ಯಲ್ಲಾಪುರ: ತಾಲೂಕಿನ ದಾಟಿ ಬೇಡ್ತಿ ಬ್ರಿಡ್ಜ್ ನಿಂದ 500 ಮೀಟರ್ ದೂರದಲ್ಲಿ, ಕೆ.ಎಸ್.ಆರ್.ಟಿ.ಸಿ ಬಸ್ಸು ಮತ್ತು ಕಾರಿನ ನಡುವೆ ಗುರುವಾರ ಬೆಳಿಗ್ಗೆ ಅಪಘಾತ ಸಂಭವಿಸಿದ್ದು, ಕೆ.ಎಸ್.ಆರ್.ಟಿ.ಸಿ ಬಸ್ಸಿನ ಚಾಲಕನ ವಿರುದ್ಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾರು ಚಾಲಕ ನೂತನನಗರ, ಯಲ್ಲಾಪುರ ನಿವಾಸಿ ಅಲ್ತಾಫ್ ಅಹಮ್ಮದ್, ಈತನು ತನ್ನ ಕಾರಿನಲ್ಲಿ ಹೋಗುತ್ತಿದ್ದಾಗ ಕುಡ್ತಿಗಿಬೈಲ್ ಗುಂದ, ತಾಲೂಕು ಕುಮಟಾ ನಿವಾಸಿ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಗಣೇಶ ಪ್ರದೀಪ ನಾಯ್ಕ, ಈತನು ತನ್ನ ಬಸ್ಸನ್ನು ಅತಿ ವೇಗವಾಗಿ ಮತ್ತು ನಿಷ್ಕಾಳಜಿಯಿಂದ ಚಲಾಯಿಸಿದ್ದರಿಂದ ಅಪಘಾತ ಸಂಭವಿಸಿದೆ ಎಂದು ದೂರು ನೀಡಿದ್ದಾರೆ.
ಅಪಘಾತದಲ್ಲಿ ಅಲ್ತಾಫ್ ಅಹಮ್ಮದ್ ಅವರ ಕಾರಿನ ಮುಂದಿನ ಬಲಭಾಗದ ಬಂಪರ್, ಬೋನೆಟ್, ಹೆಡ್‌ಲೈಟ್ ಇಂಡಿಕೇಟರ್, ಶಾಕ್ ಅಬ್ಸರವರ್ ಮತ್ತು ಹಿಂದಿನ ಬಂಪರ್‌ಗೆ ಹಾನಿಯಾಗಿದೆ.
ಪ್ರಕರಣವನ್ನು ಯಲ್ಲಾಪುರ ಪೊಲೀಸ್ ಠಾಣೆಯ ಟ್ರಾಫಿಕ್‌ಪಿಎಸ್‌ಐ ನಸ್ರೀನ್ ತಾಜ್ ಚಟ್ಟರಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
.
.
.