Adv

news21 ‌ ‌YELLAPURNews prakatane --------- ‌ ‌patanakaroct10to17pydkumar Oct9to15 ‌ ‌ ‌ ‌ ‌ oct5to15-pyd ‌‌ ‌ Vishal-sep13to-unlimited ‌ ‌ ‌ ‌ IMG-20241009-195526

Friday 13 September 2024

ಯಲ್ಲಾಪುರದ ಸರ್ಕಾರಿ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮ

IMG-20240913-202555 ಯಲ್ಲಾಪುರ : ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಬಿಎ ಮತ್ತು ಬಿಕಾಂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಹಾಗೂ ಅವರ ಪಾಲಕರಿಗೆ ಅಭಿವಿನ್ಯಾಸ 
   ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಶ್ರಾಂತ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟಾ, ಅವರು, ವಿದ್ಯಾರ್ಥಿಗಳು ತಮ್ಮ ಪ್ರವೃತ್ತಿಗಳ ಬಗ್ಗೆ ಚಿಂತನೆ ಮಾಡಬೇಕು ಮತ್ತು ತಮ್ಮನ್ನು ತಾವು ಅವಲೋಕಿಸಿಕೊಳ್ಳಬೇಕು ಎಂದ ಅವರು ವಿದ್ಯಾರ್ಥಿಗಳಿಗೆ ತಮ್ಮ ಜೀವನದಲ್ಲಿ ಸಾಧನೆ ಮಾಡಲು ಪ್ರೇರೇಪಿಸಿದರು. 
   ಮುಂಡಗೋಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರಸನ್ನ ಸಿಂಗ್ ಬಿ ಹಾಜೆರಿ ಮಾತನಾಡಿ, ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ ನೀಡಿದರು ಮತ್ತು ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಶಿಸ್ತುಗಳ ಬಗ್ಗೆ ವಿವರಿಸಿದರು. ಅವರು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಸಲಹೆ ನೀಡಿದರು. IMG-20240913-202534 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಆರ್ ಡಿ ಜನಾರ್ಧನ್, ವಿದ್ಯಾರ್ಥಿಗಳು ಓದಿನಲ್ಲಿ ಕುತೂಹಲತೆ ಸಹಪಾಠಿಗಳ ಜೊತೆ ಉತ್ತಮ ಭಾವನಾತ್ಮಕ ಸಂಬಂಧ ಹೊಂದಿರಬೇಕು. ವಿದ್ಯಾರ್ಥಿಗಳಿಗೆ ಸಮಗ್ರ ವ್ಯಕ್ತಿತ್ವ ವಿಕಾಸಕ್ಕೆ ಒತ್ತು ನೀಡಿದರು. 
   ಇದೇ ಸಂದರ್ಭದಲ್ಲಿ ಬೀರಣ್ಣ ನಾಯಕ ಮೊಗಟಾ ಹಾಗೂ ಪ್ರಸನ್ನ ಸಿಂಗ್ ಬಿ ಹಾಜೆರಿ ಅವರನ್ನು ಕಾಲೇಜಿನ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. 
   ಕಾರ್ಯಕ್ರಮದಲ್ಲಿ ವೇದಾ ಭಟ್ಟ ಪ್ರಾರ್ಥಿಸಿದರು, ಐಕ್ಯೂಎಸಿ ಸಂಚಾಲಕರಾದ ಶರತ್ ಕುಮಾರ್ ಸ್ವಾಗತಿಸಿದರು, ಮೇಘಾ ದೇವಳಿ ವಂದಿಸಿದರು ಮತ್ತು ನಂದಿತಾ ಭಾಗ್ವತ ಕಾರ್ಯಕ್ರಮ ನಿರ್ವಹಿಸಿದರು.
.
.
.

ಯಲ್ಲಾಪುರದಲ್ಲಿ ನಡೆದ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ

IMG-20240913-185447 ಯಲ್ಲಾಪುರ: ಜಿಲ್ಲಾ ಪಂಚಾಯತ್, ಜಿಲ್ಲಾ ವಯಸ್ಕ ಶಿಕ್ಷಣ ಕಾರ್ಯಾಲಯ, ಡಯಟ್ ಕುಮಟಾ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ ಯಲ್ಲಾಪುರ ಪಟ್ಟಣದ ನೂತನನಗರ ಜಡ್ಡಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು. 
   ಕಾರ್ಯಕ್ರಮವನ್ನು ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎನ್ ಆರ್ ಹೆಗಡೆ ಮಾತನಾಡಿ, ಸಾಕ್ಷರತಾ ಕೇಂದ್ರಗಳಲ್ಲಿ ಕಲಿತ ಅಕ್ಷರ, ಓದು, ಬರಹ ಮತ್ತು ಲೆಕ್ಕಾಚಾರಗಳನ್ನು ತಮ್ಮ ನಿತ್ಯ ಜೀವನದಲ್ಲಿ ಬಳಸಿಕೊಂಡು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ಯಶಸ್ವಿಯಾಗಲೆಂದು ನವಸಾಕ್ಷರರಿಗೆ ಕಿವಿ ಮಾತು ಹೇಳಿದರು. 
    ಪಟ್ಟಣ ಪಂಚಾಯತಿ ಅಧ್ಯಕ್ಷೆ ನರ್ಮದಾ ನಾಯ್ಕ, “ವಯಸ್ಕರಾದ ನೀವು ಈ ವಯಸ್ಸಿನಲ್ಲಿಯೂ ಓದು, ಬರಹ ಮತ್ತು ಲೆಕ್ಕಾಚಾರಗಳನ್ನು ಕಲಿತಿರುವುದು ಪ್ರಶಂಸೆನೀಯ. ನಿಮ್ಮ ಕಲಿಕಾ ಉತ್ಸಾಹಕ್ಕೆ ಅಭಿನಂದನೆಗಳು” ಎಂದು ತಿಳಿಸಿದರು. IMG-20240913-185534 ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀದೇವಿ ಪಾಟೀಲ್, ಪಟ್ಟಣ ಪಂಚಾಯತದ ಉಪಾಧ್ಯಕ್ಷ ಅಮಿತ ಅಂಗಡಿ, ಸಿ.ಆರ್.ಪಿ ಎಸ್ ವಿ ವೆರ್ಣೇಕರ್‌ ಅವರು ಮಾತನಾಡಿದರು. 
    ಸಾಕ್ಷರತಾ ಬೋಧಕಿಯರಾದ ಸುಧಾ ಬಾವಿ, ವೀಣಾ ಜಡರಾಮ ಕುಂಡಿ, ಮೀನಾಜ ಶೇಖ್ ಮತ್ತು ನಸರಿನ ಬಾನು ಶೇಖ್‌ ಅವರನ್ನು ಸನ್ಮಾನಿಸಿ, ನವಸಾಕ್ಷರರಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. 
    ಬೋಧಕಿಯರಾದ ಸುಧಾ ಪ್ರಾರ್ಥಿಸಿದರು. ಬಿ.ಆರ್.ಸಿ ಸಮನ್ವಯಾಧಿಕಾರಿ ಸಂತೋಷಕುಮಾರ ಜಿಗಳೂರ ಸ್ವಾಗತಿಸಿದರು. ರಾಜ್ಯ ಸಂಪನ್ಮೂಲ ವ್ಯಕ್ತಿ ದಿಲೀಪ ದೊಡ್ಮನಿ ಪ್ರಾಸ್ತಾವಿಕಗೈದರು. ಬಿ.ಐ.ಇ.ಆರ್.ಟಿ, ಎಂ ಎ ಬಾಗೇವಾಡಿ ಮತ್ತು ಸಂಗಡಿಗರು ಸಾಕ್ಷರತಾ ಗೀತೆ ಹಾಡಿದರು. ಕೊನೆಗೆ ಸಿ.ಆರ್.ಪಿ ಚಂದ್ರಹಾಸ ನಾಯ್ಕ ವಂದಿಸಿದರು.
.
.
.

