Adv

news21 ‌ ‌YELLAPURNews prakatane --------- ‌ ‌patanakaroct10to17pydkumar Oct9to15 ‌ ‌ ‌ ‌ ‌ oct5to15-pyd ‌‌ ‌ Vishal-sep13to-unlimited ‌ ‌ ‌ ‌ IMG-20241009-195526

Sunday 13 October 2024

'ಶಿಕ್ಷಣ ರತ್ನ' ರಾಜ್ಯ ಮಟ್ಟದ ಬಾಜನರಾದ ಬಿಸಗೋಡ ಹೈಸ್ಕೂಲ್ ಶಿಕ್ಷಕ ರವಿಕುಮಾರ್ ಕೆ ಎನ್

IMG-20241013-203229 ಯಲ್ಲಾಪುರ: ತಾಲೂಕಿನ ಬಿಸಗೋಡ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ರವಿಕುಮಾರ ಕೆ.ಎನ್. ಅವರು ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಅಪಾರ ಸೇವೆಯನ್ನು ಗುರುತಿಸಿ, ಬೆಂಗಳೂರಿನ 'ಸೂರ್ಯ ಫೌಂಡೇಶನ್' ಮತ್ತು 'ಸ್ಪಾರ್ಕ್ ಅಕಾಡೆಮಿ' ವತಿಯಿಂದ ಆಯೋಜಿಸಲಾದ ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ 'ಶಿಕ್ಷಣ ರತ್ನ' ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಪ್ರಶಸ್ತಿಯು ಅವರ ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆ ಮತ್ತು ವಿದ್ಯಾರ್ಥಿಗಳ ಬೆಳವಣಿಗೆಗೆ ಅವರು ನೀಡಿರುವ ಕೊಡುಗೆಗಳನ್ನು ಸಾರುತ್ತದೆ. IMG-20241013-203221 ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕೆರೆಸಂತೆ ಗ್ರಾಮದ ನಿವಾಸಿಯಾದ ರವಿಕುಮಾರ ಅವರು ಕಳೆದ 16 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದ ಹಳ್ಳಿ ಶಾಲೆಗಳಲ್ಲಿಯೂ ಅವರು ಉತ್ತಮ ಶಿಕ್ಷಕರಾಗಿ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಯಲ್ಲಾಪುರದ ಬಿಸಗೋಡ ಪ್ರೌಢಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆ (NMMS) ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಮೂಲಕ ಅವರ ಉಜ್ವಲ ಭವಿಷ್ಯಕ್ಕೆ ನಾಂದಿ ಹಾಡಿದ್ದಾರೆ. IMG-20241013-203212 ರವಿಕುಮಾರ ಅವರ ಶಿಕ್ಷಣ ತತ್ವವು ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಮತ್ತು ಅರ್ಥಮಾಡಿಕೊಳ್ಳುವ ರೀತಿಯಲ್ಲಿ ಬೋಧಿಸುವುದನ್ನು ಆಧರಿಸಿದೆ. ವಿಶೇಷವಾಗಿ, ಮಕ್ಕಳಿಗೆ ಕಷ್ಟಕರವೆನಿಸುವ ಗಣಿತವನ್ನು ಕಬ್ಬಿನ ಗಾಣದ ಬೆಲ್ಲದಂತೆ ಸಿಹಿಯಾಗಿ ಬೋಧಿಸುವಲ್ಲಿ ಅವರ ಕಾರ್ಯ ಶ್ಲಾಘನೀಯ. ವಿದ್ಯಾರ್ಥಿಗಳಿಗೆ ಅವರು ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದು, ಅವರಲ್ಲಿ ಅಪಾರ ಪ್ರೀತಿ ಮತ್ತು ಗೌರವವನ್ನು ಗಳಿಸಿದ್ದಾರೆ. IMG-20241013-203200 ಕೇವಲ ಶಿಕ್ಷಣದಲ್ಲೇ ಅವರ ಪ್ರತಿಭೆ ಸೀಮಿತವಾಗಿಲ್ಲ. ರವಿಕುಮಾರ ಅವರು ಉತ್ತಮ ಗಾಯಕರೂ ಆಗಿದ್ದು, ಎಲ್ಲಿಯೇ ಕವಿಗೋಷ್ಠಿ ನಡೆದರೂ ಅಲ್ಲಿ ಅವರ ಉಪಸ್ಥಿತಿ ಇರುತ್ತದೆ. ಅವರ ಬಹುಮುಖ ಪ್ರತಿಭೆಯು ಅವರನ್ನು ಮಕ್ಕಳಿಗೆ ಆದರ್ಶಪ್ರಾಯರನ್ನಾಗಿ ಮಾಡಿದೆ. ನಿಸ್ವಾರ್ಥ ಸೇವೆ ಮತ್ತು ವಿದ್ಯಾರ್ಥಿಗಳ ಬಗೆಗಿನ ಅಪಾರ ಪ್ರೀತಿಯಿಂದಾಗಿ ಅವರು ರಾಜ್ಯದ ಶೈಕ್ಷಣಿಕ ಕ್ಷೇತ್ರದಲ್ಲಿ ಅನನ್ಯ ಗುರುತಿನನ್ನು ಪಡೆದಿದ್ದಾರೆ. IMG-20241013-203145 ವಿದ್ಯಾರ್ಥಿಗಳು ಮತ್ತು ಶಿಕ್ಷಣ ಕ್ಷೇತ್ರದಲ್ಲಿನ ಅವರ ಕೊಡುಗೆಗಳನ್ನು ಗುರುತಿಸಿ, 2024-25ನೇ ಸಾಲಿನ 'ಶಿಕ್ಷಣ ರತ್ನ' ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿ ಪ್ರದಾನ ಸಮಾರಂಭವು ಇಂಡೋ ಗ್ಲೋಬ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಸಹಯೋಗದೊಂದಿಗೆ ಬೆಂಗಳೂರಿನ ಹುರುಳಿಚಿಕ್ಕನಹಳ್ಳಿ, ಚಿಕ್ಕಬಾಣಾವರದಲ್ಲಿ ಅಕ್ಟೋಬರ್ 15 ರಂದು ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸ್ಪಾರ್ಕ್ ಅಕಾಡೆಮಿ ಮತ್ತು ಸೂರ್ಯ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಪಿ. ಸೋಮೇಶ್ ಅವರು ರವಿಕುಮಾರ ಅವರಿಗೆ ಪ್ರಶಸ್ತಿ ಪ್ರದಾನಿಸಲಿದ್ದಾರೆ ಎಂದು ತಿಳಿದು ಬಂದಿದೆ. IMG-20241013-203133 ರವಿಕುಮಾರ ಅವರ ಈ ಸಾಧನೆಯು ಯಲ್ಲಾಪುರ ತಾಲೂಕು ಮತ್ತು ಉತ್ತರ ಕನ್ನಡ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಅಪಾರ ಕೊಡುಗೆಯನ್ನು ಗುರುತಿಸಿ, ಅವರನ್ನು ಅಭಿನಂದಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅವರ ಈ ಸಾಧನೆಯು ಭವಿಷ್ಯದ ಶಿಕ್ಷಕರಿಗೆ ಪ್ರೇರಣೆಯಾಗಲಿ ಎಂದು ಆಶಿಸೋಣ.

