Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Monday, 9 September 2024

ಹಿಂದೂ ರುದ್ರಭೂಮಿಯ ಅಭಿವೃದ್ಧಿಗೆ ಅನುದಾನ ಮೀಸಲಿಡುವಂತೆ ವಿಎಚ್‌ಪಿ ಮನವಿ

IMG-20240909-233038ಯಲ್ಲಾಪುರ : ಪಟ್ಟಣದ ಹುಬ್ಬಳ್ಳಿ ರಸ್ತೆಯಲ್ಲಿರುವ ಏಕೈಕ ಹಿಂದೂ ರುದ್ರಭೂಮಿಯ ಅಭಿವೃದ್ಧಿ ಕಾರ್ಯಕ್ಕಾಗಿ ತಕ್ಷಣದ ಅನುದಾನ ಮೀಸಲಿಡುವಂತೆ ವಿಶ್ವ ಹಿಂದೂ ಪರಿಷತ್ ತಾಲೂಕಾ ಅಧ್ಯಕ್ಷ ಗಜಾನನ ನಾಯ್ಕ ತಳ್ಳಿಕೇರಿ ನೇತೃತ್ವದಲ್ಲಿ ಪಟ್ಟಣ ಪಂಚಾಯತ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. 
    ಯಲ್ಲಾಪುರದಲ್ಲಿ ಶತಮಾನಗಳ ಹಿಂದೆ ನಿರ್ಮಿಸಲಾದ ಈ ರುದ್ರಭೂಮಿ, ನಗರ ಅಂಚಿನ ತಣ್ಣೀರಹಳ್ಳದ ಮೇಲ್ಭಾಗದಲ್ಲಿದೆ. ಇಲ್ಲಿ ಹಿಂದೂ ಶವಸಂಸ್ಕಾರಕ್ಕೆ ಹತ್ತಿರದ ಅರಣ್ಯ ಪ್ರದೇಶವೇ ಸೂಕ್ತವಾಗಿದೆ. ರುದ್ರಭೂಮಿಯು ಶವಸಂಸ್ಕಾರ ಕಾರ್ಯಕ್ಕಾಗಿ ನೈಸರ್ಗಿಕವಾಗಿ ಸಮರ್ಪಕವಾಗಿದೆಯಾದರೂ, ಅದರ ಅಭಿವೃದ್ಧಿಗೆ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯಕವಾಗಿದೆ.IMG-20240909-233029 ಈ ರುದ್ರಭೂಮಿಯ ಶವಸಂಸ್ಕಾರ ಕಟ್ಟೆಗಳು ಹಳೆಯಾಗಿದ್ದು, ಶೀಘ್ರದಲ್ಲಿಯೇ ಅವುಗಳನ್ನು ದುರಸ್ತಿ ಮಾಡಬೇಕು. ಜೊತೆಗೆ ವಿದ್ಯುತ್ ವ್ಯವಸ್ಥೆ ಅಸಮರ್ಪಕವಾಗಿರುವುದರಿಂದ, ರಾತ್ರಿ ವೇಳೆ ಶವಸಂಸ್ಕಾರ ಕಾರ್ಯದಲ್ಲಿ ಅಡಚಣೆ ಉಂಟಾಗುತ್ತಿದೆ. ಇದನ್ನು ಸರಿಪಡಿಸುವ ಅಗತ್ಯತೆಯಿದೆ. ಅಲ್ಲದೆ, ರುದ್ರಭೂಮಿಗೆ ಹೋಗುವ ಮುಖ್ಯ ಮಾರ್ಗದಲ್ಲಿನ 100 ಮೀಟರ್ ಕಾಂಕ್ರೀಟ್ ರಸ್ತೆ ನಿರ್ಮಾಣವೂ ಅತ್ಯವಶ್ಯಕವಾಗಿದೆ. 
   ಪಟ್ಟಣ ಪಂಚಾಯತದಿಂದ ಮೊದಲಿನಿಂದಲೂ ಮೂಲಭೂತ ಸೌಲಭ್ಯಗಳನ್ನು ನೀಡಲು ಸಹಕಾರ ದೊರೆತಿದೆ. ಇದಕ್ಕಾಗಿ ಹಿಂದೂ ಸಮಾಜದ ಬಂಧುಗಳು ಕೃತಜ್ಞರಾಗಿದ್ದಾರೆ. ಆದಾಗ್ಯೂ, ಶವಸಂಸ್ಕಾರ ಸ್ಥಳದ ಗೋಡೆ ದುರಸ್ತಿ, ಮಳೆಗಾಲದಲ್ಲಿ ಶವಸಂಸ್ಕಾರಕ್ಕೆ ಆಗಮಿಸುವವರಿಗೆ ತಂಗಲು ಸ್ಥಳ, ಕಟ್ಟಿಗೆ ಇಡಲು ಶೆಡ್, ಹಾಗೂ ಇತರೆ ಅವಶ್ಯಕ ಸೌಲಭ್ಯಗಳನ್ನು ಒದಗಿಸಲು ಪಟ್ಟಣ ಪಂಚಾಯತವು ತಕ್ಷಣ ಅನುದಾನ ಮೀಸಲಿಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. 
   ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸುನಿಲ ಗಾವಡೆ ಅವರು ಮನವಿಯನ್ನು ಸ್ವೀಕರಿಸಿ, ಶೀಘ್ರದಲ್ಲೇ ರುದ್ರಭೂಮಿ ಅಭಿವೃದ್ಧಿ ಕಾರ್ಯಕ್ಕೆ ಸಂಬಂಧಿಸಿದ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು. 
   ಮನವಿ ಸಲ್ಲಿಸುವ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ತಾಲೂಕು ಕಾರ್ಯದರ್ಶಿ ವಿಶಾಲ ವಾಳಂಬಿ, ನಗರ ಅಧ್ಯಕ್ಷ ಅನಂತ ಗಾಂವ್ಕರ್, ಪ್ರಮುಖರಾದ ರಾಮು ನಾಯ್ಕ, ಹಾಗೂ ಶಾಮಿಲಿ ಪಾಟಣಕರ ಸೇರಿದಂತೆ ಅನೇಕ ಪ್ರಮುಖರು ಇದ್ದರು.

