
ಓಣಂ ಹಬ್ಬವು ಕೇರಳ ರಾಜ್ಯದ ಸಂಸ್ಕೃತಿಯ ಪ್ರತೀಕವಾಗಿದೆ. ಆಕರ್ಷಕ ಹೂವಿನ ರಂಗೋಲಿ ಹಾಕುವುದು ಹಬ್ಬದ ವಿಶೇಷತೆಗಳಲ್ಲೊಂದಾಗಿದೆ. ಸಾಂಪ್ರದಾಯಿಕ ಉಡುಗೆ ತೊಟ್ಟು, ಕೇರಳ ಸಮಾಜದ ಸ್ತ್ರೀ ಪುರುಷರು ಮನೆಗಳಲ್ಲಿ ವರ್ಣರಂಜಿತ ರಂಗೋಲಿ ಹಾಕಿ ಗಮನ ಸೆಳೆದರು.
ಓಣಂ ಕೇರಳ ರಾಜ್ಯದ ಪ್ರಮುಖ ಹಬ್ಬಗಳಲ್ಲಿ ಒಂದು, ಇದನ್ನು ಕೇರಳದ ಮಲಯಾಳಿ ಸಮುದಾಯದವರು ಬಹಳ ಉತ್ಸವದ ಜೊತೆಗೆ ಆಚರಿಸುತ್ತಾರೆ. ಸಾಮಾನ್ಯವಾಗಿ ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಿನಲ್ಲಿ ಬರುವ ಓಣಂ ಹಬ್ಬವು ರೈತರ ಹಬ್ಬವಾಗಿದ್ದು, ಬೆಳೆಗೆ ಕೃತಜ್ಞತೆ ಸಲ್ಲಿಸುವ ಉದ್ದೇಶವನ್ನು ಕೂಡ ಈ ಹಬ್ಬ ಹೊಂದಿದೆ. ಇದನ್ನು ಧನದ ವೃದ್ದಿಯ ಸಂತೋಷದ ಹಾಗೂ ಸಮೃದ್ಧಿಯ ಹಬ್ಬವೆಂದು ಪರಿಗಣಿಸಲಾಗುತ್ತದೆ.

ಓಣಂ ಹಬ್ಬದ ಮೂಲವು ಮಹಾಬಲಿಚಕ್ರವರ್ತಿ ಎಂಬ ದಾನಿಯ ನೆನಪಿಗೆ ಸೇರಿದೆ. ಪುರಾಣ ಪ್ರಕಾರ, ಮಹಾಬಲಿಚಕ್ರವರ್ತಿ ತನ್ನ ಪ್ರಜೆಗಳಿಗೆ ಬಹಳ ಒಳ್ಳೆಯ ಹಾಗೂ ನ್ಯಾಯಪ್ರದ ಆಡಳಿತವನ್ನು ನೀಡಿದ್ದನು ಎಂದು ಐಹಿತ್ಯವಿದೆ. ಅವನ ಸಾಮ್ರಾಜ್ಯದಲ್ಲಿ ಎಲ್ಲರೂ ಸಮಾನತೆ, ಶಾಂತಿ ಮತ್ತು ಸಂತೋಷದಿಂದ ಜೀವನ ನಡೆಸುತ್ತಿದ್ದರು. ಆದರೆ, ದೇವತೆಗಳು ಮಹಾಬಲಿಯು ಹೆಚ್ಚು ಶಕ್ತಿಶಾಲಿಯಾಗುತ್ತಾನೆ ಎಂಬ ಭಯದಿಂದ ಅವನನ್ನು ಪಾತಾಳ ಲೋಕಕ್ಕೆ ಕಳಿಸುತ್ತಾರೆ. ಆದರೂ, ಮಹಾಬಲಿ ತನ್ನ ಪ್ರಜೆಗಳನ್ನು ವರ್ಷದಲ್ಲಿ ಒಂದು ಬಾರಿ ಭೇಟಿಯಾಗಲು ಅವಕಾಶ ಪಡೆಯುತ್ತಾನೆ ಎಂಬ ನಂಬಿಕೆ ಇದೆ. ಈ ಸಮಾರಂಭವೇ ಓಣಂ ಹಬ್ಬ.
ಓಣಂ ಹಬ್ಬವನ್ನು ದಶದಿನಗಳ(ಹತ್ತು ದಿನ) ಉತ್ಸವದ ರೂಪದಲ್ಲಿ ಆಚರಿಸಲಾಗುತ್ತದೆ. ಮೊದಲ ದಿನ 'ಅಥಮ್' ದಿನವೆಂದು ಕರೆಯಲಾಗುತ್ತದೆ, ಇದರಿಂದ ಹಬ್ಬದ ಆರಂಭವಾಗುತ್ತದೆ. ಮನೆಗಳ ಮುಂಭಾಗದಲ್ಲಿ ಪೂಕಳಂ ಎಂಬ ಹೂವಿನಿಂದ ಅಲಂಕಾರ ಮಾಡುವುದು ಓಣಂ ಹಬ್ಬದ ಪ್ರಮುಖ ಅಂಗವಾಗಿದೆ. ಪ್ರತಿ ದಿನವೂ ಹೊಸ ಹೊಸ ಹೂಗಳಿಂದ ಪೂಕಳಂ ಅಲಂಕಾರವನ್ನು ಹೆಚ್ಚಿಸುತ್ತಾರೆ. ವಿಶೇಷ ಬೋಜನವೂ ಹಬ್ಬದ ಮುಖ್ಯ ಆಕರ್ಷಣೆ, ಇದರಲ್ಲಿ ವಿವಿಧ ಸವಿರುಚಿಯ ಅಡುಗೆಗಳು ಬಾಳೆಯ ಎಲೆಗಳ ಮೇಲೆ ಸೇವಿಸಲಾಗುತ್ತದೆ.