'ಗುರುಭೂಷಣ' ಪ್ರಶಸ್ತಿಗೆ ಆನಗೋಡ ಶಾಲೆಯ ಶಿಕ್ಷಕ ಮಾರುತಿ ಆಚಾರಿ ಆಯ್ಕೆ

IMG-20241013-195117 ಯಲ್ಲಾಪುರ : ತಾಲ್ಲೂಕಿನ ಆನಗೋಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಮಾರುತಿ ಆಚಾರಿ ಅವರು ರಾಜ್ಯ ಮಟ್ಟದ ಪ್ರತಿಭಾನ್ವಿತ ಹಾಗೂ ಕ್ರಿಯಾಶೀಲ ಶಿಕ್ಷಕರಿಗೆ ನೀಡಲಾಗುವ ಪ್ರತಿಷ್ಠಿತ 'ಗುರುಭೂಷಣ' ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೆಂಗಳೂರಿನ ಸೂರ್ಯ ಫೌಂಡೇಶನ್ ಹಾಗೂ ಸ್ಪಾರ್ಕ್ ಅಕಾಡೆಮಿ ಈ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಮಾರುತಿ ಆಚಾರಿ ಅವರು ಸಲ್ಲಿಸಿರುವ ಅಪಾರ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. IMG-20241013-195109 ಕಳೆದ 17 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಮಾರುತಿ ಆಚಾರಿ ಅವರು, ಸಿದ್ದಾಪುರದಲ್ಲಿ ಆರು ವರ್ಷಗಳ ಕಾಲ ಸಿಆರ್‌ಪಿಯಾಗಿ ಕಾರ್ಯನಿರ್ವಹಿಸಿದ ಅನುಭವವನ್ನು ಹೊಂದಿದ್ದಾರೆ. ಶಿಕ್ಷಣ ಇಲಾಖೆ ಆಯೋಜಿಸುವ ಆಶುಭಾಷಣ, ಚಿತ್ರಕಲೆ, ರಸಪ್ರಶ್ನೆ ಮುಂತಾದ ಸ್ಪರ್ಧೆಗಳಲ್ಲಿ ರಾಜ್ಯ ಮಟ್ಟಕ್ಕೆ ಪ್ರತಿನಿಧಿಸುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ತಮ್ಮ ಕಾರ್ಯಕ್ಷೇತ್ರದಲ್ಲಿನ ನವೀನತೆ ಮತ್ತು ಪ್ರಯೋಗಗಳಿಗೆ ಹೆಸರುವಾಸಿಯಾಗಿರುವ ಮಾರುತಿ ಆಚಾರಿ ಅವರು, ಆನಗೋಡ ಶಾಲೆಯಲ್ಲಿ ಖಗೋಲ ವಿಜ್ಞಾನ ಪ್ರಯೋಗಾಲಯವನ್ನು ಸ್ಥಾಪಿಸಿ, ಟೆಲಿಸ್ಕೋಪ್ ಮೂಲಕ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ತಾರಾಮಂಡಲ ಬಗ್ಗೆ ಮಾಹಿತಿ ನೀಡಿ, ವೈಜ್ಞಾನಿಕ ವಿಷಯಗಳ ಮೇಲೆ ಆಸಕ್ತಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. IMG-20241013-195059 IMG-20241013-195048 ಇದಲ್ಲದೆ, ಅನಗೋಡ ಶಾಲೆಯ ವಿದ್ಯಾರ್ಥಿನಿ ಸಂಜನಾ ಅವರನ್ನು 'ರಾಷ್ಟ್ರಮಟ್ಟದ ಇನಸ್ಪೈರ್ ಮಾನಕ' ವಿಜ್ಞಾನ ಮಾದರಿ ತಯಾರಿಕೆ ಸ್ಪರ್ಧೆಗೆ ಕರೆದೊಯ್ದ ಸಂದರ್ಭದಲ್ಲಿ, ಶಿರಸಿ ಶೈಕ್ಷಣಿಕ ಜಿಲ್ಲೆಯ ಆರು ವಿದ್ಯಾರ್ಥಿಗಳ ತಂಡದ ನೇತೃತ್ವ ವಹಿಸಿ ದೆಹಲಿಗೆ ಕರೆದುಕೊಂಡು ಹೋಗಿ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟು, ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಸ್ಪೂರ್ತಿಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. 
   ಅನಗೋಡ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಲಾದ ಇ - ಕಲಿಕಾ ಕೊಠಡಿಯ ಮೂಲಕ ವಿದ್ಯಾರ್ಥಿಗಳಲ್ಲಿ ಕಂಪ್ಯೂಟರ್ ಜ್ಞಾನವನ್ನು ಪ್ರಸರಿಸಲು ಕಾರಣರಾಗಿದ್ದಾರೆ. ಗಣಿತ ವಿಷಯದಲ್ಲಿ ತಮ್ಮ ಅಪಾರ ಜ್ಞಾನ ಮತ್ತು ಪ್ರತಿಭೆಯನ್ನು ಪ್ರದರ್ಶಿಸಿ, ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿ, ಜಿಲ್ಲಾ ಮಟ್ಟದ ಹಲವಾರು ಗಣಿತ ಶಿಕ್ಷಕರಿಗೆ ತರಬೇತಿ ನೀಡಿದ್ದಾರೆ. ರಾಜ್ಯಮಟ್ಟದ ಗಣಿತ ಅಭ್ಯಾಸ ಪುಸ್ತಕ ತಯಾರಿಕೆ ಕಾರ್ಯಗಾರದಲ್ಲಿ ಭಾಗವಹಿಸಿ, ತಮ್ಮ ಕೊಡುಗೆಯನ್ನು ನೀಡಿದ್ದಾರೆ. 
   ಮಾರುತಿ ಆಚಾರಿ ಅವರ ಈ ಎಲ್ಲ ಸಾಧನೆಗಳನ್ನು ಗುರುತಿಸಿ, ಅಕ್ಟೋಬರ್ 16 ರಂದು ಬೆಂಗಳೂರಿನ ಇಂಡೋಗ್ಲೋಬ್ ಪಿ.ಯು.ಕಾಲೇಜ್ ಆವರಣದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ, ಸೂರ್ಯ ಫೌಂಡೇಶನ್ ಹಾಗೂ ಸ್ಪಾರ್ಕ್ ಅಕಾಡೆಮಿ ಅವರು 'ಗುರುಭೂಷಣ' ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಿದ್ದಾರೆ. ಈ ಪ್ರಶಸ್ತಿಯು ಮಾರುತಿ ಆಚಾರಿ ಅವರ ಶಿಕ್ಷಣ ಕ್ಷೇತ್ರದಲ್ಲಿನ ಕೊಡುಗೆಗಳನ್ನು ಪ್ರತಿಬಿಂಬಿಸುತ್ತದೆ ಮತ್ತು ಭವಿಷ್ಯದಲ್ಲಿ ಹೆಚ್ಚಿನ ಸಾಧನೆ ಮಾಡಲು ಪ್ರೇರಣೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. 
   ಮಾರುತಿ ಆಚಾರಿ ಅವರ ಈ ಸಾಧನೆಗೆ ಯಲ್ಲಾಪುರ ತಾಲ್ಲೂಕು ಹಾಗೂ ಆನಗೋಡ ಪ್ರದೇಶದ ಜನರು ಹರ್ಷ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಅವರ ಕೊಡುಗೆಯನ್ನು ಶ್ಲಾಘಿಸುತ್ತಾ, ಭವಿಷ್ಯದಲ್ಲಿ ಇನ್ನಷ್ಟು ಸಾಧನೆ ಮಾಡಲು ಶುಭ ಹಾರೈಸುತ್ತಿದ್ದಾರೆ. ಈ ಸಾಧನೆ ಮುಂದಿನ ಪೀಳಿಗೆಯ ಶಿಕ್ಷಕರಿಗೆ ಸ್ಫೂರ್ತಿಯಾಗಲಿದೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಸುಧಾರಣೆಗಳಿಗೆ ದಾರಿ ಮಾಡಿಕೊಡಲಿದೆ ಎನ್ನುವುದರಲ್ಲಿ ಸಂಶಯವಿಲ್ಲ.

