Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Sunday, 1 September 2024

ಹವ್ಯಕ ಪ್ರತಿಭಾವಂತರಿಗೆ ಪುರಸ್ಕಾರ: ಸಾಮಾಜಿಕ ಏಕತೆಯ ಕರೆ

 

ಯಲ್ಲಾಪುರ: ಸಮಾಜದ ಎಲ್ಲಾ ವರ್ಗದ ಪ್ರತಿಭಾವಂತರಿಗೆ ಪುರಸ್ಕಾರ ನೀಡುವ ಮೂಲಕ ಹವ್ಯಕ ನೌಕರರ ಕ್ಷೇಮಾಭಿವೃದ್ಧಿ ಸಂಸ್ಥೆ ಆದರ್ಶ ಪ್ರದರ್ಶಿಸಿದೆ ಎಂದು ಶಾಸಕ ಶಿವರಾಮ ಹೆಬ್ಬಾರ್ ಪ್ರಶಂಸಿಸಿದರು.

     ಸೆ.1 ರಂದು ಟಿಎಂಎಸ್ ಸಭಾಭವನದಲ್ಲಿ ಹವ್ಯಕ ನೌಕರರ ಕ್ಷೇಮಾಭಿವೃದ್ಧಿ ಸಂಸ್ಥೆ ಆಯೋಜಿಸಿದ್ದ ನಿವೃತ್ತ ನೌಕರರ ಸನ್ಮಾನ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.


    ಈ ಸಂದರ್ಭದಲ್ಲಿ ವಿಕೇಂದ್ರಿಕರಣ ಪಂಚಾಯತ ರಾಜ್ಯ ಸಮಿತಿಯ ಉಪಾಧ್ಯಕ್ಷ ಪ್ರಮೋದ ಹೆಗಡೆ, ತಹಶೀಲ್ದಾರ್ ಅಶೋಕ್ ಭಟ್, ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಆರ್. ಹೆಗಡೆ, ಆರಕ್ಷಕ ಉಪನಿರೀಕ್ಷಕ ನಿರಂಜನ ಹೆಗಡೆ ಮಾತನಾಡಿದರು, 

     ಟಿಎಂಎಸ್ ಅಧ್ಯಕ್ಷ ಎನ್. ಕೆ. ಭಟ್ ಅಗ್ಗಾಶಿಕುಂಬ್ರಿ, ಮಲೆನಾಡು ಕೃಷಿ ಅಭಿವೃದ್ಧಿ ಸಹಕಾರಿ ಸಂಘದ ಅಧ್ಯಕ್ಷ ಎಂ. ಆರ್. ಹೆಗಡೆ ಕುಂಬ್ರಿಗುಡ್ಡೆ, ನಿವೃತ್ತ ಅಧಿಕಾರಿ ವಿ. ಎಂ. ಭಟ್, ಪ್ರತಿಭಾವಂತ ವಿದ್ಯಾರ್ಥಿ ರವಿಕಿರಣ ಹೆಗಡೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್. ಆರ್ ಭಟ್ ಉಪಸ್ಥಿತರಿದ್ದರು.

   ಹವ್ಯಕ ನೌಕರರ ಸಂಘದ ಅಧ್ಯಕ್ಷ ಡಿ. ಜಿ. ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಮ್ಮಚಗಿ ಪಾಠಶಾಲಾ ವಿದ್ಯಾರ್ಥಿ ಗಣಪತಿ ಭಟ್ ವೇದಘೋಷ ಪಠಿಸಿದರು. ಸಮೃದ್ಧಿ ಭಾಗ್ವತ್ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷೇ ಮುಕ್ತಾಶಂಕರ್ ಸ್ವಾಗತಿಸಿದರು. ಶಿಕ್ಷಕರಾದ ಸಣ್ಣಪ್ಪ ಭಾಗ್ವತ್, ನಾಗರಾಜ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು. ಶ್ರೀಧರ ಹೆಗಡೆ ವಂದಿಸಿದರು.

