ಯಲ್ಲಾಪುರ: ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಹರ್ಷ ಬಾನು, ಜಿ.ಪಿ ಹಾಗೂ ಯಲ್ಲಾಪುರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಿಮವತಿ ಭಟ್ ಅವರ ಮಾರ್ಗದರ್ಶನದಲ್ಲಿ, ವಲಯ ಅರಣ್ಯಾಧಿಕಾರಿಗಳಾದ ಅಜಯ್ ಎಚ್. ನಾಯ್ಕರ ನೇತ್ರತ್ವದಲ್ಲಿ ಖಚಿತ ಮಾಹಿತಿ ಮೇರೆಗೆ ಮನೆಯಿಂದನ್ನು ಪರಿಶೀಲನೆ ನಡೆಸಲಾಯಿತು. ಈ ಪರಿಶೀಲನೆಯ ವೇಳೆ, ಬೇಟೆಯಾಡಿದ ಜಿಂಕೆ ಮಾಂಸ ಪತ್ತೆಯಾಗಿದೆ.
ಆರೋಪಿಯ ಬಂಧನ
ತಾಲೂಕಿನ ಮದನೂರ ಗ್ರಾಮದ ಹುಲಗೋಡ ಮಜರೆಯ ಕೂಲಿ ಕೆಲಸ ಮಾಡುವ ರಮೇಶ ನಾಗೇಶ ಗಾಂವ್ಕರ್ (29) ಎಂಬ ವ್ಯಕ್ತಿಯ ಮನೆಯನ್ನು ಪರಿಶೀಲಿಸಿದಾಗ, ಜಿಂಕೆ ಮೋಸ ಪತ್ತೆಯಾಗಿದೆ. ಆತನನ್ನು ವಶಕ್ಕೆ ಪಡೆದು, ಇನ್ನಷ್ಟು ವಿಚಾರಣೆ ನಡೆಸಿದಾಗ, ಹುಲಗೋಡ ಶಾಖೆಯ ಅರಣ್ಯ ಬ್ಲಾಕ್ ಮತ್ತು ಕಂಪಾರ್ಟಮೆಂಟ್ 15-18 ರಲ್ಲಿ ಒಂದು ಜಿಂಕೆಯನ್ನು ಬೇಟೆಯಾಡಿ, ಕಾಲು-2, ತಲೆ-1, ಬೆಂಕೆ ಚರ್ಮವನ್ನು ಅರಣ್ಯ ಪ್ರದೇಶದಲ್ಲಿ ಬಿಟ್ಟು, ಮಾಂಸವನ್ನು ತನ್ನ ಸ್ವಂತ ಮನೆಯಲ್ಲಿ ದಾಸ್ತಾನು ಇಟ್ಟು ಮಾರಾಟ ಮಾಡುವ ದಂಧೆ ನಡೆಸುತ್ತಿದ್ದಾನೆ ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಕಾನೂನು ಕ್ರಮ :
ಕಿರವತ್ತಿ ವಲಯ ಅರಣ್ಯಾಧಿಕಾರಿಯವರ ವನ್ಯಜೀವಿ ಗುನ್ನಾ ವರದಿ ನಂ:-16/2024-25, ದಿ: 12.09.2024 ರ ಪ್ರಕಾರ, ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರಂತೆ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವನ್ಯಜೀವಿ ಸಂರಕ್ಷಣಾ ಅಧಿನಿಯಮ 1972 ಕಲಂ 2 (6) (20) (36), 9, 39, 51 ಹಾಗೂ ಕರ್ನಾಟಕ ಅರಣ್ಯ ಕಾಯ್ದೆ 1963 ಸೆಕ್ಷನ್ 24 c(ii) ರ ಪ್ರಕಾರ ವನ್ಯಜೀವಿ ಗುನ್ನೆ ಪ್ರಕರಣ ದಾಖಲಿಸಲಾಗಿದೆ.
ಜಪ್ತಿ ಮಾಡಿದ ವಸ್ತುಗಳು :
ಈ ಕಾರ್ಯಾಚರಣೆಯಲ್ಲಿ, ವನ್ಯಜೀವಿ ಜಿಂಕೆಯ ಹಸಿ ಮಾಂಸ 3.3 ಕೆಜಿ, ಕಾಲು-2, ತಲೆ-1, ಚರ್ಮ-1 ಹಾಗೂ ಮಾಂಸ ತಯಾರಿಸಲು ಬಳಸಿದ ಒಂದು ಕತ್ತಿಯನ್ನು ಜಪ್ತಿ ಮಾಡಲಾಗಿದೆ. ತನಿಖೆ ಮುಂದುವರಿದಿದೆ :
ಆರೋಪಿಯನ್ನು ಹೆಚ್ಚಿನ ತಪಾಸಣೆ ಮಾಡಲಾಗಿದ್ದು, ಈ ಹಿಂದೆಯೂ ಇಂತಹ ಕೃತ್ಯಗಳನ್ನು ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾನೆ. ಈತನೊಂದಿಗೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾದ ಇತರ ಹೆಸರುಗಳನ್ನು ತಿಳಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಕಾರ್ಯಾಚರಣೆಯಲ್ಲಿ ಭಾಗವಹಿಸಿದವರು :
ಈ ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿಗಳೊಂದಿಗೆ, ಉಪ ವಲಯ ಅರಣ್ಯಾಧಿಕಾರಿಗಳಾದ ಆನಂದ, ವಿನಯ, ಮಂಜುನಾಥ, ಪ್ರಕಾಶ, ಕಿರಣಕುಮಾರ ಹಾಗೂ ಎಲ್ಲಾ ವಲಯದ ಗಸ್ತು ವನಪಾಲಕರು ಮತ್ತು ಇತರ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಈ ಘಟನೆ, ವನ್ಯಜೀವಿ ಸಂರಕ್ಷಣೆಯ ಮಹತ್ವವನ್ನು ಪುನಃ ಒತ್ತಿಸುತ್ತದೆ. ಅರಣ್ಯ ಮತ್ತು ವನ್ಯಜೀವಿಗಳನ್ನು ರಕ್ಷಿಸಲು, ಸರ್ಕಾರ ಮತ್ತು ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಇಂತಹ ಕೃತ್ಯಗಳನ್ನು ತಡೆಗಟ್ಟಲು, ಕಾನೂನು ಕ್ರಮಗಳು ತೀವ್ರಗೊಳಿಸುವ ಅಗತ್ಯವಿದೆ.
.
.
.