ಅಲ್ಕೇರಿ ಶಿಕ್ಷಕ ಗಂಗಾಧರ ಲಮಾಣಿಗೆ ಪ್ರತಿಷ್ಠಿತ 'ಶಿಕ್ಷಣ ಪ್ರಕಾಶ' ಪ್ರಶಸ್ತಿ

IMG-20241013-173046 ಯಲ್ಲಾಪುರ: ಶಿಕ್ಷಣ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆ ನೀಡಿದ ಶಿಕ್ಷಕರಿಗೆ ನೀಡಲಾಗುವ ಪ್ರತಿಷ್ಠಿತ 'ಶಿಕ್ಷಣ ಪ್ರಕಾಶ' ಪ್ರಶಸ್ತಿಗೆ ಈ ವರ್ಷ ಯಲ್ಲಾಪುರ ತಾಲೂಕಿನ ಅಲ್ಕೇರಿಯ ಶಿಕ್ಷಕ ಗಂಗಾಧರ ಲಮಾಣಿ ಅವರು ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಗಳಾದ 'ಸೂರ್ಯ ಫೌಂಡೇಶನ್' ಮತ್ತು 'ಸ್ಪಾರ್ಕ್ ಅಕಾಡೆಮಿ' ಜಂಟಿಯಾಗಿ ನೀಡುವ ಈ ರಾಜ್ಯಮಟ್ಟದ ಪ್ರಶಸ್ತಿಯು ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಶಿಕ್ಷಕರನ್ನು ಗುರುತಿಸಿ ಗೌರವಿಸುವ ಉದ್ದೇಶವನ್ನು ಹೊಂದಿದೆ. IMG-20241013-173023 ಗಂಗಾಧರ ಲಮಾಣಿ ಅವರು ಪ್ರಸ್ತುತ ಅಲ್ಕೇರಿ ಗೌಳಿವಾಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ತೆಂಗಿನಗೇರಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಅವಿರತ ಪರಿಶ್ರಮ, ಶಿಕ್ಷಣ ಕ್ಷೇತ್ರದಲ್ಲಿ ತೋರಿದ ಕ್ರಿಯಾಶೀಲತೆ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ನೀಡಿದ ಕೊಡುಗೆಯನ್ನು ಗುರುತಿಸಿ, ಶಿಕ್ಷಣ ಕ್ಷೇತ್ರದಲ್ಲಿ ದುಡಿಯುತ್ತಾ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸೂಕ್ತ ಮಾರ್ಗದರ್ಶನ ನೀಡುವುದು ಮತ್ತು ಶಾಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುವ ಗಂಗಾಧರ ಲಮಾಣಿಯವರ ಕಾರ್ಯವೈಖರಿಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಾಮಾಣಿಕತೆಯಿಂದ ಉತ್ತಮ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಪ್ರಶಸ್ತಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು ತಿಳಿಸಿದ್ದಾರೆ. 
   ಗಂಗಾಧರ ಲಮಾಣಿಯವರ ಶೈಕ್ಷಣಿಕ ಸೇವೆ ಮತ್ತು ವಿದ್ಯಾರ್ಥಿಗಳ ಬಗ್ಗೆ ಅವರು ಹೊಂದಿರುವ ಅಪಾರ ಪ್ರೀತಿ ಮತ್ತು ಕಾಳಜಿಯು ಇವರನ್ನು ಈ ಪ್ರಶಸ್ತಿಗೆ ಭಾಜನರಾಗುವಂತೆ ಮಾಡಿದೆ. ಅವರು ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಾ ವಿದ್ಯಾರ್ಥಿಗಳಲ್ಲಿ ಉತ್ತಮ ನೈತಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಹಾಗೂ ಅವರಲ್ಲಿ ಅಂತರ್ಗತವಾಗಿರುವ ಪ್ರತಿಭೆಯನ್ನು ಹೊರತರುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. 
   ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರಿನ "ಇಂಡೋ ಗ್ಲೋಬ್ ಆಫ್ ಇನ್ಸ್ಟಿಟ್ಯೂಷನ್" ನಲ್ಲಿ 2024-25ನೇ ಸಾಲಿನ "ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ" ನಡೆಯಲಿದೆ. ಅಕ್ಟೋಬರ್ 15, ಮಂಗಳವಾರದಂದು ಈ ಪ್ರಶಸ್ತಿಯನ್ನು ನೀಡಿ ಗಂಗಾಧರ ಲಮಾಣಿಯವರನ್ನು ಗೌರವಿಸಲಾಗುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ. 
    ಈ ಪ್ರಶಸ್ತಿಯು ಗಂಗಾಧರ ಲಮಾಣಿಯವರ ಕಾರ್ಯವೈಖರಿಗೆ ಸಿಕ್ಕಿರುವ ಒಂದು ಅಮೂಲ್ಯವಾದ ಗೌರವವಾಗಿದೆ. ಇದು ಒಬ್ಬ ಸಮರ್ಥ ಮತ್ತು ನಿಷ್ಠಾವಂತ ಶಿಕ್ಷಕನಾಗಿ ಅವರ ಕೆಲಸವನ್ನು ಪ್ರಶಂಸಿಸುವುದರ ಜೊತೆಗೆ, ಇತರ ಶಿಕ್ಷಕರಿಗೂ ಪ್ರೇರಣೆಯಾಗುವಂತಹದ್ದಾಗಿದೆ. ಗಂಗಾಧರ ಲಮಾಣಿಯವರ ಈ ಸಾಧನೆಗೆ ಯಲ್ಲಾಪುರ ತಾಲೂಕು ಹಾಗೂ ಅಲ್ಕೇರಿ ಗ್ರಾಮದ ಜನರು ಹೆಮ್ಮೆ ಪಡುತ್ತಿದ್ದಾರೆ. ಭವಿಷ್ಯದಲ್ಲಿಯೂ ಸಹ ಅವರು ಈ ರೀತಿಯ ಶೈಕ್ಷಣಿಕ ಸೇವೆಯನ್ನು ಮುಂದುವರೆಸಿ, ಸಮಾಜದ ಬೆಳವಣಿಗೆಗೆ ಕೊಡುಗೆ ನೀಡಲಿ ಎಂದು ಎಲ್ಲರೂ ಆಶಿಸುತ್ತಿದ್ದಾರೆ.
.