ಹಬ್ಬದ ಸಂದರ್ಭಗಳಲ್ಲಿ ಸಾಂಪ್ರದಾಯಿಕ ಕೇರಳ ಕಲೆ, ಸಾಂಪ್ರದಾಯಿಕ ನೃತ್ಯಗಳು, ಇತ್ಯಾದಿ ವಿವಿಧ ಕ್ರೀಡಾಕೂಟಗಳನ್ನು ನಡೆಸಲಾಗುತ್ತದೆ. ಒಟ್ಟಿನಲ್ಲಿ, ಓಣಂ ಮಲಯಾಳಿಗಳಲ್ಲಿ ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಭಿವ್ಯಕ್ತಿ ಪಡಿಸುವ ಹಬ್ಬವಾಗಿದ್ದು, ಅದರಲ್ಲಿ ಎಲ್ಲರೂ ಒಂದಾಗಿ ಶಾಂತಿ, ಸಂತೋಷ ಹಾಗೂ ನೆಮ್ಮದಿ ಹಂಚಿಕೊಳ್ಳುತ್ತಾರೆ.
ಯಲ್ಲಾಪುರ ತಾಲೂಕಿನಲ್ಲಿ ಹಲವಾರು ಕೇರಳ ಮೂಲದ ಕುಟುಂಬಗಳಿದ್ದು, ಕಳೆದ ಹತ್ತು ದಿನಗಳಿಂದ ಆರಬೈಲ ಗ್ರಾಮದ ಪ್ರಭಾಕರ್ ನಾಯರ್ ಅವರ ಮನೆಯಲ್ಲಿ ಓಣಂ ಹಬ್ಬದ ತಯಾರಿಗಳು ನಡೆದವು. ಭಾನುವಾರ ಎಲ್ಲ ಕೇರಳ ಮೂಲದ ಕುಟುಂಬದವರು ಸೇರಿ ಅದ್ದೂರಿಯಾಗಿ ಒಣ ಹಬ್ಬವನ್ನು ಆಚರಿಸಿದರು.

ಈ ಸಂದರ್ಭದಲ್ಲಿ ಪ್ರಭಾಕರ್ ನಾಯರ್ ಮತ್ತು ಕುಟುಂಬದವರು, ಯಲ್ಲಾಪುರದ ಕೃಷ್ಣ ನಾಯರ್ ಮತ್ತು ಕುಟುಂಬದವರು ಹಾಗೂ ಶಿವಕುಮಾರ್ ಮತ್ತು ಕುಟುಂಬದವರು ಹಾಗೂ ಎಲ್ಲಾ ಕುಟುಂಬದ ಸದಸ್ಯರು ಉಪಸ್ಥಿತರಿದ್ದು ಹಬ್ಬವನ್ನು ಆಚರಿಸಿದರು.
ಹಬ್ಬದ ಹಿನ್ನೆಲೆಯಲ್ಲಿ ಮನೆಗಳಲ್ಲಿ ವಿಶೇಷ ಪೂಜೆಗಳನ್ನು ನಡೆಸಲಾಯಿತು. ವಿವಿಧ ರೀತಿಯ ಭಕ್ಷ್ಯ, ಭೋಜನಗಳನ್ನು ತಯಾರಿಸಿ ಸ್ನೇಹಿತರು, ಬಂಧುಗಳೊಂದಿಗೆ ಸವಿಯಲಾಯಿತು’ ಎಂದು ಕೇರಳ ಸಮಾಜದ ಪ್ರಮುಖರಾದ ಶಿವಕುಮಾರ್ ಅವರು ತಿಳಿಸಿದ್ದಾರೆ.
.
.
.