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಯಶಸ್ವಿಗೊಳಿಸಲು ತಹಶೀಲ್ದಾರ ಅಧ್ಯಕ್ಷತೆಯಲ್ಲಿ ಸಭೆ

IMG-20240909-225304ಯಲ್ಲಾಪುರ, ಸೆಪ್ಟೆಂಬರ್ 9: ಸೆಪ್ಟೆಂಬರ್ 15 ರಂದು ನಡೆಯುವ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಯಶಸ್ವಿಯಾಗಿ ಆಚರಿಸಲು ಸೋಮವಾರ ಸಂಜೆ ತಾಲೂಕಾ ಆಡಳಿತ ಸೌದದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಈ ಸಭೆಯಲ್ಲಿ ಯಲ್ಲಾಪುರದ ತಹಶೀಲ್ದಾರ ಯಲ್ಲಪ್ಪ ಗೊನೆಣ್ಣವರು ಮಾತನಾಡಿ, "ತಾಲೂಕಿನಲ್ಲಿ 48 ಕಿಲೋಮೀಟರ್ ಉದ್ದದ ಮಾನವ ಸರಪಳಿ ನಿರ್ಮಿಸಬೇಕಾಗಿದೆ," ಎಂದು ಸೂಚಿಸಿದರು. ತಾಟವಾಳದಿಂದ ಶಿರಸಿ ರಸ್ತೆಯ ತಾಲೂಕು ಗಡಿಯವರೆಗೆ ಮಾನವ ಸರಪಳಿ ನಿರ್ಮಿಸುವ ಯೋಜನೆ ಕುರಿತು ವಿವರಿಸಿದ ಯಲ್ಲಪ್ಪ ಗೊನೆಣ್ಣವರ್. "ಸೆಪ್ಟೆಂಬರ್ 15ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ, ತಾಲೂಕಿನ ಎಲ್ಲಾ ಸಂಘ ಸಂಸ್ಥೆಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ ನೌಕರರು, ಸ್ಥಳೀಯ ಜನತೆ ಸೇರಿ ಮಾನವ ಸರಪಳಿ ನಿರ್ಮಾಣದಲ್ಲಿ ಭಾಗವಹಿಸಬೇಕು," ಎಂದು ಅವರು ಕರೆ ನೀಡಿದರು. ಈ ಯೋಜನೆಗೆ ಸರ್ಕಾರಿ ನೌಕರರು ಕಡ್ಡಾಯವಾಗಿ ಭಾಗವಹಿಸಬೇಕೆಂದು ಅವರು ಸೂಚಿಸಿದರು.IMG-20240909-225254 ಯಲ್ಲಾಪುರ ತಾಲೂಕಿನ ಬಹುಪಾಲು ಪ್ರದೇಶವು ಅರಣ್ಯದಿಂದ ಆವೃತವಾಗಿರುವುದರಿಂದ, ಸರಕಾರದ ಆದೇಶದಂತೆ, ಜನವಸತಿ ಪ್ರದೇಶಗಳಲ್ಲಿ ಮಾನವ ಸರಪಳಿ ನಿರ್ಮಾಣ ಮಾಡಬೇಕಾಗಿದೆ. "ತಾಲೂಕಿನ ಜನತೆ ಮತ್ತು ವಿವಿಧ ಸಂಘ ಸಂಸ್ಥೆಗಳು ಕೈಜೋಡಿಸಿ, ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವ ಜವಾಬ್ದಾರಿಯನ್ನು ಹೊತ್ತಿಕೊಳ್ಳಬೇಕು, ಸಭೆಯಲ್ಲಿ ಸಾರ್ವಜನಿಕರ ಜೊತೆಗೂಡಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆಯನ್ನು ನೀಡಬೇಕೆಂದು" ತಹಶೀಲ್ದಾರ ಮನವಿ ಮಾಡಿದರು.IMG-20240909-225242 ಈ ಸಭೆಯಲ್ಲಿ ತಾಲೂಕಾ ಆಡಳಿತದ ಹಲವು ಅಧಿಕಾರಿಗಳು ಮತ್ತು ಪ್ರಮುಖ ವ್ಯಕ್ತಿಗಳು ಉಪಸ್ಥಿತರಿದ್ದರು. ಗ್ರೇಡ್ 2 ತಹಶೀಲ್ದಾರ ಸಿ.ಜಿ. ನಾಯ್ಕ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ದನವಾಡಕರ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸುನಿಲ ಗಾವಡೆ, ಸಿಪಿಐ ರಮೇಶ ಹಾನಾಪುರ, ತಾಲೂಕಾ ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ, ಭಾರತ ಸೇವಾದಳದ ತಾಲೂಕಾ ಅಧ್ಯಕ್ಷ ಎಂ. ಆರ್. ಹೆಗಡೆ ಕುಂಬ್ರಿಗುಡ್ಡೆ, ಪಿಡಿಓಗಳು ವಿವಿಧ ಇಲಾಖೆಯ ಮುಖ್ಯಸ್ಥರು ಕೂಡ ಸಭೆಯಲ್ಲಿ ಭಾಗವಹಿಸಿದ್ದರು.
.
.
.