ಕರಡೊಳ್ಳಿ ಧನಗರ ಗೌಳಿ ಸಮುದಾಯದವರಿಂದ ವಿಜ್ರಂಭಣೆಯ ದಸರಾ ಹಬ್ಬ

IMG-20241013-153807 ಯಲ್ಲಾಪುರ : ತಾಲ್ಲೂಕಿನ ವಿವಿಧ ಭಾಗಗಳಲ್ಲಿ ದಟ್ಟ ಅರಣ್ಯದಲ್ಲಿ ವಾಸವಾಗಿರುವ ಹೈನುಗಾರಿಕೆಯನ್ನೇ ಮೂಲ ಕಸಬುನ್ನಾಗಿಸಿಕೊಂಡ ಧನಗರ ಗೌಳಿ ಸಮಾಜದ ದಸರಾ ಹಬ್ಬದ ಆಚರಣೆ ವಿಶೇಷವಾಗಿದೆ. ತಾಲ್ಲೂಕಿನ ಮದುನೂರು ಪಂಚಾಯತಿಯ ಗೊ-ಗ್ರಾಮ ಎಂದೇ ಖ್ಯಾತಿಯಾದ ಕರಡೊಳ್ಳಿ ಗ್ರಾಮದಲ್ಲಿ ಧನಗರ ಗೌಳಿ ಸಮುದಾಯದವರು ಶಾಸ್ತ್ರೋಕ್ತವಾಗಿ ವಿಜ್ರಂಭಣೆಯಿಂದ ಹಬ್ಬವನ್ನು ಆಚರಿಸಿದರು. IMG-20241013-153636 IMG-20241013-153606 ಘಟಸ್ಥಾಪನೆ, ಜಾಗರಣೆ, ಮನೆಯ ಹಾಗೂ ದೇವಸ್ಥಾನದ ಅಂಗಳದಲ್ಲಿ ಗಜಾ ಕುಣಿತ, ಮೈ ಮೇಲೆ ದೇವರು ಬರುವುದು, ಊರಿನ ಗಡಿಭಾಗದಲ್ಲಿ ಪೂರ್ವಜರ ಹೆಸರಿನಿಂದ ಇಟ್ಟಿರುವ ಕಲ್ಲಿನ ಪೂಜೆ, ಹಾಲು, ಮೊಸರು, ಬೆಣ್ಣೆ, ತುಪ್ಪ, ಬೆಲ್ಲ ಇವುಗಳ ಮಿಶ್ರಿತ ದೇವರ ಪ್ರಸಾದ ನೈವೇದ್ಯ ಹಾಗೂ ವಿತರಣೆ ಇವುಗಳು ಕರಡೊಳ್ಳಿ ದಸರಾ ಹಬ್ಬದ ಆಚರಣೆಯಲ್ಲಿ ಕಂಡುಬರುವ ವಿಶೇಷತೆಗಳಾಗಿದ್ದವು. IMG-20241013-153524 ಗ್ರಾಮದ ಧನಗರ ಗೌಳಿ ಸಮಾಜದ ಒಳಪಂಗಡಗಳಾದ ಶಿಂಧೆ, ಕಾಳೆ, ಜೋರೆ, ಕೋಕರೆ, ಪಟಕಾರೆ, ಮಿಸಳ್, ಶೇಳಕೆ ಮನೆತನದ ಎಲ್ಲಾ ಹಿರಿಯರು, IMG-20241013-153507 ತಾಯಂದಿರು, ಯುವಕರು, ಗ್ರಾಮದ ನಾಗರಿಕರು ಸೇರಿ ದಸರಾ ಹಬ್ಬದ ಎರಡನೇ ದಿನದಂದು (ಬಾಹೇರಲಾ ದಸರಾ) ದೇವಸ್ಥಾನದ ಅಂಗಳದಲ್ಲಿ ಸೇರಿ ದೇವರಲ್ಲಿ ಹರಕೆ ಹೊತ್ತು ಹಾಗೂ ಹಳೆಯ ಹರಕೆಯನ್ನು ತೀರಿಸಿ ಗ್ರಾಮದ ಯುವಕರೆಲ್ಲರೂ ಸೇರಿ ಗಜಾ ನ್ರತ್ಯವನ್ನು ಮಾಡಿ ಬಂದಂತಹ ಬೀಗರನ್ನು ಬನ್ನಿ ಗಿಡದ ಎಲೆಯನ್ನು ಕೊಟ್ಟು ಜೀವನ ಪೂರ್ತಿ ಬಂಗಾರದ ಹಾಗೆ ಬಾಳುವ ಎಂದು ಪರಸ್ಪರ ಆಲಂಗನ ಮಾಡಿ ಶುಭ ಕೋರಿದರು. IMG-20241013-153437 ಎಲ್ಲರನ್ನು ಚೆನ್ನಾಗಿ ಇಟ್ಟಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾ ವಿಜೃಂಭಣೆಯಿಂದ ಆಚರಿಸಲಾಯಿತು. ತಾಲ್ಲೂಕಿನ ಮದನೂರು ಪಂಚಾಯತಿಯ ಧನಗರ ಗೌಳಿ ವಾಡಾಗಳಾದ ಕರಡೊಳ್ಳಿ, ಬಸಳೆಬೈಲ್, ಡೊಮಗೇರಿ, ಜೋಗಿಕೊಪ್ಪ, ಹುಲಗೋಡ, ಖಂದ್ರನಕೊಪ್ಪ, ಮಾದೇವಕೊಪ್ಪ, ಮದನೂರು, ಅಲ್ಕೇರಿ ಹೀಗೆ ಮುಂತಾದ ಹಳ್ಳಿಗಳಲ್ಲಿ ಹಬ್ಬದ ವಾತಾವರಣ ಜೋರಾಗಿತ್ತು,