ದೇವಿ ಮೈದಾನ ಗಣೇಶ ಮೂರ್ತಿಗೆ ಅಡಿಷನಲ್ ಎಸ್ ಪಿ ಎಂ ಜಗದೀಶರಿಂದ ಪೂಜೆ, ಅನ್ನ ಪ್ರಸಾದ ಸ್ವೀಕಾರ

IMG-20240913-173951 IMG-20240913-173730 ಯಲ್ಲಾಪುರ : ಪಟ್ಟಣದ ಶ್ರೀದೇವಿ ಮೈದಾನ ಗಜಾನನೋತ್ಸವ ಸಮಿತಿ, 42ನೇ ವರ್ಷದ ಗಜಾನನೋತ್ಸವ ವನ್ನು ವಿಜ್ರಂಭಣೆಯಿಂದ ಆಚರಿಸುತ್ತಿದೆ. ಹತ್ತು ದಿನಗಳ ಕಾಲ ಗಣೇಶ ನನ್ನ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ ಈ ವರ್ಷ ಪ್ರತಿದಿನ ಅನ್ನ ಸಂತರ್ಪಣೆ ನಡೆಸಲಾಗಿದೆ. ಪ್ರತಿದಿನ 600 ರಿಂದ 1000 ವರೆಗೆ ಭಕ್ತರು ಆಗಮಿಸಿ ಅನ್ನಪ್ರಸಾದವನ್ನು ಸ್ವೀಕರಿಸಿದ್ದಾರೆ. 
   ಯಲ್ಲಾಪುರದವರೇ ಆದ ಅಡಿಷನಲ್ ಎಸ್ ಪಿ ಎಂ ಜಗದೀಶ ಶುಕ್ರವಾರ ದೇವಿ ಮೈದಾನ ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ಆಗಮಿಸಿದ ಭಕ್ತರಿಗೆ ಅನ್ನಪ್ರಸಾದವನ್ನು ವಿತರಿಸಿದರು ಹಾಗೂ ಸ್ವೀಕರಿಸಿದರು. ರಾಜ್ಯದ ಯಾವುದೇ ಕಡೆ ಸೇವೆ ಸಲ್ಲಿಸುತ್ತಿರುವಾಗಲು ಕೂಡ ಎಂ ಜಗದೀಶ ಕುಟುಂಬದವರೊಂದಿಗೆ ಗಣೇಶ ಚತುರ್ಥಿ ಅಂದು ಆಗಮಿಸಿ ಪೂಜೆ ಸಲ್ಲಿಸುತ್ತಿದ್ದರು. ಇದೀಗ ಉತ್ತರ ಕನ್ನಡ ಜಿಲ್ಲೆಯ ಹೆಚ್ಚುವರಿ ಎಸ್ಪಿ ಆಗಿರುವುದರಿಂದ ಯಲ್ಲಾಪುರಕ್ಕೆ ಆಗಮಿಸಿ ಪೂಜೆ ಸಲ್ಲಿಸಿ ಅನ್ನಪ್ರಸಾದವನ್ನು ಸ್ವೀಕರಿಸಿದ್ದಾರೆ. 
    ಪ್ರತಿದಿನ ಗಣಹವನ, ಪ್ರತಿನಿತ್ಯ ಅನ್ನಸಂತರ್ಪಣೆ, ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಂಡಿರುವ ಈ ಸಮಿತಿಯು ಯಲ್ಲಾಪುರದ ಇತಿಹಾಸದಲ್ಲಿಯೇ ಗಮನಾರ್ಹ ಸ್ಥಾನ ಪಡೆದಿದೆ. 
    ಪ್ರಸಕ್ತ 42ನೇ ಗಜಾನನೋತ್ಸವಕ್ಕೆ ಮುನ್ನಡೆಯುತ್ತಿರುವ ಪದಾಧಿಕಾರಿಗಳಾದ ಅಧ್ಯಕ್ಷ ಗಣೇಶ ಪತ್ತಾರ್, ಗೌರವಾಧ್ಯಕ್ಷ ಉಲ್ಲಾಸ ಪ್ರಭು, ಪ್ರಧಾನ ಕಾರ್ಯದರ್ಶಿ ಸಂಜೀವಕುಮಾರ ಹೊಸ್ಕೇರಿ, ಸಹ ಕಾರ್ಯದರ್ಶಿಗಳಾದ ಮಾರುತಿ ಎಂ ನಾಯ್ಕ, ರವಿ ಭಜಂತ್ರಿ, ಪ್ರಮುಖರಾದ ಪುಂಡಲೀಕ ಶೆಟ್ಟಿ, ವೆಂಕಟೇಶ್ ರಾಯ್ಕರ, ಗುರುರಾಜ್ ಕುರ್ಡೇಕರ, ಅಮಿತ್ ಉದಯ ರೇವಣಕರ, ವಿಜಯಶಂಕರ ಜಿ ನಾಯಕ, ಸಚಿನ ಶಾನಭಾಗ, ಪ್ರಶಾಂತ ದುರಂದರ, ಹನುಮಂತ ನೇರಲಗಿ, ಸೂರಜ ಶೆಟ್ಟಿ, ಪ್ರವೀಣ್ ಪಾಯದೆ, ಅಮೃತ ಬದ್ದಿ, ನಯನ ಇಂಗಳೆ, ವಿಶ್ವೇಶ್ವರ ಹೆಬ್ಬಾರ್ ಅಲೇಪಾಲ್, ಸುಬ್ರಾಯ ಶೆಟ್ಟಿ, ನಾಗೇಶ ರಾಯ್ಕರ, ರವಿ ಎಂ ಶೆಟ್ಟಿ, ಪ್ರೇಮಾನಂದ ಭಂಡಾರಿ, ಅರ್ಚಕರಾದ ದತ್ತಾತ್ರೇಯ ಭಟ್ ಸಬಾಹಿತಮನೆ, ಇನ್ನೂ ಮುಂತಾದವರು ಈ ಸಂದರ್ಭದಲ್ಲಿ ಇದ್ದರು. 
 ಕಾರ್ಯಕ್ರಮಗಳು : 
 ಇಂದು ಶುಕ್ರವಾರ ಸಂಜೆ, 6.30 ಕ್ಕೆ ಶ್ರೀ ವೀರಮಾರುತಿ ತಾಳಮದ್ದಲೆ ಕೂಟ ಮಾಗೋಡ ಇವರಿಂದ ತಾಳಮದ್ದಲೆ- ಸುಧನ್ವಾರ್ಜುನ ನಡೆಯಲಿದೆ. ಸೆ.14 ಶನಿವಾರ ಸಂಜೆ 6.30 ಕ್ಕೆ, ಪ್ರಸಿದ್ಧ ಕಲಾವಿದರಿಂದ ಗಾನ ವೈಭವ, ಸೆ.15, ರವಿವಾರ ಸಂಜೆ 6.30 ಕ್ಕೆ ಛದ್ಮವೇಷ ಹಾಗೂ ಮುಕ್ತ ಅಭಿನಯ ಗೀತೆ ಸ್ಪರ್ಧೆ ಸ್ಪೋರ್ಟ್ಸ್ ಕ್ಲಬ್ ಯಲ್ಲಾಪುರ ಹಾಗೂ ದೇವಿ ಮೈದಾನ ಸಾರ್ವಜನಿಕ ಸಮಿತಿಯಿಂದ ಬಹುಮಾನ ವಿತರಣೆ, ಸೇ .16 ರಂದು ಭವ್ಯ ಮೆರವಣಿಗೆ ಮೂಲಕ ಗಣೇಶ ಮೂರ್ತಿಯ ವಿಸರ್ಜನಾ ಕಾರ್ಯಕ್ರಮ ನಡೆಯಲಿದೆ. 