ಸೆ.15ರಂದು ಮನಸ್ವಿನೀ ವಿದ್ಯಾನಿಲಯದಲ್ಲಿ 'ಸ್ವರ ಶ್ರದ್ಧಾಂಜಲಿ' ಸಂಗೀತ ಕಾರ್ಯಕ್ರಮ

IMG-20240909-195903ಯಲ್ಲಾಪುರ: ಶ್ರೀ ಮಹಾಗಣಪತಿ ಸಂಗೀತ ಪ್ರತಿಷ್ಠಾನ ಕೋಟೆಮನೆ ಹಾಗೂ ಮನಸ್ವಿನೀ ವಿದ್ಯಾನಿಲಯ, ಕಾನಬೇಣ ಇವರ ಆಶ್ರಯದಲ್ಲಿ 'ಸ್ವರ ಶ್ರದ್ಧಾಂಜಲಿ' ಸಂಗೀತ ಕಾರ್ಯಕ್ರಮವನ್ನು ಸೆಪ್ಟೆಂಬರ್ 15ರಂದು ಆಯೋಜಿಸಲಾಗಿದೆ. ಈ ಕಾರ್ಯಕ್ರಮವು ರವಿವಾರ ಸಂಜೆ 4 ಗಂಟೆಗೆ ಮನಸ್ವಿನೀ ವಿದ್ಯಾನಿಲಯ, ಕಾನಬೇಣ, ಹಿರೇಸರದಲ್ಲಿ ನಡೆಯಲಿದೆ.IMG-20240909-195856 ಈ ಕಾರ್ಯಕ್ರಮದಲ್ಲಿ ದಿ.ರುದ್ರಪ್ಪ ಪರಪ್ಪ ಅಸುಂಡಿಯವರ ಶಿಷ್ಯ ವೃಂದವು ಸಂಗೀತದ ಮೂಲಕ ತಾವು ಗುರುಗಳನ್ನು ಶ್ರದ್ಧಾಪೂರ್ವಕವಾಗಿ ನೆನೆಸಿಕೊಂಡು, ತಮ್ಮ ಕಲಾಪ್ರದರ್ಶನವನ್ನು ನಿರ್ವಹಿಸಲಿದೆ. ತಮ್ಮ ಸಂಗೀತ ಕಲೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಶಾಸ್ತ್ರೀಯ ಸಂಗೀತದ ವಿವಿಧ ವಿಧಾನಗಳು, ಭಾವಗೀತೆಗಳು ಹಾಗೂ ಸಾಂಪ್ರದಾಯಿಕ ಗಾನ ವೈಭವವನ್ನು ಪ್ರಸ್ತುತಪಡಿಸಲಾಗುವುದು. IMG-20240909-195929 ಅದು ಒಂದು ಶ್ರವ್ಯ ಸಂಗೀತ ಸಂಭ್ರಮವಾಗಿದ್ದು, ಕಲಾಭಿಮಾನಿಗಳು ಮತ್ತು ಸಂಗೀತಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನಸ್ವಿನಿ ವಿದ್ಯಾಲಯದ ಅಧ್ಯಕ್ಷರಾದ ರೇಖಾ ಭಟ್ಟ ಕೋಟೆಮನೆ ಆಹ್ವಾನಿಸಿದ್ದಾರೆ. ಈ ಕಾರ್ಯಕ್ರಮವು ಸ್ಥಳೀಯವಾಗಿ ಪ್ರಾತಿನಿಧ್ಯವನ್ನು ಹೊಂದಿದ್ದು, ಸಮುದಾಯದ ಕಲೆ ಮತ್ತು ಸಂಸ್ಕೃತಿಯ ಪರಂಪರೆಯನ್ನು ಮುಂದುವರಿಸಲು ಮಹತ್ವದ ಪಾತ್ರವನ್ನು ವಹಿಸಲಿದೆ.
.
.
.

ಯಲ್ಲಾಪುರ: ಸಹಸ್ರಳ್ಳಿ ಲಿಂಗನಕೊಪ್ಪದಲ್ಲಿ 8ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ

