Adv

news21 ‌ ‌YELLAPURNews prakatane --------- ‌ ‌patanakaroct10to17pydkumar Oct9to15 ‌ ‌ ‌ ‌ ‌ oct5to15-pyd ‌‌ ‌ Vishal-sep13to-unlimited ‌ ‌ ‌ ‌ IMG-20241009-195526

Monday, 16 September 2024

ಯಲ್ಲಾಪುರದಲ್ಲಿ ಸೋಮವಾರ ಈದ್ ಮಿಲಾದ ಆಚರಣೆ: ಶಾಂತಿಯುತವಾಗಿ ನಡೆದ ಈದ್ ಮಿಲಾದ್ ಮೆರವಣಿಗೆ

IMG-20240916-132653 ಯಲ್ಲಾಪುರ : ಪಟ್ಟಣದಲ್ಲಿ ಹಾಗೂ ತಾಲೂಕಿನ ಪ್ರಮುಖ ಗ್ರಾಮೀಣ ಭಾಗದಲ್ಲಿ ಸೆ.16ರಂದು  ಮುಸ್ಲಿಂ ಸಮಾಜದವರು ಪ್ರವಾದಿ ಮುಹಮ್ಮದ್ ಅವರ ಜನ್ಮದಿನವನ್ನು  ಈದ್-ಎ-ಮಿಲಾದ್ ಹಬ್ಬದ ಮೂಲಕ ಒಬ್ಬರಿಗೊಬ್ಬರು ಶುಭಾಶಯ ಕೋರಿ ಮೆರವಣಿಗೆ ನಡೆಸಿ ಶ್ರದ್ಧಾ ಭಕ್ತಿಯಿಂದ ಆಚರಿಸಿದರು. 
    ಈದ್ ಮಿಲಾದ್ ದಿನ ಬಡವರಿಗೆ, ನಿರ್ಗತಿಕರಿಗೆ ದಾನ ಮಾಡುವುದರಿಂದ ಅಲ್ಲಾಹನು ಸಂತೋಷಗೊಳ್ಳುತ್ತಾನೆ. ಆ ಕುಟುಂಬದ ಮೇಲೆ ತನ್ನ ಆಶೀರ್ವಾದಿಸುತ್ತಾನೆ ಎನ್ನುವ ನಂಬಿಕೆ ಮುಸ್ಲಿಂ ಬಾಂದವರದ್ದಾಗಿದ್ದು. ಮಸೀದಿಗಳನ್ನು ಪ್ರಮುಖ ರಸ್ತೆಗಳನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು, ಮಸಿದಿಯಲ್ಲಿ ಪವಿತ್ರ ಕುರಾನ್ ಅನ್ನು ಓದಲಾಯಿತು. ಅದೇ ಸಮಯದಲ್ಲಿ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಸಂದೇಶಗಳು ಭಿತ್ತರಿಸಲಾಯಿತು. ಸಾಂಪ್ರದಾಯಿಕ ರುಚಿಕರವಾದ ಭಕ್ಷ್ಯಗಳನ್ನು ತಯಾರಿಸಿ ಪರಿಚಿತರು, ಸಂಬಂಧಿಗಳು ಹಾಗೂ ಬಡವರಿಗೆ ವಿತರಿಸಲಾಯಿತು.      ಮಾದರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯ ಆವಾರದಿಂದ ಪ್ರಾರಂಭವಾದ ಮೆರವಣಿಗೆ ತಟಗಾರ ಕ್ರಾಸ್, ಕಾಳಮ್ಮನಗರ, ನೂತನನಗರ, ಜಡ್ಡಿ, ಅಂಬೇಡ್ಕರ ವೃತ್ತ,ಬಸಚೇಶ್ವರ ವೃತ್ತ, ಗಾಂಧಿ ವೃತ್ತ, ಇಸ್ಲಾಂಗಲ್ಲಿ, ಅಕ್ಬರಗಲ್ಲಿ, ತಿಲಕ್ ಚೌಕ್, ಮಚ್ಚಿಗಲ್ಲಿ, ದರ್ಗಾ ಗಲ್ಲಿಯಲ್ಲಿ ಮುಕ್ತಾಯವಾಯಿತು. IMG-20240916-132639 ಮೆರವಣಿಗೆಯಲ್ಲಿ ವಿವಿಧ ಉರ್ದು ಶಾಲೆಯ ಮಕ್ಕಳು ಸೇರಿದಂತೆ ಎರಡು ಸಾವಿರಾರಕ್ಕೂ ಹೆಚ್ಚು ಜನ ಮುಸ್ಲಿಂ ಬಾಂಧವರು, ಅಬಾಲ ವೃದ್ಧರಾಗಿ ಭಾಗವಹಿಸಿದ್ದರು. ಮೆರವಣಿಗೆಯಲ್ಲಿ ಲೇಜಿಮ್ ನೃತ್ಯ, ಇತರೇ ನೃತ್ಯ ತಂಡಗಳು ಭಾಗವಹಿಸಿದ್ದವು. ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ಅಲ್ಲಲ್ಲಿ ತಂಪು ಪಾನೀಯ ವ್ಯವಸ್ಥೆಯನ್ನು ‌ಮಾಡಲಾಗಿತ್ತು. 