ಸಸ್ಯ ಸಂಭ್ರಮ 24: ಮಹಿಳೆಯರ ಕೈಯಲ್ಲಿ ಪ್ರಕೃತಿಯ ಪುನರುಜ್ಜೀವನ


 ಯಲ್ಲಾಪುರ : ಇಲ್ಲಿಯ ಎಪಿಎಂಸಿ ಆವಾರದಲ್ಲಿ ಶ್ರೀತ್ರಿಪುರಾಂಬಿಕಾ ಮಹಿಳಾ ಒಕ್ಕೂಟ, ಶ್ರೀಮಾತಾ ಕಂಪನಿ ಹಾಗೂ ಮಾತ್ರ ಮಂಡಳಿಯೊಂದಿಗೆ ಸೇರಿ ನಡೆಸಲಾದ “ಸಸ್ಯ ಸಂಭ್ರಮ 24” ಕಾರ್ಯಕ್ರಮದಲ್ಲಿ ಕಾರ್ಯಕ್ರಮ‌ ಉಧ್ಘಾಟಿಸಿದ ಜಂಬೆಸಾಲಿನ ಕೃಷಿ ಸಕಿ ಪ್ರಶಸ್ತಿ ಪುರಸ್ಕೃತ ಶ್ರೀಲತಾ ರಾಜೀವ, ಮಹಿಳೆಯರು ತಮ್ಮ ದಿನನಿತ್ಯದ ಕೆಲಸದಲ್ಲಿ ಗಿಡಗಳನ್ನು ಬೆಳೆಸುವ ಮೂಲಕ ಜೀವನದಲ್ಲಿ ಸಂತಸ ಮತ್ತು ಸಾಧನೆಯನ್ನು ಸಾಧಿಸಬಹುದು ಎಂದು ಹೇಳಿದರು.


  ವಿಶ್ವದರ್ಶನ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಮುಕ್ತಾ ಶಂಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ನಮ್ಮ ಜೀವನಕ್ಕೆ ಸಸ್ಯಗಳ ಮಹತ್ವವನ್ನು ವಿವರಿಸುತ್ತಾ, ಅಕ್ಷರ ಜ್ಞಾನದ ಜೊತೆಗೆ ಸಸ್ಯ ಪ್ರೀತಿಯನ್ನು ಬೆಳೆಸಿಕೊಳ್ಳುವಂತೆ ಮಹಿಳೆಯರನ್ನು ಪ್ರೇರೇಪಿಸಿದರು. ಶ್ರೀಲತಾ ಮತ್ತು ಗಿರಿಜಾ ಗುರುಪ್ರಸಾದ್, ಸಣ್ಣ ವಯಸ್ಸಿನಲ್ಲಿಯೇ ಸಾಧಕರಾಗಿ ಸಮಾಜಕ್ಕೆ ಆದರ್ಶಕರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

   ಸನ್ಮಾನ ಸ್ವೀಕರಿಸಿದ ಗಿರಿಜಾ ಗುರುಪ್ರಸಾದ್, ತಮ್ಮ ಶಿಕ್ಷಕರ ಸನ್ನಿಧಿಯಲ್ಲಿ ಸನ್ಮಾನ ಸಂತಸ ತಂದಿದೆ ಎಂದು ಹೇಳಿ, ತಮ್ಮ ಪತಿಯ ಅನಾರೋಗ್ಯದ ಸಮಯದಲ್ಲಿ ಧೈರ್ಯದಿಂದ ತಿಂಡಿ ತಿನಿಸುಗಳನ್ನು ಮಾಡುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿಯಾದ ಕಥೆಯನ್ನು ಹಂಚಿಕೊಂಡರು.

   ಶ್ರೀಮಾತಾ ಕಂಪನಿಯ ಬಾಗಿದಾರ ಶ್ರೀಪಾದ್ ಮಣ್ಣಮನೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

   ಗೀತಾ ಭಟ್ ಆನಗೋಡ, ಶ್ವೇತಾ ಗೇರಗದ್ದೆ, ಪ್ರೇಮ ಹೆಗ್ಗಾರ್ ಮತ್ತು ರಶ್ಮಿ ಹೆಗಡೆ ಕುಂಬ್ರಿ ಉತ್ತಮ ಗಿಡ ಬೆಳೆಸಿದ್ದಕ್ಕಾಗಿ ಬಹುಮಾನ ಪಡೆದರು.