IMG-20240909-193651ಯಲ್ಲಾಪುರ: ತಾಲೂಕಿನ ಸಹಸ್ರಳ್ಳಿ ಲಿಂಗನಕೊಪ್ಪ ಗ್ರಾಮದಲ್ಲಿ 8 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಸಾರ್ವಜನಿಕ ಗಣೇಶೋತ್ಸವವು ಈ ವರ್ಷವೂ ಸಂಭ್ರಮದಿಂದ ನಡೆಯುತ್ತಿದೆ. 8 ವರ್ಷಗಳ ಹಿಂದೆ ಸ್ಥಳೀಯ ಯುವಕರು ಮತ್ತು ಯುವತಿಯರು ಸೇರಿ ಸ್ಥಾಪಿಸಿದ ಈ ಗಣೇಶ ಮೂರ್ತಿಯು ಭಕ್ತಿಭಾವದಿಂದ ಪೂಜಿಸಲ್ಪಡುತ್ತಿದ್ದು, ಈ ವರ್ಷವೂ ಅದೇ ಸಂಪ್ರದಾಯವು ಮುಂದುವರೆದಿದೆ. 
 ಗಣೇಶಮೂರ್ತಿ ಪ್ರತಿಷ್ಠಾಪನೆ ಮತ್ತು ಪೂಜಾ ಸೇವೆಗಳು: 
 ಸೆಪ್ಟೆಂಬರ್ 7ರಂದು, ಬೃಹತ್ ಶೋಭಾಯಾತ್ರೆಯೊಂದಿಗೆ ಬಿಲ್ಲು ಹಿಡಿದ ಗಣೇಶಮೂರ್ತಿಯ ಪ್ರತಿಷ್ಠಾಪನೆ ನಡೆಯಿತು. ಗಣೇಶನಿಗೆ ಪ್ರತಿ ದಿನ ಮಧ್ಯಾಹ್ನ 1-00 ಗಂಟೆಗೆ ಮತ್ತು ಸಂಜೆ 7-30ಕ್ಕೆ ಪೂಜಾ ಸೇವೆಗಳು ಭಕ್ತಿಯಿಂದ ನಡೆಯುತ್ತಿವೆ. ಸ್ಥಳೀಯರು ಈ 7 ದಿನಗಳ ಕಾಲ ಸಂಪೂರ್ಣ ಭಕ್ತಿಯಿಂದ ಪಾಲ್ಗೊಂಡು, ಗಣೇಶನಿಗೆ ಪೂಜೆ ಸಲ್ಲಿಸುತ್ತಿದ್ದಾರೆ. 
ವಿಶೇಷ‌-ಕಾರ್ಯಕ್ರಮಗಳು: IMG-20240909-192455 ಗಣಹವನ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮವು ಸೆಪ್ಟೆಂಬರ್ 12ರಂದು ನಡೆಯಲಿದೆ. ಇದೇ ದಿನ ಊರಿನ ಸಮಸ್ತರು ಸೇರಿ ಶ್ರೀ ಗಣೇಶನಿಗೆ ಹವನದ ಮೂಲಕ ಪ್ರಾರ್ಥನೆ ಸಲ್ಲಿಸುವರು. ಅನಂತರ, ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಗುತ್ತದೆ. 
   ಮೆರವಣಿಗೆಯೊಂದಿಗೆ ಗಣೇಶನ ವಿಸರ್ಜನೆ ಸೆಪ್ಟೆಂಬರ್ 13ರಂದು ಸಂಜೆ ನಡೆಯಲಿದ್ದು, ಈ ಸಂದರ್ಭದಲ್ಲಿ ಸ್ಥಳೀಯರು ಸೇರಿ ಭವ್ಯ ಮೆರವಣಿಗೆಯಲ್ಲಿ ಭಾಗವಹಿಸುವರು. 
 ಸೇವಾ ಭಕ್ತರಿಗೆ ಸೂಚನೆ: 
 ಈ ಸಂದರ್ಭದಲ್ಲಿ, ಗಣೇಶನ ಪೂಜೆ ಅಥವಾ ಇತರ ಸೇವೆಗಳಲ್ಲಿ ಭಾಗವಹಿಸಲು ಇಚ್ಛಿಸುವವರು ತಮ್ಮ ಹೆಸರನ್ನು ಪೂರ್ವಭಾವಿಯಾಗಿ ನೊಂದಾಯಿಸಿಕೊಳ್ಳಲು ಕಮಿಟಿ ಪ್ರಮುಖರು ವಿನಂತಿಸಿದ್ದಾರೆ. ಸೇವಾ ನೊಂದಾಣಿಗೆ 9481861661, 8431930713, 9483999995 ಎಂಬ ಸಂಖ್ಯೆಗಳಿಗೆ ಸಂಪರ್ಕಿಸುವಂತೆ ತಿಳಿಸಲಾಗಿದೆ. 
 ಗಜಾನನೋತ್ಸವ ಸಮಿತಿಯ ಮಹತ್ವದ ಪಾತ್ರ: IMG-20240909-193804 ಈ ಗಣೇಶೋತ್ಸವವನ್ನು ಯಶಸ್ವಿಯಾಗಿ ನಡೆಸಲು ಲಿಂಗನಕೊಪ್ಪ ಗಜಾನನೋತ್ಸವ ಸಮಿತಿಯ ಪ್ರಮುಖರು ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಸಮಿತಿ ಅಧ್ಯಕ್ಷ ಪ್ರವೀಣ ಪಾಟೀಲ, ಕಾರ್ಯದರ್ಶಿ ನವೀನ ಅಂಕೋಲೆಕರ್, ಹಾಗೂ ಸಮಿತಿಯ ಗಣೇಶ ದೇಶಬಂಡಾರಿ, ಪವಿತ್ರಾ ಪಾಟೀಲ, ಪರಮೇಶ್ವರ ವರಪೆ, ಕೃಷ್ಣ ಮೊಗೇರ, ವಿಶಾಲ ಅಂಕೋಲೆಕರ್, ಗುರು ಮರಾಠೆ ಮೊದಲಾದರು ಇಡೀ ಉತ್ಸವದ ಆಯೋಜನೆಯಲ್ಲಿ ನಿರಂತರ ಶ್ರಮಿಸುತ್ತಿದ್ದಾರೆ. 
 ಕಳೆದ 8 ವರ್ಷಗಳಿಂದ ಈ ತಂಡವು ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಯೋಜಿಸುತ್ತಾ, ಊರಿನ ನಾಗರಿಕರಿಂದಲೂ ವಿಶೇಷ ಪ್ರೋತ್ಸಾಹ ಪಡೆದು, ಗ್ರಾಮದಲ್ಲಿ ಗಣಪತಿ ಬಪ್ಪಾರ ಸಮಾರಂಭವನ್ನು ಯಶಸ್ವಿಯಾಗಿ ಆಚರಿಸುತ್ತಿದೆ. 
 ಗ್ರಾಮಸ್ಥರ ಸಹಕಾರ: 
  ಗ್ರಾಮಸ್ಥರು ಈ ಉತ್ಸವದಲ್ಲಿ ಸದಾ ಸಕ್ರಿಯ ಭಾಗವಹಿಸುತ್ತಿದ್ದಾರೆ. ಉತ್ಸವದ ಪ್ರತಿ ಹಂತದಲ್ಲಿ ಯುವ ಜನಾಂಗವು ನಾಯಕತ್ವವನ್ನು ವಹಿಸಿಕೊಂಡು, ಊರಿನ ಪ್ರತಿಯೊಬ್ಬರಿಗೂ ಸಮಾನ ಅವಕಾಶವನ್ನು ಕಲ್ಪಿಸುತ್ತಿದ್ದಾರೆ. ಈ ವರ್ಷದ ಗಣೇಶೋತ್ಸವವೂ ಸಹ ಗ್ರಾಮಸ್ಥರ ಸರ್ವಾಂಗೀಣ ಸಹಕಾರದಿಂದ ಮತ್ತು ಭಕ್ತಿಯಿಂದ ಯಶಸ್ವಿಯಾಗಿ ಸಾಗುತ್ತಿದೆ.
.
.
.

ಅಡಿಕೆಗೆ ಭಯಂಕರ ಕೊಳೆರೋಗ ತಲೆ ಮೇಲೆ ಕೈ ಇಟ್ಟು ಕುಳಿತ ರೈತ!

