![IMG-20240914-232950](https://i.ibb.co/n3PfmDD/IMG-20240914-232950.webp)
![IMG-20240914-232857](https://i.ibb.co/WGnSpkL/IMG-20240914-232857.webp)
ಕಾರ್ಯಕ್ರಮದ ಆರಂಭದ ನಿರೂಪಣೆ ತುಸು ಎಳೆದಂತೆ ಕಾಣಿಸಿಕೊಂಡರೂ, ನಂತರದ ಭಾಗದಲ್ಲಿ ನಿರೂಪಕರಿಂದ ಹಾಡಲಾದ "ರವಿಚಂದ್ರನ್" ಚಿತ್ರದ ಹಾಡೊಂದು ಎಲ್ಲರ ಮನಗೆದ್ದಿತು.
ನೃತ್ಯ ಗುರು ಅಮಯ ಅವರಿಂದ ಪ್ರಸ್ತುತಗೊಂಡ ನೃತ್ಯವೂ ಪ್ರೇಕ್ಷಕರಿಗೆ ವಿಶೇಷ ಅನುಭವ ನೀಡಿತು.
ಸ್ಥಳೀಯ ಕಲಾವಿದರು ತಮ್ಮ ಕಲೆಯ ಮೂಲಕ ಜನರ ಮನಸ್ಸಿಗೆ ಅಗಾಧ ನೆನಪು ಮೂಡಿಸಿದರು. ಯಲ್ಲಾಪುರದ ಬಹಳಷ್ಟು ಪ್ರೇಕ್ಷಕರು ತಮ್ಮ ಕೆಲಸ-ಕಾರ್ಯಗಳನ್ನು ಬಿಟ್ಟು, ಈ ಕಾರ್ಯಕ್ರಮವನ್ನು ವೀಕ್ಷಿಸಲು ಹಾಜರಾಗಿದ್ದರು. ಇದರಿಂದ ಸ್ಥಳೀಯ ವೃತ್ತಿಪರರಲ್ಲದ ಕಲಾವಿದರು ಕಲಾವಿದರಾಗಿ ತಮ್ಮ ಪ್ರತಿಭೆಯನ್ನು ಸ್ಫುಟಪಡಿಸಿದರು.
ಇತ್ತೀಚಿನ ವರ್ಷಗಳಲ್ಲಿ ಶಾಲಾ ಮತ್ತು ಕಾಲೇಜುಗಳ ವಾರ್ಷಿಕೋತ್ಸವಗಳಲ್ಲಿ, ಪ್ರತಿಭಾ ಕಾರಂಜಿಯಂತಹ ಮಕ್ಕಳ ಕಾರ್ಯಕ್ರಮಗಳನ್ನು ವೀಕ್ಷಿಸಲು ತಂದೆ-ತಾಯಿಗಳು ಹಾಗೂ ಕುಟುಂಬಸ್ಥರು, ನೆರೆ ಹೊರೆಯವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದು ಕಂಡುಬರುತ್ತಿದ್ದರೂ, ತಿಲಕ್ ಚೌಕದಲ್ಲಿ ನಡೆದ ಈ ಸಂಗೀತ ರಸಮಂಜರಿಯಲ್ಲಿ ನೆರೆದ ಜನರಿಂದಲೂ ಅದೇ ಉತ್ಸಾಹವು ಕಾಣಿಸಿತು.
ಕಾರ್ಯಕ್ರಮದ ನಿರೂಪಣಾ ಭಾಗದಲ್ಲಿಯೂ ತಿಲಕ್ ಚೌಕ್ ಗಜಾನೋತ್ಸವ ಸಮಿತಿ ಅಧ್ಯಕ್ಷ ಬಾಲಕೃಷ್ಣ ನಾಯಕರ ಶೀಘ್ರ ಮತ್ತು ಚುರುಕಿನ ನಿರೂಪಣೆ ಶ್ರೋತ್ರುಗಳ ಮೆಚ್ಚುಗೆಗೆ ಪಾತ್ರವಾಯಿತು.
![IMG-20240914-232837](https://i.ibb.co/GT8D4L7/IMG-20240914-232837.webp)
ತಿಲಕ್ ಚೌಕ್ ಗಜಾನೋತ್ಸವ ಸಮಿತಿಯ ಪ್ರಮುಖರಾದ ರವಿ ಶಾನಭಾಗ, ಶಿರೀಶ ಪ್ರಭು, ಸದಾನಂದ ಶಾನಭಾಗ, ಮಾಲತೇಶ ಗೌಳಿ, ಮಾಧವ ನಾಯಕ, ಸುಧಾಕರ ಪ್ರಭು, ಗಜಾನನ ನಾಯಕ, ಸಚಿನ್ ಕೇಕರೆ, ಕೃಷ್ಣಾ ನಾಯರ್, ರಜತ ಬದ್ದಿ, ನಮೀತಾ ಬೀಡಿಕರ್, ಭವ್ಯಾ ಬಾಲು ನಾಯಕ, ರಾಧಾ ಗುಡಿಗಾರ ಮತ್ತಿತರರು ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ತಮ್ಮ ಪೂರ್ಣ ಸಹಕಾರ ನೀಡಿದರು.
ಕಾರ್ಯಕ್ರಮದ ಆರಂಭದಲ್ಲಿ ದಿ. ದರ್ಶನ್ ಬೀಡಿಕರ್ ಮತ್ತು ದಿ. ಯೋಗೇಶ ಹಿರೇಮಠ ಅವರ ಸ್ಮರಣಾರ್ಥ ಒಂದು ನಿಮಿಷ ಮೌನ ಆಚರಿಸಲಾಯಿತು.
.
.
.