ಯಲ್ಲಾಪುರ : ಇಚ್ಛಾಶಕ್ತಿ ಒಂದಿದ್ದರೆ ಬಂಡೆಯಿಂದಲೂ ನೀರು ಬಸಿಯಬಹುದು, ಎನ್ನುವುದಕ್ಕೆ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರರು ಒಂದು ಉದಾಹರಣೆಯಾಗಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳ ಮನವೊಲಿಸಿ, ಕ್ಷೇತ್ರದ ನಿರಾವರಿ ಹಾಗೂ ಕುಡಿಯುವ ನೀರಿನ ಯೋಜನೆಗಳಿಗೆ ಸುಮಾರು 500 ಕೋಟಿಗೂ ಹೆಚ್ಚಿನ ಅನುದಾನ ಮಂಜೂರಿ ಮಾಡಿಸಿಕೊಂಡು ಬಂದಿರುವುದು ಸಣ್ಣ ಸಂಗತಿಯೇನಲ್ಲ ಎಂದು ನಾಗರಿಕ ವೇದಿಕೆಯ ಅಧ್ಯಕ್ಷ ರಾಮು ನಾಯ್ಕ ಹೇಳಿದ್ದಾರೆ.
ಅವರು ಈ ಕುರಿತು ಪತ್ರಿಕಾ ಹೇಳಿಕೆ ನೀಡಿ, ಶಿವರಾಮ ಹೆಬ್ಬಾರರು ಆಯ್ಕೆಯಾಗಿರುವುದು ಬಿಜೆಪಿ ಪಕ್ಷದಿಂದ. ಆದರೆ, ಸಧ್ಯ ಕರ್ನಾಟಕದಲ್ಲಿದಲ್ಲಿ ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೆಸ್ ಸರಕಾರ ಆಡಳಿತ ನಡೆಸುತ್ತಿದೆ. ಅಭಿವೃದ್ಧಿ ವಿಷಯದಲ್ಲಿ ಆಡಳಿತ ಪಕ್ಷದವರಿಗೆ ಸಿಗುವ ಮಾನ್ಯತೆ ವಿರೋಧಿ ಸದಸ್ಯರಿಗೆ ಸಿಗುವದಿಲ್ಲ. ಇದೂ ಎಲ್ಲರಿಗೂ ಗೊತ್ತಿರುವ ಸತ್ಯ. ಇಂತಹ ಪ್ರತಿಕೂಲ ಸಂದರ್ಭದಲ್ಲಿಯೂ ನಮ್ಮ ಶಾಸಕರು ಕ್ಷೇತ್ರಕ್ಕೆ ತಮ್ಮ ಬದ್ದತೆ ಪ್ರದರ್ಶಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳ ಮನವೊಲಿಸಿ, ಕ್ಷೇತ್ರದ ನೀರಾವರಿ ಹಾಗೂ ಕುಡಿಯುವ ನೀರಿನ ಯೋಜನೆಗಳಿಗೆ ಸುಮಾರು 500 ಕೋಟಿಗೂ ಹೆಚ್ಚಿನ ಅನುದಾನ ಮಂಜೂರಿ ಮಾಡಿಸಿಕೊಂಡು ಬಂದಿರುವುದು ಸಣ್ಣ ಸಂಗತಿಯೇನಲ್ಲ. ಇಡೀ ಯಲ್ಲಾಪುರ ಕ್ಷೇತ್ರದ ಜನತೆಯ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆಎಂದು ತಿಳಿಸಿರುವ ರಾಮು ನಾಯ್ಕ,
ಜೊತೆಗೆ ಬರುವ 2-3 ವರ್ಷದ ಕಾಲಾವಧಿಯಲ್ಲಿ ಅವರಿಂದ ನಮ್ಮ ಕ್ಷೇತ್ರಕ್ಕೆ, ಜನರ ಕೈಗೆ ಉದ್ಯೋಗ ದೊರಕುವಂತಹ ಇನ್ನಷ್ಟು ಅಭಿವೃದ್ಧಿ ಯೋಜನೆಗಳೂ, ಅನುದಾನಗಳೂ ಹರಿದು ಬರಲೆಂದೂ ಆಶಿಸಿದ್ದಾರೆ.
ಅನುಭವಿ ಶಾಸಕ ಹೆಬ್ಬಾರರು ಕೇಂದ್ರದ ಮೇಲೆಯೂ ಒತ್ತಡ ತಂದು, ಯಲ್ಲಾಪುರ ಕ್ಷೇತ್ರದ ಮಾಜಿ ಶಾಸಕರು ಹಾಗೂ ಸಧ್ಯ ನಮ್ಮ ಸಂಸದರೂ ಆಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಸಹಕಾರದಲ್ಲಿ, ಯಲ್ಲಾಪುರ ತಾಲೂಕಿನ ಅನೇಕ ವರ್ಷಗಳ ಬೇಡಿಕೆಯಾದ ಹುಬ್ಬಳ್ಳಿ-ಯಲ್ಲಾಪುರ- ಅಂಕೋಲಾ ರೈಲು ಯೋಜನೆ, ಪೇಟೆಯ ಮಧ್ಯದಲ್ಲಿಯೇ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ಯಲ್ಲಾಪುರ ಪಟ್ಟಣದಲ್ಲಿ ಬೈಪಾಸ್ ರಸ್ತೆ ನಿರ್ಮಾಣ, ದುರ್ಗಮ ಅರಬೈಲ್ ಘಟ್ಟ ಪ್ರದೇಶವನ್ನು ಹೊಂದಿರುವ ಯಲ್ಲಾಪುರದಲ್ಲಿ ಸುಸಜ್ಜಿತ ಟ್ರೋಮಾ ಸೆಂಟರ್ ಆಸ್ಪತ್ರೆ (ಅಪಘಾತ ವಲಯದಲ್ಲಿ ಸ್ಥಾಪಿಸುವ ಅತ್ಯಾಧುನಿಕ ತುರ್ತು ಚಿಕಿತ್ಸಾ ಘಟಕ) ಇವುಗಳ ಮಂಜೂರಾತಿಗೂ ಪ್ರಯತ್ನಿಸಬೇಕಾಗಿ ಶಾಸಕಶಿವರಾಮ ಹೆಬ್ಬಾರ್ ಅವರಲ್ಲಿ ಮಾಧ್ಯಮದ ಮೂಲಕ ಕೋರಿದ್ದಾರೆ.
.
.