Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Saturday, 14 September 2024

ಪ್ರೇಕ್ಷಕರ ಮನಸೂರೆಗೊಂಡ ಸ್ಥಳೀಯ ಕಲಾವಿದರ ತಿಲಕ್ ಚೌಕ್ ರಸಂಮಜರಿ ಸ್ಥಳೀಯ ಕಲಾವಿದರಿಂದ ಸಂಗೀತ ರಸಮಂಜರಿ ಯಶಸ್ವಿ: ದರ್ಶನ್ ಬಿಡಿಕರ್ ಮತ್ತು ಯೋಗೇಶ ಹಿರೇಮಠ ಸ್ಮರಣೆ ವರದಿ : ಜಗದೀಶ‌ ನಾಯಕ

IMG-20240914-232950 ಯಲ್ಲಾಪುರ: ತಿಲಕ್ ಚೌಕ ಗಜಾನನೋತ್ಸವ ಸಮಿತಿ ಸೆಪ್ಟೆಂಬರ್ 14ರಂದು ಅಕಾಲಿಕವಾಗಿ ಅಗಲಿದ ಸಮಿತಿಯ ಕ್ರೀಯಾಶೀಲ ಸದಸ್ಯರಾದ ದಿ. ದರ್ಶನ್ ಬಿಡಿಕರ್ ಮತ್ತು ದಿ. ಯೋಗೇಶ ಹಿರೇಮಠ ಅವರ ಸ್ಮರಣಾರ್ಥ ಸ್ಥಳೀಯ ಕಲಾವಿದರಿಂದ ಹಮ್ಮಿಕೊಂಡ ಸಂಗೀತ ರಸಮಂಜರಿ ಕಾರ್ಯಕ್ರಮವು ಯಶಸ್ವಿಯಾಯಿತು. IMG-20240914-232857 ಸ್ಥಳೀಯ ಕಲಾವಿದರಾದ ಚಂದ್ರು ಆಚಾರಿ (ಯಲ್ಲಾಪುರ) "ಗಣೇಶ ಸ್ತುತಿ", "ನನ್ನ ಗೆಳತಿ", "ಕನಸುಗಾರ" ಚಿತ್ರದ ಎಲ್ಲೊ ಅದು ಎಲ್ಲೊ ಹಾಡುಗಳನ್ನು ಪ್ರಸ್ತುತಪಡಿಸಿದರು. ಗುರು ಗಜಾನನ ನಾಯ್ಕ ಅವರು "ಚಲಿಸುವ ನೋಡಗಳು" ಚಿತ್ರದ ಜೇನಿನ ಹೊಳೆಯೋ ಮತ್ತು "ಪಾವನಗಂಗಾ" ಚಿತ್ರದ ಆಕಾಶ ದೀಪವು ನೀನು ಹಾಡುಗಳ ಮೂಲಕ ಕಲಾತ್ಮಕತೆ ಮೆರೆದರು. ಗೀತಾ ನಾಯ್ಕ ಅವರ "ಗಾಳಿಮಾತು" ಚಿತ್ರದ ಒಮ್ಮೆ ನಿನ್ನನ್ನು ಕಣ್ತುಂಬ ಕಾಣುವ ಆಸೆ ಹಾಡು ಪ್ರೇಕ್ಷಕರ ಮನಸೂರೆಗೊಂಡಿತು. ದತ್ತಾ ಬದ್ದಿ ಅವರು ಹಿಂದಿ ಚಿತ್ರಗಳಾದ ಆಶಿಕಿಯ ತೂ ಮೆರಿ ಜಿಂದಗಿ, ಕಟಿ ಪತಂಗ ಚಿತ್ರದ ಯೇ ಜೋ ಮಹಬ್ಬತ ಹೈ ಹಾಡುಗಳನ್ನು ಹಾಡಿ, ಜನರನ್ನು ಪ್ರೀತಿಯ ಸಿಂಧುವಿಗೆ ಕರೆದೊಯ್ದರು. ರೂಪಾ ಶೇಟ್ ಅವರು "ಬಿರುಗಾಳಿ" ಚಿತ್ರದ ಮಧುರಾ ಪಿಸುಮಾತಿಗೆ ಹಾಡು ಪ್ರಸ್ತುತಪಡಿಸಿದರು. ರವಿರಾಜ ಪ್ರಭು ಅವರು ಮರಾಠಿ ಅಬಂಗ್ ಹಾಡೊಂದನ್ನು ಹಾಡಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಅಕ್ಕ-ತಮ್ಮ ಗುರು ನಾಯ್ಕ ಮತ್ತು ಗೀತಾ ನಾಯ್ಕ ಅವರಿಂದ "ಗೀತಾ" ಚಿತ್ರದ ಜೊತೆ ಜೊತೆಯಲ್ಲಿ ಇರುವೆನು ಹಾಡು ನೆರೆದವರನ್ನು ಮಂತ್ರಮುಗ್ಧಗೊಳಿಸಿತು. ಶ್ರೀಪಾದ ಭಟ್ಟ ಅವರು ಯಾರೇ ನೀನು ರೋಜಾ ಹೂವೆ ಹಾಡಿನ ಮೂಲಕ ಅವರ ಅನುಭವ ಹಾಗೂ ಕಲಾತ್ಮಕತೆಯನ್ನು ತೋರಿಸಿದರು. 
 ಕಾರ್ಯಕ್ರಮದ ಆರಂಭದ ನಿರೂಪಣೆ ತುಸು ಎಳೆದಂತೆ ಕಾಣಿಸಿಕೊಂಡರೂ, ನಂತರದ ಭಾಗದಲ್ಲಿ ನಿರೂಪಕರಿಂದ ಹಾಡಲಾದ "ರವಿಚಂದ್ರನ್" ಚಿತ್ರದ ಹಾಡೊಂದು ಎಲ್ಲರ ಮನಗೆದ್ದಿತು. ನೃತ್ಯ ಗುರು ಅಮಯ ಅವರಿಂದ ಪ್ರಸ್ತುತಗೊಂಡ ನೃತ್ಯವೂ ಪ್ರೇಕ್ಷಕರಿಗೆ ವಿಶೇಷ ಅನುಭವ ನೀಡಿತು. 
   ಸ್ಥಳೀಯ ಕಲಾವಿದರು ತಮ್ಮ ಕಲೆಯ ಮೂಲಕ ಜನರ ಮನಸ್ಸಿಗೆ ಅಗಾಧ ನೆನಪು ಮೂಡಿಸಿದರು. ಯಲ್ಲಾಪುರದ ಬಹಳಷ್ಟು ಪ್ರೇಕ್ಷಕರು ತಮ್ಮ ಕೆಲಸ-ಕಾರ್ಯಗಳನ್ನು ಬಿಟ್ಟು, ಈ ಕಾರ್ಯಕ್ರಮವನ್ನು ವೀಕ್ಷಿಸಲು ಹಾಜರಾಗಿದ್ದರು. ಇದರಿಂದ ಸ್ಥಳೀಯ ವೃತ್ತಿಪರರಲ್ಲದ ಕಲಾವಿದರು ಕಲಾವಿದರಾಗಿ ತಮ್ಮ ಪ್ರತಿಭೆಯನ್ನು ಸ್ಫುಟಪಡಿಸಿದರು. 
 ಇತ್ತೀಚಿನ ವರ್ಷಗಳಲ್ಲಿ ಶಾಲಾ ಮತ್ತು ಕಾಲೇಜುಗಳ ವಾರ್ಷಿಕೋತ್ಸವಗಳಲ್ಲಿ, ಪ್ರತಿಭಾ ಕಾರಂಜಿಯಂತಹ ಮಕ್ಕಳ ಕಾರ್ಯಕ್ರಮಗಳನ್ನು ವೀಕ್ಷಿಸಲು ತಂದೆ-ತಾಯಿಗಳು ಹಾಗೂ ಕುಟುಂಬಸ್ಥರು, ನೆರೆ ಹೊರೆಯವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದು ಕಂಡುಬರುತ್ತಿದ್ದರೂ, ತಿಲಕ್ ಚೌಕದಲ್ಲಿ ನಡೆದ ಈ ಸಂಗೀತ ರಸಮಂಜರಿಯಲ್ಲಿ ನೆರೆದ ಜನರಿಂದಲೂ ಅದೇ ಉತ್ಸಾಹವು ಕಾಣಿಸಿತು. IMG-20240914-232837 ಕಾರ್ಯಕ್ರಮದ ನಿರೂಪಣಾ ಭಾಗದಲ್ಲಿಯೂ ತಿಲಕ್ ಚೌಕ್ ಗಜಾನೋತ್ಸವ ಸಮಿತಿ ಅಧ್ಯಕ್ಷ ಬಾಲಕೃಷ್ಣ ನಾಯಕರ ಶೀಘ್ರ ಮತ್ತು ಚುರುಕಿನ ನಿರೂಪಣೆ ಶ್ರೋತ್ರುಗಳ ಮೆಚ್ಚುಗೆಗೆ ಪಾತ್ರವಾಯಿತು. 
  ತಿಲಕ್ ಚೌಕ್ ಗಜಾನೋತ್ಸವ ಸಮಿತಿಯ ಪ್ರಮುಖರಾದ ರವಿ ಶಾನಭಾಗ, ಶಿರೀಶ ಪ್ರಭು, ಸದಾನಂದ ಶಾನಭಾಗ, ಮಾಲತೇಶ ಗೌಳಿ, ಮಾಧವ ನಾಯಕ, ಸುಧಾಕರ ಪ್ರಭು, ಗಜಾನನ ನಾಯಕ, ಸಚಿನ್ ಕೇಕರೆ, ಕೃಷ್ಣಾ ನಾಯರ್, ರಜತ ಬದ್ದಿ, ನಮೀತಾ ಬೀಡಿಕರ್, ಭವ್ಯಾ ಬಾಲು ನಾಯಕ, ರಾಧಾ ಗುಡಿಗಾರ ಮತ್ತಿತರರು ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ತಮ್ಮ ಪೂರ್ಣ ಸಹಕಾರ ನೀಡಿದರು.  
   ಕಾರ್ಯಕ್ರಮದ ಆರಂಭದಲ್ಲಿ ದಿ. ದರ್ಶನ್ ಬೀಡಿಕರ್ ಮತ್ತು ದಿ. ಯೋಗೇಶ ಹಿರೇಮಠ ಅವರ ಸ್ಮರಣಾರ್ಥ ಒಂದು ನಿಮಿಷ ಮೌನ ಆಚರಿಸಲಾಯಿತು.
.
.
.

