Adv

news21 ‌ ‌YELLAPURNews prakatane --------- ‌ ‌patanakaroct10to17pydkumar Oct9to15 ‌ ‌ ‌ ‌ ‌ oct5to15-pyd ‌‌ ‌ Vishal-sep13to-unlimited ‌ ‌ ‌ ‌ IMG-20241009-195526

Friday 11 October 2024

ಯಲ್ಲಾಪುರದ ಶ್ರೀ ಗ್ರಾಮದೇವಿ ದೇವಸ್ಥಾನದಲ್ಲಿ ಭಕ್ತರಿಂದ ವಿಶೇಷ ಪೂಜೆ ಮತ್ತು ವಿಜಯ ದಶಮಿಯ ವೈಭವದ ಆಚರಣೆ

IMG-20241011-192526 ಯಲ್ಲಾಪುರ: ಪಟ್ಟಣದ ಶ್ರೀ ಗ್ರಾಮದೇವಿ ದೇವಸ್ಥಾನದಲ್ಲಿ ಶುಕ್ರವಾರದಂದು ನವರಾತ್ರಿ ಹಬ್ಬದ ಅಂಗವಾಗಿ ವಿಜಯ ದಶಮಿಯ ಆಚರಣೆ ನಡೆಯಿತು. ಈ ಕಾರ್ಯಕ್ರಮಕ್ಕೆ ಸಾವಿರಾರು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು. ದೇವಸ್ಥಾನದ ಆವರಣ ಭಕ್ತರ ಸಮೂಹದಿಂದ ಕಿಕ್ಕಿರಿದು ತುಂಬಿತ್ತು, ಜನರ ಸರತಿಗಳು ದೇವಸ್ಥಾನದಿಂದ ರಸ್ತೆವರೆಗೆ ಕಾಣಿಸುತಿದ್ದವು. IMG-20241011-192615 ಹಬ್ಬದ ಆಚರಣೆಗಾಗಿ ದೇವಿಯರನ್ನು ಹಾಗೂ ದೇವಸ್ಥಾನವು ವಿಶಿಷ್ಟ ರೀತಿಯಲ್ಲಿ ಅಲಂಕಾರ ಮಾಡಲಾಗಿತ್ತು. ಭಕ್ತರು ದೇವಿಯನ್ನು ಪೂಜಿಸಿ, ತಮ್ಮ ಹರಕೆ ಉಡಿ, ಕುಂಕುಮ ಅರ್ಚನೆ ಮುಂತಾದ ಸೇವೆಗಳನ್ನು ಸಲ್ಲಿಸಿ ಶ್ರದ್ಧೆಯಿಂದ ಪೂಜಿಸಿದರು. IMG-20241011-192627 ದೇವಸ್ಥಾನದ ಆಡಳಿತ ಮಂಡಳಿಯಿಂದ ಪ್ರಾರ್ಥನೆ, ಪೂಜೆ ಹಾಗೂ ಆಚರಣೆಗಳ ನಿರ್ವಹಣೆಯಲ್ಲಿ ನಾಲ್ಕರಿಂದ ಐದು ಜನ ಅರ್ಚಕರು ತಮ್ಮ ಸೇವೆಗಳನ್ನು ಸಲ್ಲಿಸಿದರು. ಪ್ರಾರ್ಥನೆಗೆಂದು ಬಂದ ಭಕ್ತಾದಿಗಳಿಗೆ ವಿಶೇಷ ಪ್ರಸಾದ ನೀಡಲಾಗಿತ್ತು. IMG-20241011-192639 ನವರಾತ್ರಿಯ ಅಂತಿಮ ದಿನವಾದ ವಿಜಯ ದಶಮಿಯ ಹಬ್ಬವು ಸಮಾಜದ ದೃಷ್ಟಿಯಿಂದ ಮಹತ್ವಪೂರ್ಣವಾಗಿದೆ. ದುಷ್ಟಶಕ್ತಿಗಳನ್ನು ನಿವಾರಿಸಿ ಸತ್ಯದ ಮಾರ್ಗದಲ್ಲಿ ನಡೆಯಲು ಪ್ರತಿಯೊಬ್ಬರೂ ದೇವಿಗೆ ಶರಣಾಗುತ್ತಿದ್ದರು. ದೇವಸ್ಥಾನದ ಆಡಳಿತ ಮಂಡಳಿಯವರು ಹಬ್ಬದ ಸಂಭ್ರಮಕ್ಕೆ ಮೇರೆಯು ಹಾಕುವಂತೆ ಪೂಜೆ ನೆರವೇರಿಸಿದರು. ಹಬ್ಬದ ನಿಮಿತ್ತ ದೇವಾಲಯದಲ್ಲಿ ಶಾಂತಿ ಮತ್ತು ಸೌಹಾರ್ದತೆಯ ವಾತಾವರಣವಿದ್ದು, ಜನರಿಗೆ ಉತ್ಸಾಹ ತುಂಬಿತು. IMG-20241011-192652 ದಸರಾ ಹಬ್ಬದ ಅಂಗವಾಗಿ ಶ್ರೀ ಗ್ರಾಮದೇವಿ ದೇವಸ್ಥಾನದಲ್ಲಿ ನಡೆದ ಈ ವೈಭವಯುತ ವಿಜಯ ದಶಮಿಯ ಹಬ್ಬವು ಯಲ್ಲಾಪುರ ಜನತೆಗಾಗಿ ಸಂಭ್ರಮದ ದಿನವಾಗಿತ್ತು.

ನಾಯಕರ ಹೆಸರಿಗೆ 'ಬಾಸ್', 'ಕಿಂಗ್' ಎಂಬ ಪದಗಳ ಬಳಕೆ ನಿಲ್ಲಿಸಿ: ಡಿಕೆ ಶಿವಕುಮಾರ್

IMG-20241011-130944 ಯಲ್ಲಾಪುರ/ ಬೆಂಗಳೂರು : ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳ ಪ್ರಚಾರದ ವೇಳೆ ನಾಯಕರ ಹೆಸರಿಗೆ 'ಬಾಸ್', 'ಕಿಂಗ್', 'ಟೈಗರ್' ಇತ್ಯಾದಿ ಪದಗಳನ್ನು ಬಳಸುವುದು ಹಾಗೂ ಪ್ರಾಣಿಗಳ ಚಿತ್ರಗಳೊಂದಿಗೆ ನಾಯಕರ ಫೋಟೋಗಳನ್ನು ಸೇರಿಸುವುದನ್ನು ಕೂಡಲೇ ನಿಲ್ಲಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ. IMG-20241011-130809 ಪಕ್ಷದ ಕಾರ್ಯಕರ್ತರು, ಮುಖಂಡರು ಹಾಗೂ ಅಭಿಮಾನಿಗಳಿಗೆ ಬರೆದಿರುವ ಪತ್ರದಲ್ಲಿ, ಪ್ಲೆಕ್ಸ್, ಬ್ಯಾನರ್, ಡ್ರಾಪ್ಸ್, ಕಟೌಟ್, ಹೊರ್ಡಿಂಗ್ಸ್ ಮುಂತಾದ ಪ್ರಚಾರ ಸಾಧನಗಳಲ್ಲಿ ನಾಯಕರ ಹೆಸರಿಗೆ ಅತಿರೇಕದ ಪದಗಳನ್ನು ಬಳಸಿ, ಮುಜುಗರ ಉಂಟು ಮಾಡಲಾಗುತ್ತಿದೆ ಎಂದು ಅವರು ಗಮನಿಸಿದ್ದಾರೆ. 
    ಕಾಂಗ್ರೆಸ್ ಪಕ್ಷದ ಸಿದ್ಧಾಂತಕ್ಕೆ ಈ ರೀತಿಯ ಪದಪ್ರಯೋಗಗಳು ಮತ್ತು ಪ್ರದರ್ಶನಗಳು ವಿರುದ್ಧವಾಗಿವೆ ಎಂದು ಹೇಳಿರುವ ಅವರು, ಇದರಿಂದಾಗಿ ಸಾರ್ವಜನಿಕರಲ್ಲಿ ನಾಯಕರು ಮತ್ತು ಪಕ್ಷದ ಬಗ್ಗೆ ನಕಾರಾತ್ಮಕ ಅಭಿಪ್ರಾಯ ಮೂಡಲು ಅವಕಾಶ ಮಾಡಿಕೊಡುವಂತಾಗುತ್ತದೆ ಎಂದು ಎಚ್ಚರಿಸಿದ್ದಾರೆ. IMG-20241011-130758 ಪಕ್ಷದ ಕಾರ್ಯಕ್ರಮಗಳ ಪ್ರಚಾರಕ್ಕೆ ಸದ್ಭಾವನೆ ಮೂಡುವ ಪದಗಳನ್ನು ಬಳಸುವಂತೆ ಡಿಕೆ ಶಿವಕುಮಾರ್ ಕೋರಿದ್ದಾರೆ. 'ನಾಯಕರು', 'ಸಾಧಕರು', 'ಹಿರಿಯರು', 'ಹಿರಿಯ ನಾಯಕರು' ಇತ್ಯಾದಿ ಪದಗಳನ್ನು ಬಳಸುವುದು ಸೂಕ್ತ ಎಂದು ಅವರು ಸಲಹೆ ನೀಡಿದ್ದಾರೆ. ಈ ಮೂಲಕ ಪಕ್ಷ ಹಾಗೂ ನಾಯಕರ ಘನತೆ ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಅವರು ತಿಳಿಸಿದ್ದಾರೆ.