IMG-20240909-175100ಯಲ್ಲಾಪುರ: ಉಮ್ಮಚಗಿ ಪಂಚಾಯತ್ ವ್ಯಾಪ್ತಿಯ ಕನೇನಳ್ಳಿ, ಕೋಟೆಮನೆ, ಸೀಗೆಮನೆ, ಉಮ್ಮಚ್ಗಿ, ಕಾನಗೋಡ, ಚವತ್ತಿ, ತಾರೆಹಳ್ಳಿ, ತುಡುಗುಣಿ, ಹಾಸ್ಪುರ ಹೀಗೆ ಅನೇಕ ಗ್ರಾಮಗಳಲ್ಲಿ ಅಡಿಕೆ ಬೆಳೆಗೆ ಕೊಳೆ ರೋಗ ವ್ಯಾಪಕವಾಗಿ ತಲುಪಿದ್ದು, ರೈತರಿಗೆ ತಲೆನೋವಾಗುತ್ತಿದೆ. ಅಡಿಕೆಗೆ ರೋಗ ಬಾಧೆಯಾಗಿರುವುದರಿಂದ ಹಲವರು ತಲೆ ಮೇಲೆ ಕೈ ಹಾಕಿ ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. IMG-20240909-175046 ಅಡಿಕೆಗೆ ಕೊಳೆ ರೋಗ ಬಾಧೆಯಾಗಿರುವುದು ಮಾತ್ರವಲ್ಲದೆ, ಈಗಾಗಲೇ ಅಡಿಕೆ ಬೆಲೆ ತೀವ್ರವಾಗಿ ಕುಸಿತ ಕಂಡು ಬಂದಿರುವುದು, ರೈತರನ್ನು ಸಮಸ್ಯೆಯಾಗಿದೆ. ಕೆಲವು ರೈತರು ತಮಗಾದ ಹಾನಿ ಬಗ್ಗೆ ಚಿಂತಿಸುತ್ತಾ, ಬೆಳೆ ಸುಧಾರಣೆಗೆ ಪ್ರಯತ್ನಿಸುತ್ತಿದ್ದಾರೆ. ಮಳೆಗಾಗಿ ನಿರೀಕ್ಷಿಸುತ್ತಿದ್ದ ರೈತರಿಗೆ, ಈ ವರ್ಷ ಮುಂಗಾರು ಮಳೆಯು ನಿರೀಕ್ಷೆಗೂ ಮೀರಿದ ಪ್ರಮಾಣದಲ್ಲಿ ಸುರಿದಿದ್ದು, ಇದು ಅಡಿಕೆ ಬೆಳೆಗಳಿಗೆ ಕೊಳೆ ರೋಗವನ್ನು ಬರಲು ಪ್ರಮುಖ ಕಾರಣವಾಗಿದೆ. 
     ಈ ಪ್ರದೇಶದಲ್ಲಿ ಕಳೆದ ಎರಡು ಮೂರು ತಿಂಗಳಿಂದ ಸುರಿಯುತ್ತಿರುವ ಎಡೆಬಿಡದೆ ಮಳೆಯು, ಅಡಿಕೆ ಬೆಳೆಗಳಿಗೆ ಗಂಭೀರ ಹಾನಿ ಉಂಟುಮಾಡಿದೆ. ಕಳೆದೆರಡು ತಿಂಗಳಲ್ಲಿ ಆಕ್ರಮಣಕಾರಿ ಕೊಳೆ ರೋಗವು ಅಡಿಕೆ ತೋಟಗಳಲ್ಲಿ ವ್ಯಾಪಕವಾಗಿ ಕಾಣಿಸಿಕೊಂಡಿದ್ದು, ಬೆಳೆಗಾರರು ವಿಪತ್ತು ಎದುರಿಸುತ್ತಿದ್ದಾರೆ. ಆದರೆ, ಕೆಲವು ರೈತರು ಎರಡು ಅಥವಾ ಮೂರು ಸಲ ಮದ್ದು ಸಿಂಪರಣೆ ಮಾಡಿದರೂ ಸಹ ರೋಗವನ್ನು ತಡೆಯಲು ವಿಫಲವಾಗಿದ್ದಾರೆ. ಇದು ಇನ್ನು ಮಂದಿನ ದಿನಗಳಲ್ಲಿ ಅಡಿಕೆ ಬೆಳೆಗಾರರ ಕಷ್ಟವನ್ನು ಹೆಚ್ಚಾಗುವಂತೆ ಮಾಡಿದೆ. 
     ಈ ಭಾಗದಲ್ಲಿಯ ರೈತರ ತಮ್ಮ ಸಂಕಷ್ಟವನ್ನು ಹಂಚಿಕೊಂಡು, "ನಾವು ಮೂರು ಸಲ ಮದ್ದು ಸಿಂಪಡಿಸಿದರೂ ರೋಗ ಹೋಗದೇ ಇರುವುದೇ ತುಂಬಾ ವಿಚಿತ್ರವಾಗಿದೆ" ಎಂಬುದಾಗಿ ಹೇಳುತ್ತಾರೆ. 
     ಕ್ಷೇತ್ರದ ಶಾಸಕರಾದ ಶಿವರಾಮ ಹೆಬ್ಬಾರ್ ಅವರು, ಈ ಭಾಗದಲ್ಲಿ ಕಳೆದ ಅವಧಿಯಲ್ಲಿ ಅಡಿಕೆ ಬೆಳೆಗಳಿಗೆ ಕೊಳೆ ಪರಿಹಾರ ನೀಡುವಲ್ಲಿ ಸಫಲರಾಗಿದ್ದರು. ಅವರು ವಿಧಾನಸಭೆಗೆ ಮೊದಲ ಬಾರಿ ಆಯ್ಕೆಯಾದಾಗ, ಹಲವು ರೈತರಿಗೆ ಸರ್ಕಾರದಿಂದ ಸಬ್ಸಿಡಿ ದೊರಕುವಂತೆ ಪ್ರಯತ್ನಿಸಿದ್ದರು. ಈಗ ಮತ್ತೆ ಇಂತಹ ಸಹಾಯ ಸರ್ಕಾರದಿಂದ ದೊರೆಯುವುದಕ್ಕೆ ಸಾಕಷ್ಟು ಸಾಧ್ಯತೆಗಳಿದ್ದು, ರೈತರು ಅವರ ಮೇಲೆ ನಿರೀಕ್ಷೆ ಇಟ್ಟಿದ್ದಾರೆ.
 . 
.