ಹಿರಿಯ ಸಿವಿಲ್ ಹಾಗೂ ಸಿವಿಲ್ ನ್ಯಾಯಾಲಯದಲ್ಲಿ ಲೋಕ ಅದಾಲತ ಮೂಲಕ 180 ಪ್ರಕರಣ ಇತ್ಯರ್ಥ, 50,775,229 ರೂಪಾಯಿ ಹಣ ಭರಣ

IMG-20240914-181505 ಯಲ್ಲಾಪುರ : ನ್ಯಾಯಾಲಯದ ಆವರಣದಲ್ಲಿ ಶನಿವಾರ ರಾಷ್ಟ್ರೀಯ ಲೋಕ್ ಅದಾಲತ್ ನಡೆಸಲಾಯಿತು. ಹಿರಿಯ ಸಿವಿಲ್ ನ್ಯಾಯಾಲಯ ಹಾಗೂ ಸಿವಿಲ್ ನ್ಯಾಯಾಲಯದಲ್ಲಿ ಲೋಕ ಅದಾಲತ ಮೂಲಕ 180 ಪ್ರಕರಣ ಇತ್ಯರ್ಥ 50,775,229 ರೂಪಾಯಿ ಹಣ ಭರಣ ಮಾಡಲಾಯಿತು. IMG-20240914-181457 ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಗುಡ್ಡಪ್ಪ ಬಸವಣ್ಣೆಪ್ಪ ಹಳ್ಳಾಕಾಯಿ ರವರ ನೇತ್ರತ್ವದಲ್ಲಿ ದಾಖಲಾಗಿದ್ದ 115 ಪ್ರಕರಣಗಳಲ್ಲಿ 25 ಪ್ರಕರಣ ಇತ್ಯರ್ಥಗೊಂಡು 84,82,032 ರೂಪಾಯಿ ಭರಣವಾಯಿತು. IMG-20240914-181448 ಸಿವಿಲ್ ನ್ಯಾಯಾಲಯದಲ್ಲಿ ಸಿವಿಲ್ ನ್ಯಾಯಾಧೀಶರಾದ ಲಕ್ಷ್ಮೀಬಾಯಿ ಬಸನಗೌಡ ಪಾಟೀಲ್ ರವರ ನೇತ್ರತ್ವದಲ್ಲಿ ದಾಖಲಾಗಿದ್ದ 488 ಪ್ರಕರಣಗಳಲ್ಲಿ 155 ಪ್ರಕರಣ ಇತ್ಯರ್ಥ ಮಾಡಿ, 4,22,93,197 ರೂಪಾಯಿ ಹಣ ಭರಣ ಮಾಡಲಾಯಿತು. 
   ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಸಂದಾನಕಾರರಾಗಿ ವಕೀಲರಾದ ಶ್ರೀಕಾಂತ ಚೌಹ್ವಾಣ ಮತ್ತು ಸಿವಿಲ್ ನ್ಯಾಯಾಲಯದಲ್ಲಿ ವಕೀಲರಾದ ಸರಸ್ವತಿ ಜಿ ಭಟ್ಟ ಕಾರ್ಯ ನಿರ್ವಹಿಸಿದರು. 
  ಅಪರ ಸರಕಾರಿ ವಕೀಲರಾದ ಎನ್ ಟಿ ಗಾಂವ್ಕರ್, ಸಹಾಯಕ ಸರಕಾರಿ ಅಭಿಯೋಜಕರಾದ ಝೀನತ್ ಬಾನು ಶೇಖ, ನ್ಯಾಯಾಲಯದ ಎಲ್ಲ ವಕೀಲರು, ನ್ಯಾಯಾಲಯದ ಸಿಬ್ಬಂದಿಗಳು, ಆರಕ್ಷಕರು, ಬ್ಯಾಂಕ್ ಹಾಗೂ ಸೊಸೈಟಿಯ ಅಧಿಕಾರಿಗಳು ಉಪಸ್ಥಿತರಿದ್ದರು.
.
.
.

ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ವಲಯ ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ

 IMG-20240914-161531

ಯಲ್ಲಾಪುರ : ಕಾಳಮ್ಮನಗರ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 11ರಂದು ನಡೆದ ಆನಗೋಡು ವಲಯ ಮಟ್ಟದ ಕ್ರೀಡಾಕೂಟದಲ್ಲಿ ಯಲ್ಲಾಪುರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

   ಕಾವೇರಿ ಕಂದ್ಲಿಮಠ (ಶಟಲ್ ಬ್ಯಾಡ್ಮಿಂಟನ್) , ಶ್ರೇಯಸ್ ವಿವೇಕಾನಂದ್ ಶಾನಭಾಗ್ (ಟೇಬಲ್ ಟೆನ್ನಿಸ್) ಆಟಗಳಲ್ಲಿ ತಾಲೂಕ ಮಟ್ಟದಲ್ಲಿ ಸ್ಪರ್ಧಿಸಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

   ಪ್ರಥಮ ನಾಗೇಶ ಅಂಬಿಗ ಹಾಗೂ ಮೇಘ ಚಿದಂಬರ ಮರಾಠಿ ಇವರು ವಲಯ ಹಾಗೂ ತಾಲೂಕು ಮಟ್ಟದ (ಯೋಗ ಸ್ಪರ್ಧೆಯಲ್ಲಿ) ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. 

ಬಿ ಗಗನ ಹಾಗೂ ರಾಜಾರಾಮ ನಾಳಕರ (ರಿದಮಿಕ್ ಯೋಗದಲ್ಲಿ) ಪ್ರಥಮ 

ಎಲೀಷ ಫರ್ನಾಂಡಿಸ್ (400 ಮೀಟರ್ ಓಟ ಪ್ರಥಮ 200 ಮೀಟರ್ ಓಟ ದ್ವಿತೀಯ)  

ಸಿರಿ ಭಟ್ (ಗುಂಡು ಎಸೆತ) ಪ್ರಥಮ 

ಆದಿತ್ಯ ಭೋವಿವಡ್ಡರ್ (ಚಕ್ರ ಎಸೆತ) ತೃತೀಯ 

ಮರ್ಥ ಹರಿಜನ (ಎತ್ತರ ಜಿಗಿತ) ತೃತೀಯ 

ಶಮಾಮಾ ಸೈಯದ್ (200 ಮೀಟರ್  ಓಟ) ತೃತೀಯ,

ರಾಜಾರಾಮ್  ನಾಳ್ಕರ್ (400 ಮೀಟರ್ ಓಟ) ತೃತೀಯ 

ಅಮೂಲ್ಯ ಭೋವಿವಡ್ಡರ (100 ಮೀಟರ್ ಓಟ) ತೃತೀಯ

ಶ್ರೇಯಾ ಭಟ್ (ಚೆಸ್ 5ನೇ ಸ್ಥಾನ )

ಗುಂಪು ಆಟಗಳಲ್ಲಿ ಗಂಡು ಮಕ್ಕಳ (ಕಬಡ್ಡಿಯಲ್ಲಿ‌ ಪ್ರಥಮ) ಹಾಗೂ ಹೆಣ್ಣು ಮಕ್ಕಳು (ಕಬಡ್ಡಿಯಲ್ಲಿ ಪ್ರಥಮ) 

ಹೆಣ್ಣು ಮಕ್ಕಳ (ಖೋ ಖೋ ಪಂದ್ಯದಲ್ಲಿ ಪ್ರಥಮ) ಹಾಗೂ ಗಂಡು ಮಕ್ಕಳ (ಖೋ ಖೋ ಪಂದ್ಯದಲ್ಲಿ ದ್ವಿತೀಯ) ಸ್ಥಾನ ಪಡೆದಿರುತ್ತಾರೆ.

IMG-20240914-161520

 ವಿದ್ಯಾರ್ಥಿಗಳ ಕ್ರೀಡಾ ಸಾಧನೆಗೆ ಶಾಲೆಯ ಮುಖ್ಯ ಶಿಕ್ಷಕಿ ಅನುಸೂಯಾ ಹಾರವಾಡೇಕರ, ಎಸ್ ಡಿ ಎಂ ಸಿ ಅಧ್ಯಕ್ಷ ಶಂಕರ ಗೊಂದಳಿ,  ಉಪಾಧ್ಯಕ್ಷೆ ಶಶೀಕಲಾ ಅಂಬೀಗ  ಹಾಗೂ ಎಲ್ಲ ಸದಸ್ಯರು, ಶಾಲೆಯ ಶಿಕ್ಷಕರಾದ ಲೂಸಿ ರೋಡ್ರಿಗೀಸ್, ನಿರ್ಮಲಾ ನಾಯಕ, ಶೋಭಾ ನಾಯಕ, ಕಮಲಾ ಭಟ್, ಜ್ಯೋತಿ ಮಿರಾಂಡಾ, ಗಣಪತಿ ಭಟ್ಟ, ಜ್ಯೋತಿ ಹಳ್ಳೇರ್, ರುಕ್ಮಿಣಿ‌ ಪಾಲೇಕರ, ರೋಲ್ಸಿ ಲೋಭೊ, ಶ್ರುದ್ಧಾ, ರವೀನಾ, ರಾಘವೇಂದ್ರ ಪಟಗಾರ, ಲಕ್ಷ್ಮೀ ಜಿ.ಕೆ, ರೂಪಾ, ಅರ್ಚನಾ ಬಾಂದೇಕರ ಮುಂತಾದವರು ಅಭಿನಂದಿಸಿರುತ್ತಾರೆ.

   ಎಲ್ಲ ಸ್ಪರ್ಧಾಳುಗಳಿಗೆ ಶಾಲಾ ಶಿಕ್ಷಕ ವೃಂದದವರೊಂದಿಗೆ ಪಾಲಕರಾದ ರಾಘವೇಂದ್ರ ತಳೇಕರ್ ಇವರು ತರಬೇತಿಯನ್ನು ನೀಡಿದ್ದರು. 

.

.

.