   ಮಾತೆಯರು ಗೀತಾ ಪಠಣದೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ, ಸಂಸ್ಥೆಯ ಕಾರ್ಯದರ್ಶಿ ಗಾಯತ್ರಿ ಬೋಳುಗುಡ್ಡೆ ಸ್ವಾಗತಿಸಿದರು. ಅಧ್ಯಕ್ಷ ಜಾನವಿ ಮಣ್ಣಮನೆ ಪ್ರಾಸ್ತಾವಿಕ ಭಾಷಣ ಮಾಡಿದರು. ಸಂಧ್ಯಾ ಕೊಂಡದಕುಳಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಶ್ರೀರಂಗ ಕಟ್ಟಿ, ವಿ ಎಸ್ ಭಟ್ಟ ಮತ್ತು ಶಾಂತಲಾ ಹೆಗಡೆ ನಿರ್ಣಾಯಕರಾಗಿದ್ದರು. ಕವಿತಾ ಬೋಳುಗುಡ್ಡೆ ಸನ್ಮಾನ ಪತ್ರ ವಾಚಿಸಿದರು.

ಜಿಲ್ಲೆಯಲ್ಲಿ 4 ಲಕ್ಷ ಸದಸ್ಯರನ್ನು ನೇಮಕ ಮಾಡಿಕೊಳ್ಳುವ ಗುರಿ ಇದೆ : ಸಂಸದ ಕಾಗೇರಿ



 ಯಲ್ಲಾಪುರ: ಸೆಪ್ಟೆಂಬರ್ 2 ರಿಂದ ಪ್ರಾರಂಭವಾಗುವ, ಬಿಜೆಪಿ ಪಕ್ಷದ ದೇಶಾದ್ಯಂತ ಸದಸ್ಯತ್ವ ಅಭಿಯಾನ ನಡೆಯಲಿದೆ. ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

   ಯಲ್ಲಾಪುರದಲ್ಲಿ ರವಿವಾರ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಪಕ್ಷದ ಸದಸ್ಯತ್ವ ಅಭಿಯಾನ ದೇಶದಲ್ಲಿ 10 ಕೋಟಿಗೂ ಹೆಚ್ಚಿನ ಸದಸ್ಯರನ್ನು ಸೇರ್ಪಡೆಗೊಳಿಸುವ ಗುರಿ ಹೊಂದಿದೆ. ಜಿಲ್ಲೆಯಲ್ಲಿ 4 ಲಕ್ಷ ಸದಸ್ಯರನ್ನು ನೇಮಕ ಮಾಡಿಕೊಳ್ಳುವ ಗುರಿ ಇದೆ ಎಂದು ಅವರು ಹೇಳಿದರು.




   ಸದಸ್ಯತ್ವ ಅಭಿಯಾನ ಆರಂಭಿಕ ಹಂತದಲ್ಲಿ ಸೆಪ್ಟೆಂಬರ್ 25 ರವರೆಗೆ ನಡೆಯಲಿದ್ದು, ಎರಡನೇ ಹಂತವು ಅಕ್ಟೋಬರ್ 15 ರವರೆಗೆ ಮುಂದುವರಿಯಲಿದೆ ಎಂದು ಕಾಗೇರಿ ತಿಳಿಸಿದರು.   

   ಮಲೆನಾಡಿನ ನೆಟ್‌ವರ್ಕ್ ಸಮಸ್ಯೆಯನ್ನು ಪ್ರಸ್ತಾಪಿಸುತ್ತಾ, ಪ್ರಧಾನಿ ನರೇಂದ್ರ ಮೋದಿ ಇದಕ್ಕೆ ಪರಿಹಾರ ಕಂಡುಕೊಳ್ಳುವ ಯೋಜನೆ ರೂಪಿಸಿದ್ದಾರೆ ಎಂದು ತಿಳಿಸಿದರು. ಈ ಯೋಜನೆ ಜಿಲ್ಲೆಗೆ 250 ಹೊಸ ಟವರ್‌ಗಳನ್ನು ತರಲಿದೆ. ಹಳೆಯ ಟವರ್‌ಗಳನ್ನು ಅಪ್‌ಗ್ರೇಡ್ ಮಾಡಲಾಗುವುದು ಎಂದು ಹೇಳಿದರು.