ಹಾಸನದ ಮಾಣಿಕ್ಯ ಪ್ರಕಾಶನದಿಂದ ಯಲ್ಲಾಪುರದ ಶಿಕ್ಷಕಿ ಶಿವಲೀಲಾ ಹುಣಸಗಿಯವರ 'ಗೋರಿಯ ಸುತ್ತ ಸಪ್ತಪದಿ ತುಳಿದಾಗ' ಕೃತಿಗೆ ಗದ್ಯ ಮಾಣಿಕ್ಯ ಪ್ರಶಸ್ತಿ

IMG-20241011-112724 ಯಲ್ಲಾಪುರ : ಹಾಸನದ ಮಾಣಿಕ್ಯ ಪ್ರಕಾಶನ ಯಲ್ಲಾಪುರ ತಾಲೂಕಿನ ಅರಬೈಲ್ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಹಾಗೂ ಸಾಹಿತಿ ಶಿವಲೀಲಾ ಹುಣಸಗಿಯವರ 'ಗೋರಿಯ ಸುತ್ತ ಸಪ್ತಪದಿ ತುಳಿದಾಗ' ಕೃತಿಗೆ 2024 ನೇ ಸಾಲಿನ ದಿ. ನಿಂಗಪ್ಪ ಮಲ್ಲಪ್ಪ ಮೇಟಿ ಸ್ಮಾರಕ ದತ್ತಿ - ಗದ್ಯ ಮಾಣಿಕ್ಯ ಪ್ರಶಸ್ತಿಗೆ ಆಯ್ಕೆ ಮಾಡಿದೆ. IMG-20241011-112713 ಸಾಹಿತಿ ಶಿವಲೀಲಾ ಹುಣಸಗಿ 