 ಬೆಂಗಳೂರು ಪರ್ತಗಾಳಿ ಜೀವೋತ್ತಮ ಮಠಕ್ಕೆ ಶಾಸಕ ಹೆಬ್ಬಾರ್ ಭೇಟಿ IMG-20240913-173151 
ಯಲ್ಲಾಪುರ /ಬೆಂಗಳೂರು : ಶಾಸಕರಾದ ಶಿವರಾಮ ಹೆಬ್ಬಾರ್ ಅವರು ಶುಕ್ರವಾರ ಶ್ರೀಕ್ಷೇತ್ರ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಬೆಂಗಳೂರಿನ ಬಸವನಗುಡಿಯ ಶಾಖಾ ಮಠಕ್ಕೆ ಭೇಟಿ ನೀಡಿದರು. 
   ಪವಿತ್ರ ಚಾತುರ್ಮಾಸ್ಯ ವ್ರತದಲ್ಲಿರುವ ಶ್ರೀಕ್ಷೇತ್ರ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿಯವರನ್ನು ಭೇಟಿಯಾಗಿ ದಿವ್ಯಾಶೀರ್ವಾದ ಹಾಗೂ ಮಾರ್ಗದರ್ಶನ ಪಡೆದರು. ಈ ಸಂದರ್ಭದಲ್ಲಿ ಶಾಸಕರ ಆಪ್ತ ಸಹಾಯಕ ಕಮಲಾಕರ ನಾಯ್ಕ ಇತರರು ಇದ್ದರು. 
.
.
.

ಕಿರವತ್ತಿ ಹಾಗೂ ಆನಗೋಡ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಮದರ್ ತೆರೇಸಾ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ

IMG-20240913-162507 IMG-20240913-162457 
 ಕಿರವತ್ತಿ ವಲಯ ಮಟ್ಟದ ಪ್ರೌಢಶಾಲೆಯ ಕ್ರೀಡಾಕೂಟದಲ್ಲಿ ಮದರ್ ತೆರೇಸಾ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ 
 ಯಲ್ಲಾಪುರ : ಇತ್ತೀಚಿಗೆ ನಡೆದ ಕಿರವತ್ತಿ ವಲಯ ಮಟ್ಟದ ಪ್ರೌಢಶಾಲೆಯ ಕ್ರೀಡಾಕೂಟದಲ್ಲಿ ಮದರ್ ತೆರೇಸಾ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ಗಳಿಸಿದ್ದಾರೆ. 
   ಅದರಲ್ಲಿ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು-ಸಾಧಿಕ್ ಗುಂಡು ಎಸೆತ, ಇಂಚರ ಗುಂಡು ಎಸೆತ, ಅಫಾನ್ ಚಕ್ರ ಎಸೆತ, ಅಭಿಷೇಕ್ ಹ್ಯಾಮರ್, 4×400 ಗಂಡು ಮಕ್ಕಳ ರೀಲೆ ಮತ್ತು ಥ್ರೋ ಬಾಲ್. 
    ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು-ಅಫಾನ್ ಗುಂಡು ಎಸೆತ, ಡೈನಾ ಸಿಲ್ವನ ಈಟಿ ಎಸೆತ, ಯಶವಂತ್ 400 ಮೀಟರ್ ಓಟ, ಜೀವನ್ ಹರ್ಡಲ್ಸ, ಗಂಡು ಮಕ್ಕಳ4×400 ರೀಲೆ, ಹೆಣ್ಣು ಮಕ್ಕಳ4×400 ರೀಲೆ ಮತ್ತು ಥ್ರೋ ಬಾಲ್ . Pyara ಬಾಲಕ ಮತ್ತು ಬಾಲಕಿಯ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಪಡೆದ ವಿದ್ಯಾರ್ಥಿಗಳು-ಅಫಾನ್ ಈಟಿ ಎಸೆತ, ಎಲನ್ ಚಕ್ರ ಎಸೆತ, ಹುಮೇರಾ 400 ಮತ್ತು 200 ಮೀಟರ್ ಓಟ, ಲೇಸಿಯಾ 800 ಮೀಟರ್ ಓಟ, ಡೈನಾ 3000 ಮೀಟರ್ ಓಟ, ಗಣೇಶ್ ಎತ್ತರ ಜಿಗಿತ, ರಿಮೋನ್ ಹರ್ಡಲ್ಸ. IMG-20240913-162446 
 ಆನಗೋಡ ವಲಯ ಮಟ್ಟದ ಪ್ರಾಥಮಿಕ ಶಾಲೆಯ ಕ್ರೀಡಾಕೂಟದಲ್ಲಿ ಮದರ್ ತೆರೇಸಾ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ 
 ಯಲ್ಲಾಪುರ : ಇತ್ತೀಚಿಗೆ ನಡೆದ ಆನಗೋಡ ವಲಯ ಮಟ್ಟದ ಪ್ರಾಥಮಿಕ ಶಾಲೆಯ ಕ್ರೀಡಾಕೂಟದಲ್ಲಿ ಮದರ್ ತೆರೇಸಾ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ಗಳಿಸಿದ್ದಾರೆ. 
 ಅದರಲ್ಲಿ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು -ರುಬನ್ ಚಕ್ರ ಎಸೆತ, ಮೈಲಿನಾ ಮತ್ತು ಫ್ರೆನಿತ ಹರ್ಡಲ್ಸ, ವಾಲಿಬಾಲ್, ಥ್ರೊಬಾಲ್, ಬಾಲ್ ಬ್ಯಾಡ್ಮಿಂಟನ್     ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು-ಸೆಲ್ವನ್ ಮೂರು ಮೀಟರ್ 200 ಮೀಟರ್ ಓಟ ಮತ್ತು ಉದ್ದ ಜಿಗಿತ, ರೂಬನ್ ರೀಲೆ, ವಾಲಿಬಾಲ್. 
    ಬಾಲಕ ಮತ್ತು ಬಾಲಕಿಯ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಪಡೆದ ವಿದ್ಯಾರ್ಥಿಗಳು -ಜೀವನ್600 ಮೀಟರ್ ಓಟ, ಇಕ್ರಾ ಚಕ್ರ ಎಸೆತ, ಕ್ರಿಸ್ಟಲ್ ಹಡಲ್ಸ , ಜೋಸ್ಲಿನ್ ಎತ್ತರ ಜಿಗಿತ. 
    ಈ ಮೇಲಿನ ಸಾಧನೆ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ನಮ್ಮ ಶಾಲಾ ಸಂಚಾಲಕರಾದ ವಂದನೀಯ ಫಾದರ್ ಪೀಟರ್ ಕನೇರಿಯೋ, ನಮ್ಮ ಶಾಲಾ ಮುಖ್ಯೋಪಾಧ್ಯಾಯರಾದ ಫಾದರ್ ರೊಯ್ಯಸ್ಟನ ಗೊನ್ಸಾಲ್ವಿಸ್ ಹಾಗೂ ನಮ್ಮ ಶಾಲೆಯ ಎಲ್ಲಾ ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.
.
.
.