 


  ಸಭೆಯ ಅಧ್ಯಕ್ಷತೆ ವಹಿಸಿದ್ದ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ, ಬಿಜೆಪಿ ವಿಶ್ವದಲ್ಲಿ ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿದ ಪಕ್ಷ ಎಂದು ಹೇಳಿದರು. ತಾಲೂಕಿನಲ್ಲಿ 25,000 ಸದಸ್ಯರನ್ನು ಸೇರಿಸಿಕೊಳ್ಳುವ ಗುರಿ ಇದೆ ಎಂದು ಅವರು ತಿಳಿಸಿದರು.

    ಎಂಎಲ್‌ಸಿ ಶಾಂತರಾಮ ಸಿದ್ದಿ, ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ರಾಜ್ಯ ವಿಕೇಂದ್ರೀಕರಣ ಪಂಚಾಯತ ರಾಜ್ಯ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ ಸೇರಿದಂತೆ ಹಲವು ಗಣ್ಯರು ಈ ಸಭೆಯಲ್ಲಿ ಭಾಗವಹಿಸಿದ್ದರು.

ಹನುಮಾನ ಚಾಲೀಸಾ ಪಠಣ: ಶ್ರದ್ಧಾಭಕ್ತಿಯ ನಡೆದ ಸಮಾರಂಭ


ಯಲ್ಲಾಪುರ : ಜೋಡುಕೆರೆಯ ಶ್ರೀ ಗುರು ಮಾರುತಿ ದೇವಸ್ಥಾನದಲ್ಲಿ ಆಗಸ್ಟ್ 31ರಂದು ಸಂಜೆ 6 ಗಂಟೆಗೆ  ದೇವಸ್ಥಾನದ ಹಿರಿಯ ಅರ್ಚಕ ನಾರಾಯಣ ಭಟ್ ಪುರಾಣಿಕ ರವರ ಸಾರಥ್ಯದಲ್ಲಿ ಹನುಮಾನ್ ಚಾಲೀಸಾ ಪಠಣ ಸಮಾರಂಭ ನಡೆಯಿತು.

   ಕಾರ್ಯಕ್ರಮ ಉದ್ಘಾಟಿಸಿದ ನಾರಾಯಣ ಭಟ್ ಅವರು, ಹಿಂದು ಮಹಿಳೆಯರು ಹಾಗೂ ಯುವತಿಯರು ಹಣೆಗೆ ತಿಲಕ ಇಡದಿರುವುದು ಅಥವಾ ಕುಂಕುಮ ಇಟ್ಟುಕೊಳ್ಳದಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದರು. 


  ಹನುಮಾನ್ ಮಾಲಾಧಾರಿಗಳು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ವಿಶ್ವ ಹಿಂದೂ ಪರಿಷತ್ ಸಂಘಟನೆಯ ಅಧ್ಯಕ್ಷರು ಮತ್ತು ಕಾರ್ಯಕರ್ತರು. ಶನಿವಾರದ ದಿನವಾದ್ದರಿಂದ ಎಲ್ಲಾ ಹನುಮಾನ್ ಭಕ್ತರು, ಯಲ್ಲಾಪುರ ತಾಲೂಕಿನ ಅನೇಕ ಮಹಿಳೆಯರು ಹಾಗೂ ಯುವಕರು ಭಾಗವಹಿಸಿದ್ದರು. 

