
ಹಿಂದಿ ಭಾಷೆಯ ಬಗ್ಗೆ ಶಾಲೆಯ 4ನೇ ತರಗತಿಯ ವಿದ್ಯಾರ್ಥಿಗಳು ಹಿಂದಿ ದಿವಸ ಕುರಿತು ಬಗ್ಗೆ ಅಭಿನಯ ಗೀತೆ ಪ್ರದರ್ಶಿಸಿದರು.
ಜೊತೆಗೆ ಅದರ ಏಳನೇ ತರಗತಿಯ ವಿದ್ಯಾರ್ಥಿನಿ ಅರಫಾ ಹಿಂದಿ ದಿನದ ಕುರಿತು ಮಾತನಾಡಿ, ಹಿಂದಿ ದಿನವು ಭಾರತದಲ್ಲಿ ಪ್ರತೀ ವರ್ಷ ಸೆಪ್ಟೆಂಬರ್ 14 ರಂದು ಆಚರಿಸಲಾಗುತ್ತದೆ. 1949ರಲ್ಲಿ ಭಾರತದ ಸಂವಿಧಾನ ಸಭೆಯಲ್ಲಿ ಹಿಂದಿಯು ದೇಶದ ಅಧಿಕೃತ ಭಾಷೆಯಾಗಿ ಘೋಷಿಸಲಾಯಿತು. ಈ ದಿನದ ಮಹತ್ವವನ್ನು ಅರ್ಥಮಾಡಿಕೊಳ್ಳಲು ಹಿಂದಿ ದಿನದ ಆಚರಣೆ ಮಾಡಲಾಗುತ್ತದೆ, ಭಾಷೆಯು ಯಾವ ದೇಶಕ್ಕೂ ಅದರ ಸಾಂಸ್ಕೃತಿಕ ಆಸ್ಥಿಯನ್ನು ಪ್ರತಿಬಿಂಬಿಸುತ್ತದೆ ಎಂಬುದನ್ನು ಅರಿಯಬೇಕು ಎಂದು ಹೇಳಿದಳು.
ಶಾಲೆಯ ಮುಖ್ಯೋಪಾಧ್ಯಾಯರಾದ ಫಾದರ್ ರೊಯ್ಯಸ್ಟನ ಗೊನ್ಸಾಲ್ವಿಸ್ ಮಾತನಾಡಿ, ಹಿಂದಿ ನೂರು ಕೋಟಿ ಜನರ ಪಾಲಿನ ಮಾತೃಭಾಷೆಯಾಗಿದ್ದು, ಇದು ವಿಭಿನ್ನ ರಾಜ್ಯಗಳಲ್ಲಿ, ವಿವಿಧ ಭಾಷಾ ಸಾಂಸ್ಕೃತಿಕ ಪಾರ್ಶ್ವದಲ್ಲಿ ದೇಶದ ಏಕತೆ ಮತ್ತು ಸಮಾನತೆಯನ್ನು ವ್ಯಕ್ತಗೊಳಿಸುತ್ತದೆ. ಭಾರತದಲ್ಲಿ ಬೌದ್ಧಿಕ, ಸಾಹಿತ್ಯಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಹಿಂದಿಯು ಪ್ರಮುಖ ಪಾತ್ರವಹಿಸಿದೆ. ದೇಶಾದ್ಯಾಂತ ಸಮಾನ ಭಾಷಾ ಹಕ್ಕುಗಳ ಪ್ರೋತ್ಸಾಹಕವಾಗಿರುವ ಹಿಂದಿ ದಿನವು, ಹಿಂದಿ ಭಾಷೆಯ ಪ್ರಚಾರ ಹಾಗೂ ಜಾಗೃತಿ ಮೂಡಿಸಲು ಹಾಗೂ ಅದನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಸಮರ್ಪಿತವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಕ ವೃಂದದವರಾದ ಸಿಸ್ಟರ್ ಸೋನಿಯಾ, ಲೀಲೆಶ, ರೇಖಾ, ಅನಿತಾ, ಸಂಗೀತಾ, ಪೀಟರ್, ಪವಿತ್ರ, ಮಫೀನಾ, ಸುನಿತಾ, ಸುಷ್ಮಾ, ರೇವಿನಾ, ದಿವ್ಯ, ಪ್ರೆಮಿಟಾ, ಸ್ಟೆಫಿ, ಮಾರ್ಗರೇಟ್, ಶ್ವೇತಾ , ಸಿಸ್ಟರ ಫ್ರಾನ್ಸಿನಾ ಇನ್ನಿತರರು ಉಪಸ್ಥಿತರಿದ್ದರು.



.
.
.