Adv

news21 ‌ ‌YELLAPURNews prakatane --------- ‌ ‌patanakaroct10to17pydkumar Oct9to15 ‌ ‌ ‌ ‌ ‌ oct5to15-pyd ‌‌ ‌ Vishal-sep13to-unlimited ‌ ‌ ‌ ‌ IMG-20241009-195526

Monday 16 September 2024

ಯಲ್ಲಾಪುರ ದೇವಿ ಮೈದಾನ ಗಜಾನನೋತ್ಸವ ಸಮಿತಿಯಿಂದ ಹೆಚ್ಚುವರಿ ಎಸ್‌ಪಿ ಎಂ ಜಗದೀಶ ಅವರಿಗೆ ಸನ್ಮಾನ

IMG-20240916-093652 ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ಪಟ್ಟಣದ ದೇವಿ ಮೈದಾನ ಗಜಾನನೋತ್ಸವ ಸಮಿತಿ ಭಾನುವಾರ ಮುಂಜಾನೆ ವಿಶೇಷ ಸಮಾರಂಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೆಚ್ಚುವರಿ ಎಸ್‌ಪಿ ಎಂ ಜಗದೀಶ ಅವರನ್ನು ಸನ್ಮಾನಿಸಿ ಗೌರವ ಸಲ್ಲಿಸಿತು. ಈ ಸಮಾರಂಭದಲ್ಲಿ ಎಂ ಜಗದೀಶ ಅವರ ಸಾಧನೆಗಳನ್ನು ಕೊಂಡಾಡಲಾಯಿತು ಮತ್ತು ಅವರು ತಮ್ಮ ಮೂಲ ಊರಾದ ಯಲ್ಲಾಪುರದ ಬಗ್ಗೆ ತಾಳಿರುವ ಪ್ರೀತಿಯ ಕುರಿತು ಶ್ಲಾಘಿಸಲಾಯಿತು. 
   ಗೌರವ ಸ್ವೀಕರಿಸಿ ಮಾತನಾಡಿದ ಎಂ ಜಗದೀಶ, ಅವರು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಕನ್ನಡ ಮಾಧ್ಯಮ ಶಾಲೆಯಾದ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪಡೆದಿರುವುದಾಗಿ ಹೆಮ್ಮೆಯಿಂದ ಹೇಳಿದರು. ಇಂದಿನ ವಿದ್ಯಾರ್ಥಿಗಳಿಗೆ ಅವರು ಮಾರ್ಗದರ್ಶನ ನೀಡುತ್ತಾ, "ಮಕ್ಕಳು ತಮ್ಮ ಗುರುಗಳಿಂದ ಕಲಿಯಲು ವಿಷಯಗಳಿಗೆ ಹೆಚ್ಚು ಆದ್ಯತೆ ನೀಡಬೇಕು. ಜ್ಞಾನವನ್ನು ಹೆಚ್ಚಿಸಲು ಅಧ್ಯಯನವೇ ಮಾರ್ಗ. ಅಲ್ಲದೆ, ಕೇವಲ ಕೆಲ ನಿಮಿಷದ ತೃಪ್ತಿಗಾಗಿ ದುಶ್ಚಟಗಳಿಗೆ ದಾಸರಾಗುವ ಬದಲು, ಪುಸ್ತಕಗಳ ದಾಸರಾಗಬೇಕು" ಎಂದು ಸಲಹೆ ನೀಡಿದರು. IMG-20240916-093632 ಮಕ್ಕಳ ಛದ್ಮವೇಷ ಸ್ಪರ್ಧೆ ಮತ್ತು ಅಭಿನಯ ಗೀತೆ ಕಾರ್ಯಕ್ರಮವನ್ನು ವೀಕ್ಷಿಸಿದ ಅವರು, ಮಕ್ಕಳ ಪ್ರತಿಭೆಯನ್ನು ಮೆಚ್ಚಿಕೊಂಡು ಅವರನ್ನು ಶ್ಲಾಘಿಸಿದರು. "ಪ್ರತಿಯೊಬ್ಬ ವಿದ್ಯಾರ್ಥಿಯೂ ನಿರಂತರ ಪ್ರಯತ್ನ ಮಾಡುವುದರಿಂದ ಯಶಸ್ಸು ಕಾಣಲು ಸಾಧ್ಯ," ಎಂದ ಅವರು, ತಮಗೆ ಸನ್ಮಾನಿಸಿರುವುದಕ್ಕಾಗಿ ಗಜಾನನಿಒತ್ಸವ ಸಮಿತಿಗೆ ಕೃತಜ್ಞತೆ ಸಲ್ಲಿಸಿದರು. 
   ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಕಾರ್ಯದರ್ಶಿ ಸಂಜೀವಕುಮಾರ್ ಹೊಸ್ಕೇರಿ, "ಎಂ ಜಗದೀಶ ಅವರು, ಎಷ್ಟು ಉನ್ನತ ಹುದ್ದೆಯನ್ನು ಅಲಂಕರಿಸಿದ್ದರೂ ತಮ್ಮ ಹುಟ್ಟೂರನ್ನು ಮರೆಯದೆ, ಸಮಿತಿಯ ಜೊತೆಗೆ ಪ್ರತಿ ವರ್ಷ ಭಾಗವಹಿಸುತ್ತಾರೆ. ಇದು ನಮ್ಮ ಗಜಾನನೋತ್ಸವ ಸಮಿತಿಗೆ ಅತ್ಯಂತ ಹೆಮ್ಮೆಯ ವಿಚಾರ," ಎಂದು ಹೇಳಿದರು. "ಜಗದೀಶ್ ಅವರು ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ನಿರ್ವಹಿಸಿರುವ ಸೇವೆಯನ್ನು ಶ್ಲಾಘಿಸುತ್ತಾ, ಅವರಿಗೆ ಭವಿಷ್ಯದಲ್ಲಿ ಮತ್ತಷ್ಟು ಯಶಸ್ಸು, ಉನ್ನತ ಸ್ಥಾನಗಳು ದೊರಕಲಿ" ಎಂದು ಶುಭಹಾರೈಸಿದರು. IMG-20240916-093644 ಈ ಸಮಾರಂಭದಲ್ಲಿ ಗಜಾನನೋತ್ಸವ ಸಮಿತಿಯ ಅಧ್ಯಕ್ಷ ಗಣೇಶ ಪತ್ತಾರ, ಗೌರವಾಧ್ಯಕ್ಷ ನಾಗಾ ಪ್ರಭು, ಸಹಕಾರ್ಯದರ್ಶಿ ಮಾರುತಿ ನಾಯ್ಕ, ಮತ್ತು ಹಿರಿಯ ಸದಸ್ಯ ಸುರೇಶ್ ಮುರ್ಕುಂಬಿ ಸೇರಿದಂತೆ ಅನೇಕ ಪದಾಧಿಕಾರಿಗಳು ಉಪಸ್ಥಿತರಿದ್ದರು.
.
.
.