   ಭಾಗವಹಿಸಿದವರಿಗೆ ಹನುಮಾನ್ ಚಾಲೀಸಾ ಕಿರು ಪುಸ್ತಕವನ್ನು ನೀಡಲಾಯಿತು. ಸುಮಂಗಲಿಯರಿಗೆ ಅಂಜನಾದ್ರಿ ಇಂದ ತಂದ ಸಿಂಧೂರ ಲೇಪಿತ ಅಕ್ಷತೆ ಮತ್ತು ಅರಿಶಿನ ಕುಂಕುಮವನ್ನು ಮುತ್ತೈದೆಯರ ನೇತೃತ್ವದಲ್ಲಿ ವಿತರಿಸಲಾಯಿತು. ಹನುಮಾನ್ ಮಾಲಾಧಾರಿಗಳಾದ ನಾಗಾರ್ಜುನ, ಬದ್ಧಿ, ರವಿ ದೇವಾಡಿಗ, ಚಂದನ ನಾಯ್ಕ, ನಂದನ್ ನಾಯ್ಕ, ಸುದೀಪ ಮುಂತಾದವರು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.

    ಮುಖ್ಯ ಅತಿಥಿಗಳಾಗಿ ಸ್ವಾತಿ ಮತ್ತು ಸುಧೀರ್ ಕೊಡ್ಕಣಿ ದಂಪತಿಗಳು ಆಗಮಿಸಿದ್ದರು. ಇತರ ಅತಿಥಿಗಳಲ್ಲಿ ವಿಶ್ವ ಹಿಂದೂ ಪರಿಷತ್ ಯಲ್ಲಾಪುರ ತಾಲೂಕ ಅಧ್ಯಕ್ಷ ಗಜಾನನ ನಾಯ್ಕ, ವಿಶ್ವ ಹಿಂದೂ ಪರಿಷತ್ ನಗರ ಅಧ್ಯಕ್ಷ ಅನಂತ್ ಗಾಂವ್ಕರ್ ಕಂಚಿಪಾಲ್, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಖಜಾಂಜಿ ನಾಗರಾಜ್ ಮದ್ಗುಣಿ, ಉಲ್ಲಾಸ ಶಾನಭಾಗ ಮುಂತಾದವರು ಉಪಸ್ಥಿತರಿದ್ದರು.

    ಕಾರ್ಯಕ್ರಮದ ಆರಂಭದಲ್ಲಿ ಹನುಮಾನ್ ಚಾಲೀಸಾ ಪಠಣದೊಂದಿಗೆ ಸಮಾರಂಭವು ಆರಂಭವಾಯಿತು.

ಕರಡಿ ದಾಳಿಯಿಂದ ರೈತ ಗಂಭೀರ ಗಾಯ: ಯಲ್ಲಾಪುರ ತಾಲೂಕಿನ ಮುಂಡವಾಡೆ ಸ್ಥಳೀಯರ ಬೇಡಿಕೆ

 

ಯಲ್ಲಾಪುರ : ತಾಲೂಕಿನ ಮುಂಡವಾಡೆ ಗ್ರಾಮದ ರೈತ ಪರಶುರಾಮ ದುಗ್ಗಾ ನಾಯ್ಕ (50) ಅವರು ತಮ್ಮ ಹೊಲಕ್ಕೆ ಹೋಗುವ ವೇಳೆ ಆಕಸ್ಮಿಕವಾಗಿ ಕರಡಿಯ ದಾಳಿಗೆ ತುತ್ತಾಗಿ ಗಂಭೀರ ಗಾಯಗೊಂಡಿದ್ದಾರೆ. ದಾಳಿಯು ತಲೆಯ ಮೇಲೆ ಮತ್ತು ಕೈಕಾಲುಗಳಲ್ಲಿ ಗಂಭೀರ ಹಾನಿ ಉಂಟುಮಾಡಿದ್ದು, ಹಲವು ಮೂಳೆಗಳು ಮುರಿದಿವೆ.

 

ಪರಶುರಾಮರನ್ನು ತಕ್ಷಣ ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಕಿಮ್ಸ್ ಆಸ್ಪತ್ರೆಯ ವೈದ್ಯರು ಅವರಿಗೆ ಪ್ಲಾಸ್ಟಿಕ್ ಸರ್ಜರಿ ಮತ್ತು ಮೂಳೆ ಜೋಡಣೆ ಆಪರೇಷನ್‌ಗಳ ಅವಶ್ಯಕತೆ ಇದೆ ಎಂದು ತಿಳಿಸಿದರು.