ಯಲ್ಲಾಪುರದ ತಿಲಕ್ ಚೌಕದಲ್ಲಿ ರಸಮಂಜರಿ ಕಾರ್ಯಕ್ರಮ: ಸಕ್ರಿಯ ಕಾರ್ಯಕರ್ತರಿಗೆ ಸಂಗೀತದ ಶ್ರದ್ಧಾಂಜಲಿ

IMG-20240914-141849 ಯಲ್ಲಾಪುರ: ಸಾರ್ವಜನಿಕ ಗಜಾನನೋತ್ಸವ ಸಮಿತಿಯ ಸಕ್ರಿಯ ಕಾರ್ಯಕರ್ತರಾಗಿದ್ದ ದಿ. ದರ್ಶನ್ ಬಿಡೀಕರ್ ಹಾಗೂ ದಿ. ಯೋಗೇಶ ಹಿರೇಮಠ ಅವರ ಸವಿನೆನಪಿಗಾಗಿ ಯಲ್ಲಾಪುರದ ತಿಲಕ್ ಚೌಕ್ ಗಜಾನೋತ್ಸವ ಸಮಿತಿಯಿಂದ ಶನಿವಾರ ಸಂಜೆ 'ರಸಮಂಜರಿ ಕಾರ್ಯಕ್ರಮ' ಆಯೋಜಿಸಲಾಗಿದೆ. 
   jIMG-20240914-142726 ಈ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರು ಭಾಗವಹಿಸಿ, ತಮ್ಮ ಸಂಗೀತದ ಮೂಲಕ ಅಗಲಿದ ಮಿತ್ರದ್ವಯರಿಗೆ ಶ್ರದ್ಧಾಂಜಲಿ ಅರ್ಪಿಸಲಿದ್ದಾರೆ. 
IMG-20240914-140902
 ಕಾರ್ಯಕ್ರಮದಲ್ಲಿ ಬಾಲಕೃಷ್ಣ ನಾಯಕ, ಶಿರೀಷ ಪ್ರಭು, ಕೃಷ್ಣಾ ನಾಯರ್, ಸದಾನಂದ ಶಾನಭಾಗ, ಮಾಲತೇಶ ಗೌಳಿ, ದತ್ತಾ ಬದ್ದಿ, ಮಾಧವ ನಾಯಕ, ಸುಧಾಕರ ಪ್ರಭು, ಗುರು ನಾಯ್ಕ, ಗಜಾನನ ನಾಯಕ, ಸಚೀನ ಕೇಕರೆ, ರವಿರಾಜ ಪ್ರಭು, ರಜತ ಬದ್ದಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
.
.
.

ಯಲ್ಲಾಪುರದ‌ ಮದರ್ ತೆರೇಸಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಿಂದಿ ದಿವಸ್ ಆಚರಣೆ

IMG-20240914-133408ಯಲ್ಲಾಪುರ : ಪಟ್ಟಣದ ಮದರ್ ತೆರೇಸಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೆಪ್ಟೆಂಬರ್ 14ರಂದು ಹಿಂದಿ ದಿವಸ್ ಆಚರಣೆ ಮಾಡಲಾಯಿತು. 
   ಹಿಂದಿ ಭಾಷೆಯ ಬಗ್ಗೆ ಶಾಲೆಯ 4ನೇ ತರಗತಿಯ ವಿದ್ಯಾರ್ಥಿಗಳು ಹಿಂದಿ ದಿವಸ ಕುರಿತು ಬಗ್ಗೆ ಅಭಿನಯ ಗೀತೆ ಪ್ರದರ್ಶಿಸಿದರು. IMG-20240914-133359 ಜೊತೆಗೆ ಅದರ ಏಳನೇ ತರಗತಿಯ ವಿದ್ಯಾರ್ಥಿನಿ ಅರಫಾ ಹಿಂದಿ ದಿನದ ಕುರಿತು ಮಾತನಾಡಿ, ಹಿಂದಿ ದಿನವು ಭಾರತದಲ್ಲಿ ಪ್ರತೀ ವರ್ಷ ಸೆಪ್ಟೆಂಬರ್ 14 ರಂದು ಆಚರಿಸಲಾಗುತ್ತದೆ. 1949ರಲ್ಲಿ ಭಾರತದ ಸಂವಿಧಾನ ಸಭೆಯಲ್ಲಿ ಹಿಂದಿಯು ದೇಶದ ಅಧಿಕೃತ ಭಾಷೆಯಾಗಿ ಘೋಷಿಸಲಾಯಿತು. ಈ ದಿನದ ಮಹತ್ವವನ್ನು ಅರ್ಥಮಾಡಿಕೊಳ್ಳಲು ಹಿಂದಿ ದಿನದ ಆಚರಣೆ ಮಾಡಲಾಗುತ್ತದೆ, ಭಾಷೆಯು ಯಾವ ದೇಶಕ್ಕೂ ಅದರ ಸಾಂಸ್ಕೃತಿಕ ಆಸ್ಥಿಯನ್ನು ಪ್ರತಿಬಿಂಬಿಸುತ್ತದೆ ಎಂಬುದನ್ನು ಅರಿಯಬೇಕು ಎಂದು ಹೇಳಿದಳು.IMG-20240914-133347 ಶಾಲೆಯ ಮುಖ್ಯೋಪಾಧ್ಯಾಯರಾದ ಫಾದರ್ ರೊಯ್ಯಸ್ಟನ ಗೊನ್ಸಾಲ್ವಿಸ್ ಮಾತನಾಡಿ, ಹಿಂದಿ ನೂರು ಕೋಟಿ ಜನರ ಪಾಲಿನ ಮಾತೃಭಾಷೆಯಾಗಿದ್ದು, ಇದು ವಿಭಿನ್ನ ರಾಜ್ಯಗಳಲ್ಲಿ, ವಿವಿಧ ಭಾಷಾ ಸಾಂಸ್ಕೃತಿಕ ಪಾರ್ಶ್ವದಲ್ಲಿ ದೇಶದ ಏಕತೆ ಮತ್ತು ಸಮಾನತೆಯನ್ನು ವ್ಯಕ್ತಗೊಳಿಸುತ್ತದೆ. ಭಾರತದಲ್ಲಿ ಬೌದ್ಧಿಕ, ಸಾಹಿತ್ಯಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಹಿಂದಿಯು ಪ್ರಮುಖ ಪಾತ್ರವಹಿಸಿದೆ. ದೇಶಾದ್ಯಾಂತ ಸಮಾನ ಭಾಷಾ ಹಕ್ಕುಗಳ ಪ್ರೋತ್ಸಾಹಕವಾಗಿರುವ ಹಿಂದಿ ದಿನವು, ಹಿಂದಿ ಭಾಷೆಯ ಪ್ರಚಾರ ಹಾಗೂ ಜಾಗೃತಿ ಮೂಡಿಸಲು ಹಾಗೂ ಅದನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಸಮರ್ಪಿತವಾಗಿದೆ ಎಂದು ಹೇಳಿದರು.IMG-20240914-133456 ಈ ಸಂದರ್ಭದಲ್ಲಿ ಶಿಕ್ಷಕ ವೃಂದದವರಾದ ಸಿಸ್ಟರ್ ಸೋನಿಯಾ, ಲೀಲೆಶ, ರೇಖಾ, ಅನಿತಾ, ಸಂಗೀತಾ, ಪೀಟರ್, ಪವಿತ್ರ, ಮಫೀನಾ, ಸುನಿತಾ, ಸುಷ್ಮಾ, ರೇವಿನಾ, ದಿವ್ಯ, ಪ್ರೆಮಿಟಾ, ಸ್ಟೆಫಿ, ಮಾರ್ಗರೇಟ್, ಶ್ವೇತಾ , ಸಿಸ್ಟರ ಫ್ರಾನ್ಸಿನಾ ಇನ್ನಿತರರು ಉಪಸ್ಥಿತರಿದ್ದರು.
.
.
.