 ಹಾಸನದ ಮಾಣಿಕ್ಯ ಪ್ರಕಾಶನ ರಾಜ್ಯ ಹಾಗೂ ಹೊರ ರಾಜ್ಯಗಳ ಸಾಹಿತ್ಯಕ ಕ್ಷೇತ್ರದ ವಿವಿಧ ಪ್ರಕಾರಗಳಲ್ಲಿ ಅವಿರತವಾಗಿ ಕಾರ್ಯೋನ್ಮುಖವಾಗಿ ಸಾಧನೆಗೈಯುತ್ತಿರುವ ಎಲೆಮರೆ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಪ್ರಸಕ್ತ ಸಾಲಿನಲ್ಲಿಯು 2023 ರಲ್ಲಿ ಮೊದಲ ಮುದ್ರಣವಾಗಿ ಪ್ರಕಟಗೊಂಡ ಕನ್ನಡದ ಗದ್ಯ ಸಂಕಲನಕ್ಕೆ ಕೊಡಮಾಡುವ 2024 ನೇ ಸಾಲಿನ ದಿ. ನಿಂಗಪ್ಪ ಮಲ್ಲಪ್ಪ ಮೇಟಿ ಸ್ಮಾರಕ ದತ್ತಿ - ಗದ್ಯ ಮಾಣಿಕ್ಯ ಪ್ರಶಸ್ತಿಗೆ ಶಿವಲೀಲಾ ಹುಣಸಗಿಯವರ 'ಗೋರಿಯ ಸುತ್ತ ಸಪ್ತಪದಿ ತುಳಿದಾಗ'ಕೃತಿ ಆಯ್ಕೆ ಮಾಡಿದ್ದಾರೆ. IMG-20241011-112703 ಶಿವಲೀಲಾ ಹುಣಸಗಿಯವರ 'ಗೋರಿಯ ಸುತ್ತ ಸಪ್ತಪದಿ ತುಳಿದಾಗ'ಕೃತಿ 

 ದತ್ತಿ ಪ್ರಶಸ್ತಿ ಹಾಗೂ ಮೂರು ಸಾವಿರ ರೂ ನಗದು ಬಹುಮಾನವನ್ನು ಹೊಂದಿದ್ದು, 2024 ನವೆಂಬರ್ 10 ರಂದು ಹಾಸನದ ಸಂಸ್ಕೃತ ಭವನದಲ್ಲಿ ಹಮ್ಮಿಕೊಂಡಿರುವ ಒಂಬತ್ತನೇ ವರ್ಷದ ರಾಜ್ಯಮಟ್ಟದ ಕವಿಕಾವ್ಯ ಸಂಭ್ರಮದಲ್ಲಿ ನೀಡಿ ಗೌರವಿಸಲಾಗುತ್ತದೆ ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾದ ಕೊಟ್ರೇಶ್ ಎಸ್.ಉಪ್ಪಾರ್ ಹಾಗೂ ಹಾಸನದ ಮಾಣಿಕ್ಯ ಪ್ರಕಾಶನ ಪ್ರಕಾಶಕರಾದ ದೀಪಾ ಉಪ್ಪಾರ್ ತಿಳಿಸಿದ್ದಾರೆ.

ಕಣ್ಣಿಗೇರಿ ಶಾಲೆಯಲ್ಲಿ ಅದ್ಧೂರಿಯಾಗಿ ನಡೆದ ಶಾರದೋತ್ಸವ ಕಾರ್ಯಕ್ರಮ !