  ಪರಶುರಾಮರು ತೀರಾ ಬಡವರಾಗಿದ್ದು, ಚಿಕಿತ್ಸಾ ವೆಚ್ಚವನ್ನು ಭರಿಸುವಲ್ಲಿ ಕಷ್ಟದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿ ಅಣ್ಣಪ್ಪ ನಾಯ್ಕ, ಸಂಬಂಧಪಟ್ಟ ಅರಣ್ಯ ಇಲಾಖೆಯ ಸಹಾಯದ ಅಗತ್ಯವಿದೆ ಎಂದು ಕೋರಿದ್ದಾರೆ.

ಶಿಕ್ಷಕ ಸಂತೋಷ್ ಕೊಳಗೇರಿ ನಿವೃತ್ತಿ ಜೀವನಕ್ಕೆ: ಪ್ರೀಡಂ ಪಾರ್ಕ ಬೆಂಗಳೂರು ಚಲೋ ಟೀಮ್ ನಿಂದ ಬೀಳ್ಕೊಡುಗೆ


ಯಲ್ಲಾಪುರ : ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕ ಸಂತೋಷ ಕೊಳಗೇರಿ ಅವರು ಆ.31ರಂದು ನಿವೃತ್ತಿ ಹೊಂದಿದರು. ಅವರ ನಿವೃತ್ತಿ ಜೀವನಕ್ಕೆ ಪ್ರೀಡಂ ಪಾರ್ಕ ಬೆಂಗಳೂರು ಚಲೋ ಟೀಮ್ ಶುಭ ಹಾರೈಕೆ ಸಲ್ಲಿಸಿದೆ. 

    ಶಿಕ್ಷಕ ವೃತ್ತಿಯಲ್ಲಿ 39 ವರ್ಷಗಳ ಕಾಲ ಸೇವೆ ಸಲ್ಲಿಸಿದ ಸಂತೋಷ್ ಕೊಳಗೇರಿ ಅವರು 1985 ರಲ್ಲಿ ಬೆಳಗಾವಿಯ ಖಾನಾಪುರ ತಾಲೂಕಿನ ಮರಾಠಿ ಶಾಲೆಯಲ್ಲಿ ತಮ್ಮ ಶಿಕ್ಷಕ ವೃತ್ತಿ ಪ್ರಾರಂಭಿಸಿದರು. ನಂತರ 1986 ರಲ್ಲಿ ಜೋಯಿಡಾ ತಾಲೂಕಿನ ರಾಮನಗರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, 1992 ರಲ್ಲಿ ಯಲ್ಲಾಪುರ ತಾಲೂಕಿನ ವಜ್ರಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಾಗೂ 1999 ರಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಿನ್ನಾಪುರದಲ್ಲಿ ಸೇವೆ ಸಲ್ಲಿಸಿದರು. 2015 ರಲ್ಲಿ ಅವರು ಪದೋನ್ನತ ಮುಖ್ಯಾಧ್ಯಾಪಕರಾಗಿ ಸೇವೆ ಸಲ್ಲಿಸಲು ಆರಂಭಿಸಿದರು.

   ಸಂತೋಷ್ ಕೊಳಗೇರಿ ಅವರು ಮಂಡಲ ಪಂಚಾಯತ ಹಾಗೂ ತಾಲೂಕ ಪಂಚಾಯತದಲ್ಲಿ ಸಾಕ್ಷರತಾ ಸಮನ್ವಯಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದ ಅವರು. ಸರಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಎರಡು ಬಾರಿ ಆಯ್ಕೆಯಾಗಿದ್ದರು. ಅವರು ಕ್ರೀಡಾಭಿಮಾನಿಗಳಿಗೆ ಸದಾ ಪ್ರೋತ್ಸಾಹ ನೀಡುತ್ತಿದ್ದರು. ಉತ್ತಮ ವಾಕ್ ಚಾತುರ್ಯ ಹೊಂದಿದ ನಿರೂಪಕರು ಮತ್ತು ಹಿರಿಯರು, ಕಿರಿಯರು ಎಲ್ಲರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ಅವರು ತಮ್ಮ ಸಂಘಟನೆಗಳಿಗೆ ಹೆಸರಾಗಿದ್ದರು ಮತ್ತು ಅಜಾತಶತ್ರುಗಳು ಎಂದು ಪರಿಗಣಿಸಲ್ಪಡುತ್ತಿದ್ದರು.

