ಯಲ್ಲಾಪುರ : ಸಹಕಾರಿ ಸಂಘಗಳು ರೈತರ ಕೃಷಿ ಚಟುವಟಿಗಳಿಗೆ ಉತ್ತೇಜನ ನೀಡುವ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು. ರೈತರ ಅಭಿವೃದ್ಧಿಯ ಜೊತೆಗೆ ಸಾಮಾಜಿಕ ಕಳಕಳಿ, ಸಂಘಟನೆಗಾಗಿ ದುಡಿಯಬೇಕು. ಪರಂಪರಾಗತ ಕೃಷಿ ಚಟುವಟಿಕೆಗಳೊಂದಿಗೆ ಆಧುನಿಕ ಪದ್ದತಿಯನ್ನು ಉತ್ತೇಜಿಸಬೇಕು.ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ತರುವಂತಹ ಕೃಷಿ ಸಂಶೋಧನೆ ಅಗತ್ಯವಿದೆಯೆಂದು ಮಲೆನಾಡು ಕೃಷಿ ಅಭಿವೃದ್ಧಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ ಹೇಳಿದರು.
ಅವರು ಈ ಸಂಸ್ಥೆಯ 26 ನೇ ವರ್ಷದ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ದೀಪ ಬೆಳಗಿಸಿ ಮಾತನಾಡಿದ ಸಂಘದ ಲೆಕ್ಕ ಪರಿಶೋಧಕರಾದ ಎಸ್. ಜಿ. ಹೆಗಡೆ ಬೆದೆಹಕ್ಕಲ ಮಾತನಾಡಿ ಯಾವುದೇ ಆರ್ಥಿಕ ಸಂಸ್ಥೆ ಪಾರದರ್ಶಕವಾಗಿ ಕಾರ್ಯ ನಿರ್ವಹಿಸಬೇಕು. ಜನರ ನಾಡಿಮಿಡಿತ ಅರಿತಿರಬೇಕು. ಪ್ರಾಮಾಣಿಕತೆಗೆ ಆದ್ಯತೆ ನೀಡಬೇಕೆಂದರು.
ಈ ಸಂದರ್ಭದಲ್ಲಿ 12 ಜನ ಕೃಷಿ ಸಾಧರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ವಿ. ಎನ್. ಭಟ್ಟ ಏಕಾನ್, ಸದಾಶಿವ ದೇಸಾಯಿ, ರವಿ ಹೆಗಡೆ ಮಾತನಾಡಿದರು.
ಸಂಘದ ನಿರ್ದೇಶಕರಾದ ದತ್ತಾತ್ರಯ ಬೊಳಗುಡ್ಡೆ ಸ್ವಾಗತಿಸಿದರು. ವ್ಯವಸ್ಥಾಪಕರಾದ ವಿನಾಯಕ ಹೆಗಡೆ ವರದಿ ಓದಿದರೆ, ಉಪಾದ್ಯಕ್ಷರಾದ ಎಂ ಜಿ ಭಟ್ಟ ವಂದಿಸಿದರು. ಸಣ್ಣಪ್ಪ ಭಾಗ್ವತ ಕಾರ್ಯಕ್ರಮ ನಿರ್ವಹಿಸಿದ್ದರು.
.
.
.