ಅಕ್ಟೋಬರ್ 26 ರಂದು ಕರಡೊಳ್ಳಿಯಲ್ಲಿ 60 ಕೆ.ಜಿ ಬಾಲಕರ ಕಬ್ಬಡ್ಡಿ ಪಂದ್ಯಾವಳಿ

IMG-20241013-150406 ಯಲ್ಲಾಪುರ : ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಮದನೂರು ಪಂಚಾಯತ ವ್ಯಾಪ್ತಿಯ ಕರಡೊಳ್ಳಿ ಗ್ರಾಮದ ಗುರು ಹಿರಿಯರ ಮಾರ್ಗದರ್ಶನದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಅಕ್ಟೋಬರ್ 26ರ ಶನಿವಾರ ರಂದು 60 ಕೆ.ಜಿ ವಿಭಾಗದ ಬಾಲಕರ ಕಬ್ಬಡ್ಡಿ ಪಂದ್ಯಾವಳಿಯನ್ನು ಏರ್ಪಡಿಸಿದ್ದಾರೆ. IMG-20241013-150207 ಪ್ರಥಮ ಬಹುಮಾನ ನಗದು 10,000 ರೂ. (ಪ್ರಾಯೋಜಕರು ಸಮಾಜದ ಹಿರಿಯರು ಹಾಗೂ ಸಿವಿಲ್ ಗುತ್ತಿಗೆದಾರರಾದ ವಿಠ್ಠಲ್  ಜೆ ಪಾಂಡರಮಿಸೆ ) ದ್ವಿತೀಯ ಬಹುಮಾನ ನಗದು 7,000 ರೂ (ಪ್ರಾಯೋಜಕರು ಮದನೂರು ಗ್ರಾ ಪಂ ಅಧ್ಯಕ್ಷ ರಾಜೇಶ್ ತಿನೇಕರ), ತೃತೀಯ ಬಹುಮಾನ ನಗದು 5000 ರೂ. (ಪ್ರಾಯೋಜಕರು ಮದನೂರು ಗ್ರಾ ಪಂ ಉಪಾಧ್ಯಕ್ಷೆ ದೀಪಾ ಧೂಳು ಶಿಂಧೆ) ಚತುರ್ಥ ಬಹುಮಾನ ನಗದು 3000 (ಪ್ರಾಯೋಜಕರು ಶ್ರೀ ಗ್ರಾಮದೇವಿ ವಿವಿಧೋದ್ದೇಶ ಗ್ರಾಮೀಣ ಕೃಷಿ ಸಹಕಾರ ಸಂಘ ನೀ. ಮದನೂರು ಅಧ್ಯಕ್ಷ ಮಹೇಶ ದೇಸಾಯಿ,)   IMG-20241013-150253 ಟ್ರೋಫಿ ಪ್ರಾಯೋಜಕರು ಪ್ರಥಮ ಸುಬ್ರಾಯ್ ವಿ ಪೈ (ಸೀನಿಯರ್ ಮ್ಯಾನೇಜರ್ ಸೇಫ್ ಸ್ಟಾರ್ ಬ್ಯಾಂಕ ಯಲ್ಲಾಪುರ ಶಾಖೆ ), ದ್ವಿತೀಯ ವಿಟ್ಟು ಶೇಳಕೆ (ಸದಸ್ಯರು ಗ್ರಾ ಪಂ ಮದನೂರು) ತೃತೀಯ ಪ್ರಭಾ ನಾಯ್ಕ (ಸದಸ್ಯರು ಗ್ರಾ ಪಂ ಮದನೂರು) ಚತುರ್ಥ ನವಲು ಶ್ಯಾಮು ಜೋರೆ ಕ್ಯಾಟರಿಂಗ್ ಮಾಲಿಕರು ಕರಡೊಳ್ಳಿ)‌.ಆಗಿದ್ದಾರೆ. IMG-20241013-143309 ಒಂದು ತಂಡದ ಆಟಗಾರರು ಒಂದೇ ಊರಿನವರಾಗಿರಬೇಕು, ಆಧಾರ್ ಕಾರ್ಡ್ ಕಡ್ಡಾಯ. ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಹೆಚ್ಚಿನ ತಂಡಗಳು ಭಾಗವಹಿಸಬೇಕು ಎಂದು ಕರಡೊಳ್ಳಿ ಗ್ರಾಮದ ಯುವ ಮುಖಂಡ ಲಕ್ಷ್ಮಣ ಕೋಕರೆ ತಿಳಿಸಿದ್ದಾರೆ.
  ಸಂಪರ್ಕಿಸಿ : ಲಕ್ಷ್ಮಣ ಕೋಕರೆ (9880892983), ಶ್ಯಾಮ ಶಿಂಧೆ (7483197907), 