ವಲಯಮಟ್ಟದ ಕ್ರೀಡಾಕೂಟದಲ್ಲಿ ಆನಗೋಡ ಶಾಲಾ ವಿದ್ಯಾರ್ಥಿಗಳು ಉತ್ತಮ ಕ್ರೀಡಾ ಸಾಧನೆ

 IMG-20240914-113202

ಯಲ್ಲಾಪುರ : ಸೆಪ್ಟೆಂಬರ್ 11ರಂದು ಯಲ್ಲಾಪುರದ ತಾಲ್ಲೂಕು ಕ್ರೀಡಾಂಗಣ ನಡೆದ ಆನಗೋಡ ವಲಯಮಟ್ಟದ ಕ್ರೀಡಾಕೂಟದಲ್ಲಿ  ಆನಗೋಡ ಸರಕಾರಿ ಹಿರಿಯ ಪ್ರಾಥಮಿಕ  ಶಾಲಾ ವಿದ್ಯಾರ್ಥಿಗಳು ಉತ್ತಮ ಕ್ರೀಡಾ ಸಾಧನೆ ಮಾಡಿದ್ದಾರೆ.  

IMG-20240914-113155

 ವಿದ್ಯಾರ್ಥಿಗಳಾದ ಭೂಮಿಕಾ ಗೌಡ (100ಮೀ ಓಟ ಪ್ರಥಮ, 200ಮೀ ಓಟ ಪ್ರಥಮ, ಉದ್ದ ಜಿಗಿತ ಪ್ರಥಮ, ರಿಲೇ ಪ್ರಥಮ ಹಾಗೂ ವೈಯಕ್ತಿಕ ವಿರಾಗ್ರಾಣಿ)

    ಅಂಕಿತಾ ಭಟ್ಟ (600ಮೀ ಓಟ ಪ್ರಥಮ, ಎತ್ತರ ಜಿಗಿತ ಪ್ರಥಮ ಹಾಗೂ ರಿಲೇ ಪ್ರಥಮ)

   ಶ್ರೇಯಾ ರಮಕಾಂತ್ ನಾಯ್ಕ (ಯೋಗ ದ್ವಿತೀಯ ಹಾಗೂ ರಿಲೇ ಪ್ರಥಮ)

    ಸಂಜನಾ ಗೌಡ ( 200ಮೀ ಓಟ ದ್ವಿತೀಯ  ಹಾಗೂ ರಿಲೇ ಪ್ರಥಮ)

   ಆಕಾಶ್ ನಾಗೇಂದ್ರ ಭಟ್ಟ (ಯೋಗ ಚತುರ್ಥ)

   ಬಾಲಕಿಯರ ವಾಲಿಬಾಲ್ ಪ್ರಥಮ, ಬಾಲಕರ ವಾಲಿಬಾಲ್ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ವೈಯಕ್ತಿಕ ವಿಭಾಗದಲ್ಲಿ ಒಟ್ಟೂ 9 ಪ್ರಥಮ, 2 ದ್ವಿತೀಯ ಹಾಗೂ ಒಂದು ಚತುರ್ಥ ಸ್ಥಾನ ಹಾಗೂ ಹೆಣ್ಣು ಮಕ್ಕಳ ವೈಯಕ್ತಿಕ ವಿರಾಗ್ರಣಿ 

ಗುಂಪು ಆಟದಲ್ಲಿ ಒಂದು ಪ್ರಥಮ ಮತ್ತು ಒಂದು ದ್ವಿತೀಯ ಸ್ಥಾನ ಪಡೆದಿದ್ದಾರೆ.

IMG-20240914-113144

   ಇವರಿಗೆ ಶಾಲೆಯ ಎಸ್.ಡಿ.ಎಂ. ಸಿ ಅಧ್ಯಕ್ಷ ನಾಗೇಂದ್ರ‌ಭಟ್ಟ ಹಾಗೂ ಸದಸ್ಯರು, ಶಾಲೆಯ ಮುಖ್ಯ ಶಿಕ್ಷಕಿ ಸವೀತಾ ಹೆಗಡೆ ಶಿಕ್ಷಕರಾದ ಪ್ರತಿಭಾ ನಾಯ್ಕ, ಮಾರುತಿ ಆಚಾರಿ, ಸೌಮ್ಯಶ್ರೀ ಹಾನಗಲ್  ಹಾಗೂ ಪಾಲಕರು ಅಭಿನಂದನೆ ಸಲ್ಲಿಸಿದ್ದಾರೆ.

.

.

.


ಶ್ರಾವಣ ಯಕ್ಷ ಸಂಭ್ರಮ: ಅಪರೂಪದ ಯಕ್ಷಗಾನ ಪ್ರಸಂಗಗಳೊಂದಿಗೆ ಕಲೆಯ ಹಬ್ಬ

IMG-20240914-110736ಯಲ್ಲಾಪುರ : ಪಟ್ಟಣದ ಮಂಜುನಾಥನಗರದಲ್ಲಿರುವ ಕಾರ್ಮಿಕ ಭವನದಲ್ಲಿ 9ನೇ ವರ್ಷದ ಶ್ರಾವಣ ಯಕ್ಷ ಸಂಭ್ರಮ ಕಾರ್ಯಕ್ರಮ ಸೆ.15 ರಂದು ಸಂಜೆ 6 ರಿಂದ ನಡೆಯಲಿದೆ. 

    ಈ ಬಾರಿ 'ದ್ರುಪದ ಗರ್ವಭಂಗ', 'ಯೋಗಿನಿ ಕಲ್ಯಾಣ' ಹಾಗೂ 'ವೀರ ವೃಷಸೇನ' ಎಂಬ ಅಪರೂಪದ ಪೌರಾಣಿಕ ಯಕ್ಷಗಾನ ಪ್ರಸಂಗಗಳು ಪ್ರದರ್ಶನಗೊಳ್ಳಲಿವೆ. ಸುಬ್ಬಣ್ಣ ಕಂಚಗಲ್, ರಾಘವೇಂದ್ರ ಬೆಳಸೂರು, ಎಂ.ಆರ್.ವಡ್ರಮನೆ ಅವರ ಸಂಯೋಜನೆಯಲ್ಲಿ, ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದೆ. ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಕಲಾವಿದರು, ಸ್ಥಳೀಯ ಕಲಾವಿದರು ಸೇರಿ 35 ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಲಿದ್ದಾರೆ.

IMG-20240914-110728

    ಪ್ರತಿ ವರ್ಷವೂ ಈ ಕಾರ್ಯಕ್ರಮದಲ್ಲಿ ಯಕ್ಷಗಾನದ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯ ಮಾಡಲಾಗುತ್ತಿದ್ದು, ಈ ಬಾರಿ ಯಕ್ಷಗಾನ ಪ್ರದರ್ಶನಗಳಿಗೆ ವೇಷಭೂಷಣ ಒದಗಿಸುವ ಕವಾಳೆ ಸಹೋದರರನ್ನು ಸನ್ಮಾನಿಸಲಾಗುತ್ತಿದೆ. ಕಳೆದ 22 ವರ್ಷಗಳಿಂದ ಸುತ್ತಮುತ್ತಲಿನ ಯಕ್ಷಗಾನಗಳಿಗೆ ವೇಷಭೂಷಣ ನೀಡುತ್ತಿರುವ ಕೇಶವ ಭಾಗ್ವತ ಹಾಗೂ ವಿನಾಯಕ ಭಾಗ್ವತ ಅವರಿಗೆ ಈ ವರ್ಷದ ಶ್ರಾವಣ ಸಂಭ್ರಮ ಗೌರವ ಸನ್ಮಾನ ಮಾಡಲಾಗುತ್ತಿದೆ. 

