Adv

news21 ‌ ‌YELLAPURNews prakatane --------- ‌ ‌patanakaroct10to17pydkumar Oct9to15 ‌ ‌ ‌ ‌ ‌ oct5to15-pyd ‌‌ ‌ Vishal-sep13to-unlimited ‌ ‌ ‌ ‌ IMG-20241009-195526

Monday 9 September 2024

ಹಿಂದೂ ರುದ್ರಭೂಮಿಯ ಅಭಿವೃದ್ಧಿಗೆ ಅನುದಾನ ಮೀಸಲಿಡುವಂತೆ ವಿಎಚ್‌ಪಿ ಮನವಿ

IMG-20240909-233038ಯಲ್ಲಾಪುರ : ಪಟ್ಟಣದ ಹುಬ್ಬಳ್ಳಿ ರಸ್ತೆಯಲ್ಲಿರುವ ಏಕೈಕ ಹಿಂದೂ ರುದ್ರಭೂಮಿಯ ಅಭಿವೃದ್ಧಿ ಕಾರ್ಯಕ್ಕಾಗಿ ತಕ್ಷಣದ ಅನುದಾನ ಮೀಸಲಿಡುವಂತೆ ವಿಶ್ವ ಹಿಂದೂ ಪರಿಷತ್ ತಾಲೂಕಾ ಅಧ್ಯಕ್ಷ ಗಜಾನನ ನಾಯ್ಕ ತಳ್ಳಿಕೇರಿ ನೇತೃತ್ವದಲ್ಲಿ ಪಟ್ಟಣ ಪಂಚಾಯತ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. 
    ಯಲ್ಲಾಪುರದಲ್ಲಿ ಶತಮಾನಗಳ ಹಿಂದೆ ನಿರ್ಮಿಸಲಾದ ಈ ರುದ್ರಭೂಮಿ, ನಗರ ಅಂಚಿನ ತಣ್ಣೀರಹಳ್ಳದ ಮೇಲ್ಭಾಗದಲ್ಲಿದೆ. ಇಲ್ಲಿ ಹಿಂದೂ ಶವಸಂಸ್ಕಾರಕ್ಕೆ ಹತ್ತಿರದ ಅರಣ್ಯ ಪ್ರದೇಶವೇ ಸೂಕ್ತವಾಗಿದೆ. ರುದ್ರಭೂಮಿಯು ಶವಸಂಸ್ಕಾರ ಕಾರ್ಯಕ್ಕಾಗಿ ನೈಸರ್ಗಿಕವಾಗಿ ಸಮರ್ಪಕವಾಗಿದೆಯಾದರೂ, ಅದರ ಅಭಿವೃದ್ಧಿಗೆ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯಕವಾಗಿದೆ.IMG-20240909-233029 ಈ ರುದ್ರಭೂಮಿಯ ಶವಸಂಸ್ಕಾರ ಕಟ್ಟೆಗಳು ಹಳೆಯಾಗಿದ್ದು, ಶೀಘ್ರದಲ್ಲಿಯೇ ಅವುಗಳನ್ನು ದುರಸ್ತಿ ಮಾಡಬೇಕು. ಜೊತೆಗೆ ವಿದ್ಯುತ್ ವ್ಯವಸ್ಥೆ ಅಸಮರ್ಪಕವಾಗಿರುವುದರಿಂದ, ರಾತ್ರಿ ವೇಳೆ ಶವಸಂಸ್ಕಾರ ಕಾರ್ಯದಲ್ಲಿ ಅಡಚಣೆ ಉಂಟಾಗುತ್ತಿದೆ. ಇದನ್ನು ಸರಿಪಡಿಸುವ ಅಗತ್ಯತೆಯಿದೆ. ಅಲ್ಲದೆ, ರುದ್ರಭೂಮಿಗೆ ಹೋಗುವ ಮುಖ್ಯ ಮಾರ್ಗದಲ್ಲಿನ 100 ಮೀಟರ್ ಕಾಂಕ್ರೀಟ್ ರಸ್ತೆ ನಿರ್ಮಾಣವೂ ಅತ್ಯವಶ್ಯಕವಾಗಿದೆ. 
   ಪಟ್ಟಣ ಪಂಚಾಯತದಿಂದ ಮೊದಲಿನಿಂದಲೂ ಮೂಲಭೂತ ಸೌಲಭ್ಯಗಳನ್ನು ನೀಡಲು ಸಹಕಾರ ದೊರೆತಿದೆ. ಇದಕ್ಕಾಗಿ ಹಿಂದೂ ಸಮಾಜದ ಬಂಧುಗಳು ಕೃತಜ್ಞರಾಗಿದ್ದಾರೆ. ಆದಾಗ್ಯೂ, ಶವಸಂಸ್ಕಾರ ಸ್ಥಳದ ಗೋಡೆ ದುರಸ್ತಿ, ಮಳೆಗಾಲದಲ್ಲಿ ಶವಸಂಸ್ಕಾರಕ್ಕೆ ಆಗಮಿಸುವವರಿಗೆ ತಂಗಲು ಸ್ಥಳ, ಕಟ್ಟಿಗೆ ಇಡಲು ಶೆಡ್, ಹಾಗೂ ಇತರೆ ಅವಶ್ಯಕ ಸೌಲಭ್ಯಗಳನ್ನು ಒದಗಿಸಲು ಪಟ್ಟಣ ಪಂಚಾಯತವು ತಕ್ಷಣ ಅನುದಾನ ಮೀಸಲಿಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. 
   ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸುನಿಲ ಗಾವಡೆ ಅವರು ಮನವಿಯನ್ನು ಸ್ವೀಕರಿಸಿ, ಶೀಘ್ರದಲ್ಲೇ ರುದ್ರಭೂಮಿ ಅಭಿವೃದ್ಧಿ ಕಾರ್ಯಕ್ಕೆ ಸಂಬಂಧಿಸಿದ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು. 
   ಮನವಿ ಸಲ್ಲಿಸುವ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ತಾಲೂಕು ಕಾರ್ಯದರ್ಶಿ ವಿಶಾಲ ವಾಳಂಬಿ, ನಗರ ಅಧ್ಯಕ್ಷ ಅನಂತ ಗಾಂವ್ಕರ್, ಪ್ರಮುಖರಾದ ರಾಮು ನಾಯ್ಕ, ಹಾಗೂ ಶಾಮಿಲಿ ಪಾಟಣಕರ ಸೇರಿದಂತೆ ಅನೇಕ ಪ್ರಮುಖರು ಇದ್ದರು.