ವಿದ್ಯಾರ್ಥಿ ಒಕ್ಕೂಟವನ್ನು ಸಂಸತ್ತು ಎಂದು ಕರೆದಿರುವುದು ಔಚಿತ್ಯಪೂರ್ಣ/ ಯಶಸ್ವಿಯಾದ ತೇಲಂಗಾರದ ತಾಳಮದ್ದಲೆ

IMG-20240913-155915
IMG-20240913-154533 ವಿದ್ಯಾರ್ಥಿ ಒಕ್ಕೂಟವನ್ನು ಸಂಸತ್ತು ಎಂದು ಕರೆದಿರುವುದು ಔಚಿತ್ಯಪೂರ್ಣ : ಡಾ. ಶ್ರೀಧರ ಬಳಗಾರ 
 ಯಲ್ಲಾಪುರ : ವಿದ್ಯಾರ್ಥಿ ಒಕ್ಕೂಟವನ್ನು ಸಂಸತ್ತು ಎಂದು ಕರೆದಿರುವುದು ಔಚಿತ್ಯ, ಅರ್ಥಪೂರ್ಣವಾಗಿದೆ. ಇಂತಹ ಸಂಸತ್ತನ್ನು ಉದ್ಘಾಟನೆ ಮಾಡಿದ ಭಾಗ್ಯ ನನ್ನದು. ಸಂಸತ್ತಿನ ಸಂವಿದಾನ ಭಾಷೆ ಪ್ರಜಾಪ್ರಭುತ್ವ ಭಾಷೆಯಾಗಿದೆ. ಎಲ್ಲ ಪ್ರದೇಶಗಳ, ಸಮೂದಾಯಕ್ಕೆ ಸಮನಾದ ಮಹತ್ವ ನೀಡುವುದು ಸಂವಿಧಾನದ ಮಹತ್ವ. ಇದನ್ನು ಅರ್ಥೈಸುವುದೇ ಸಂವಿದಾನ ಭಾಷೆಯಾಗಿದೆ ಎಂದು ಖ್ಯಾತ ವಿಮರ್ಶಕ, ಕಥೆಗಾರ ಡಾ. ಶ್ರೀಧರ ಬಳಗಾರ ಹೇಳಿದರು. 
   ಪಟ್ಟಣದ ವೈ.ಟಿ.ಎಸ್.ಎಸ್. ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿ ಸಂಸತ್ತು, ಸಾಂಸ್ಕøತಿಕ, ಕ್ರೀಡಾ ಮತ್ತು ಎನ್.ಎಸ್.ಎಸ್. ಕಾರ್ಯಚಟುವಟಿಕೆಗಳನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. 
     ಕನ್ನಡದ ಅಲಂಕಾರ, ಛಂದಸ್ಸು ಒಳಗೊಂಡಿದ್ದರೆ ಮಾತ್ರ ಕಾವ್ಯ, ಸಾಹಿತ್ಯ ರಚಿಸಲು ಸಾಧ್ಯವಿಲ್ಲ, ಉತ್ತಮ ಕಂಠವಿದ್ದರೆ ಮಾತ್ರ ಸಾಲದು, ಸಂಗೀತದ ಲಯ, ಭಾವ ಕಲ್ಪನೆ ಗೊತ್ತಿದ್ದರೆ ಮಾತ್ರ ಸಂಗೀತಗಾರನಾಗಲು ಸಾಧ್ಯ ಎಂದ ಅವರು, ಆತ್ಮಪ್ರಜ್ಞೆ, ಸ್ವಾಭಿಮಾನ ಎಲ್ಲರಲ್ಲೂ ಇರುತ್ತದೆ. ಸಂವಿದಾನಿಕ ಭಾಷಾ ಪ್ರಜ್ಞೆ ಇಲ್ಲದಿದ್ದರೆ, ಸಮಾಜದಲ್ಲಿ ಸಾಂಸ್ಕೃತಿಕ ವೈವಿದ್ಯತೆ ಇರುವಲ್ಲಿ ವೈರುದ್ಯತೆ ಇದ್ದರೆ ಜಾತಿ, ಸಮೂದಾಯ, ಧರ್ಮಗಳ ನಡುವೆ ವೈಷಮ್ಯಗಳು ಹುಟ್ಟು ಹಾಕುತ್ತದೆ. ನಮ್ಮ ಶಿಕ್ಷಣ ಕುಟುಂಬದಿಂದ, ಪರಿಸರದಿಂದ, ಕೃಷಿಯಿಂದ ದೂರಮಾಡಿದೆ. ಅತ್ಯಾಧುನಿಕ ವಸ್ತುಗಳನ್ನೊಳಗೊಂಡ ಮನೆ ನಿರ್ಮಿಸದರೆ ಸಾಲದು. ಮನೆಯಲ್ಲಿರುವ ಭಾಂದವ್ಯಗಳನ್ನು ಯಂತ್ರಗಳಿಂದಗಳಿಸಲು ಸಾಧ್ಯವಿಲ್ಲ. ಮನೆಯಲ್ಲಿ ಮಕ್ಕಳ ಜನನ, ಸಾವಿನ ನೋವಿನ ಅನುಭವ, ಮದುವೆಯ ಅನುಭವಗಳೂ ಕೂಡ ಇಲ್ಲವಾಗಿದೆ. ಅಂತಹ ಯಾಂತ್ರಿಕವಾದ ಬದುಕು ನಮ್ಮದಾಗಿದೆ ಎಂದರು. 
    ಬಿಇಓ ಎನ್.ಆರ್.ಹೆಗಡೆ ಉಪಸ್ಥಿತರಿದ್ದು ಶುಭಕೋರಿದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕೋಶಾಧ್ಯಕ್ಷ ಸದಾನಂದ ದೇಸಾಯಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಮಹಾ ಶಕ್ತಿ ಅಡಗಿದೆ. ಕಲ್ಲನ್ನು ಕೆತ್ತಿ ಮೂರ್ತಿಮಾಡುವ ಕಾರ್ಯವನ್ನು ಶಿಕ್ಷಕರು ಮಾಡುತ್ತಾರೆ. ಪಾಲಕರು ಪ್ರತಿಫಲಾಪೇಕ್ಷೆ ಇಲ್ಲದೇ ನಿಮಗೆ ಶಿಕ್ಷಣ, ಸಂಸ್ಕಾರ ನೀಡುವ ಕಾರ್ಯ ಮಾಡುತ್ತಾರೆ. ಇದನ್ನು ಅರಿತು ಉನ್ನತ ಶಿಕ್ಷಣ ಪಡೆದು ಉತ್ತಮ ಜೀವನ ನಡೆಸಿದಾಗ ಮಾತ್ರ ಈ ತ್ಯಾಗಕ್ಕೆ ಬೆಲೆ ಬರುತ್ತದೆ ಎಂದರು. 
    ಸಂಸ್ಥೆಯ ನಿರ್ದೇಶಕ ನಾಗರಾಜ ಮದ್ಗುಣಿ ಮಾತನಾಡಿ, 'ಕೇವಲ ಶಿಕ್ಷಣ ಕಲಿತರೆ ಸಾಲದು. ಉತ್ತಮ ಸ್ಥಾನಕ್ಕೇರಲು ಜೀವನದ ಅನುಭವಗಳೂ ಬೇಕು. ಇಂತಹ ಶಿಕ್ಷಣವನ್ನು ವೈ.ಟಿ.ಎಸ್.ಎಸ್. ನೀಡುತ್ತಿದೆ. ಇದನ್ನು ಸದುಪಯೋಗ ಪಡಿಸಿಕೊಂಡು ಜೀವನದಲ್ಲಿ ಉತ್ತಮ ಸಾಧನೆ ಮಾಡಿ' ಎಂದು ಹೇಳಿದರು. 