 ಡಿಜೆ ದ್ವನಿ ವರ್ಧಕ ಬಳಸಿಲ್ಲ : IMG-20240916-132628    ಸೋಮವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆದ ಈದ್ ಮಿಲಾದ್ ಮೆರವಣಿಗೆಯಲ್ಲಿ ಬೃಹತ್ ಡಿಜೆ ಬಳಸಿರಲಿಲ್ಲ. ಈ ಬಗ್ಗೆ ಮುಸ್ಲಿಂ ಸಮಾಜದ ಯುವ ಜನತೆಯಲ್ಲಿಯೇ ಬೇಸರಕ್ಕೆ ಕಾರಣವಾಗಿದೆ. ಈಗಾಗಲೆ ಪೊಲೀಸ್ ಠಾಣೆಗೆ ಲಿಖಿತ ಹೇಳಿಕೆ ನೀಡಿರುವ ನಾಲ್ಕು ಜಮಾತದ ಪ್ರಮುಖರು ನಾವು ಕಳೆದ ಮೂರು ವರ್ಷದಿಂದ ಡಿಜೆ(ಬೃಹತ್ ದ್ವನಿವರ್ಧಕ ) ಬಳಸಿಲ್ಲ. ಈಗಲೂ ಬಳಸುವುದಿಲ್ಲ. ಡಿಜೆ ಬದಲು ಮುಸ್ಲಿಂ ಸಾಂಪ್ರದಾಯಿಕ ಕಲೆಗಳನ್ನು ಸಾರುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಉಡುಗೆ ತೊಡುಗೆಗಳಿಗೆ ಆದ್ಯತೆ ನೀಡುತ್ತೆವೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಪೊಲೀಸರು ಡಿಜೆ ಬಳಕೆಗೆ ಪರವಾನಿಗೆ ನೀಡಿಲ್ಲ, ಇದರಿಂದಾಗಿ ಕೆಲವು ಯುವ ಜನತೆ ಅಸಮಾಧಾನಗೊಂಡು ಈದ್ ಮಿಲಾದ್ ಮೆರವಣಿಗೆಯಿಂದ ಹೊರಗೆ ಉಳಿದಿದ್ದಾರೆ ಎನ್ನಲಾಗಿದೆ. IMG-20240916-132614 ಪಟ್ಟಣದ ಹಲವಾರು ಪ್ರಮುಖ ಸಾರ್ವಜನಿಕ ಗಜಾನನೋತ್ಸವ ಸಮಿತಿಯ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಇರುವುದರಿಂದ, ಮುಸ್ಲಿಂ ಬಾಂಧವರು ಮಧ್ಯಾಹ್ನದಿಂದ ಸಂಜೆಯವರೆಗೆ ನಡೆಯಬೇಕಾಗಿದ್ದ ಈದ್ ಮಿಲಾದ್ ಮೆರವಣಿಗೆಯನ್ನು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಪ್ರಮುಖ ಬೀದಿಗಳಲ್ಲಿ ಪ್ರಮುಖ ಭಾಗಗಳಲ್ಲಿ ನಡೆಸಿ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಹುಟ್ಟುಹಬ್ಬವನ್ನು ಸಂಭ್ರಮಿಸಿದರು.   
       ಮುಸ್ಲಿಂ ಸಮಾಜದ ಧಾರ್ಮಿಕ ರಾಜಕೀಯ ಹಾಗೂ ವಿವಿಧ ಉದ್ಯಮಗಳಲ್ಲಿ ತೊಡಗಿಸಿಕೊಂಡ ಪ್ರಮುಖರು, ನಾಲ್ಕು ಜಮಾತಗಳಾದ ಗೌಸಿಯಾ ಮಸಿದಿಯ ಅಬ್ದುಲ್ ಕರಿಂ ಶೇಖ, ಜುಮ್ಮಾ ಮಸಿದಿಯ ಫೈರೋಜ್ ಸಯ್ಯದ್, ಜಡ್ಡಿ ಗರೀಬೂನ್ ನವಾಜ್ ಮಸಿದಿಯ ಅಬ್ದುಲ್ ಹಮೀದ್ ಶೇಖ, ಕಾಳಮ್ಮನಗರ ಬಿಲಾಲ ಮಸಿದಿಯ ಟಿ ಪಿ ಸುಲೇಮಾನ್ ಹಾಗೂ ಸರ್ಕಾರಿ ಉದ್ಯೋಗಿಗಳು, ಖಾಸಗಿ ವ್ಯಾಪಾರಿಗಳು ಮುಂತಾದವರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. .  
   ಪಿಐ ರಮೇಶ ಹಾನಾಪುರ,  ಪಿಎಸ್ಐ ಸಿದ್ದಪ್ಪ ಗುಡಿ, ಟ್ರಾಫೀಕ್ ಪಿಎಸ್ಐ ನಸ್ರೀನ್ ತಾಜ್ ಹಾಗೂ ಪೊಲೀಸ್ ಸಿಬ್ಬಂದಿಗಳು ಮೆರವಣಿಗೆಗೆ ಭದ್ರತಾ ವ್ಯವಸ್ಥೆಯನ್ನು ಕೈಗೊಂಡು ಶಾಂತಿಯುತವಾಗಿ ಮೆರವಣಿಗೆ ನಡೆಯಲು ಅವಕಾಶ ಮಾಡಿಕೊಟ್ಟರು.
.
.
.