IMG-20241011-101935 ಯಲ್ಲಾಪುರ : ತಾಲೂಕಿನ ಕಣ್ಣಿಗೇರಿಯ ಶಾರದೋತ್ಸವ ಸಮಿತಿ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂಯುಕ್ತವಾಗಿ ಶಾಲೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ಶಾರದಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಅಕ್ಟೋಬರ್ 9ರಂದು ಶಾರದೋತ್ಸವ, ಸನ್ಮಾನ, ಗುರುವಂದನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. 
    ಸಭಾ ಕಾರ್ಯಕ್ರಮವನ್ನು ಊರಿನ ಹಿರಿಯ ಗಣ್ಯರಾದ ಕೃಷ್ಣ ಪುರುಷೋ ನಾಯ್ಕ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು. IMG-20241011-101924 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷ ಅಣ್ಣಪ್ಪ ನಾಯ್ಕ ಮಾತನಾಡಿ, ಈಗಾಗಲೆ ಸಾಕಷ್ಟು ಅಭಿವೃದ್ಧಿ ಮಾಡಿದ್ದೆವೆ. ಶಾಲೆಯ ಕುಂದು ಕೊರತೆ ಗಮನಿಸಿ ದಾನಿಗಳಿಂದ ಹಣ ಸಂಗ್ರಹಿಸಿ ಅಂತಹ ಕೊರತೆಗಳನ್ನು‌ ನಿವಾರಿಸಲು ಪ್ರಯತ್ನಿಸಿದ್ದೆವೆ. ಪಾಲಕರು ಹಾಗೂ ಕಣ್ಣಿಗೇರಿ ಗ್ರಾಮದ ನಾಗರಿಕರು ಶಾಲೆಯ ಅಭಿವೃದ್ಧಿಗೆ ಸಹಾಯ ಮಾಡಿದ್ದಾರೆ. ಹಿಂದಿನ ಬಾರಿ ನಮ್ಮ ಶಾಲೆಯ ಸಹ ಶಿಕ್ಷಕಿ ಕಲ್ಪನಾ ಕೊಂಡ್ಲೇಕರ ತಾಲೂಕಾ ಮಟ್ಟದ ಉತ್ತಮ‌ ಶಿಕ್ಷಕಿ ಪ್ರಶಸ್ತಿ ಬಂದಿತ್ತು, ಈ ಬಾರಿ ನಮ್ಮ‌ಶಾಲೆಯ ಮುಖ್ಯ ಶಿಕ್ಷಕ ಶ್ರೀಕಾಂತ ವೈದ್ಯ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಬಂದಿರುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು. IMG-20241011-101910 ನಂದನ ಸೊಸೈಟಿ ನಿರ್ದೇಶಕ ರವಿ ಕೈಟ್ಕರ್ ಮಾತನಾಡಿ, ಕಣ್ಣಿಗೇರಿ ಶಾಲೆಯಲ್ಲಿ ಬಹಳಷ್ಟು ಹಿಂದಿನಿಂದ ಶಾರಾದೋತ್ಸವ ನಡೆಸಿಕೊಂಡು ಬಂದಿರುತ್ತಾರೆ. ಇಲ್ಲಿಯ ಹಿಂದಿನ ವಾತಾವರಣಕ್ಕೂ ಇಂದಿನ ವಾತಾವರಣಕ್ಕೆ ಹೋಲಿಸದರೆ, ಶಾಲೆ ಹಾಗೂ ಗ್ರಾಮ ಬಹಳಷ್ಟು ಅಭಿವೃದ್ಧಿ ಕಂಡಿದೆ. ಈ ಎಲ್ಲ ಸಾಧನೆಗೆ‌ ಶಾಲೆಯ ಎಸ್‌ಡಿಎಂಸಿ, ಶಾಲೆಯ ಶಿಕ್ಷಕರು ಊರ ನಾಗರಿಕರು, ಯುವಕ ಸಂಘದ ಸದಸ್ಯರು ಕಾರಣ ಎಂದು‌ ಹೇಳಿದರು. IMG-20241011-101852 ಕಣ್ಣಿಗೇರಿ ಗ್ರಾಮ ಪಂಚಾಯತಿ ಸದಸ್ಯ ವಾಸುದೇವ ಮಾಪ್ಸೇಕರ್ ಮಾತನಾಡಿ, ಈ ಶಾಲೆಗೆ 47 ವರ್ಷ ಕಳೆದಿದೆ, ಅಂದಿನಿಂದಲೂ ಶಾರದೋತ್ಸವ ಕಾರ್ಯಕ್ರಮ ಹಮ್ಮಿಕೊಂಡು‌ ಮಕ್ಕಳಿಗೆ ಶೈಕ್ಷಣಿಕ‌ ಮಟ್ಟದಲ್ಲಿ ಉತ್ತೇಜನ‌ ನೀಡುವ ಕಾರ್ಯ ಮಾಡಲಾಗುತ್ತಿದೆ. ಯಾವುದೇ ಖಾಸಗಿ ಶಾಲೆಗೆ ಕಡಿಮೆ ಇಲ್ಲದಂತೆ ಅಭಿವೃದ್ಧಿ ಕಂಡರೂ, ಶಾಲೆಗೆ ಇನ್ನಷ್ಟು ಅಗತ್ಯತೆಯನ್ನು ಪೂರೈಸುವ ಕೆಲಸ ಆಗಬೇಕಿದೆ ಎಂದು ಹೇಳಿದರು. 
   ಮುಖ್ಯ ಅತಿಥಿಗಳಾಗಿದ್ದ ದೈಹಿಕ ಪರಿವೀಕ್ಷಕರಾದ ಪ್ರಕಾಶ ತಾರೀಕೊಪ್ಪ‌ ಮಾತನಾಡಿ, ಕಣ್ಣಿಗೇರಿ ಊರಿನ‌ ಪಾಲಕರು ಹಾಗೂ‌ ಮಕ್ಕಳು ಉತ್ತಮ ಸಂಸ್ಕಾರವನ್ನು ಬೆಳೆಸಿಕೊಂಡಿದ್ದಾರೆ. ತಮ್ಮ ಮಕ್ಕಳನ್ನು ಹೆಚ್ಚೆಚ್ಚು ಸರ್ಕಾರಿ ಶಾಲೆಗಳಲ್ಲಿ ಓದಿಸುವ ಮೂಲಕ ಒಳ್ಳೆಯ ಶಿಕ್ಷಣ ನೀಡುವಂತವರಾಗಿ‌ ಎಂದು‌ ಕರೆ ನೀಡಿದರು. 
    ಶಿಕ್ಷಣ ಸಂಯೋಜಕ ಪ್ರಶಾಂತ ಜಿಎನ್ ಅತಿಥಿಗಳಾಗಿ ಮಾತನಾಡಿದರು. ದೇವಸ್ಥಾನದ ಅರ್ಚಕ ನಾಗೇಶ ಮಾಪ್ಸೇಕರ, ಸ್ಥಳೀಯ ಯೂವ ಮುಖಂಡರಾದ ನೀಲಕಂಠ ಭೋವಿವಡ್ಡರ್, ರಾಜೇಶ್ ಮರಾಠಿ ವೇದಿಕೆಯಲ್ಲಿದ್ದರು. IMG-20241011-101842 ಇದೇ ಸಂದರ್ಭದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶ್ರೀಕಾಂತ್ ವೈದ್ಯ, ಯಲ್ಲಾಪುರ ಭೂ ನ್ಯಾಯ ಮಂಡಳಿ ಸದಸ್ಯರಾಗಿ ನಿಯುಕ್ತಿಗೊಂಡ ಎಸ್‌ಡಿಎಂಸಿ ಅಧ್ಯಕ್ಷ ಅಣ್ಣಪ್ಪ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಶಾಲೆಯ ಶಿಕ್ಷಕಿ ಕಲ್ಪನಾ ಕೊಂಡ್ಲೇಕರ್ ಇವರಿಗೆ ಗುರು ವಂದನೆ ಸಲ್ಲಿಸಲಾಯಿತು. 
    ಎಸ್‌ಡಿಎಂಸಿ ಸದಸ್ಯ ದೀಪಕ‌ ನಾಯ್ಕ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಶ್ರೀಕಾಂತ ವೈದ್ಯ ನಿರೂಪಿಸಿದರು. ಶಿಕ್ಷಕಿ ಕಲ್ಪನಾ ಕೊಂಡ್ಲೇಕರ ವಂದಿಸಿದರು.
.