ಯಲ್ಲಾಪುರದಲ್ಲಿ ಚೆಸ್ ಟೂರ್ನಾಮೆಂಟ್ , ಸಾದಕರಿಗೆ, ವಿದ್ಯುತ್ ಲೈನ್‌ಮನ್‌ಗಳಿಗೆ ಸನ್ಮಾನ: ಶಾಸಕ ಶಿವರಾಮ ಹೆಬ್ಬಾರ್ ಪ್ರಶಂಸೆ

IMG-20241013-140816 ಯಲ್ಲಾಪುರ: ಸಮಾಜದಲ್ಲಿ ಹಣ ಮಾಡುವುದಕ್ಕಾಗಿ ಅನೇಕ ಸಂಘಟನೆಗಳು ಹುಟ್ಟಿಕೊಳ್ಳುತ್ತವೆ. ಆದರೆ ತಾವು ದುಡಿದ ಹಣವನ್ನು ಸಮಾಜದ ಒಳಿತಿಗಾಗಿ ಖರ್ಚು ಮಾಡುವುದು ಬಹಳ ಕಡಿಮೆ. ಯಾವಾಗಲೂ ಸನ್ಮಾನವೇ ಕಾಣದಂತಹ ವಿದ್ಯುತ್ ಲೈನ್‌ಮನ್‌ಗಳನ್ನು ಸನ್ಮಾನಿಸಿರುವುದು ಒಳ್ಳೆಯ ಬೆಳವಣಿಗೆ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು. IMG-20241013-140806 ಅವರು, ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ (ಕರಾಅಪವಿಗು ಸಂಘ ಯಲ್ಲಾಪುರ) ತಾಲೂಕು ಸಮಿತಿ, ಪಟ್ಟಣದ ಎಪಿಎಂಸಿ ಯಾರ್ಡ್ ರೈತ ಸಭಾಭವನದಲ್ಲಿ ಅಕ್ಟೋಬರ್ 13ರಂದು ಹಮ್ಮಿಕೊಂಡ ಎರಡನೇ ವರ್ಷದ 'ಒಪನ್ ರಾಪಿಡ್ ಚೆಸ್ ಟೂರ್ನಮೆಂಟ್' ಉದ್ಘಾಟಿಸಿ ಮಾತನಾಡಿದರು. IMG-20241013-140752 ಯಲ್ಲಾಪುರಕ್ಕೆ ಒಳ್ಳೆಯ ಕೆಲಸ ಮಾಡಿರುವ ಕೀರ್ತಿ ಪ್ರಕಾಶ ಮಾಲಶೇಟ್ ಅವರಿಗೆ ಸಲ್ಲುತ್ತದೆ ಎಂದು ಹೇಳಿದ ಅವರು, ಯಲ್ಲಾಪುರದಲ್ಲಿ ತಾಲೂಕು ಕ್ರೀಡಾಂಗಣ ನಿರ್ಮಾಣಕ್ಕೆ ಕಾರಣರಾಗಿದ್ದಾರೆ ಎಂದರು. ವೈಯಕ್ತಿಕ ದ್ವೇಷ ಕಟ್ಟಿಕೊಂಡು ಕೂಡ ಮೈದಾನದ ಅತಿಕ್ರಮಣ ತೆರವುಗೊಳಿಸಿ ಮೈದಾನ ನಿರ್ಮಾಣ ಮಾಡಿಸಿದ್ದಾರೆ. ಇಂದಿನ ಕ್ರೀಡಾಪಟುಗಳು, ಯುವಕರು ಮೈದಾನದ ಪ್ರಯೋಜನ ಪಡೆಯುತ್ತಿದ್ದರೆ ಅದು ಪ್ರಕಾಶ ಮಾಲಶೇಟ್ ಹೋರಾಟದ ಫಲ ಎಂದು ಹೇಳಿದರು. 
   ಸನ್ಮಾನಿತರಾದ ಶಿವರಾಮ ಹೆಗಡೆ ಪಾರದರ್ಶಕವಾಗಿ ಕೆಲಸ ಮಾಡಿದವರು, ಅನು ಕಾಮತ ಅವರು ಯಲ್ಲಾಪುರಕ್ಕೆ ಕೀರ್ತಿ ತಂದ ಅಂತರಾಷ್ಟ್ರೀಯ ಮಟ್ಟದ ವಾಲಿಬಾಲ್ ಆಟಗಾರರಾಗಿ ಗುರುತಿಸಿಕೊಂಡಿದ್ದಾರೆ ಎಂದು ಹೇಳಿದರು. ಪ್ರಕಾಶ ಮಾಲಶೇಟ್ ಅವರಿಗೆ ಬಲಗೈ ಆಗಿ ಸುರೇಶ ಪೈ ಕೆಲಸ ಮಾಡಿ ಯಲ್ಲಾಪುರ ಪಟ್ಟಣಕ್ಕೆ ಗೌರವ ತರುವ ಕೆಲಸ ಮಾಡಿದ್ದಾರೆ ಎಂದು ಪ್ರಶಂಸಿಸಿದರು. IMG-20241013-140739 ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಹೆಸ್ಕಾಂ ಲೈನ್‌ಮನ್‌ಗಳು ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಾರೆ ಎಂದರು. ತಮ್ಮ ಹಾಗೂ ಮಾಲಶೇಟ್ ಶಾಲೆಯ ಸಹಪಾಠಿ ಲೈನ್‌ಮನ್ ಕರ್ತವ್ಯ ನಿರ್ವಹಣೆಯಲ್ಲಿ ವಿದ್ಯುತ್ ಅಘಾತದಲ್ಲಿ ಮೃತಪಟ್ಟಿರುವುದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡರು. ಕಾಳಮ್ಮನಗರ ಮೈದಾನಕ್ಕೆ ಅವಕಾಶ ಸಿಕ್ಕರೆ ಪ್ರಕಾಶ ಮಾಲಶೇಟ್ ಅವರ ಹೆಸರು ಇಡುವುದಾಗಿ ತಿಳಿಸಿದರು. IMG-20241013-140643 ಕರಾಅಪವಿಗು ಸಂಘದ ಯಲ್ಲಾಪುರ ಘಟಕ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾಸ್ತಾವಿಕ ಮಾತನಾಡಿ, ಅಭಿವೃದ್ಧಿ ಮಾಡುವ ಒಳ್ಳೆಯ ಶಾಸಕರು ನಮಗೆ ಸಿಕ್ಕಿದ್ದಾರೆ ಎಂದರು. ಆ ಕಾಲದಲ್ಲಿನ ಪ್ರಕಾಶ ಮಾಲಶೇಟ್ ಅವಧಿಯಲ್ಲಿ ಶಿವರಾಮ ಹೆಬ್ಬಾರ್ ಶಾಸಕರಾಗಿರಬೇಕಿತ್ತು, ಆಗ ಯಲ್ಲಾಪುರ ಇನ್ನಷ್ಟು ಪ್ರಗತಿ ಹೊಂದುತ್ತಿತ್ತು ಎಂದು ಅಭಿಪ್ರಾಯಪಟ್ಟರು. IMG-20241013-140702 IMG-20241013-140722 ಈ ಸಂದರ್ಭದಲ್ಲಿ, ಯಲ್ಲಾಪುರದ ಸ್ಪೋರ್ಟ್ಸ್ ಕ್ಲಬ್‌ನ ಪ್ರಕಾಶ್ ಮಾಲಶೇಟ, ಸುರೇಶ ಪೈ, ಸಾಮಾಜಿಕ ಕಾರ್ಯಕರ್ತ ಶಿವರಾಮ ಹೆಗಡೆ, ಅಂತರಾಷ್ಟ್ರೀಯ ವಾಲಿಬಾಲ್ ಆಟಗಾರ ಅನು ಕಾಮತ್ ಅವರಿಗೆ ನಾಗರಿಕ ಸನ್ಮಾನ ಹಾಗೂ ಹೆಸ್ಕಾಂ ಕಾರ್ಯನಿರತ ಪವರ್ ಮ್ಯಾನ್‌ಗಳು ಮತ್ತು ವರ್ಗಾವಣೆಗೊಂಡ ಹೆಸ್ಕಾಂ ಅಧಿಕಾರಿಗಳಿಗೆ ವೃತ್ತಿ ಸನ್ಮಾನ ನೀಡಲಾಯಿತು. 
    ಸನ್ಮಾನಿತರ ಪರವಾಗಿ ಪ್ರಕಾಶ ಮಾಲಶೇಟ್ ಮಾತನಾಡಿ ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು. IMG-20241013-141811 ಇದೆ ಸಂದರ್ಭದಲ್ಲಿ ಶಿವರಾಮ ಹೆಬ್ಬಾರ್, ಪ್ರಮೋದ ಹೆಗಡೆ, ವಿಜಯ ಮಿರಾಶಿ ಹಾಗೂ ದಾಂಡೇಲಿ ಹೆಸ್ಕಾಂ ಅಧಿಕಾರಿ ಮಲ್ಯಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 
    ರಾಜ್ಯ ಚದುರಂಗ ಕಾರ್ಯದರ್ಶಿ ನವೀನ ಶ್ರೀನಿವಾಸ ಹೆಗಡೆ, ಹೆಸ್ಕಾಂ ನೌಕರರ ಸಂಘದ ಶೇಖರಪ್ಪ ಯೆರಗೇರಿ, ಜಿ.ಪಂ ಮಾಜಿ ಸದಸ್ಯ ವಿಜಯ ಮಿರಾಶಿ, ಅಂತರಾಷ್ಟ್ರೀಯ ಚೆಸ್ ಆಟಗಾರ ರಾಮಚಂದ್ರ ಭಟ್ ವೇದಿಕೆಯಲ್ಲಿದ್ದರು. IMG-20241013-140628 ಕು.ಸನ್ನಿದಿ‌ ಭಾಗ್ವತ ಗುಂಡ್ಕಲ್ ಪ್ರಾರ್ಥಿಸಿದರು. ಶಿಕ್ಷಕ ಸಂಜೀವ ಹೊಸ್ಕೇರಿ ನಿರೂಪಿಸಿ, ಕೊನೆಯಲ್ಲಿ ವಂದಿಸಿದರು. ಚೆಸ್ ಆಟದಲ್ಲಿ ಜಿಲ್ಲೆಯ ಬೇರೆ ಬೇರೆ ಭಾಗದ 158 ಮಕ್ಕಳು ಭಾಗವಹಿಸಿದ್ದರು.