     ಕಳೆದ 9 ವರ್ಷಗಳಿಂದ ಸುಬ್ಬಣ್ಣ ಕಂಚಗಲ್ ನೇತೃತ್ವದಲ್ಲಿ ಅನೇಕ ಸಂಘಟಕರು, ಕಲಾಭಿಮಾನಿಗಳ ಸಹಕಾರದೊಂದಿಗೆ ಶ್ರಾವಣ ಯಕ್ಷ ಸಂಭ್ರಮ ಕಾರ್ಯಕ್ರಮ ನಡೆಯುತ್ತಿದೆ. ಪ್ರತಿ ವರ್ಷ ವಿಶೇಷ ಸಂಯೋಜನೆ, ಅಪರೂಪದ ಪ್ರಸಂಗಗಳು ಮೂಲಕ ಶ್ರಾವಣ ಸಂಭ್ರಮದ ಸಂಘಟನೆ ಜಿಲ್ಲೆಯಲ್ಲಿ ಹೆಸರು ಗಳಿಸಿದೆ.

ವಲಯ ಮಟ್ಟದ ಕ್ರೀಡಾಕೂಟದಲ್ಲಿ ವೈ.ಟಿ.ಎಸ್.ಎಸ್ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಸಾಧನೆ:

IMG-20240914-103229 ಯಲ್ಲಾಪುರ : ಸ್ಥಳೀಯ ತಾಲೂಕಾ ಕ್ರೀಡಾಂಗಣ ಕಾಳಮ್ಮನಗರ ಇಲ್ಲಿ ನಡೆದ ಪ್ರಾಥಮಿಕ ಶಾಲೆಗಳ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸ್ಥಳೀಯ ವೈ.ಟಿ.ಎಸ್.ಎಸ್ ಆಂಗ್ಲಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ವಿದ್ಯಾರ್ಥಿಗಳು ಸಾಧನೆಯನ್ನು ಮಾಡಿ ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ. 
   ಪ್ರಾಥಮಿಕ ವಿಭಾಗ: 
ಬಾಲಕರ ವಿಭಾಗದಲ್ಲಿ ಮುವಾಜ್ ಖಾನ್ 100ಮೀ ಓಟ, 200 ಮೀ ಓಟ, ಉದ್ದ ಜಿಗಿತ ಪ್ರಥಮ ಸ್ಥಾನವನ್ನು ಪಡೆದು ಬಾಲಕರ ವೈಯಕ್ತಿಕ ವೀರಾಗ್ರಣಿಯಾಗಿರುತ್ತಾನೆ. ಅರ್ಷ ಶೇಖ್ 200 ಮೀ ಓಟ ತೃತೀಯ ಸ್ಥಾನ, ಶಿವಪ್ಪಾ ಕೇಸಾಪುರ 400 ಮೀ ಓಟ ಪ್ರಥಮ, 600 ಮೀ ಓಟ ಪ್ರಥಮ, ವಿವೇಕ ಮರಾಠಿ 400 ಮೀ ಓಟ ದ್ವಿತೀಯ, 600 ಮೀ ಓಟ ದ್ವಿತೀಯ, ಬಾಲಕರ 4 x 100ಮೀ ರೀಲೇ ಪ್ರಥಮ, ಖೊಖೊ ಪ್ರಥಮ, ಶೇಟಲ್ ಬ್ಯಾಡ್ಮಿಂಟನ್ ಪ್ರಥಮ, ಟೆಬಲ್ ಟೆನ್ನಿಸ್ ಪ್ರಥಮ, ಥ್ರೊ ಬಾಲ್ ದ್ವಿತೀಯ. ಬಾಲಕಿಯರ ವಿಭಾಗದಲ್ಲಿ ಪ್ರಜ್ಞಾ ಗಾಂವಕರ ಗುಂಡು ಎಸೆತ ದ್ವಿತೀಯ, ಅಮೃತಾ ಕಣ್ಮನೂರ 400ಮೀ ಓಟ ದ್ವಿತೀಯ 600ಮೀ, ಓಟ ದ್ವಿತೀಯ, ಬಾಲಕಿಯರ 4 x 100ಮೀ ರೀಲೇ ದ್ವಿತೀಯ, ಶೇಟಲ್ ಬ್ಯಾಡ್ಮಿಂಟನ್ ಪ್ರಥಮ, ಟೆಬಲ್ ಟೆನ್ನಿಸ್ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. IMG-20240914-103217 ಪ್ರೌಢಶಾಲಾ ವಿಭಾಗ: 
ಬಾಲಕಿಯರ ವಿಭಾಗದಲ್ಲಿ ಕೃಷ್ಣವೇಣಿ ನಾಯ್ಕ 100ಮೀ ಓಟ ಮತ್ತು 200ಮೀ ಓಟ ಪ್ರಥಮ, ಉದ್ದ ಜಿಗಿತ ತೃತೀಯ, ಪ್ರಗತಿ ಶೆಟ್ಟಿ 200ಮೀ ಓಟ ದ್ವಿತೀಯ, 400 ಮೀ ಮತ್ತು ತ್ರಿವಿದ ಜಿಗಿತ ಪ್ರಥಮ, ತೇಜಸ್ವಿನಿ ಯಾಮಕೆ 800 ಮೀ ಓಟ ಪ್ರಥಮ, 1500 ಮೀ ಓಟ ದ್ವಿತೀಯ, ನಿರೀಕ್ಷಾ ನಾಯಕ ಉದ್ದ ಜಿಗಿತ, ಚಕ್ರ ಎಸೆತ ಪ್ರಥಮ, ನಿಧಿ ಯಾಜಿ 1500ಮೀ ಓಟ ಪ್ರಥಮ, 3000ಮೀ ಓಟ ಪ್ರಥಮ, ಬಾಲಕಿಯರು 4 x 100ಮೀ ರೀಲೇ ಪ್ರಥಮ, 4 x 400ಮೀ ರೀಲೇ ಪ್ರಥಮ, ಖೊಖೊ ಪ್ರಥಮ, ಬಾಲ್ ಬ್ಯಾಡ್ಮಿಂಟನ್ ಪ್ರಥಮ. ಬಾಲಕರ ವಿಭಾಗ: ಸಂದೇಶ ಜೊರೆ 200 ಮೀ ಓಟ ದ್ವಿತೀಯ, ಸಾಯಿರಾಮ್ ಡೊಯಿಪುಡೆ 400ಮೀ ಓಟ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. 
   ಈ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ತರಬೇತಿ ನೀಡಿದ ದೈಹಿಕ ಶಿಕ್ಷಕರಾದ   ಜಿ. ಎಂ. ತಾಂಡುರಾಯನ್ ಇವರಿಗೆ ಸಂಸ್ಥೆಯ ಅಧ್ಯಕ್ಷರಾದ ರವಿಕುಮಾರ ಶಾನಭಾಗ, ಕಾರ್ಯದರ್ಶಿಗಳಾದ ರಾಜೇಂದ್ರಪ್ರಸಾದ ಬಿ ಭಟ್ಟ ಹಾಗೂ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು , ಪ್ರಾಂಶುಪಾಲರಾದ ಆನಂದ ಹೆಗಡೆ, ಮುಖ್ಯೋಪಾಧ್ಯಾಯರಾದ  . ಶೈಲಜಾ ಮಾಪ್ಸೇಕರ ಹಾಗೂ ಎಲ್ಲಾ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳೂ ಅಭಿನಂದಿಸಿದ್ದಾರೆ.
.
.
.