250 ರೂ ದಲ್ಲಿ ಬಸ್ಸಿನ ಅಲಂಕಾರ, ಕಳೆಗುಂದಿದ ಬಸ್ ಚಾಲಕರ ಹಬ್ಬದ ಉತ್ಸಾಹ !

IMG-20241011-084619 ಯಲ್ಲಾಪುರ : ಬಸ್ ನಿಲ್ದಾಣದಲ್ಲಿ ದಸರಾ ಆಯುಧ ಪೂಜೆಯ ದಿನವಾದ ಶುಕ್ರವಾರ ಹಲವಾರು ಬಸ್‌ಗಳು ಬಂದು ನಿಂತಿದ್ದವು. ಆದರೆ, ಹಿಂದಿನ ವರ್ಷಗಳಂತೆ ಹಬ್ಬದ ಸಿಂಗಾರದಲ್ಲಿ ಕಂಗೊಳಿಸುವ ಬದಲು, ಮೊಳ ಉದ್ದದ ಹಾರಗಳಿಂದ ಅಲಂಕರಿಸಲ್ಪಟ್ಟ ಬಸ್‌ಗಳು ಸಾಮಾನ್ಯ ದಿನಗಳ ಬಸ್ಸುಗಳಂತೆ ಕಾಣುತ್ತಿದ್ದವು. IMG-20241011-084552 ಕೆಎಸ್‌ಆರ್‌ಟಿಸಿ ನಿಗಮವು ದಸರಾ ಹಬ್ಬಕ್ಕೆ ಬಸ್ಸುಗಳ ಅಲಂಕಾರಕ್ಕೆ ಪ್ರತಿ ಬಸ್ಸಿಗೆ 250 ರೂಪಾಯಿಗಳನ್ನು ನಿಗದಿಪಡಿಸಿದೆ. ಆದರೆ, ದಸರಾ ಆಯುಧ ಪೂಜೆಯ ಸಮಯದಲ್ಲಿ ಹೂವು, ಹಣ್ಣು ಮತ್ತು ಇತರ ಪೂಜಾ ಸಾಮಗ್ರಿಗಳ ಬೆಲೆ ಏರಿಕೆಯಾಗಿದೆ. ಸರಿಯಾದ ಸಂಬಳ ಪಡೆಯದ ಚಾಲಕರು ಬಸ್ಸುಗಳನ್ನು ಸ್ವತಃ ಅಲಂಕರಿಸಲು ಸಾಧ್ಯವಾಗದೆ ನೂರು ರೂಪಾಯಿಗಳಿಗೆ ಮೊಳ ಹಾರಗಳನ್ನು ಖರೀದಿಸಿ 25-30 ಅಡಿ ಉದ್ದದ ಬಸ್ಸುಗಳನ್ನು ಅಲಂಕರಿಸುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. IMG-20241011-084611 ಹೆಸರು ಬಹಿರಂಗ ಪಡಸಲು ಇಷ್ಟಪಡದ ಚಾಲಕರೊಬ್ಬರು ತಮ್ಮ ನೋವನ್ನು ಹಂಚಿಕೊಳ್ಳುತ್ತಾ, ಹಿಂದಿನ ವರ್ಷಗಳಲ್ಲಿ ಬಸ್ಸುಗಳನ್ನು ಸ್ವಚ್ಛಗೊಳಿಸಿ, ನಿಗಮದ ಹಣದೊಂದಿಗೆ ಸ್ವಂತ ಹಣವನ್ನೂ ಸೇರಿಸಿ ಸುಂದರವಾಗಿ ಅಲಂಕರಿಸುತ್ತಿದ್ದೆವು ಎಂದು ಹೇಳಿದರು. ಆದರೆ, ಈ ವರ್ಷ ಸಂಬಳ ಕೂಡ ಸಕಾಲಕ್ಕೆ ಬರುತ್ತಿಲ್ಲ ಮತ್ತು ನಿಗಮದಿಂದ ಸಿಂಗಾರಕ್ಕೆ ಹೆಚ್ಚುವರಿ ಹಣವೂ ನೀಡುತ್ತಿಲ್ಲ. ಹೀಗಾಗಿ, 250 ರೂಪಾಯಿಗಳಲ್ಲಿ ಬಸ್ಸುಗಳನ್ನು ಅಲಂಕರಿಸಿ ಪೂಜೆ ಮಾಡಬೇಕಾಗಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು. IMG-20241011-084601 ಹತ್ತು ಮೀಟರ್‌ ಉದ್ದದ ಬಸ್ಸಿಗೆ ಒಂದೆರಡು ಅಡಿ ಉದ್ದದ ಹಾರಗಳಿಂದ ಅಲಂಕರಿಸಿದ್ದನ್ನು ಕಂಡು ಪ್ರಯಾಣಿಕರು ಲೇವಡಿ ಮಾಡುತ್ತಿದ್ದಾರೆ. ಒಬ್ಬ ಪ್ರಯಾಣಿಕರು, ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಮಹಿಳೆಯರಿಂದ ನಿಗಮಕ್ಕೆ ಅರ್ಥಿಕ ನಷ್ಟ ಆಗಿರಬಹುದು ಎಂದು ಅಭಿಪ್ರಾಯಪಟ್ಟು, ಉಚಿತವಾಗಿ ಪ್ರಯಾಣಿಸುವ ಮಹಿಳೆಯರು ತಮ್ಮ ಊರಿನ ಬಸ್ಸುಗಳನ್ನು ಸಿಂಗರಿಸಿ ಪೂಜೆ ಮಾಡಲು ಮುಂದೆ ಬರಬೇಕೆಂದು ಸಲಹೆ ನೀಡಿದರು. 
 ನಾಡಿನಲ್ಲಿ ದಸರಾ ಹಬ್ಬದ ಕಳೆಗಟ್ಟಿದ್ದರೂ, ಬಸ್ಸುಗಳ ಸಿಂಗಾರದಲ್ಲಿನ ಕೊರತೆಯಿಂದ ಬಸ್ ಚಾಲಕರು ನಿರ್ವಾಹಕರಿಗೆ ಹಬ್ಬದ ಸಂಭ್ರಮ ಕುಂದಿರುವಂತೆ ಕಾಣುತ್ತಿದೆ.