ವಿಶ್ವದರ್ಶನ ಶಿಕ್ಷಣ ಸಂಸ್ಥೆಗೆ ಎಐಸಿಟಿಇ ಮಾನ್ಯತೆ

IMG-20240909-173115ಯಲ್ಲಾಪುರ : ಉತ್ತಮ ಆಡಳಿತ ಮಂಡಳಿ ಹಾಗೂ ಉನ್ನತ ಮಟ್ಟದ ಶಿಕ್ಷಣ ಪಡೆದ ಅನುಭವಿ ಪ್ರಾಧ್ಯಾಪಕ ವರ್ಗ, ಲ್ಯಾಬ್ ಹಾಗೂ ಇತರೆ ಮಾನದಂಡಗಳನ್ನು ಆಧರಿಸಿ ವಿಶ್ವದರ್ಶನ ಕಾಲೇಜ್ ಆಫ್ ಬಿಸಿಎಗೆ ಆಲ್ ಇಂಡಿಯಾ ಕೌನ್ಸಿಲ್ ಪಾರ್ ಟೆಕ್ನಿಕಲ್ ಎಜುಕೇಶನ್ ಇವರು ಮಾನ್ಯತೆ ನೀಡಿರುತ್ತಾರೆ. 
     ಉತ್ತರ ಕನ್ನಡದ ಯಲ್ಲಾಪುರ ತಾಲೂಕಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿಶ್ವದರ್ಶನ ಶಿಕ್ಷಣ ಸಂಸ್ಥೆ ಕಳೆದ ಮೂರು ದಶಕಗಳಿಂದ ರಾಜ್ಯದ ವಿವಿಧ ಜಿಲ್ಲೆಯ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿದೆ. ಸಂಸ್ಥೆಯಲ್ಲಿ 2024ನೇ ಸಾಲಿನಿಂದ ಪ್ರಾರಂಭಿಸಲಾದ ಬಿಸಿಎ ಕಾಲೇಜು ಕಳೆದ ಒಂದು ವರ್ಷದಲ್ಲಿ ಉನ್ನತ ಮಟ್ಟದ ಫಲಿತಾಂಶದೊಂದಿಗೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ.IMG-20240909-172944 ಎಐಸಿಟಿಇ ಮಾನ್ಯತೆಯಿಂದ ದೇಶ ವಿದೇಶ ಮಟ್ಟದ ತಂತ್ರಜ್ಞಾನ ಅರಿವು ಹಾಗೂ ತಂತ್ರಜ್ಞಾನದ ತರಬೇತಿ, ವಿದ್ಯಾರ್ಥಿವೇತನ ಹಾಗೂ ಉನ್ನತ ಸಂಸ್ಥೆಗಳಲ್ಲಿ ಉದ್ಯೋಗಾವಕಾಶ ವಿದ್ಯಾರ್ಥಿಗಳಿಗೆ ದೊರೆಯಲಿದೆ. ಸಂಸ್ಥೆಗೆ ಇದೊಂದು ಹೆಮ್ಮೆಯ ವಿಷಯ ಎಂದು ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಹರಿಪ್ರಕಾಶ್ ಕೋಣೆಮನೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
.
.
.

ಸೆ.15ರಂದು ಯಲ್ಲಾಪುರದಲ್ಲಿ ಶ್ರೀಕೃಷ್ಣಾರ್ಪಣಂ ಸಮಾರಂಭ: ಸ್ವರ್ಣವಲ್ಲೀ ಶ್ರೀಗಳಿಂದ ಆಮಂತ್ರಣ ಬಿಡುಗಡೆ

IMG-20240909-170144ಯಲ್ಲಾಪುರ : ಪಟ್ಟಣದ ಅಡಿಕೆ ಭವನದಲ್ಲಿ ಸೆ.15 ರವಿವಾರ ಬೆಳಿಗ್ಗೆ 11 ಗಂಟೆಗೆ ಶ್ರೀಕೃಷ್ಣಾರ್ಪಣಂ ಸಮಾರಂಭ ನಡೆಯಲಿದೆ. ಈ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಪೂಜ್ಯ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರು ಶ್ರೀಮಠದಲ್ಲಿ ಬಿಡುಗಡೆಗೊಳಿಸಿ, ಆಶೀರ್ವದಿಸಿ, ಸಮಾರಂಭಕ್ಕೆ ಶುಭ ಹಾರೈಸಿದರು. ಕಿರಿಯ ಶ್ರೀಗಳಾದ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿಯವರು ಉಪಸ್ಥಿತರಿದ್ದು, ಆಶೀರ್ವದಿಸಿದ್ದಾರೆ.IMG-20240909-170111 ಸುಜ್ಞಾನ ಸೇವಾ ಫೌಂಡೇಶನ್ ಉತ್ತರಕನ್ನಡ, ಇ-ಯಲ್ಲಾಪುರ ಡಿಜಿಟಲ್ ನ್ಯೂಸ್, ಸುಜ್ಞಾನವಾಹಿನಿ ಪತ್ರಿಕೆ ವತಿಯಿಂದ ಹಾಂಗ್ಯೋ ಐಸ್ ಕ್ರೀಂ, ಯಲ್ಲಾಪುರದ ಟಿ.ಎಸ್.ಎಸ್.ಶಿರಸಿ ಮತ್ತು ಗೌತಮ್ ಜುವೆಲ್ಲರ್ಸ್ , ರಂಗಸಹ್ಯಾದ್ರಿ ಸಹಯೋಗದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ನಡೆದ ಉತ್ತರಕನ್ನಡ ಜಿಲ್ಲಾ ಮಟ್ಟದ ಮುದ್ದುಕೃಷ್ಣ ವೇಷ ಫೋಟೋ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ವಿವಿಧ ಕ್ಷೇತ್ರಗಳ ಸಾಧಕಶ್ರೇಷ್ಠರಿಗೆ ಪ್ರತಿಷ್ಠಿತ ಸುಜ್ಞಾನ ಸಮ್ಮಾನ್, ಸುಜ್ಞಾನ ಶ್ರೀ, ಸುಜ್ಞಾನ ಸೇವಾ ಪ್ರಶಸ್ತಿ ಪ್ರದಾನ ಮತ್ತು ಶ್ರೀಕೃಷ್ಣ ನೃತ್ಯಾಮೃತ ವೈಭವ, ಶ್ರೀಕೃಷ್ಣ ಗಾನಾಮೃತ ವೈಭವ ಕಾರ್ಯಕ್ರಮಗಳು ಶ್ರೀಕೃಷ್ಣಾರ್ಪಣಂ ಸಮಾರಂಭದಲ್ಲಿ ನಡೆಯಲಿವೆ. 
    ಸಮಾರಂಭವನ್ನು ಶಾಸಕ ಶಿವರಾಮ ಹೆಬ್ಬಾರ್ ಉದ್ಘಾಟಿಸಲಿದ್ದಾರೆ. ವಿವಿಧ ಕ್ಷೇತ್ರಗಳ ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮಾರಂಭಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಸುಜ್ಞಾನ ಸೇವಾ ಫೌಂಡೇಶನ್ ಅಧ್ಯಕ್ಷ ಅಧ್ಯಕ್ಷ ಜಿ.ಎನ್.ಭಟ್ ತಟ್ಟಿಗದ್ದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
      ಈ ಸಂದರ್ಭದಲ್ಲಿ ಸುಜ್ಞಾನ ಸೇವಾ ಫೌಂಡೇಶನ್ (ರಿ) ಉತ್ತರಕನ್ನಡ ಅಧ್ಯಕ್ಷ ಜಿ.ಎನ್.ಭಟ್ ತಟ್ಟಿಗದ್ದೆ, ಕಾರ್ಯದರ್ಶಿ ಜ್ಯೋತಿರಾದಿತ್ಯ ಭಟ್ ಯಲ್ಲಾಪುರ ಹಾಗೂ ಸಂಸ್ಥೆಯ ಪದಾಧಿಕಾರಿಗಳು ಇದ್ದರು.
.
.
.

