Adv

news21 ‌ ‌YELLAPURNews prakatane --------- ‌ ‌patanakaroct10to17pydkumar Oct9to15 ‌ ‌ ‌ ‌ ‌ oct5to15-pyd ‌‌ ‌ Vishal-sep13to-unlimited ‌ ‌ ‌ ‌ IMG-20241009-195526

Friday 18 October 2024

ಜಮಗುಳಿ ಶಾಲೆಯ ಆದರ್ಶ ಶಿಕ್ಷಕರ ವರ್ಗಾವಣೆ: ಒಂದು ನೋವು, ಅನೇಕ ನೆನಪುಗಳು !

IMG-20241018-112423 ಯಲ್ಲಾಪುರ: ಯಲ್ಲಾಪುರ ತಾಲೂಕಿನ ಜಮಗುಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 14 ವರ್ಷಗಳ ಕಾಲ ಸೇವೆ ಸಲ್ಲಿಸಿದ ಹರೀಶ ನಾಯ್ಕ ಅವರು ವರ್ಗಾವಣೆಗೊಂಡಿರುವುದು ಶಾಲಾ ಮಕ್ಕಳು, ಪಾಲಕರು ಹಾಗೂ ಗ್ರಾಮಸ್ಥರಲ್ಲಿ ದುಃಖ ತಂದಿದೆ. ಇದೇ ರೀತಿ 11 ವರ್ಷಗಳ ಕಾಲ ಶಾಲೆಯಲ್ಲಿ ಸೇವೆ ಸಲ್ಲಿಸಿದ ಭರತ್ ಶಿಕ್ಷಕರು ಕೂಡ 2024ರ ಆಗಸ್ಟ್ 1 ರಂದು ವರ್ಗಾವಣೆಗೊಂಡಿದ್ದಾರೆ. IMG-20241018-112409 ಶಾಲೆಯಲ್ಲಿ ಪಠ್ಯದ ಜ್ಞಾನವನ್ನು ನೀಡುವುದರ ಜೊತೆಗೆ, ಬದುಕಿನ ಪಾಠಗಳನ್ನು ಕಲಿಸಿ, ಮಕ್ಕಳಿಗೆ ಆದರ್ಶ ಪ್ರತಿರೂಪವಾಗಿ ಬದುಕುವ ಮೂಲಕ ಮಕ್ಕಳ ಮನಸ್ಸನ್ನು ಗೆದ್ದಿದ್ದ ಶಿಕ್ಷಕರು ಹರೀಶ ನಾಯಕ ಹಾಗೂ ಭರತ ಅವರ ವರ್ಗಾವಣೆಯು ಜಮಗುಳಿ ಗ್ರಾಮಸ್ಥರಲ್ಲಿ ಒಂದು ತೆರನಾದ ಖಾಲಿತನವನ್ನು ಸೃಷ್ಟಿಸಿದೆ. "ಅರ್ಚಕಸ್ಯ ಪ್ರಭಾವೇನ ಶಿಲಾ ಭವತಿ ಶಂಕರ" ಎಂಬಂತೆ, ಮಕ್ಕಳೆಂಬ ಶಿಲೆಯನ್ನು ಶಿವನಾಗಿ ರೂಪಿಸುವ ಕಾರ್ಯವನ್ನು ಶಿಕ್ಷಕರಾದ ಹರೀಶ ನಾಯಕ ಹಾಗೂ ಭರತ ಅವರು ನಿರ್ವಹಿಸಿದ್ದಾರೆ ಎಂದು ಗ್ರಾಮಸ್ಥರು ಅಭಿಪ್ರಾಯಪಡುತ್ತಾರೆ. 
    ಮಕ್ಕಳನ್ನು, ಪಾಲಕರನ್ನು ಹಾಗೂ ಗ್ರಾಮಸ್ಥರನ್ನು ತಮ್ಮವರೆಂದು ಭಾವಿಸಿಕೊಂಡು, ಶಾಲೆಯನ್ನು ತಮ್ಮ ಮನೆಯೆಂದು ಭಾವಿಸಿ ಕಾರ್ಯನಿರ್ವಹಿಸಿದ ಹರೀಶ ಹಾಗೂ ಭರತ ಅವರು, ಶಾಲೆಯ ಸುಧಾರಣೆ ಹಾಗೂ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಶಾಲೆಯ ಚಿತ್ರಣ ಹಾಗೂ ಶೈಕ್ಷಣಿಕ ವಾತಾವರಣವನ್ನು ಮಾದರಿಯಾಗಿ ರೂಪಿಸುವಲ್ಲಿ ಅವರ ಕೊಡುಗೆ ಅಪಾರವಾಗಿದೆ. ಮಕ್ಕಳಿಗೆ ಶಾರದೆಯ ರೂಪದಲ್ಲಿ, ಪೋಷಕರಿಗೆ ಆತ್ಮೀಯರಾಗಿ, ಸಮಾಜಕ್ಕೆ ಉತ್ತಮ ಶಿಕ್ಷಕನಾಗಿ, ಮಕ್ಕಳ ಹೃದಯದಲ್ಲಿ ನೆಲೆಸಿದ ವಿದ್ಯಾದೇವತೆಯಾಗಿ ತಾವು ಮಾಡಿದ ಸೇವೆ ಅನನ್ಯ ಹಾಗೂ ಅಜರಾಮರವಾಗಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ. IMG-20241018-112357 ಹರೀಶ ನಾಯಕ ಹಾಗೂ ಭರತ ಅವರ ವ್ಯಕ್ತಿತ್ವ ಹಾಗೂ ಕಾರ್ಯಶೈಲಿ ಜಮಗುಳಿ ಗ್ರಾಮದ ಶೈಕ್ಷಣಿಕ ವಾತಾವರಣವನ್ನು ಉನ್ನತ ಮಟ್ಟಕ್ಕೆ ಏರಿಸಿತ್ತು. ಗ್ರಾಮಸ್ಥರ ಸಹಾಯ ಸಹಕಾರದಿಂದ ಅವರು ಶಾಲೆಯನ್ನು ಉತ್ತಮಗೊಳಿಸಿದ್ದರು. ಸರ್ಕಾರದ ಆದೇಶದ ಪ್ರಕಾರ 10ಕ್ಕಿಂತ ಕಡಿಮೆ ಮಕ್ಕಳು ಇರುವ ಶಾಲೆಗಳನ್ನು ಮುಚ್ಚುವ ನಿರ್ಧಾರದಿಂದಾಗಿ ಜಮಗುಳಿ ಶಾಲೆ ಮುಚ್ಚುವ ಭೀತಿ ಎದುರಿಸುತ್ತಿತ್ತು. ಆದರೆ, ಹರೀಶ ಹಾಗೂ ಭರತ ಅವರು ಇತರ ಊರುಗಳಿಂದ ನಾಲ್ಕು ಮಕ್ಕಳನ್ನು ಶಾಲೆಗೆ ಸೇರಿಸಿ ಶಾಲೆಯನ್ನು ಉಳಿಸಿಕೊಂಡಿದ್ದರು. 
   ಹರೀಶ ನಾಯಕ ಮತ್ತು ಭರತ ಅವರ ವರ್ಗಾವಣೆಯು ಶಾಲೆಯ ಮಕ್ಕಳು, ಪಾಲಕರು ಹಾಗೂ ಗ್ರಾಮಸ್ಥರಲ್ಲಿ ದುಃಖವನ್ನುಂಟು ಮಾಡಿದ್ದರೂ, ಅವರ ಸೇವೆ, ಅವರ ವ್ಯಕ್ತಿತ್ವ ಹಾಗೂ ಶಿಕ್ಷಣ ಕ್ಷೇತ್ರದಲ್ಲಿನ ಅಪಾರ ಕೊಡುಗೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರ ವರ್ಗಾವಣೆಯು ನೋವಿನ ಸಂಗತಿಯಾದರೂ, ಅವರ ಅನುಪಮ ಸೇವೆಯ ನೆನಪು ಜಮಗುಳಿ ಶಾಲೆಯಲ್ಲಿ ಶಾಶ್ವತವಾಗಿ ಉಳಿಯಲಿದೆ. IMG-20241018-112346 ಹರೀಶ ಹಾಗೂ ಭರತ ಅವರ ಭವಿಷ್ಯದ ಜೀವನ ಸುಖಮಯವಾಗಿರಲಿ ಎಂದು ಪಾಲಕರು, ಗ್ರಾಮಸ್ಥರಾದ ಸುರೇಶ ಗುಂಜೀಕರ, ವಿಶ್ವನಾಥ ಗಾಂವ್ಕರ್, ಆನಂದ ಮರಾಠಿ, ಲೋಕೇಶ ಮರಾಠಿ, ಸಂತೋಷ ಬಿ ಮರಾಠಿ, ಹೊನ್ನಪ್ಪ ಜಮಗುಳಿ, ಸಂತೋಷ ಕೆ ಮರಾಠಿ, ಪ್ರಕಾಶ ಮರಾಠಿ, ಸುರೇಶ ವಿ‌ಮರಾಠಿ,ವಿನೋದ ಎಚ್ ರಾಯ್ಕರ ಹಾಗೂ ಶಾಲಾ ಮಕ್ಕಳು ಹಾರೈಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬರುವ ಶಿಕ್ಷಕರು ಶಾಲೆಯ ಅಭಿವೃದ್ಧಿ ಮತ್ತು ಮಕ್ಕಳ ಬೆಳವಣಿಗೆಗೆ ಪೂರಕವಾಗಿ ಕಾರ್ಯನಿರ್ವಹಿಸಲಿ ಎಂಬುದು ಎಲ್ಲರ ಆಶಯವಾಗಿದೆ. 

 ಸುದ್ದಿ : ಕುಮಾರ. ಡಿ. ಮರಾಠಿ, ಯಲ್ಲಾಪುರ.