ಯಲ್ಲಾಪುರ: ತಾಲೂಕಿನ ಅಲ್ಕೇರಿಯ ಶಿಕ್ಷಕ ಗಂಗಾಧರ ಲಮಾಣಿ ಅವರಿಗೆ ‘ಸೂರ್ಯ ಫೌಂಡೇಶನ್’ ಮತ್ತು ‘ಸ್ಪಾರ್ಕ್ ಅಕಾಡೆಮಿ’ ಸಂಸ್ಥೆಗಳು ಜಂಟಿಯಾಗಿ ನೀಡುವ ಪ್ರತಿಷ್ಠಿತ ‘ಶಿಕ್ಷಣ ಪ್ರಕಾಶ’ ಪ್ರಶಸ್ತಿ ದೊರೆತಿದೆ. ಈ ರಾಜ್ಯಮಟ್ಟದ ಪ್ರಶಸ್ತಿಯು ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಶಿಕ್ಷಕರನ್ನು ಗೌರವಿಸುವ ಉದ್ದೇಶ ಹೊಂದಿದೆ.
ಗಂಗಾಧರ ಲಮಾಣಿ ಅವರು ತಮಗೆ ದೊರೆತಿರುವ ಈ ಪ್ರಶಸ್ತಿಯನ್ನು ಅಲ್ಕೇರಿ ಹಾಗೂ ತೆಂಗಿನಗೇರಿ ಶಾಲೆಯ ವಿದ್ಯಾರ್ಥಿಗಳಿಗೆ, ಇದೇ ಊರಿನ ನಾಗರಿಕರಿಗೆ ಹಾಗೂ ಪಾಲಕರಿಗೆ ಅರ್ಪಿಸಿದ್ದಾರೆ ಎಂದು ತಿಳಿಸಿದ್ದಾರೆ. ಅವರ ಈ ಸಾಧನೆಗೆ ಯಲ್ಲಾಪುರ ತಾಲೂಕು ಹಾಗೂ ಅಲ್ಕೇರಿ ಮತ್ತು ತೆಂಗಿನಗೇರಿ ಗ್ರಾಮದ ಜನರು ಹೆಮ್ಮೆ ಪಡುತ್ತಿದ್ದಾರೆ.
ಪ್ರಶಸ್ತಿ ಪತ್ರ ವಿತರಣಾ ಸಮಾರಂಭದಲ್ಲಿ ಇಂಡೊಗ್ಲೋಬ್ ಇನ್ ಸ್ಟಿಟ್ಯೂಷನ್ಸ್, ಬೆಂಗಳೂರಿನ ಸಂಸ್ಥಾಪಕ ಬಿ.ಎಂ. ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಮಾರಂಭದಲ್ಲಿ ಮೈಸೂರು ಎಎಂಸಿಎಡಿ ಸೆಂಟರ್ ಆಫ್ ಎಕ್ಸಲೆನ್ಸ್, ಅಂತರಾಷ್ಟ್ರೀಯ ಜೀವನ ಕೌಶಲ್ಯ ತರಬೇತುದಾರ ಚೇತನ್‌ರಾಮ್ ಆರ್.ಎ, ಇಂಡೋಗ್ಲೋಬ್ ಇನ್ಸಿಟ್ಯೂಷನ್ಸ್ ಬೆಂಗಳೂರಿನ ಕಾರ್ಯದರ್ಶಿ ಸಂಗೀತಾ ಎಸ್. ಬಿ, ಸುವರ್ಣ ಕರ್ನಾಟಕ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಸಂಪಾದಕ ಗಂಡಸಿ ಸದಾನಂದಸ್ವಾಮಿ, ನವೋದಯ ಸಂಸ್ಥಾಪಕರು, ಸೂರ್ಯ ಫೌಂಡೇಶನ್ ಮತ್ತು ಸ್ಪಾರ್ಕ್ ಅಕಾಡೆಮಿ ಅಧ್ಯಕ್ಷ ಹಾಗೂ ಬೆಂಗಳೂರಿನ ಶಿಕ್ಷಣ ಸೌರಭ ಪತ್ರಿಕೆ ಸಂಪಾದಕ ಸೋಮೇಶ್, ಎಜಿಎಸ್ ಕಾರ್ಟ್ ಪ್ರೈ ಲಿ ಸಂಸ್ಥಾಪಕ ವಿನಯ್ ಕುಮಾರ್, ಎಜಿಎಸ್ ಕಾರ್ಟ್ ಪ್ರೈ ಲಿ ಸಂಸ್ಥಾಪಕ ದಿಲೀಪ್ ಕುಮಾರ್, ವೃದ್ಧಿ ಲರ್ನಿಂಗ್ ಎಕ್ಸ್‌ಚೇಂಜ್ ಬಿಸಿನೆಸ್ ಕೋಚ್ ಸಂದೀಪ್ ವಿಜಯನ್, ಕೊಪ್ಪ ಶಾಲಾ ಶಿಕ್ಷಣ ಇಲಾಖೆ ಸಂಪನ್ಮೂಲ ವ್ಯಕ್ತಿ ಆರ್.ಡಿ. ರವೀಂದ್ರ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಪ್ರಶಸ್ತಿ ಪ್ರಧಾನ ಮಾಡಿದರು.