ಡಾ. ಎನ್.ಬಿ. ಶ್ರೀಧರ ಅವರಿಗೆ "ಶ್ರೇಷ್ಟ ಸಂಶೋಧಕ" ಪ್ರಶಸ್ತಿ ಪ್ರದಾನ

IMG-20240909-102237ಯಲ್ಲಾಪುರ : ತಾಲೂಕಿನ ಗೇರಕೊಂಬೆಯ ನಿವಾಸಿ ಹಾಗೂ ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ಎನ್.ಬಿ. ಶ್ರೀಧರ ಅವರನ್ನು 2024ನೇ ಸಾಲಿನ "ಶ್ರೇಷ್ಟ ಸಂಶೋಧಕ" ಪ್ರಶಸ್ತಿಗೆ ಭಾಜನಗೊಳಿಸಲಾಗಿದೆ. 
      ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರನ ಶಿಕ್ಷಕರ ಸಂಘವು ಅವರ ಸಮಗ್ರ ಸಂಶೋಧನಾ ಸಾಧನೆಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ಶಿಕ್ಷಕರ ದಿನಾಚರಣೆಯ ವೇಳೆ ನೀಡಿತು. IMG-20240909-102227 ಡಾ. ಶ್ರೀಧರ ಅವರು ಪಶುವೈದ್ಯಕೀಯ ಕ್ಷೇತ್ರದಲ್ಲಿ ಕಳೆದ ಹಲವು ದಶಕಗಳಿಂದ ಮಹತ್ವದ ಸಂಶೋಧನೆ ನಡೆಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ 200 ಕ್ಕೂ ಹೆಚ್ಚು ಸ್ನಾತಕೋತ್ತರ ಮತ್ತು ಡಾಕ್ಟರೇಟ್ ವಿದ್ಯಾರ್ಥಿಗಳು ಸಂಶೋಧನೆ ನಡೆಸಿದ್ದಾರೆ. ಸಸ್ಯಜನ್ಯ, ಶಿಲೀಂದ್ರವಿಷ ಹಾಗೂ ನಿಗೂಢ ಕಾಯಿಲೆಗಳ ಕುರಿತು ಅವರು ನಡೆಸಿದ ವಿಶಿಷ್ಟ ಸಂಶೋಧನೆಗಳು ಅನೇಕ ಜಾನುವಾರುಗಳ ಪ್ರಾಣ ಉಳಿಸಲು ಕಾರಣವಾಗಿವೆ. IMG-20240909-102214 ಅವರು ಬಂಜೆತನದಿಂದ ಬಳಲುತ್ತಿರುವ ಪಶುಗಳಿಗೆ ಸೂಕ್ತ ಚಿಕಿತ್ಸಾ ವಿಧಾನಗಳನ್ನು ಕಂಡುಹಿಡಿದು, ಅವುಗಳನ್ನು ಉತ್ಪಾದಕತೆಯತ್ತ ಕೊಂಡೊಯ್ದ ಸಾಧನೆಗಳಿಗೆ ಗುರುತಿಸಿಕೊಂಡಿದ್ದಾರೆ. 
    ಇತ್ತೀಗಷ್ಟೇ, ಭಾರತೀಯ ಪಶುವೈದ್ಯ ಔಷಧಶಾಸ್ತ್ರಜ್ಞರ ಮತ್ತು ವಿಷಶಾಸ್ತ್ರಜ್ಞರ ಸಂಘವು ಡಾ. ಶ್ರೀಧರ ಅವರಿಗೆ "ರಾಷ್ಟ್ರೀಯ ಫೆಲೊ" ಪ್ರಶಸ್ತಿಯನ್ನು ನೀಡಿದೆ.

ತಾಟವಾಳ ಗಜಾನನೋತ್ಸವ: ಶಾಲಾ ಮುಖ್ಯಾಧ್ಯಾಪಕಿ ಗಂಗಾ ಠಾಕೂರರಿಗೆ ಸನ್ಮಾನ

IMG-20240909-073730ಯಲ್ಲಾಪುರ: ತಾಲೂಕಿನ ತಾಟವಾಳ ಗ್ರಾಮದಲ್ಲಿ ಭಾವೈಕ್ಯತೆಯ ಪ್ರತಿರೂಪವಾಗಿರುವ ಸಾರ್ವಜನಿಕ ಗಜಾನನೋತ್ಸವವು ಭಾನುವಾರ ವಿಶೇಷವಾಗಿ ಜರುಗಿತು. ಈ ಸಂದರ್ಭದಲ್ಲಿ ತಾಟವಾಳ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕಿ ಗಂಗಾ ಠಾಕೂರರನ್ನು ಸನ್ಮಾನಿಸಿ ಗೌರವಿಸಲಾಯಿತು. ತಾಟವಾಳ ಹಾಗೂ ಸುತ್ತಮುತ್ತಲಿನ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯದ ಮಕ್ಕಳಿಗೆ 16 ವರ್ಷಗಳಿಂದ ಅಕ್ಷರ ಜ್ಞಾನ ನೀಡಿದ ಸಾಧನೆಯು ಗುರುತಿಸಲ್ಪಟ್ಟಿರುವ ಗಂಗಾ ಠಾಕೂರ ಸನ್ಮಾನ ಅರ್ಥಪೂರ್ಣವಾಗಿತ್ತು. IMG-20240909-073026 ತಾಟವಾಳ, ಕಾರಕುಂಡಿ ಮತ್ತು ಡೌಗಿನಾಳ ಗ್ರಾಮಗಳಿಂದ ಬಹುಮಟ್ಟಿಗೆ ಗೌಳಿ ಸಮುದಾಯ ವಾಸವಾಗಿದ್ದು, ಇತರೆ ಜನಾಂಗಗಳ ಪ್ರಾಬಲ್ಯವೂ ಇದೆ. ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಭಾವೈಕ್ಯತೆಯಿಂದ ಸಹಜೀವನ ನಡೆಸುವ ಈ ಗ್ರಾಮ, ಸಹಭಾಗಿತ್ವದ ಮಾದರಿಯಾಗಿಯೂ ಪ್ರಸಿದ್ಧವಾಗಿದೆ. ತಾಟವಾಳ ಗ್ರಾಮದ ಮುಕ್ತೇಸರ ಕೇಶವ ಪಾಟೀಲ ಮತ್ತು ಪ್ರಮುಖರುಗಳಾದ ವೆಂಕಟೇಶ ಪಾಟೀಲ, ರಾಯಾ ವಿಠ್ಠು ಕಸ್ತೂರೆ ಸೇರಿದಂತೆ ಗ್ರಾಮಸ್ಥರು ಗಂಗಾ ಠಾಕೂರರ ಸೇವೆಯನ್ನು ಗುರುತಿಸಿ ಅವರ ಮೇಲಿನ ಪ್ರೀತಿ, ಗೌರವವನ್ನು ಸನ್ಮಾನಿಸಿ ವ್ಯಕ್ಯ್ತಪಡಿಸಿದರು. IMG-20240909-072900 ಗ್ರಾಮದ ಸಾಂಸ್ಕೃತಿಕ ಇತಿಹಾಸವೂ ವಿಶೇಷವಾಗಿದ್ದು, ಇಲ್ಲಿ ರವಳನಾಥ ಮಹಾರಾಜರ ದೇವಸ್ಥಾನ ಹಾಗೂ ಮುಸ್ಲಿಂ ಸಮುದಾಯದ ಘುಮ್ ಶಹೀದ್ ದರ್ಗಾ ಸ್ಥಾಪಿತವಾಗಿವೆ. ಇವುಗಳಿಗೆ ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಭೇಟಿ ನೀಡುವ ಮೂಲಕ ಭಾವೈಕ್ಯತೆಯನ್ನು ಮೂರ್ತರೂಪಗೊಳಿಸುತ್ತಾರೆ. IMG-20240909-072948 ಇದೀಗ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ಹಲವು ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದ್ದು, ಗ್ರಾಮಸ್ಥರ ಉತ್ಸಾಹವು ಉಲೇಖನೀಯವಾಗಿತ್ತು. ಮಹಿಳೆಯರ ದೀಪ ಹಚ್ಚುವ ಸ್ಪರ್ಧೆ, ಪುರುಷರ ಹಗ್ಗ ಜಗ್ಗಾಟ, ಮಕ್ಕಳ ನೃತ್ಯ ಮತ್ತು ಸಂಗೀತ ಖುರ್ಚಿ ಮುಂತಾದ ಸ್ಪರ್ಧೆಗಳು ಜರುಗಿದವು. ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. 
   ಗಣೇಶೋತ್ಸವದ ಪೂಜೆ, ದೇವರ ಪ್ರಸಾದ ವಿತರಣೆ, ಅನ್ನಸಂತರ್ಪಣೆ ಮತ್ತು ದೇವರ ಫಲಾವಳಿಗಳ ಹಂಚಿಕೆಗಳು ಸಮಾರಂಭದ ವೈಶಿಷ್ಟ್ಯವಾಗಿದ್ದವು.
.
.
.

ಶಿರಲೆ ಘಟ್ಟದಲ್ಲಿ ಲಾರಿ ಪಲ್ಟಿ :ಚಾಲಕನಿಗೆ ಗಾಯ

IMG-20240909-045510ಯಲ್ಲಾಪುರ: ತಾಲೂಕಿನ ಅರಬೈಲ್ ಘಟ್ಟ ಶಿರಲೆ ಫಾಲ್ಸ್ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿ 63ರಲ್ಲಿ, ರವಿವಾರ ಸಂಜೆ ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ಸಾಗುತ್ತಿದ್ದ ಲಾರಿ, ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಲ್ಪಟ್ಟ ಕಾರಣ, ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿ ಬಿದ್ದು ಚಾಲಕ ಗಾಯಗೊಂಡಿರುವ ಘಟನೆ‌ ನಡೆದಿದೆ. IMG-20240909-045501 ಹಳಿಯಾಳ ತಾಲೂಕು ಗುತ್ತಿಗೇರಿಗಲ್ಲಿ ನಿವಾಸಿ ಚಾಲಕ ವೃತ್ತಿಯ ಜಾವೀದ ರಹಿಮತುಲ್ಲಾ (47) ವಿರುದ್ಧ ನಡೆದ ಅಪಘಾತ ಸಂಬಂಧಿಸಿದಂತೆ ಆರೋಪ ದಾಖಲಾಗಿದೆ. 
     ಈ ಅಪಘಾತದಲ್ಲಿ, ಜಾವೀದ ರಹಿಮತುಲ್ಲಾ ತನ್ನ ಎಡಬದಿಯ ಸೊಂಟ, ಮೈ ಮತ್ತು ಕೈಗೆ ಗಾಯಗಳಾದವು. ಅಲ್ಲದೆ, ಲಾರಿಯು ಸಂಪೂರ್ಣವಾಗಿ ಜಖಂಗೊಳಗೊಂಡಿದೆ. ಈ ಘಟನೆ ಮಾನವೀಯ ಪ್ರಾಣಕ್ಕೆ ಅಪಾಯ ಉಂಟುಮಾಡುವ ರೀತಿಯಲ್ಲಿ ನಡೆದಿದ್ದು, ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪಿಎಸ್ಐ ಸಿದ್ದಪ್ಪ ಗುಡಿ, ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಕಾರ್ಯದಲ್ಲಿ ನಿರತರಾಗಿದ್ದಾರೆ.
.
.
.