    ಶಿಕ್ಷಕರಾದ ಕೆ.ಸಿ.ಮಾಳ್ಕರ್, ಪರ್ವೀನ್ ಬಾನು ಸುಂಕದ ವಿದ್ಯಾರ್ಥಿ ಸಂಸತ್ತನ್ನು ಪರಿಚಯಿಸಿದರು. ದೈಹಿಕ ಶಿಕ್ಷಕ ಎಂ.ಗಂಗಾನಾಯಕ ಪ್ರತಿಜ್ಞಾವಿದಿ ಭೋದಿಸಿದರು. ಶ್ರೀನಿದಿ ಸಂಗಡಿಗರು ಪ್ರಾರ್ಥನೆ ಹಾಡಿದರು. ಪ್ರಾಂಶುಪಾಲ ಆನಂದ ಹೆಗಡೆ ಸ್ವಾಗತಿಸಿದರು. ಉಪ ಪ್ರಾಂಶುಪಾಲ ಎನ್.ಎಸ್. ಭಟ್ಟ ವಂದಿಸಿದರು, ಶಿಕ್ಷಕ ವಿನೋದ ಭಟ್ಟ ನಿರೂಪಿಸಿದರು. IMG-20240913-155405 ಯಶಸ್ವಿಯಾದ ತೇಲಂಗಾರದ ತಾಳಮದ್ದಲೆ 
ಯಲ್ಲಾಪುರ : ಗ್ರಾಮೀಣ ಭಾಗದಲ್ಲಿ ಕಲಾ ಸಂಘಟನೆಗಳು ಸಾಂಸ್ಕೃತಿಕ ವಾತಾವರಣ ನಿರಂತರವಾಗಿ ಮುಂದುವರಿಯಲು ಶ್ರಮಿಸಬೇಕು ಎಂದು ವಜ್ರಳ್ಳಿಯ ಆದರ್ಶ ಸೇವಾ ಸಹಕಾರಿ ಸಂಘದ ಅಧ್ಯಕ್ಷ ದತ್ತಾತ್ರೇಯ ಭಟ್ಟ ತಾರಗಾರ ಹೇಳಿದರು. 
    ಅವರು ತಾಲೂಕಿನ ತೇಲಂಗಾರ ಮೈತ್ರಿ ಸಭಾಭವನದಲ್ಲಿ ಕರ್ನಾಟಕ ಕಲಾ ಸನ್ನಿಧಿ ತೇಲಂಗಾರ ಹಾಗೂ ಮೈತ್ರಿ ಕಲಾ ಬಳಗ ತೇಲಂಗಾರ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ತಾಳಮದ್ದಲೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 
     ಗ್ರಾ.ಪಂ ಸದಸ್ಯ ಜಿ.ಆರ್.ಭಾಗ್ವತ ಮಾತನಾಡಿ, ಗ್ರಾಮೀಣ ಭಾಗದ ತೆರೆಮರೆಯ ಕಲಾವಿದರನ್ನು ಗುರುತಿಸುವ ಕಾರ್ಯವನ್ನು ಕಲಾ ಸನ್ನಿಧಿ ಸಂಸ್ಥೆ ಮಾಡುತ್ತಿರುವುದು ಮಾದರಿಯಾಗಿದೆ ಎಂದರು. 
     ಕರ್ನಾಟಕ ಕಲಾ ಸನ್ನಿಧಿಯ ಖಜಾಂಚಿ ದಿನೇಶ ಭಟ್ಟ ಯಲ್ಲಾಪುರ ಮಾತನಾಡಿ, ಮೈತ್ರಿ ಕಲಾ ಬಳಗ ಎರಡೂವರೆ ದಶಕಗಳಿಂದ ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಜಿಲ್ಲೆಯಲ್ಲೇ ಮಾದರಿಯಾಗಿದೆ. ಬಳಗದಿಂದ ಪ್ರೇರಿತರಾಗಿ ಕಲಾ ಸೇವೆ ಮುಂದುವರಿಸುತ್ತಿದ್ದೇವೆ. ತೆರೆಮರೆಯ ಕಲಾವಿದರ ಕಲಾ ಸೇವೆಯನ್ನು ಪರಿಚಯಿಸುವ ಕಾರ್ಯ ನಿರಂತರವಾಗಿ ಮುಂದುವರಿಸುತ್ತೇವೆ ಎಂದರು. 
    ಅಧ್ಯಕ್ಷತೆ ವಹಿಸಿದ್ದ ಮೈತ್ರಿ ಕಲಾ ಬಳಗದ ಅಧ್ಯಕ್ಷ ಗಣಪತಿ ಕಂಚಿಪಾಲ ಮಾತನಾಡಿ, ಹಿರಿಯ ಕಲಾವಿದರ ಕಲಾ ಸೇವೆ ಗುರುತಿಸುವುದು, ಸಾಂಸ್ಕೃತಿಕ ಕಾರ್ಯಕ್ರಮ ಸಂಘಟನೆಯಂತಹ ಮಾದರಿಯ ಕಾರ್ಯವನ್ನು ಕಲಾ ಸನ್ನಿಧಿ ಮಾಡುತ್ತಿದೆ. ಇಂತಹ ಪ್ರಯತ್ನಗಳು ಹೆಚ್ಚು ನಡೆದಾಗ ಗ್ರಾಮೀಣ ಭಾಗದಲ್ಲಿ ಸಾಂಸ್ಕೃತಿಕ ವಾತಾವರಣ ಜೀವಂತವಾಗಿರಲು ಸಾಧ್ಯ. ಕಲಾ ಸನ್ನಿಧಿಯ ಕಾರ್ಯಗಳಿಗೆ ಮೈತ್ರಿ ಕಲಾ ಬಳಗ ಸದಾ ಪ್ರೋತ್ಸಾಹ ಹಾಗೂ ಸಹಕಾರ ನೀಡಲಿದೆ ಎಂದರು. 
     ಸಾಮಾಜಿಕ ಕಾರ್ಯಕರ್ತ ತಮ್ಮಣ್ಣ ಗಾಮದ, ಮೈತ್ರಿ ಕಲಾ ಬಳಗದ ಗೌರವ ನಿರ್ದೇಶಕ ಜಿ.ಎನ್.ಅರುಣಕುಮಾರ, ಕರ್ನಾಟಕ ಕಲಾ ಸನ್ನಿಧಿಯ ಕಾರ್ಯದರ್ಶಿ ದೀಪಕ ಭಟ್ಟ ಕುಂಕಿ ಉಪಸ್ಥಿತರಿದ್ದರು. ಕರ್ನಾಟಕ ಕಲಾ ಸನ್ನಿಧಿಯ ಸಹ ಕಾರ್ಯದರ್ಶಿ ದಿನೇಶ ಗೌಡ ಮಾವಿನಮನೆ ನಿರ್ವಹಿಸಿದರು. 
    ಹಲಸಿನಹಳ್ಳಿ ನರಸಿಂಹ ಶಾಸ್ತ್ರೀ ವಿರಚಿತ ರುಕ್ಮಾಂಗದ ಚರಿತ್ರೆ ತಾಳಮದ್ದಲೆ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ದಿನೇಶ ಭಟ್ಟ, ವಿವೇಕ ಮರಾಠಿ ಅಂಕೋಲಾ, ಮದ್ದಲೆವಾದಕರಾಗಿ ನರಸಿಂಹ ಭಟ್ಟ ಹಂಡ್ರಮನೆ ಭಾಗವಹಿಸಿದ್ದರು. 
   ರುಕ್ಮಾಂಗದನಾಗಿ ಆರ್.ವಿ.ಹೆಗಡೆ ಕುಂಬ್ರಿಕೊಟ್ಟಿಗೆ, ಮೋಹಿನಿಯಾಗಿ ನರಸಿಂಹ ಭಟ್ಟ ಕುಂಕಿಮನೆ, ವಿಷ್ಣುವಾಗಿ ಶ್ರೀಧರ ಅಣಲಗಾರ, ಸಂಧ್ಯಾವಳಿಯಾಗಿ ಮಂಜುನಾಥ ಜೋಶಿ ಮಾಗೋಡ, ಧರ್ಮಾಂಗದನಾಗಿ ದಿನೇಶ  ಪಾತ್ರ ಚಿತ್ರಣ ನೀಡಿದರು.

