಕ ಕಲ್ಯಾಣ ಯೋಜನೆಗಳಿಗೆ ಧನಸಹಾಯ ಮಾಡಿದ್ದು, ಭಾರತಕ್ಕೆ ಬೆಂಬಲ ನೀಡುತ್ತಿದೆ.

ವೈಯಕ್ತಿಕ ಬದುಕು ಮತ್ತು ಸವಾಲುಗಳು :

ರತನ್ ಟಾಟಾ ಅವರ ವ್ಯಕ್ತಿತ್ವವು ಸರಳವಾದರೂ ಸವಾಲುಗಳನ್ನು ಎದುರಿಸಲು ಬಲವಾದ ನಿಲುವು ಹೊಂದಿದೆ. ವೈಯಕ್ತಿಕ ಬದುಕಿನಲ್ಲಿ ವೈಫಲ್ಯಗಳನ್ನೂ ಅನುಭವಿಸಿದರೂ, ಅವರಿಗೇ ತೊಂದರೆಗಳ ಮಧ್ಯೆ ಸಮಾನತೆ ಮತ್ತು ಶ್ರದ್ಧೆಯಿಂದ ಕಾರ್ಯನಿರ್ವಹಿಸುತ್ತಿದ್ದರು. ಏಳು ಬೀಳನ್ನು ಸಹಿಸುವ ಸಹನೆ, ಮತ್ತು ವ್ಯಕ್ತಿತ್ವದಲ್ಲಿ ಸ್ಥೈರ್ಯವು ಇವರನ್ನು ದೇಶದ ಪ್ರಮುಖ ವ್ಯಕ್ತಿತ್ವಗಳಲ್ಲೊಂದಾಗಿಸಿದೆ.

ರತನ್ ಟಾಟಾ, ಉದ್ಯಮದ ಬೆಳವಣಿಗೆ, ಸಮಾಜ ಸೇವೆ, ಮತ್ತು ದೇಶದ ಅಭ್ಯುದಯಕ್ಕೆ ನೀಡಿದ ಅಪಾರ ಕೊಡುಗೆಯನ್ನು ನಾವು ಇಂದು ಗೌರವದಿಂದ ನೋಡುವುದು. ಅವರ ಎತ್ತರದ ಸಾಧನೆಗಳು, ದುಡಿತದ ಗರಿಮೆ, ಮತ್ತು ಸಹನೆ ಭಾರತೀಯರಿಗೆ ಸ್ಪೂರ್ತಿ.



IMG-20241010-075922