
ವಿಪತ್ತು ಬಂದಾಗ ಹೊಸ ರೀತಿಯ ತಂತ್ರಜ್ಞಾನವನ್ನು ಬಳಸಿ, ವಿಪತ್ತನ್ನು ಹೇಗೆ ಬಗೆಹರಿಸಬೇಕೆಂಬುದನ್ನ ,ಶ್ರೀ ರಾಜರಾಜೇಶ್ವರಿ ಪ್ರೌಢಶಾಲಾ ಮಕ್ಕಳು ನಾಟಕದ ಮುಖಾಂತರ ತೋರಿಸಿಕೊಟ್ಟಿದ್ದಾರೆ.
ಮಕ್ಕಳನ್ನು ಸಿದ್ಧಗೊಳಿಸಿ, ಪ್ರೀತಿಯಿಂದ ತಾಯ್ನಾಡಿನ ಶಾಲೆಗೆ ಕಳುಹಿಸಿದ ತಾಯಿಯು, ಸ್ವಲ್ಪ ಸಮಯದಲ್ಲೇ ಗುಡುಗು ಸಿಡಿಲು ಆರ್ಭಟ ಮಳೆ ಯಿಂದಾಗಿ ದಿಗ್ಬ್ರಾಂತಗೊಳ್ಳುತ್ತಾಳೆ. ಶಾಲೆಗೆ ಹೋದ ಮಕ್ಕಳ ಬಗ್ಗೆ ಏನಾಯಿತೆಂಬ ಕಳವಳವನ್ನು ವ್ಯಕ್ತಪಡಿಸುತ್ತಿರುತ್ತಾಳೆ. ಮಳೆಯ ಆರ್ಭಟಕ್ಕೆ ತಾಯ್ನಾಡಿನ ನದಿಯ ಪಕ್ಕದಲ್ಲಿರುವ ಗುಡ್ಡ ಕುಸಿದು, ನದಿಯು ತನ್ನ ದಿಕ್ಕನ್ನೇ ಬದಲಿಸಿ, ತಾಯ್ನಾಡಿನ ಹಲವಾರು ಮನೆಗಳು, ರಸ್ತೆಗಳು, ಶಾಲೆಗಳು, ನೀರಿಗೆ ಆಹುತಿಯಾಗುತ್ತಿರುವುದನ್ನ ತಿಳಿದು, ಎಚ್ಚೆತ್ತುಗೊಂಡ ಸರಕಾರ ಡ್ರೋನ್ ಗಳನ್ನು ಬಳಸಿ ಅಲ್ಲಿಯ ಸ್ಥಿತಿಗಳನ್ನು ತಿಳಿದುಕೊಳ್ಳುತ್ತದೆ, ಹೆಲಿಕ್ಯಾಪ್ಟರ್ ಮುಖಾಂತರ ಅಲ್ಲಿಯ ಜನರನ್ನ ಹಾಗೂ ಶಾಲಾ ವಿದ್ಯಾರ್ಥಿಗಳನ್ನು ರಕ್ಷಿಸಿದ ಘಟನೆಯ ಕುರಿತು, ದೂರದರ್ಶನದಲ್ಲಿ ಪ್ರಸಾರವಾದ ವಾರ್ತೆಯನ್ನ ನೋಡಿದ ತಾಯಿ ಸಮಾಧಾನ ಪಟ್ಟುಕೊಳ್ಳುತ್ತಾಳೆ. ಮಕ್ಕಳಿಬ್ಬರು ಹೆಲಿಕ್ಯಾಪ್ಟರ್ ನಿಂದ ಬಂದ ವಿಷಯವನ್ನು ತಿಳಿದು ತಂತ್ರಜ್ಞಾನ ಮಕ್ಕಳನ್ನು ರಕ್ಷಿಸಿದ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾಳೆ.
ಹಾಗೇನೇ, ಜಗತ್ತಿನ ಯಾವುದೋ ಒಂದು ಅರಣ್ಯದಲ್ಲಿ , ಮರದ ಕೊಂಬೆಗಳು ಒಂದಕ್ಕೊಂದು ತಿಕ್ಕಿ ಅದರಿಂದ ಅಗ್ನಿ ಉಂಟಾಗಿ ಅರಣ್ಯಕ್ಕೆ ಬೆಂಕಿ ಬಿದ್ದಿರುವುದನ್ನು ನಾವು ಕೇಳಿದ್ದೇವೆ, ನೋಡಿದ್ದೇವೆ, ಇದೇ ವಿಚಾರವಾಗಿ ಅರಣ್ಯ ಇಲಾಖೆಯವರು, ಸೆಟಲೈಟ್ ಮೂಲಕ ಜಿ ಪಿ ಎಸ್ ಮತ್ತು ಜಿ ಎಸ್ ಐ ಮುಖಾಂತರ ಬೆಂಕಿಯ ಅವಘಡಗಳನ್ನು ತಿಳಿದು, ಹೆಲಿಕ್ಯಾಪ್ಟರ್ ಮುಖಾಂತರ ನೀರನ್ನು ತೆಗೆದುಕೊಂಡು ಹೋಗಿ ಬೆಂಕಿಯನ್ನು ಆರಿಸುವ ವ್ಯವಸ್ಥೆಯನ್ನು, ನಾಟಕ ಮತ್ತು ದೃಶ್ಯಾವಳಿಗಳ ಮೂಲಕ, ಶ್ರೀ ರಾಜರಾಜೇಶ್ವರಿ ವಿದ್ಯಾರ್ಥಿಗಳು ತೋರಿಸಿಕೊಟ್ಟಿದ್ದಾರೆ .


ನಾಟಕವನ್ನು ಖ್ಯಾತ ರಂಗಕರ್ಮಿ ಎಂ .ಕೆ .ಭಟ್.ಯಡಳ್ಳಿ ರಚಿಸಿದ್ದಾರೆ. ನಿರ್ದೇಶನ ಸುಬೋಧ ಹೆಗಡೆ ಮಳಗಿಮನೆ ರಂಗದ ಮೇಲೆ : ಪನ್ನಗ ಶಾಸ್ತ್ರಿ, ಶ್ರೀನಿಧಿ ಜೋಶಿ, ನಾಗಶ್ರೀ ಭಟ್, ಸಂಧ್ಯಾ ಭಟ್, ಸ್ನೇಹಾ ಲಕ್ಮಾಪುರ್, ತ್ರಿವೇಣಿ ಮರಾಠಿ, ಸಾತ್ವಿಕ್ ಗೌಡ, ಆದಿತ್ಯ ಶೇಟ್ ಇವರು ರಂಗದಮೇಲೆ ಅಭಿನಯಿಸಿದ್ದರು.
ಅಷ್ಟೆ ಅಲ್ಲದೇ, ಪನ್ನಘ ಶಾಸ್ತ್ರಿ ,ವಿಜ್ಞಾನ ಆಶುಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶ್ರೀ ರಾಜರಾಜೇಶ್ವರಿ ವಿದ್ಯಾ ಸಂಸ್ಥೆಯ ಪದಾಧಿಕಾರಿಗಳು, ಹಾಗೂ ಶಿಕ್ಷಕ ವೃಂದ ,ಪಾಲಕ ವೃಂದದವರು ಅಭಿನಂದಿಸಿದ್ದಾರೆ.
.
.