ಯಲ್ಲಾಪುರ: ತಿಲಕ್ ಚೌಕ ಗಜಾನನೋತ್ಸವದಲ್ಲಿ ಗಣಹವನ ಮತ್ತು ಅನ್ನ ಸಂತರ್ಪಣೆ

IMG-20240913-151955 ಯಲ್ಲಾಪುರ : ಪಟ್ಟಣದ ತಿಲಕ್ ಚೌಕದಲ್ಲಿ ನಡೆದ ಮೊದಲ ಸಾರ್ವಜನಿಕ ಗಜಾನನೋತ್ಸವ ಸಮಿತಿಯ ಗಣಹವನ ಹಾಗೂ ಅನ್ನ ಸಂತರ್ಪಣೆ ಸಮಾರಂಭದಲ್ಲಿ ಪಟ್ಟಣದ ವಿಶಿಷ್ಟ ಹಬ್ಬದ ಉಲ್ಲಾಸ ವ್ಯಕ್ತವಾಯಿತು. ಗಣೇಶ ಚತುರ್ಥಿಯ ಪ್ರಯುಕ್ತ, ಪಟ್ಟಣದ ಇತಿಹಾಸದಲ್ಲಿಯೇ ಅತ್ಯಂತ ಹಳೆಯ ಮತ್ತು ಪ್ರಮುಖ ಗಣೇಶೋತ್ಸವವಾಗಿ ಪರಿಗಣಿಸಲ್ಪಟ್ಟ ತಿಲಕ್ ಚೌಕದಲ್ಲಿ ಈ ವರ್ಷವೂ ಗಣೇಶ ಮೂರ್ತಿಯ ಪ್ರತಿಷ್ಠಾಪನೆಯ ನಂತರ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. IMG-20240913-150119 ತಿಲಕ್ ಚೌಕ ಸಮಿತಿಯು ಶ್ರದ್ಧಾ ಮತ್ತು ಭಕ್ತಿ, ಗಣಹವನ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ನಡೆಸಿ ತನ್ಮೂಲಕ ಸಮಾರಂಭದ ಪ್ರತಿಯೊಬ್ಬ ಭಕ್ತನಿಗೆ ಅನ್ನಪ್ರಸಾದವನ್ನು ಒದಗಿಸುವ ಮೂಲಕ ಭಾವಾತ್ಮಕ ಹಬ್ಬದ ಸಮರ್ಪಣೆಯನ್ನು ಸಲ್ಲಿಸಿತು. ಈ ವರ್ಷ ಸುಮಾರು 7 ಸಾವಿರ ಜನರು ಪಾಲ್ಗೊಂಡು ಅನ್ನಪ್ರಸಾದವನ್ನು ಸ್ವೀಕರಿಸಿದರು. ಗಣಹೋಮ ಮತ್ತು ಪೂಜಾ ಕಾರ್ಯವನ್ನು ಅರ್ಚಕರಾದ ವಿಶ್ವೇಶ್ವರ ಕೊಂಬೆ ಮತ್ತು ಶಂಕರ ಭಟ್ಟ ನೆರವೇರಿಸಿದರು. 
     ವಿಕಾಸ ಅರ್ಬನ್ ಬ್ಯಾಂಕ್ ಅಧ್ಯಕ್ಷ ಮುರುಳಿ, ಪ್ರಧಾನ ವ್ಯವಸ್ಥಾಪಕ ಜಿ ಎನ್ ಹೆಗಡೆ, ವೈಟಿಎಸ್ಎಸ್ ಪ್ರಾಂಶುಪಾಲ ಆನಂದ ಹೆಗಡೆ, ಪೊಲೀಸ ಇನ್ಸಪೆಕ್ಟರ್ ರಮೇಶ ಹಾನಾಪುರ, ಪಿಎಸ್‌ಐ ಸಿದ್ದಪ್ಪ ಗುಡಿ ಹಾಗೂ ಸಿಬ್ಬಂದಿಗಳು, ಹಾಗೂ ವಿವಿಧ ಸಹಕಾರಿ ಸಂಘಗಳ ಪ್ರಮುಖರು, ಸರ್ಕಾರಿ ಅಧಿಕಾರಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮತ್ತು ಸಾರ್ವಜನಿಕರು ಅನ್ನಪ್ರಸಾದ ಸ್ವೀಕರಿಸಿದರು. IMG-20240913-151800. ಉದ್ಯಮಿ ಹಾಗೂ ತಿಲಕ್ ಚೌಕ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ನಾಯಕ್, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷರುಗಳಾದ ಶಿರಿಷ ಪ್ರಭು, ಮಂಜುನಾಥ ರಾಯ್ಕರ, ಗುತ್ತಿಗೆದಾರ ಮಾಲತೇಶ ಗೌಳಿ, ತಿಲಕ್ ಪರಿವಾರದ ಪ್ರಮುಖ ಸದಸ್ಯರುಗಳಾದ ಸುಧಾಕರ ಪ್ರಭು, ಸದಾನಂದ ಶಾನಭಾಗ, ಮಾದವ ನಾಯಕ್, ದತ್ತಾ ಬದ್ದಿ, ಗಿರೀಶ ಪೈ, ಸಿದ್ಧಾರ್ಥ ನಂದೊಳ್ಳಿಮಠ, ರಜತ ಬದ್ದಿ, ಕೌರವ ಬದ್ದಿ, ಹೇಮಂತ ಗುಂಜೀಕರ, ನಯನ ಇಂಗಳೆ, ವಿಕ್ರಮ ಸಾಲಗಾಂವ್ಕರ, ಮಾರುತಿ ಪ್ರಭು, ಪವನ ಕಾಮತ, ಮೂರ್ತಿ ಗುಡಿಗಾರ, ನಮೀತಾ ಬೀಡಿಕರ, ಲಕ್ಯಾ‌ ಕಿತ್ತೂರು, ಚಂದ್ರಕಾಂತ ಕಿತ್ತೂರು, ನಾಗರಾಜ ಆಚಾರಿ, ಬಾಬು ಗುಡಿಗಾರ, ರಮಣ ಅಸೂಕರ ಇತರ ಸದಸ್ಯರು ಮತ್ತು ಹಲವಾರು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. 
    ಹಬ್ಬದ ಅಂಗವಾಗಿ ಸೆಪ್ಟೆಂಬರ್ 13 ರಂದು ಸಂಜೆ ವಿ ಎಚ್ ಹೌಸ್ ಆಫ್ ನೃತ್ಯ ತಂಡದಿಂದ ನೃತ್ಯ ಕಾರ್ಯಕ್ರಮ, 14 ರಂದು ಸಂಜೆ ತಿಲಕ್ ಮೇಲೋಡಿಸ್ ಅವರಿಂದ ಸಂಗೀತ ರಸಮಂಜರಿ, 15 ರಂದು ಮಧ್ಯಾಹ್ನ 3:00 ಗಂಟೆಗೆ ರಂಗೋಲಿ ಮತ್ತು ಚಿತ್ರಕಲೆ ಸ್ಪರ್ಧೆ, ಮತ್ತು ಸಂಜೆ ಛದ್ಮವೇಷ ಸ್ಪರ್ಧೆ ನಡೆಯಲಿದೆ. 16 ರಂದು ಬಹುಮಾನ ವಿತರಣೆ ಮತ್ತು ಸಮಾರೋಪ ಸಮಾರಂಭ ಆಯೋಜಿಸಲಾಗಿದೆ. ‌ ‌ ‌ ‌