ಸೆಪ್ಟೆಂಬರ್ 15 ರಂದು ಜನಸಾಮಾನ್ಯರ ಅಧಿಕಾರ ಸ್ಮರಿಸಿ : ಪ್ರಜಾಪ್ರಭುತ್ವ ದಿನಾಚರಣೆ ಲೇಖನ : ಜಗದೀಶ ನಾಯಕ


IMG-20240914-094538ಯಲ್ಲಾಪುರ: ಸೆಪ್ಟೆಂಬರ್ 15 ರಂದು ಪ್ರಪಂಚದಾದ್ಯಂತ ಪ್ರಜಾಪ್ರಭುತ್ವ ದಿನಾಚರಣೆ ಆಚರಿಸಲಾಗುತ್ತದೆ. ಈ ದಿನವು ಜನಸಾಮಾನ್ಯರ ಅಧಿಕಾರವನ್ನು ಸ್ಮರಿಸುವ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಲಪಡಿಸುವ ದಿನವಾಗಿದೆ. 

ಭಾರತದಲ್ಲಿ, 1950 ರಲ್ಲಿ ಅಂಗೀಕರಿಸಲ್ಪಟ್ಟ ಸಂವಿಧಾನವು ಜನರಿಗೆ ಸ್ವತಂತ್ರತೆ, ಸಮಾನತೆ ಮತ್ತು ನ್ಯಾಯದ ಅಧಿಕಾರವನ್ನು ನೀಡಿದೆ. ಇದು ನಮ್ಮ ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭವಾಗಿದೆ. 

ಕರ್ನಾಟಕದಲ್ಲಿ, ಪ್ರಜಾಪ್ರಭುತ್ವ ದಿನಾಚರಣೆಯನ್ನು ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ಶಾಲೆಗಳು ಮತ್ತು ಕಾಲೇಜುಗಳು ಪ್ರಬಂಧ ಸ್ಪರ್ಧೆಗಳು, ಚರ್ಚಾ ಕಾರ್ಯಕ್ರಮಗಳು, ಮತ್ತು ಪ್ರದರ್ಶನಗಳನ್ನು ಆಯೋಜಿಸುತ್ತವೆ. ಸರ್ಕಾರಿ ಕಚೇರಿಗಳು ಮತ್ತು ಸಂಘ ಸಂಸ್ಥೆಗಳು ಸಹ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪ್ರತಿಪಾದಿಸುತ್ತವೆ. 

   ರಾಜ್ಯದಲ್ಲಿ ಈ ಮಾನವ ಸರಪಳಿಯು ಸುಮಾರು 2500 ಕಿಲೋಮೀಟರ್ ಉದ್ದ ಇರಲಿದ್ದು ಜಗತ್ತಿನ ಅತಿ ಉದ್ದದ ಮಾನವ ಸರಪಳಿ ಆಗಲಿದೆ. ಇದರಲ್ಲಿ ಸುಮಾರು 25 ಲಕ್ಷಕ್ಕೂ ಹೆಚ್ಚಿನ ಜನರು ಭಾಗವಹಿಸುವ ನಿರೀಕ್ಷೆ ಇದ್ದು, ಪ್ರತಿ ಕಿಲೋಮೀಟರ್‌ಗೆ 700 ರಿಂದ 1000 ಜನರು ಇರಲಿದ್ದಾರೆ. ಈ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಜನರ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಕುರಿತು ಸಂದೇಶವನ್ನು ಬಿತ್ತರಿಸುವುದು ಮಾತ್ರವಲ್ಲದೇ, ಸರ್ಕಾರದ ಬಗೆಗಿನ ಜನರ ಭಾವನೆಯನ್ನು ಸಂಗ್ರಹಿಸಿ ಬಿತ್ತರಿಸಲಾಗುತ್ತದೆ.

ವಿಶ್ವಸಂಸ್ಥೆಯು 2007 ರ ಸೆ.15 ರಂದು ಪ್ರಜಾಪ್ರಭುತ್ವ ದಿನವನ್ನು ಆಚರಿಸುವ ಕುರಿತು ಘೋಷಣೆ ಹೊರಡಿಸಿದ್ದು, ಅಂದು ಜಗತ್ತಿನಾದ್ಯಂತ ವಿಶ್ವ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ದಿನವು ವಿಶ್ವ ಮಟ್ಟದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪಸರಿಸುವ ವೇದಿಕೆಯಾಗಿದ್ದು, ರಾಜ್ಯದಲ್ಲಿ ಸೆ.15 ರಂದು ನಡೆಯುವ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ, ಪ್ರಜಾಪ್ರಭುತ್ವದ ಮೌಲ್ಯಗಳಾದ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಸಂದೇಶವನ್ನು ಇಡೀ ಜಗತ್ತಿಗೆ ಸಾರಬೇಕಿದೆ.

IMG-20240914-094530ಉತ್ತರ ಕನ್ನಡ ಜಿಲ್ಲೆಯಲ್ಲಿ ? 

ಉತ್ತರ ಕನ್ನಡ ಜಿಲ್ಲೆಯಲ್ಲಿ, ಈ ದಿನವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತದೆ. ಜಿಲ್ಲಾಡಳಿತವು ಜನಸಾಮಾನ್ಯರಿಗೆ ಪ್ರಜಾಪ್ರಭುತ್ವದ ಬಗ್ಗೆ ತಿಳುವಳಿಕೆ ಮೂಡಿಸುವ ಉದ್ದೇಶದಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಜಿಲ್ಲೆಯ ವಿವಿಧ ಶಾಲೆಗಳು ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಬಗ್ಗೆ ತಿಳಿಸುವ ಉದ್ದೇಶದಿಂದ ಪ್ರಬಂಧ ಸ್ಪರ್ಧೆಗಳು, ಚರ್ಚಾ ಕಾರ್ಯಕ್ರಮಗಳು, ಮತ್ತು ಪ್ರದರ್ಶನಗಳನ್ನು ನಡೆಸಲಾಗುತ್ತದೆ.