    ಸಂತೋಷ್ ಕೊಳಗೇರಿ ಅವರಿಗೆ ತಾಲೂಕಿನ ಮತ್ತು ಜಿಲ್ಲೆಯ ಪ್ರಶಸ್ತಿಗಳು ತಾವಾಗಿಯೇ ಹುಡುಕಿಕೊಂಡು ಬಂದಿದ್ದವು. ಅವರು ಅನೇಕ ಸನ್ಮಾನಗಳನ್ನು ಪಡೆದಿದ್ದಾರೆ.  

  ಸಂತೋಷ ಕೊಳಗೇರಿಯವರನ್ನು ಅವರನ್ನು ಆ.31 ಪ್ರೀಡಂ ಪಾರ್ಕ ಬೆಂಗಳೂರು ಚಲೋ ಟೀಮ್ ಸನ್ಮಾನಿಸಿ ಬೀಳ್ಕೊಟ್ಟರು.




ಮನಸ್ವಿನೀ ವಿದ್ಯಾನಿಲಯದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆ


 ಯಲ್ಲಾಪುರ: ಮನಸ್ವಿನೀ ವಿದ್ಯಾನಿಲಯದ ವಿದ್ಯಾರ್ಥಿಗಳು ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಕರಾಟೆ ಮತ್ತು ಯೋಗ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

  ಏಳನೇ ತರಗತಿಯ ವಿದ್ಯಾರ್ಥಿನಿ ಅಶಿತಾ ಹೆಗಡೆ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಸರ್ಕಾರದ ವತಿಯಿಂದ ಶಿರಸಿಯಲ್ಲಿ ನಡೆದ ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಅಶಿತಾ ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ನೇರಳೆ ಬೆಲ್ಟ್ ಹೊಂದಿರುವ ಅಶಿತಾ ಅವರ ಈ ಸಾಧನೆಯು ಮನಸ್ವಿನೀ ವಿದ್ಯಾನಿಲಯಕ್ಕೆ ಹೆಮ್ಮೆಯನ್ನು ತಂದಿದೆ. 

    ಅದೇ ರೀತಿ, ಪರ್ಣಿಕಾ ಹೆಗಡೆ ತಾಲೂಕು ಮಟ್ಟದ ಯೋಗ ಸ್ಪರ್ಧೆಯಲ್ಲಿ ಗುಂಪು ಯೋಗದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ಸ್ಪರ್ಧೆ ಆಗಸ್ಟ್ 27 ರಂದು ಯಲ್ಲಾಪುರದ ಹೋಲಿ ರೋಜರಿ  ಶಾಲೆಯಲ್ಲಿ ನಡೆದಿತ್ತು. 

   ತಾಲೂಕು ಮಟ್ಟದ ಸ್ಪರ್ಧೆಗಳಲ್ಲಿ ಇತರ ವಿದ್ಯಾರ್ಥಿಗಳು ಸಹ ಉತ್ತಮ ಸಾಧನೆ ಮಾಡಿದ್ದಾರೆ. ವತ್ಸಲ ಜೈನ್ ರಿದಮಿಕ್ ಯೋಗದಲ್ಲಿ ದ್ವಿತೀಯ ಸ್ಥಾನ ಪಡೆದರೆ, ಆಶಿತಾ ಹೆಗಡೆ ಆರ್ಟಿಸ್ಟ್ ಯೋಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಅದೇ ರೀತಿ, ತನ್ಮಯ್ ಬಿಲ್ಲವ ಆರ್ಟಿಸ್ಟ್ ಯೋಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.

   ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷೆ ರೇಖಾ ಭಟ್ ಕೋಟೆಮನೆ, ಆಡಳಿತ ಮಂಡಳಿ, ಶಿಕ್ಷಕರ ವರ್ಗ ಮತ್ತು ಪಾಲಕ-ಪೋಷಕರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.