100 ರೂ ದಿಂದ 250 ರೂ ಏರಿಕೆ !

ಆಯುಧಪೂಜೆ ಪ್ರಯುಕ್ತ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ನೀಡುತ್ತಿದ್ದ ರೂ.100 ಹಣವನ್ನು 250ರೂ.ಗೆ ಹೆಚ್ಚಿಸಿದೆ.
ಒಂದು ಘಟಕದಲ್ಲಿ ಸರಿ ಸುಮಾರು 100 ರಿಂದ 500 ಬಸ್ಸುಗಳಿರುತ್ತವೆ. ಒಂದು ಬಸ್ಸಿಗೆ ರೂ. 100 ಎಂದು ಒಂದು ಘಟಕಕ್ಕೆ ಅಥವಾ ಕಾರ್ಯಾಗಾರಕ್ಕೆ ನೀಡಲಾಗುತ್ತದೆ. ಆಯುಧ ಪೂಜೆಗೆ 2008ರಲ್ಲಿ ಪ್ರತಿ ಬಸ್ಸಿಗೆ, 2009ರಲ್ಲಿ 10ರೂ. ಹಾಗೂ ಪ್ರತಿ ಬಸ್ಸಿಗೆ 30ಕ್ಕೆರೂ. ಏರಿಕೆ ಮಾಡಲಾಗಿತ್ತು. 2016ರಲ್ಲಿ ಪ್ರತಿ ಬಸ್ಸಿಗೆ ರೂ.50ಕ್ಕೆ ಏರಿಕೆ, 2017ರಲ್ಲಿ ಪ್ರತಿ ಬಸ್ಸಿಗೆ ರೂ.100ಕ್ಕೆ ಏರಿಕೆ ಮಾಡಲಾಗಿತ್ತು. ರೂ.100 ಪ್ರತಿ ಬಸ್ಸಿಗೆ ನೀಡುವ ಮೊತ್ತವು 2023ರವರೆಗೂ ರೂ.100ವರೆಗೆ ಹೆಚ್ಚಿಸಲಾಗಿತ್ತು.
2024 ಅಂದರೆ ಪ್ರಸಕ್ತ ವರ್ಷದಲ್ಲಿ ಆಯುಧ ಪೂಜೆಗೆ ಪ್ರತಿ ಬಸ್ಸಿಗೆ ಈಗ ನೀಡಲಾಗುತ್ತಿರುವ ರೂ.100 ಅನ್ನು 250ರೂ.ಗೆ ಹೆಚ್ಚಿಸಲು ಸಾರಿಗೆ ಹಾಗೂ ಮುಜರಾಯಿ ಸಚಿವರು ಆದೇಶಿಸಿ ಪರಿಷ್ಕೃತ ಆದೇಶ ಹೊರಡಿಸಲಾಗಿದೆ ಎನ್ನುವ ಮಾಹಿತಿ‌ ಲಭ್ಯವಾಗಿದೆ.
.