ಜಯಕರ್ನಾಟಕ ಸಂಘಟನೆ ಮಾನವ ಸರಪಳಿ ನಿರ್ಮಾಣ ಪರಿಸರ ದಿನಾಚರಣೆ ಆಚರಣೆ
ಯಲ್ಲಾಪುರ: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮವು ತಾಟವಾಳ ಗ್ರಾಮದಲ್ಲಿ ಯಶಸ್ವಿಯಾಗಿ ನಡೆಯಿತು. ಜಯಕರ್ನಾಟಕ ತಾಲೂಕ ಸಂಘಟನೆ ಅಧ್ಯಕ್ಷರು ಮತ್ತು ಸಂಘಟನೆಯ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾನವ ಸರಪಳಿ ನಿರ್ಮಿಸಿದರು.
ಈ ಸಂದರ್ಭದಲ್ಲಿ, ಸಂಘಟನೆಯ ಸದಸ್ಯರು ಪರಿಸರದ ರಕ್ಷಣೆಗೆ ಪ್ರಾಮುಖ್ಯತೆ ನೀಡುವ ಉದ್ದೇಶದಿಂದ ಸಸಿ ನೆಟ್ಟು ಪರಿಸರ ದಿನಾಚರಣೆ ಆಚರಿಸಿದರು. ಈ ಕಾರ್ಯಕ್ರಮವು ಸ್ಥಳೀಯ ಸಮುದಾಯದಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಸಹಾಯ ಮಾಡಿತು.
ಕಾರ್ಯಕ್ರಮದಲ್ಲಿ ತಾಟವಾಳ ಗ್ರಾಮದಲ್ಲಿ ತಾಲೂಕ ಅಧ್ಯಕ್ಷ ವಿಲ್ಸನ್ ಅರ್ ಫರ್ನಾಂಡೀಸ್, ಎಸ್‌ಸಿ-ಎಸ್‌ಟಿ ಅಧ್ಯಕ್ಷ ಚನ್ನಪ ಡಿ ಎಚ್, ಪ್ರಮುಖರಾದ ರಜಬ್ ಅಲಿ ಒಂಟಿ; ಬಸವರಾಜ್ ಧೂಳಿಕೊಪ್ಪ; ಸುಭಾಷ್ ಡಿ ಎಚ್; ಸಾದಿಕ್ ಖಾಜಿ; ಸಂತೋಷ್ ಪೆಡ್ನೇಕರ್; ಮತ್ತು ವಿಠ್ಠಲ್ ಪಾಟೀಲ್ ಸೇರಿದಂತೆ ಹಲವು ಸಂಘಟನೆ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಚಂದ್ಗುಳಿಯ ಸಣ್ಣ ಗ್ರಾಮದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ
ಯಲ್ಲಾಪುರ: ಚಂದ್ಗುಳಿಯ ಸಣ್ಣ ಗ್ರಾಮ ಪಂಚಾಯತದ ಸದಸ್ಯರು, ಸ್ಥಳಿಯ ಶಾಲಾ ಮಕ್ಕಳು, ಅಂಗನವಾಡಿ ಕಾರ್ಯಕರ್ತೆಯರು, ಸ್ವ ಸಹಾಯ ಸಂಘದ ಸದಸ್ಯರು ಹಾಗೂ ಶಿಕ್ಷಕರು ಸೇರಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ವಿಶೇಷ ರೀತಿಯಲ್ಲಿ ಆಚರಿಸಿದರು. 250 ಕ್ಕೂ ಹೆಚ್ಚು ಜನರು ಮಾನವ ಸರಪಳಿ ನಿರ್ಮಿಸಿ ಪ್ರಜಾಪ್ರಭುತ್ವದ ಮಹತ್ವವನ್ನು ಜಾಗೃತಗೊಳಿಸಿದರು.
ಕಾರ್ಯಕ್ರಮದ ಅಂಗವಾಗಿ ಸರಕಾರದ ಸುತ್ತೋಲೆಯಂತೆ ನಾಡಗೀತೆ, ಮಾನವ ಸರಪಳಿ ಮತ್ತು ಜೈಕಾರ ನಡೆಯಿತು. ನಂತರ, ಸ್ವಚ್ಚತೆ ಮತ್ತು ಸಸಿನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ವಿವಿಧ ಗ್ರಾಮಗಳ ಮಕ್ಕಳು, ಅಂಗನವಾಡಿ ಸಹಾಯಕರು, ಧ.ಗ್ರಾ ಯೋಜನೆಯ ಕಾರ್ಯಕರ್ತರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಮುಖ್ಯಾಧ್ಯಾಪಕ ಸತೀಶ ಶೆಟ್ಟಿ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಗ್ರಾ.ಪಂ. ಅಧ್ಯಕ್ಷೆ ಶಿಲ್ಪಾ ನಾಯ್ಕ, ಶಿಕ್ಷಕರಾದ ಸುರೇಶ ನಾಯ್ಕ, ರಾಘವೇಂದ್ರ ಮಳಲಗಾಂವ್, ಪತ್ರಕರ್ತ ನರಸಿಂಹ ಸಾತೊಡ್ಡಿ ಮತ್ತು ಹಾಲು ಉತ್ಪಾದಕ ಸಂಘದ ಅಧ್ಯಕ್ಷ ದತ್ತಾತ್ರಯ ಭಟ್ಟ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪಂಚಾಯತ ಪಿಡಿಓ ರಾಜೇಶ ಶೇಟ್ ಮತ್ತು ಕಾರ್ಯದರ್ಶಿ ತುಕಾರಾಮ ನಾಯ್ಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿದರು.