1990 ರಲ್ಲಿ 25 ನೇ ವರ್ಷದ ರಜತ್ ಮಹೋತ್ಸವವನ್ನು ಶಿವಾನಂದ ಹರಿ ಕುದುಳೆ ಯವರ ನೇತೃತ್ವದಲ್ಲಿ ಆಚರಿಸಲಾಯಿತು. 2015 ರಲ್ಲಿ ಸ್ವರ್ಣ ಮಹೋತ್ಸವವನ್ನು ಗಣಪತಿ ಪ್ರಸನ್ನ ನರಹರಿ ಗುಡಿಗಾರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು ಮತ್ತು ಸುಮಾರು 45 ಲಕ್ಷ ರೂಪಾಯಿಗಳಲ್ಲಿ ಸುಂದರ ಕಟ್ಟಡವನ್ನು ನಿರ್ಮಿಸಲಾಯಿತು. 1990 ರಲ್ಲಿ ಯಲ್ಲಾಪುರ ಗೆಳೆಯರ ಬಳಗದವರು ಬೆಳ್ಳಿ ಕಿರೀಟವನ್ನು ನೀಡಿದರು. ಅಷ್ಟೆ ಅಲ್ಲದೇ ಸದಾನಂದ ಬೀಡಿಕರ್, ರಾಮಚಂದ್ರ ಬೀಡಿಕರ್, ಪ್ರಸನ್ನ ಗುಡಿಗಾರ ಸಿಂಘ ಕುಟುಂಬದವರ ಸೇವೆ ಹಾಗೂ ಮುಂಚೂಣಿ ಕೂಡ ಮಹತ್ವದ್ದಾಗಿದೆ.
2022-23 ರಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಮತ್ತು ಉದ್ಯಮಿ ವಿವೇಕ ಹೆಬ್ಬಾರ ಯವರ ಸಹಕಾರದೊಂದಿಗೆ ವಿಂಪ್ ಕಂಪನಿವತಿಯಿಂದ ನಮ್ಮ ಕಟ್ಟಡಕ್ಕೆ 4 ಲಕ್ಷ ರೂಪಾಯಿಗಳಲ್ಲಿ ಮೇಲ್ಚಾವಣಿ ನಿರ್ಮಾಣ ಮಾಡಲಾಯಿತು. 2023 ರಲ್ಲಿ 12 ಲಕ್ಷ ವೆಚ್ಚದಲ್ಲಿ ಪಕ್ಕದ ಜಾಗದಲ್ಲಿ ಮೂರು ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಲಾಗಿದೆ.
ಈ ವರ್ಷ 9 ದಿನಗಳ ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮಗಳು, ಗಣಹವನ ಮತ್ತು ಸಹಸ್ರ ದುರ್ವರ್ಚನೆ ಕಾರ್ಯಕ್ರಮಗಳು ನಡೆಯಲಿದೆ. ಸಮಿತಿಗೆ ದಿ. ನಾಗೇಶ್ ವಿಠೋಬ ಶಾನಭಾಗ ಕುಟುಂಬದವರು, ಕುದುಳೆ ಕುಟುಂಬದವರು ಮತ್ತು ಕಿತ್ತೂರು ಕುಟುಂಬದವರು ಸದಾ ಬೆಂಬಲಿಸುತ್ತಿದ್ದಾರೆ.
ಮೋಹನ ಹರಿ ಕುದುಳೆ, ಮನೋಹರ ದೇಸಾಯಿ ಮಾಸ್ತರ್, ರೇವಣಕರ್ ಮಾಸ್ತರ್, ಪಾಂಡುರಂಗ ಕಿತ್ತೂರು, ಉಲ್ಲಾಸ ಶಾನಭಾಗ, ನಾರಾಯಣ ಕಾಮತ, ವೆಂಕಟ್ರಾವ ಮಂತ್ರಿ ಮತ್ತು ಮಾರುತಿ ರೇವಣಕರ ಯವರು ಈ ಸಮಿತಿಯ ಮಾಜಿ ಅಧ್ಯಕ್ಷರಾಗಿದ್ದಾರೆ.
ಈ ವರ್ಷ 07-09-2024 ರಂದು ಗಣಪತಿ ಪ್ರತಿಷ್ಟಾಪನೆ ನಡೆಯಲಿದೆ. 13-09-2024 ರಂದು ಶುಕ್ರವಾರ ಮಹಾ ಅನ್ನಸಂತರ್ಪಣೆ ಮತ್ತು 17-09-2024 ರಂದು ವಿಸರ್ಜನಾ ಮಹಾಪೂಜೆ ನಡೆಯಲಿದೆ. 18-09-2024 ರಂದು ಬುಧವಾರ ವಿಸರ್ಜನಾ ಮೆರವಣಿಗೆ ಇರುತ್ತದೆ.
ಅದ್ದೂರಿ ಗಣೇಶೋತ್ಸವ ನಡೆಸಲು ಈಗಾಗಲೇ ಸಿದ್ಧತೆಯಲ್ಲಿ ತೊಡಗಿಸಿಕೊಂಡಿರುವ ಸಮಿತಿಯ ಸಕ್ರಿಯ ಅಧ್ಯಕ್ಷ ಬಾಲಕೃಷ್ಣ ನಾಯಕ, ಪದಾಧಿಕಾರಿಗಳಾದ ರವಿ ಶಾನಭಾಗ, ಸುಧಾಕರ ಪ್ರಭು, ಗಿರೀಶ ಪೈ, ಸಿದ್ಧಾರ್ಥ ನಂದೊಳ್ಳಿಮಠ, ರಜತ ಬದ್ದಿ, ಕೌರವ ಬದ್ದಿ, ಹೇಮಂತ ಗುಂಜೀಕರ, ನಯನ ಇಂಗಳೆ, ವಿಕ್ರಮ ಸಾಲಗಾಂವ್ಕರ, ಮಾರುತಿ ಪ್ರಭು, ಸದಾನಂದ ಶಾನಭಾಗ, ಮಾದವ ನಾಯಕ, ದತ್ತಾ ಬದ್ದಿ, ಪವನ ಕಾಮತ, ಮೂರ್ತಿ ಗುಡಿಗಾರ, ನಮೀತಾ ಬೀಡಿಕರ, ಲಕ್ಯಾ ಕಿತ್ತೂರು, ಚಂದ್ರಕಾಂತ ಕಿತ್ತೂರು, ನಾಗರಾಜ ಆಚಾರಿ, ಬಾಬು ಗುಡಿಗಾರ, ರಮಣ ಅಸೂಕರ ಅವರು, ರಾತ್ರಿ ಹಗಲು ಎನ್ನದೆ ಸುಣ್ಣ ಬಣ್ಣ ಅಲಂಕಾರ ಮಂಟಪ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ.
.
.