ಕಾಳಮ್ಮನಗರದಲ್ಲಿ 5 ಗ್ಯಾರಂಟಿ ಪ್ರಾಧಿಕಾರದ ಸಭೆ

IMG-20240913-124221 ಯಲ್ಲಾಪುರ: ಕಾಳಮ್ಮನಗರದ ಕಾಸಿಂ ಖಾನ್ ಅವರ ಮನೆಯಲ್ಲಿ ಗುರುವಾರ ಯಲ್ಲಾಪುರ ತಾಲೂಕಾ 5 ಗ್ಯಾರಂಟಿ ಪ್ರಾಧಿಕಾರದ ಸಭೆ ನಡೆಯಿತು. ಸಭೆಯಲ್ಲಿ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಹಾಗೂ ಪಡಿತರ ಚೀಟಿಯ ಹಣ ವರ್ಗಾವಣೆಯಲ್ಲಿ ವಿಳಂಬವಾಗಿರುವುದರಿಂದ, ಪ್ರಾಧಿಕಾರವು ಶೀಘ್ರವಾಗಿ ಸಂಬಂಧಪಟ್ಟ ಇಲಾಖೆಯೊಂದಿಗೆ ಸಂಪರ್ಕಿಸಿ ಸಮಸ್ಯೆಯನ್ನು ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿತು. IMG-20240913-124211IMG-20240913-124200 ಸಭೆಯಲ್ಲಿ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷರಾದ ಉಲ್ಲಾಸ್ ಶಾನಭಾಗ್, ಜಿಲ್ಲಾ ಪ್ರಾಧಿಕಾರದ ಉಪಾಧ್ಯಕ್ಷರು ಡಿ.ಎನ್. ಗಾಂವಕರ, ಜಿಲ್ಲಾ ಮಹಿಳಾ ಸಂಘಟನೆಯ ಸಂಯೋಜಕರಾದ ಸರಸ್ವತಿ ಗುನಗಾ, ತಾಲೂಕಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರು ಪೂಜಾ ನೆತ್ರೆಕರ್, ತಾಲೂಕಾ ಪ್ರಾಧಿಕಾರದ ಸದಸ್ಯರಾದ ನರ್ಮದಾ ನಾಯ್ಕ, ಅನಿಲ ಮರಾಠೆ, ಹಿರಿಯರಾದ ಬಾಬಣ್ಣ, ದೇವಿದಾಸ್ ನಾಯರ್ ಹಾಗೂ ಕಾಳಮ್ಮ ನಗರದ ನಿವಾಸಿಗಳು ಭಾಗವಹಿಸಿದರು. IMG-20240913-124145 ಸಭೆಯ ಸಂದರ್ಭ ಪಟ್ಟಣ ಪಂಚಾಯತಿ ನೂತನ ಅಧ್ಯಕ್ಷರಾದ ನರ್ಮದಾ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅನಿಲ ಮರಾಠೆ ಸ್ವಾಗತಿಸಿದರು ಮತ್ತು ದೇವಿದಾಸ್ ನಾಯರ್ ವಂದಿಸಿದರು.
.
.
.

ಬೆಂಗಳೂರಿಗೆ ನ.7 ಕ್ಕೆ ಅರಣ್ಯವಾಸಿಗಳ ಉಳಿಸಿ ಜಾಥಾ: ಸಂಘಟಿತ ಮತ್ತು ಕಾನೂನಾತ್ಮಕ ಹೋರಾಟಕ್ಕೆ ನಿರ್ಧಾರ.

IMG-20240913-114407 ಯಲ್ಲಾಪುರ/ಶಿರಸಿ: 33 ವರ್ಷಗಳಿಂದ ಅರಣ್ಯವಾಸಿಗಳ ಪರ ಹೋರಾಟ ಮಾಡುತ್ತಿರುವ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ, ಮುಂದಿನ ದಿನಗಳಲ್ಲಿ ರಾಜ್ಯಾದಂತ ಸಂಘಟಿತ ಮತ್ತು ಕಾನೂನಾತ್ಮಕ ಹೋರಾಟ ಮುಂದುವರಿಸಲು ನಿರ್ಧರಿಸಿದೆ. ಈ ಸಂಬಂಧ ನವೆಂಬರ್ 7ರಂದು ಬೆಂಗಳೂರಿನಲ್ಲಿ "ಅರಣ್ಯವಾಸಿಗಳ ಉಳಿಸಿ ಜಾಥಾ" ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದರು. IMG-20240913-114355 ಈ ನಿರ್ಧಾರವನ್ನು, ಶಿರಸಿಯ ಮಾರಿಕಾಂಬಾ ದೇವಸ್ಥಾನದ ಸಂಭಾಗಣದಲ್ಲಿ ಸೆಪ್ಟೆಂಬರ್ 12 ರಂದು ನಡೆದ "ಅರಣ್ಯವಾಸಿಗಳ ಚಿಂತನೆ" ಸಭೆಯಲ್ಲಿ ಕೈಗೊಳ್ಳಲಾಯಿತು. ಸಭೆಯಲ್ಲಿ, ಅರಣ್ಯ ಹಕ್ಕು ಕಾಯಿದೆಯ ಅಡಿಯಲ್ಲಿ ಅರ್ಜಿ ವಿಚಾರಣೆಯನ್ನು ಕಾನೂನಾತ್ಮಕ ರೀತಿಯಲ್ಲಿ ನಡೆಸದಿರುವುದನ್ನು ಹಾಗೂ ಅರಣ್ಯವಾಸಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಲಾಯಿತು. IMG-20240913-114312 ಮತ್ತು, ಅರಣ್ಯ ಕಾಯಿದೆ ಕಲಂ 64 ಎ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳಿಗೆ, ಪ್ರಶ್ನಾತ್ಮಕ ನೋಟಿಸ್ ನೀಡದಿರುವುದನ್ನು ವಿರೋಧಿಸಿ ಸಭೆಯಲ್ಲಿ 6 ನಿರ್ಣಯಗಳನ್ನು ಅಂಗೀಕರಿಸಲಾಯಿತು. 
ಅರಣ್ಯ ಸಚಿವರಿಗೆ ಆಹ್ವಾನ: 
ಜಿಲ್ಲೆಯಲ್ಲಿ ಅರಣ್ಯವಾಸಿಗಳ ಜೀವನದ ಕುರಿತು ಅಧ್ಯಯನ ಮಾಡಲು ಹಾಗೂ ಅವರ ಸಮಸ್ಯೆಗಳ ಆಲಿಸಲು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಉತ್ತರ ಕನ್ನಡ ಜಿಲ್ಲೆಗೆ ಆಹ್ವಾನ ನೀಡಲು ಸಭೆ ತೀರ್ಮಾನಿಸಿದೆ.
.
.
.

ಶಿವರಾಮ ಹೆಬ್ಬಾರ್ ಮುಖ್ಯಮಂತ್ರಿ ಭೇಟಿ : ಹೆಬ್ಬಾರ್ ಹೆಗಲ ಮೇಲೆ ಸಿದ್ದರಾಮಯ್ಯ ಕೈ !, ವರದಿ : ಜಗದೀಶ ನಾಯಕ