ಯಲ್ಲಾಪುರದಲ್ಲಿ ರಾಮಭಕ್ತ ಬಳಗಕ್ಕೆ ಗ್ರಾಮದೇವಿ ಸಾನಿದ್ಯದಲ್ಲಿ ಗೌರವ ಸನ್ಮಾನ

IMG-20241013-111414 ಯಲ್ಲಾಪುರ: ಪಟ್ಟಣದ ಮಂಜುನಾಥ ನಗರದ ರಾಮಭಕ್ತ ಬಳಗ ಭಜನಾ ತಂಡಕ್ಕೆ, ಯಲ್ಲಾಪುರದ ಶಕ್ತಿ ಪೀಠ ಗ್ರಾಮದೇವಿ ಸಾನ್ನಿಧ್ಯದಲ್ಲಿ ಭಜನಾ ಸೇವೆಗೆ ಅವಕಾಶ ಕಲ್ಪಿಸಿ ಗೌರವ ಸಲ್ಲಿಕೆಯಾಯಿತು. 
   ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠೆ ನೆರವೇರಿದ ದಿನದಿಂದ, ಪ್ರತಿ ಶನಿವಾರ ಮಂಜುನಾಥ ನಗರದ ಸಾರ್ವಜನಿಕ ಗಜಾನನೋತ್ಸವ ಸಮಿತಿಯ ಗಣೇಶ ಮೂರ್ತಿ ಪ್ರತಿಷ್ಠಾಪನಾ ಸ್ಥಳದಲ್ಲಿ ಒಂದು ಗಂಟೆಗಳ ಕಾಲ ಭಜನೆ ಸಲ್ಲಿಸುತ್ತ ಬಂದಿದೆ. ಈ ಮೂಲಕ ಧರ್ಮ ಜಾಗೃತಿ ಕಾರ್ಯ ನಿರಂತರವಾಗಿ ನಡೆಸಲಾಗುತ್ತಿದೆ. IMG-20241013-111407 ಇಂದಿನ ಯುವ ಪೀಳಿಗೆ ಕೇವಲ ಮೊಬೈಲ್ ಅನ್ನೇ ತಮ್ಮ ಪ್ರಪಂಚವೆಂದು ಭಾವಿಸಿರುವ ಸಂದರ್ಭದಲ್ಲಿ, ಅವರಲ್ಲಿ ಆಧ್ಯಾತ್ಮಿಕ ಪ್ರಜ್ಞೆ ಮೂಡಿಸುವ ಈ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭದ್ರಗಿರಿ ಅಚ್ಚುತ ದಾಸರ ಶಿಷ್ಯರಾದ ನಾರಾಯಣ ದಾಸರು ಭಜನಾ ತಂಡಕ್ಕೆ ಸ್ವಇಚ್ಛೆಯಿಂದ ತಾಳಗಳನ್ನು ನೀಡಿ ಆಶೀರ್ವದಿಸಿದ್ದಾರೆ. 
    ಇತ್ತೀಚೆಗೆ ನವರಾತ್ರಿ ಉತ್ಸವ ನಿಮಿತ್ತ ಯಲ್ಲಾಪುರ ಗ್ರಾಮದೇವಿ ಸಾನ್ನಿಧ್ಯದಲ್ಲಿ ನಾರಾಯಣ ದಾಸರು ಹರಿಕೀರ್ತನೆ ಸೇವೆ ಸಲ್ಲಿಸುತ್ತಿದ್ದಾರೆ. ನಿರಂತರ ಭಜನೆಯೊಂದಿಗೆ ಧರ್ಮ ಜಾಗೃತಿ ಕಾರ್ಯ ಮಾಡುತ್ತಿರುವ ಈ ತಂಡಕ್ಕೆ ಗೌರವ ಸೂಚಕವಾಗಿ ಭಜನೆಗೆ ಅವಕಾಶ ಕಲ್ಪಿಸಲಾಗಿದೆ. 
   ಈ ಸಂದರ್ಭದಲ್ಲಿ ಭಜನಾ ತಂಡದ 32 ಮಂದಿ ಸದಸ್ಯರಿಗೆ ಶಾಲು ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮವು ಸ್ಥಳೀಯ ಸಮುದಾಯದಲ್ಲಿ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಉತ್ತೇಜಿಸುವ ಪ್ರಯತ್ನವಾಗಿದೆ. 
    ಈ ರೀತಿಯ ಕಾರ್ಯಕ್ರಮಗಳು ಸಮುದಾಯದಲ್ಲಿ ಸಾಮರಸ್ಯ ಮತ್ತು ಐಕ್ಯತೆಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇದರಿಂದ ಯುವ ಪೀಳಿಗೆಯಲ್ಲಿ ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಅರಿವು ಮೂಡಿಸಲು ಸಹಾಯವಾಗುತ್ತದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
.

ಸಿದ್ದಾಪುರದಲ್ಲಿ ಭಾರೀ ಮಳೆ: ರೈತರಿಗೆ ಅಪಾರ ಹಾನಿ

IMG-20241013-101811 ಯಲ್ಲಾಪುರ /ಸಿದ್ದಾಪುರ: ಸಿದ್ದಾಪುರ ತಾಲೂಕಿನಾದ್ಯಂತ ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದ ರೈತರಿಗೆ ಅಪಾರ ಹಾನಿಯಾಗಿದೆ. ವಿಶೇಷವಾಗಿ ಹಾರ್ಸಿಕಟ್ಟಾ ಗ್ರಾಮದಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು, ತೋಟ ಮತ್ತು ಗದ್ದೆಗಳಿಗೆ ಹಾಕಿದ್ದ ಗೊಬ್ಬರ ತೊಳೆದುಕೊಂಡು ಹೋಗಿದೆ. 
   ಈ ಅನಿರೀಕ್ಷಿತ ಮಳೆಯಿಂದ ಬೆಳೆದು ನಿಂತಿದ್ದ ಭತ್ತದ ಫಸಲಿನ ಮೇಲೆ ಗಂಭೀರ ಪರಿಣಾಮ ಬೀರಿದೆ. ಹಾನಿಯ ನಿಖರ ಪ್ರಮಾಣ ಇನ್ನೂ ತಿಳಿದುಬಂದಿಲ್ಲವಾದರೂ, ಸ್ಥಳೀಯರ ಪ್ರಕಾರ ಅಪಾರ ಹಾನಿಯಾಗಿದೆ ಎಂಬುದು ಸ್ಪಷ್ಟವಾಗಿದೆ. IMG-20241013-100710 ರೈತರು ತಮ್ಮ ಬೆಳೆಗಳಿಗಾಗಿ ಹಾಕಿದ್ದ ಗೊಬ್ಬರ ಮತ್ತು ರಾಸಾಯನಿಕಗಳು ಮಳೆಯಿಂದ ತೊಳೆದುಕೊಂಡು ಹೋಗಿರುವುದರಿಂದ ಆರ್ಥಿಕ ನಷ್ಟವೂ ಸಂಭವಿಸಿದೆ. ಇದರಿಂದ ಮುಂಬರುವ ದಿನಗಳಲ್ಲಿ ಬೆಳೆಗಳ ಉತ್ಪಾದನೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ. 
    ಭತ್ತದ ಬೆಳೆಯು ವಿಶೇಷವಾಗಿ ಹಾನಿಗೊಳಗಾಗಿದೆ. ಬೆಳೆದು ನಿಂತಿದ್ದ ಭತ್ತದ ಗಿಡಗಳು ಮಳೆಯ ಹೊಡೆತಕ್ಕೆ ಸಿಲುಕಿ ನೆಲಕ್ಕುರುಳಿವೆ. ಇದರಿಂದ ಈ ವರ್ಷ ತಾಲೂಕಿನ ಭತ್ತದ ಉತ್ಪಾದನೆಯಲ್ಲಿ ಗಣನೀಯ ಇಳಿಕೆ ಕಂಡುಬರಬಹುದು ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ. IMG-20241013-100636 ಆದರೆ, ಈ ಭಾರೀ ಮಳೆಯಿಂದ ಯಾವುದೇ ಮನೆ ಕುಸಿತ, ಜೀವಹಾನಿ, ಜಾನುವಾರುಗಳ ಹಾನಿಯ ಬಗ್ಗೆ ಯಾವುದೇ ವರದಿಗಳು ಬಂದಿಲ್ಲ ಎಂಬುದು ಒಂದು ಸಮಾಧಾನದ ಅಂಶವಾಗಿದೆ. ಆದರೂ, ಸ್ಥಳೀಯ ಆಡಳಿತ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.