ಯಲ್ಲಾಪುರ: ವಿಶ್ವ ಹಿಂದು ಪರಿಷದ್ (ವಿ.ಹಿಂ.ಪ.) ಯಲ್ಲಾಪುರ ಘಟಕವು ಹುಬ್ಬಳ್ಳಿ ರಸ್ತೆಯ ಹಿಂದೂ ರುದ್ರಭೂಮಿಯ ಸ್ವಚ್ಛತೆಗೆ ಒಂದು ಮಹತ್ವದ ಕಾರ್ಯಕ್ಕೆ ಜರೆ ನೀಡಿದೆ.
ಹುಬ್ಬಳ್ಳಿ ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯ ಸ್ವಚ್ಛತಾ ಕಾರ್ಯವನ್ನು ಸೆಪ್ಟೆಂಬರ್ 18, ಬುಧವಾರದಂದು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯದಲ್ಲಿ ಭಾಗವಹಿಸಲು ವಿಶ್ವ ಹಿಂದು ಪರಿಷದ್ ತಾಲೂಕಾ ಘಟಕವು ಹಿಂದೂ ಬಾಂಧವರನ್ನು, ಸ್ಥಳೀಯ ಸಂಘಟನೆಗಳನ್ನು ಮತ್ತು ಸಾರ್ವಜನಿಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದೆ.
ಈ ಹಿಂದೆ, ಹಿಂದೂ ರುದ್ರಭೂಮಿಯಲ್ಲಿ ಸ್ವಚ್ಛತೆ ಮತ್ತು ನಿರ್ವಹಣೆ ವಿಷಯವಾಗಿ ಕೆಲವು ಸಮಸ್ಯೆಗಳು ಉಲೇಖಿಸಲಾಗಿದ್ದವು. ಇದನ್ನು ಸಮರ್ಥವಾಗಿ ಪರಿಹರಿಸಲು, ಯಲ್ಲಾಪುರ ಪಟ್ಟಣ ಪಂಚಾಯತಕ್ಕೆ ವಿ.ಹಿಂ.ಪ. ವತಿಯಿಂದ ಮನವಿ ಸಲ್ಲಿಸಲಾಗಿತ್ತು. ಈ ಮನವಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಪ್ರಸ್ತಾವನೆ ಇಟ್ಟಿದ್ದರು.
ಈಗ, ಈ ರುದ್ರಭೂಮಿಯ ಸ್ವಚ್ಛತೆಯ ಜೊತೆಗೆ, ಅದರ ಪರಿಸರ ಸುಧಾರಣೆಗೆ ವಿಶೇಷ ದೃಷ್ಟಿ ಹರಿಸಲಾಗುತ್ತಿದೆ. ವಿ.ಹಿಂ.ಪ.ಯ ಯುವ ಸದಸ್ಯರು ಮತ್ತು ಹಿರಿಯ ಮುಖಂಡರು ಈ ಕಾರ್ಯಕ್ಕೆ ಮುಂಚೂಣಿಯಾಗಿದ್ದು, ಪ್ರತಿ ಹಿಂದೂ ಬಾಂಧವರೂ ಈ ಸೇವಾ ಕಾರ್ಯದಲ್ಲಿ ಕೈಜೋಡಿಸಲು ಸಲಹೆ ನೀಡಿದ್ದಾರೆ.
ವಿಶ್ವ ಹಿಂದು ಪರಿಷದ್ ತಾಲೂಕಾ ಅಧ್ಯಕ್ಷ ಗಜಾನನ ನಾಯ್ಕ ತಳ್ಳಿಕೇರಿ, "ಹಿಂದೂ ಸಮುದಾಯದ ಎಲ್ಲರೂ ಈ ಸೇವಾ ಕಾರ್ಯದಲ್ಲಿ ಭಾಗವಹಿಸುವ ಮೂಲಕ ನಮ್ಮ ಸ್ಮಶಾನವನ್ನು ಸ್ಚಚ್ಛಗೊಳಿಸಿ ಗೌರವಿಸುವ ಪ್ರಯತ್ನ ಮಾಡೋಣ" ಎಂದು ಕರೆ ನೀಡಿದ್ದಾರೆ.
ಸಮಯ :. 18 ಸೆಪ್ಟೆಂಬರ್, ಬುಧವಾರ
ಬೆಳಿಗ್ಗೆ : 7 ರಿಂದ 8.30 ವರೆಗೆ
ರಾಮು ನಾಯ್ಕ ಹೇಳಿಕೆ :
ಇಂದಿನಿಂದ ಪಿತ್ರಪಕ್ಷದ ಆರಂಭ. ಈ 15 ದಿನಗಳ ಕಾಲಾವಧಿಯಲ್ಲಿ, ಅಗಲಿದ ನಮ್ಮ ಹಿರಿಯರನ್ನು ಸ್ಮರಿಸಿ, ಗೌರವಿಸುವ ಸಂಪ್ರದಾಯ ಹಿಂದುಗಳಲ್ಲಿದೆ. ಈ ವಿಶೇಷ ಸಂದರ್ಭದಲ್ಲಿ ಸ್ಥಳಿಯ ವಿಶ್ವ ಹಿಂದು ಪರಿಷದ್ ಘಟಕವು, ಪಟ್ಟಣದ ಹುಬ್ಬಳ್ಳಿ ರಸ್ತೆಯಲ್ಲಿರುವ ಪುರಾತನ ಹಿಂದು ರುದ್ರಭೂಮಿ ಸ್ವಚ್ಚತಾ ಕಾರ್ಯವನ್ನು ಹಮ್ಮಿಕೊಂಡಿದ್ದು, ಈ ಧರ್ಮಸೇವಾ ಕಾರ್ಯದಲ್ಲಿ ನಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸೋಣ ಎಂದು ಸಾಮಾಜಿಕಕಾರ್ಯಕರ್ತ ರಾಮು ನಾಯ್ಕ ತಮ್ಮಹೇಳಿಕೆಯಲ್ಲಿ ತಿಳಿಸಿದ್ದಾರೆ.
.
.