IMG-20240913-101250 ಯಲ್ಲಾಪುರ /ಬೆಂಗಳೂರು : ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರನ್ನು ಯಲ್ಲಾಪುರ ಬಿಜೆಪಿ ಶಾಸಕರಾದ ಶಿವರಾಮ ಹೆಬ್ಬಾರ್ ಅವರು ಗುರುವಾರ ಬೆಳಿಗ್ಗೆ ವಿಧಾನಸೌದದಲ್ಲಿ ಭೇಟಿಯಾದರು. 
   ಕ್ಷೇತ್ರದ ಅಭಿವೃದ್ಧಿ ಯೋಜನೆಗಳ ಹಾಗೂ ಪ್ರಗತಿಯಲ್ಲಿರುವ ಮತ್ತು ನೂತನ ನೀರಾವರಿ ಯೋಜನೆಗಳ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ಮಂಜೂರು ಮಾಡುವಂತೆ ಮನವಿ ಸಲ್ಲಿಸಿದರು IMG-20240913-101229 ಕೆಲವು ಸಮಯ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ ನಂತರ ಹೊರಗೆ ಬರುತ್ತಾ ಮಾಧ್ಯಮದ ಎದುರು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಾಸಕ ಶಿವರಾಮ ಹೆಬ್ಬಾರ್ ಹೆಗಲ ಮೇಲೆ ಕೈ ಹಾಕಿ ಇಬ್ಬರೂ ಕೂಡ ನಗುನಗುತ್ತಲೆ ಹೊರ ಬಂದಿರುವುದು, ಹೆಬ್ಬಾರ್ ಕಾಂಗ್ರೆಸ್ ಸೇರುವುದು ನಿಶ್ಚಿತ ಅನ್ನುವ ಶಂಕೆಗೆ ಬಲ ಬಂದಿದೆ. 
    ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆಗೊಂಡು ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದ ಶಾಸಕ ಶಿವರಾಮ ಹೆಬ್ಬಾರ್ ಮೂರನೇ ಅವಧಿಗೆ ಬಿಜೆಪಿ ಟಿಕೆಟ್ ನಿಂದ ಯಲ್ಲಾಪುರ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಅವರಿಗೆ ನಿರೀಕ್ಷಿಸಿದ ಮಟ್ಟಿಗೆ ಮತ ಬಿದ್ದಿರಲಿಲ್ಲ ಎನ್ನುವ ಕೊರಗು ಕಾಡುತ್ತಿತ್ತು ಬಿಜೆಪಿಯ ಸ್ವಪಕ್ಷೀಯರೇ ತಮ್ಮ ಪರವಾಗಿ ಕೆಲಸ ಮಾಡದೆ ಬೇರೆ ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಾಡಿರುವುದು ತಮಗೆ ಸಿಗಬೇಕಾದ ಮತಗಳು ಕಡಿಮೆಯಾಗಲು ಕಾರಣವಾಗಿದೆ. ಹೀಗಾಗಿ, ತಮ್ಮ ವಿರುದ್ಧ ಕೆಲಸ ಮಾಡಿರುವ ಕೆಲವು ಮುಖಂಡರು, ಕಾರ್ಯಕರ್ತರ ಪಟ್ಟಿಯನ್ನು ಮಾಡಿ ಬಿಜೆಪಿ ಹೈಕಮಾಂಡಿಗೆ ಅವರ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆಗೆ ಕಾರಣಕ್ಕೆ ಕ್ರಮ ಕೈಗೊಳ್ಳುವಂತೆ ಹೆಬ್ಬಾರ್ ವಿನಂತಿಸಿದ್ದರು. ಆದರೆ, ಬಿಜೆಪಿ ವರಿಷ್ಠರು ಹೆಬ್ಬಾರ್ ವಿರುದ್ಧ ಚಟುವಟಿಕೆ ನಡೆಸಿದ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಬದಲಾಗಿ ಇನ್ನಷ್ಟು ಉನ್ನತ ಹುದ್ದೆ‌ ನೀಡಿದ್ದರು. IMG-20240913-101240 ಹೀಗಾಗಿ ಮತ್ತಷ್ಟು ಬೇಸರಗೊಂಡ ಶಾಸಕ ಶಿವರಾಮ ಹೆಬ್ಬಾರ್, ಬಿಜೆಪಿಯಿಂದ ದೂರ ಸರಿಯುತ್ತ ಕಾಂಗ್ರೆಸ್ ಪಕ್ಷಕ್ಕೆ ಹತ್ತಿರವಾಗುತ್ತ ಹೋದರು. ಚುನಾವಣೆ ಹಾಗೂ ಇನ್ನಿತರ ಕೆಲಸಗಳಲ್ಲಿ ಶಿವರಾಮ್ ಹೆಬ್ಬಾರ್ ಅವರಿಗೆ ಬಲಗೈನಂತೆ ಕೆಲಸ ಮಾಡುತ್ತಿದ್ದ ತಮ್ಮ ಪುತ್ರ ವಿವೇಕ ಹೆಬ್ಬಾರ್ ಅವರನ್ನು ಲೋಕಸಭೆ ಚುನಾವಣೆಯ ಮುನ್ನ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳಿಸಿ ಕೆಪಿಸಿಸಿ ಸದಸ್ಯತ್ವವನ್ನು ಕೊಡಿಸುವಲ್ಲಿ ಯಶಸ್ವಿಯಾದರು. ಕಾಂಗ್ರೆಸ್ ಪಾಳ್ಯದಲ್ಲಿ ಮುಖ್ಯಮಂತ್ರಿ ಹಾಗೂ ಸಚಿವರಗಳ ಜೊತೆ ನಿಕಟ ಸಂಪರ್ಕ ಹೊಂದಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಯಲ್ಲಾಪುರ ಮುಂಡಗೋಡ ಬನವಾಸಿ ಭಾಗಗಳಿಗೆ ಬಹಳಷ್ಟು ಅನುದಾನಗಳನ್ನು ತರಿಸುವಲ್ಲಿ ಶಿವರಾಮ ಹೆಬ್ಬಾರ್ ಯಶಸ್ವಿಯಾಗಿದ್ದಾರೆ. 
    ಬಿಜೆಪಿಯ ಯಾವುದೇ ಸಕ್ರಿಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳದ ಶಿವರಾಮ ಹೆಬ್ಬಾರ್ ಅದರಲ್ಲೂ ಜಿಲ್ಲೆಯ ಬಿಜೆಪಿ ಮುಖಂಡರಿಂದ ಅಂತರವನ್ನು ಕಾಯ್ದುಕೊಂಡಿದ್ದಾರೆ. ಬಿಜೆಪಿಯಲ್ಲಿ ಇರಲು ಇಷ್ಟವಿಲ್ಲದಿದ್ದರೆ ರಾಜೀನಾಮೆ ಕೊಟ್ಟು ಹೋಗಬೇಕು ಎಂದು ಇಲ್ಲಿಯ ಬಿಜೆಪಿ ಮುಖಂಡರು ಹೇಳುತ್ತಿದ್ದರೇ, ದಮ್ಮಿದ್ದರೆ ನನಗೆ ಹೊರಗೆ ಹಾಕಿ ಎಂದು ಶಿವರಾಮ ಹೆಬ್ಬಾರ್ ಹಾಗೂ ಅವರ ಬೆಂಬಲಿಗರು ಹೇಳುತ್ತಿದ್ದಾರೆ. ಎರಡು ಪಕ್ಷದಲ್ಲಿ ಹಾವು ಸಾಯಬಾರದು ಕೋಲು ಮುರಿಯಬಾರದು ಎನ್ನುವ ತತ್ವವನ್ನು ಅಳವಡಿಸಿಕೊಂಡಿರುವುದರಿಂದ ಶಿವರಾಮ್ ಹೆಬ್ಬಾರ್ ಅವರು ಬಿಜೆಪಿಯಲ್ಲಿಯೇ ಶಾಸಕರಾಗಿದ್ದಾರೆ, ಸ್ವ‌ಪಕ್ಷಿಯರು ಅವರ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ಹೆಬ್ಬಾರ್ ಕಾಂಗ್ರೆಸ್ಸಿನ ಅತ್ಯಂತ ನಿಕಟ ಸಂಪರ್ಕದಲ್ಲಿದ್ದು ತಮ್ಮ ಕ್ಷೇತ್ರಕ್ಕೆ ಆಗಬೇಕಾಗಿರುವ ಎಲ್ಲ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ. 
    ಹೀಗಾಗಿಯೇ ಶುಕ್ರವಾರ ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಶಾಸಕ ಶಿವರಾಮ ಹೆಬ್ಬಾರ್ ಅವರ ಹೆಗಲ ಮೇಲೆ ಕೈ ಹಾಕಿ ಹಾಸ್ಯ ಚಟಾಕಿಗಳನ್ನು ಹಾರಿಸಿ ಹೆಬ್ಬಾರ್ ನಮ್ಮವರು ಎಂದು ಮಾಧ್ಯಮದ ಎದುರು ತೋರಿಸಿಕೊಟ್ಟಿದ್ದಾರೆ.
.
.
.