ಗಂಗಾಧರ ಲಮಾಣಿ ಅವರು ಅಲ್ಕೇರಿ ಹಾಗೂ ತೆಂಗಿನಗೇರಿಯ ಸರ್ಕಾರಿ ಶಾಲೆಗಳ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಅವಿರತ ಪರಿಶ್ರಮ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ನೀಡಿದ ಕೊಡುಗೆ ಮತ್ತು ಶಾಲೆಯ ಅಭಿವೃದ್ಧಿಗೆ ನೀಡಿರುವ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಗಂಗಾಧರ ಲಮಾಣಿಯವರ ಶೈಕ್ಷಣಿಕ ಸೇವೆ ಮತ್ತು ವಿದ್ಯಾರ್ಥಿಗಳ ಬಗ್ಗೆ ಅವರು ಹೊಂದಿರುವ ಅಪಾರ ಪ್ರೀತಿಯು ಅವರನ್ನು ಈ ಗೌರವಕ್ಕೆ ಭಾಜನರಾಗುವಂತೆ ಮಾಡಿದೆ. ಅವರು ವಿದ್ಯಾರ್ಥಿಗಳಲ್ಲಿ ಉತ್ತಮ ನೈತಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಮತ್ತು ಅವರ ಪ್ರತಿಭೆಯನ್ನು ಹೊರತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕಲಿಕಾ ಭೋದನೆಯಲ್ಲಿ ಸದಾ ಹೋಸತನ. ನಾವಿನ್ಯಯುತ ಚಟುವಟಿಕೆಯಲ್ಲಿ ತೋಡಗಿಸಿಕೊಳ್ಳುತ್ತಾರೆ. ಬಹಳಷ್ಟು ವಿಷಯ ಗ್ರಹಿಸಿ ಮಕ್ಕಳಿಗೆ ತಿಳಿಸುತ್ತಾರೆ. ಕಲಿಕಾ ಭೋದನೆಯಲ್ಲಿ ಸದಾ ಹೋಸತನ. ನಾವಿನ್ಯಯುತ ಚಟುವಟಿಕೆಯಲ್ಲಿ ತೋಡಗೀಸಿಕೊಳ್ಳುತ್ತಾರೆ
ಶಿಕ್ಷಣ ಕ್ಷೇತ್ರದಲ್ಲಿ ಅವರು ಮಾಡಿರುವ ಸೇವೆ ಮತ್ತು ವಿದ್ಯಾರ್ಥಿಗಳ ಮೇಲಿನ ಅಪಾರ ಪ್ರೀತಿಯನ್ನು ಗಮನಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಗಂಗಾಧರ ಲಮಾಣಿ ಅವರು ಸರ್ಕಾರಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಸಹ, ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಅನೇಕ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವನ್ನು ರೂಪಿಸಲು ಸಹಾಯ ಮಾಡಿದ್ದಾರೆ. ಶಿಕ್ಷಕರಾಗಿ, ಅವರು ಕೇವಲ ಪಠ್ಯ ಪುಸ್ತಕಗಳನ್ನು ಓದಿಸುವುದಷ್ಟೇ ಅಲ್ಲದೇ, ಶಾಲೆಯ ಕಟ್ಟಡಗಳು, ಹೊರಾಂಗಣ ಬೆಲವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳು ಉತ್ತಮ ನಾಗರಿಕರಾಗಿ ಬೆಳೆಯಲು ಸಾಧ್ಯವಾಗುತ್ತಿದೆ.
ಶಿಕ್ಷಕರು ಸಮಾಜದಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಅವರು ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ, ಸಮಾಜಕ್ಕೂ ಪ್ರೇರಣೆಯಾಗಿರುತ್ತಾರೆ. ಗಂಗಾಧರ ಲಮಾಣಿ ಅವರಂತಹ ಶಿಕ್ಷಕರು ನಮ್ಮ ಸಮಾಜಕ್ಕೆ ಆದರ್ಶವಾಗಿರುತ್ತಾರೆ. ಅವರ ಶಿಕ್ಷಣ ಕ್ಷೇತ್ರದ ಸೇವೆಯನ್ನು ಗುರುತಿಸಿ ‘ಶಿಕ್ಷಣ ಪ್ರಕಾಶ’ ಪ್ರಶಸ್ತಿ ನೀಡಲಾಗಿದ್ದು, ಇದು ನಿಜಕ್ಕೂ ಸಂತೋಷದ ವಿಷಯ. ಶಿಕ್ಷಣ ಕ್ಷೇತ್ರದಲ್ಲಿ ಇಂತಹ ಅನೇಕ ಶಿಕ್ಷಕರು ಇದ್ದಾರೆ ಎಂಬುದನ್ನು ನಾವು ಮರೆಯಬಾರದು. ಅವರನ್ನು ಪ್ರೋತ್ಸಾಹಿಸುವುದು ಮತ್ತು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಗಂಗಾಧರ ಲಮಾಣಿ ಅವರ ಈ ಸಾಧನೆಯು ಯುವಜನರಿಗೆ ಮತ್ತು ಶಿಕ್ಷಕರಿಗೆ ಪ್ರೇರಣೆಯಾಗಲಿ ಎಂದು ನಾವು ಆಶಿಸುತ್ತೇವೆ. ಶಿಕ್ಷಣ ಕ್ಷೇತ್ರದಲ್ಲಿ ಅವರ ಸೇವೆ ಮುಂದುವರಿಯಲಿ ಎಂದು ಹಾರೈಸುತ್ತೇವೆ.