ಯಲ್ಲಾಪುರ : ಕಾಳಮ್ಮನಗರ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 11ರಂದು ನಡೆದ ಆನಗೋಡು ವಲಯ ಮಟ್ಟದ ಕ್ರೀಡಾಕೂಟದಲ್ಲಿ ಯಲ್ಲಾಪುರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಕಾವೇರಿ ಕಂದ್ಲಿಮಠ (ಶಟಲ್ ಬ್ಯಾಡ್ಮಿಂಟನ್) , ಶ್ರೇಯಸ್ ವಿವೇಕಾನಂದ್ ಶಾನಭಾಗ್ (ಟೇಬಲ್ ಟೆನ್ನಿಸ್) ಆಟಗಳಲ್ಲಿ ತಾಲೂಕ ಮಟ್ಟದಲ್ಲಿ ಸ್ಪರ್ಧಿಸಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಪ್ರಥಮ ನಾಗೇಶ ಅಂಬಿಗ ಹಾಗೂ ಮೇಘ ಚಿದಂಬರ ಮರಾಠಿ ಇವರು ವಲಯ ಹಾಗೂ ತಾಲೂಕು ಮಟ್ಟದ (ಯೋಗ ಸ್ಪರ್ಧೆಯಲ್ಲಿ) ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಬಿ ಗಗನ ಹಾಗೂ ರಾಜಾರಾಮ ನಾಳಕರ (ರಿದಮಿಕ್ ಯೋಗದಲ್ಲಿ) ಪ್ರಥಮ
ಎಲೀಷ ಫರ್ನಾಂಡಿಸ್ (400 ಮೀಟರ್ ಓಟ ಪ್ರಥಮ 200 ಮೀಟರ್ ಓಟ ದ್ವಿತೀಯ)
ಸಿರಿ ಭಟ್ (ಗುಂಡು ಎಸೆತ) ಪ್ರಥಮ
ಆದಿತ್ಯ ಭೋವಿವಡ್ಡರ್ (ಚಕ್ರ ಎಸೆತ) ತೃತೀಯ ಸ
ಮರ್ಥ ಹರಿಜನ (ಎತ್ತರ ಜಿಗಿತ) ತೃತೀಯ
ಶಮಾಮಾ ಸೈಯದ್ (200 ಮೀಟರ್ ಓಟ) ತೃತೀಯ,
ರಾಜಾರಾಮ್ ನಾಳ್ಕರ್ (400 ಮೀಟರ್ ಓಟ) ತೃತೀಯ
ಅಮೂಲ್ಯ ಭೋವಿವಡ್ಡರ (100 ಮೀಟರ್ ಓಟ) ತೃತೀಯ
ಶ್ರೇಯಾ ಭಟ್ (ಚೆಸ್ 5ನೇ ಸ್ಥಾನ )
ಗುಂಪು ಆಟಗಳಲ್ಲಿ ಗಂಡು ಮಕ್ಕಳ (ಕಬಡ್ಡಿಯಲ್ಲಿ ಪ್ರಥಮ) ಹಾಗೂ ಹೆಣ್ಣು ಮಕ್ಕಳು (ಕಬಡ್ಡಿಯಲ್ಲಿ ಪ್ರಥಮ)
ಹೆಣ್ಣು ಮಕ್ಕಳ (ಖೋ ಖೋ ಪಂದ್ಯದಲ್ಲಿ ಪ್ರಥಮ) ಹಾಗೂ ಗಂಡು ಮಕ್ಕಳ (ಖೋ ಖೋ ಪಂದ್ಯದಲ್ಲಿ ದ್ವಿತೀಯ) ಸ್ಥಾನ ಪಡೆದಿರುತ್ತಾರೆ.
ವಿದ್ಯಾರ್ಥಿಗಳ ಕ್ರೀಡಾ ಸಾಧನೆಗೆ ಶಾಲೆಯ ಮುಖ್ಯ ಶಿಕ್ಷಕಿ ಅನುಸೂಯಾ ಹಾರವಾಡೇಕರ, ಎಸ್ ಡಿ ಎಂ ಸಿ ಅಧ್ಯಕ್ಷ ಶಂಕರ ಗೊಂದಳಿ, ಉಪಾಧ್ಯಕ್ಷೆ ಶಶೀಕಲಾ ಅಂಬೀಗ ಹಾಗೂ ಎಲ್ಲ ಸದಸ್ಯರು, ಶಾಲೆಯ ಶಿಕ್ಷಕರಾದ ಲೂಸಿ ರೋಡ್ರಿಗೀಸ್, ನಿರ್ಮಲಾ ನಾಯಕ, ಶೋಭಾ ನಾಯಕ, ಕಮಲಾ ಭಟ್, ಜ್ಯೋತಿ ಮಿರಾಂಡಾ, ಗಣಪತಿ ಭಟ್ಟ, ಜ್ಯೋತಿ ಹಳ್ಳೇರ್, ರುಕ್ಮಿಣಿ ಪಾಲೇಕರ, ರೋಲ್ಸಿ ಲೋಭೊ, ಶ್ರುದ್ಧಾ, ರವೀನಾ, ರಾಘವೇಂದ್ರ ಪಟಗಾರ, ಲಕ್ಷ್ಮೀ ಜಿ.ಕೆ, ರೂಪಾ, ಅರ್ಚನಾ ಬಾಂದೇಕರ ಮುಂತಾದವರು ಅಭಿನಂದಿಸಿರುತ್ತಾರೆ.
ಎಲ್ಲ ಸ್ಪರ್ಧಾಳುಗಳಿಗೆ ಶಾಲಾ ಶಿಕ್ಷಕ ವೃಂದದವರೊಂದಿಗೆ ಪಾಲಕರಾದ ರಾಘವೇಂದ್ರ ತಳೇಕರ್ ಇವರು ತರಬೇತಿಯನ್ನು ನೀಡಿದ್ದರು.
.
.
.