IMG-20240914-094456

   ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆಯುವ ಈ ಮಾನವ ಸರಪಳಿ ಕಾರ್ಯಕ್ರಮವು ಧಾರವಾಡ ಜಿಲ್ಲೆಯಿಂದ ಜಿಲ್ಲೆಗೆ ಮುಂದುವರೆಯಲಿದ್ದು, ಹಳಿಯಾಳ ತಾಲೂಕಿನ ಮಾವಿನಕೊಪ್ಪದಿಂದ ಭಟ್ಕಳ ತಾಲೂಕಿನ ಗೊರಟೆಯವರೆಗೆ ಒಟ್ಟು 260 ಕಿಮೀ ದೂರದಲ್ಲಿ ದಟ್ಟವಾದ ಅರಣ್ಯ ಪ್ರದೇಶ ಹಾಗೂ ಅಪಾಯಕಾರಿ ಗುಡ್ಡ ಕುಸಿತ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಒಟ್ಟು 114 ಕಿಮೀ ಉದ್ದದ ಮಾನವ ಸರಪಳಿ ರಚಿಸಲು ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. 

   ಈ ಮಾನವ ಸರಪಳಿಯ ಪ್ರತೀ ಕಿಮೀ ಗೆ 700 ರಿಂದ 800 ಜನ ಭಾಗವಹಿಸಲಿದ್ದು, ಜಿಲ್ಲೆಯಲ್ಲಿ ಸುಮಾರು 80,000 ಕ್ಕೂ ಅಧಿಕ ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಹಳಿಯಾಳ ಚೆಕ್ ಪೋಸ್ಟ್, ಕೆರೊಳ್ಳಿ ಕ್ರಾಸ್, ಸಾಂಬ್ರಾಣಿ, ಯಲ್ಲಾಪುರ ನಗರ, ಶಿರಸಿ ನಗರ, ದೀವಗಿ ಕ್ರಾಸ್, ದೇವಗಿರಿ, ಅನಂತವಾಡಿಗಳಲ್ಲಿ ರಚಿಸಲಾಗುವ ಮಾನವ ಸರಪಳಿಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರು, ಸರ್ಕಾರಿ ನೌಕರರು ಮತ್ತು ಅಧಿಕಾರಿಗಳು ಈ ವಿನೂತನ ದಾಖಲೆ ನಿರ್ಮಾಣದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಪ್ರಜಾಪ್ರಭುತ್ವ ದಿನಾಚರಣೆ, ಸೆಪ್ಟೆಂಬರ್ 15 ರಂದು ಆಚರಿಸಲಾಗುವುದು ಏಕೆ?

ಸೆಪ್ಟೆಂಬರ್ 15 ರಂದು ಪ್ರಜಾಪ್ರಭುತ್ವ ದಿನಾಚರಣೆ ಆಚರಿಸಲಾಗುವುದು ಏಕೆಂದರೆ 1945 ರಲ್ಲಿ ಈ ದಿನದಂದು ಯುರೋಪಿನಲ್ಲಿ ಯುದ್ಧದ ನಂತರದ ಮೊದಲ ಸ್ವತಂತ್ರ ಮತ್ತು ಪ್ರಜಾಪ್ರಭುತ್ವದ ಚುನಾವಣೆಗಳು ನಡೆದವು. IMG-20240914-094434 ಈ ಚುನಾವಣೆಗಳನ್ನು ಸುಗ್ರೀವಾಜ್ಞೆಯಿಂದ ಆಡಳಿತ ಮಾಡುತ್ತಿದ್ದ ನಾಜಿ ಪಕ್ಷದಿಂದ ಮುಕ್ತಗೊಂಡು ಡೆಮೋಕ್ರಟಿಕ್ ರಾಷ್ಟ್ರಗಳನ್ನು ನಿರ್ಮಿಸಲು ಒಂದು ಪ್ರಮುಖ ಹೆಜ್ಜೆಯಾಗಿ ಪರಿಗಣಿಸಲಾಯಿತು. ಈ ಚುನಾವಣೆಗಳು ಪ್ರಜಾಪ್ರಭುತ್ವದ ಪ್ರಾಮುಖ್ಯತೆ ಮತ್ತು ಜನಸಾಮಾನ್ಯರಿಗೆ ಅಧಿಕಾರ  ನೀಡುವುದರ ಪ್ರಾಮುಖ್ಯತೆಯನ್ನು  ಸಾಬೀತುಪಡಿಸಿದವು. 

ಪ್ರಜಾಪ್ರಭುತ್ವ ದಿನಾಚರಣೆ, ಸೆಪ್ಟೆಂಬರ್ 15. ಮೂಲಭೂತ ಉದ್ದೇಶವೇನು?

ಪ್ರಜಾಪ್ರಭುತ್ವ ದಿನಾಚರಣೆಯ ಮೂಲಭೂತ ಉದ್ದೇಶವೆಂದರೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸ್ಮರಿಸುವುದು, ಜನಸಾಮಾನ್ಯರ ಅಧಿಕಾರವನ್ನು ಬಲಪಡಿಸುವುದು ಮತ್ತು ಪ್ರಜಾಪ್ರಭುತ್ವದ ಮಹತ್ವವನ್ನು ಜನರಿಗೆ ಅರಿವು ಮೂಡಿಸುವುದು. ಈ ದಿನವು ಜನಸಾಮಾನ್ಯರು ಪ್ರಜಾಪ್ರಭುತ್ವದ ಪ್ರಯೋಜನಗಳನ್ನು ಆನಂದಿಸಲು ತಮ್ಮ ಅಧಿಕಾರಗಳನ್ನು ಬಳಸಿಕೊಳ್ಳಬೇಕು ಎಂಬ ಸಂದೇಶವನ್ನು ನೀಡುತ್ತದೆ. 

ಪ್ರಜಾಪ್ರಭುತ್ವದ ಮಹತ್ವ ಏನು?

ಪ್ರಜಾಪ್ರಭುತ್ವವು ಸಮಾಜಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಇದು ಸ್ವಾತಂತ್ರ್ಯ, ಸಮಾನತೆ, ನ್ಯಾಯ ಮತ್ತು ಜನಸಾಮಾನ್ಯರ ಅಧಿಕಾರವನ್ನು ಖಾತರಿಪಡಿಸುತ್ತದೆ. 

ಸ್ವಾತಂತ್ರ್ಯ: 

ಪ್ರಜಾಪ್ರಭುತ್ವದಲ್ಲಿ ಜನರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ, ಮತ್ತು ಸಂಘಟನೆಯ ಸ್ವಾತಂತ್ರ್ಯ ಇರುತ್ತದೆ. ಅವರು ತಮ್ಮ ಆಲೋಚನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಬಹುದು ಮತ್ತು ಭಿನ್ನಾಭಿಪ್ರಾಯವನ್ನು ಹೊಂದಿರಬಹುದು. 

ಸಮಾನತೆ: 

ಪ್ರಜಾಪ್ರಭುತ್ವವು ಎಲ್ಲಾ ಜನರಿಗೆ ಸಮಾನತೆಯನ್ನು ಖಾತರಿಪಡಿಸುತ್ತದೆ. ಜಾತಿ, ಧರ್ಮ, ಲಿಂಗ, ಅಥವಾ ಸಾಮಾಜಿಕ ಸ್ಥಾನಮಾನದ ಆಧಾರದ ಮೇಲೆ ಯಾವುದೇ ವ್ಯತ್ಯಾಸವಿರುವುದಿಲ್ಲ. ಎಲ್ಲರಿಗೂ ಸಮಾನ ಅವಕಾಶಗಳು ಮತ್ತು ಅಧಿಕಾರಗಳು ಲಭ್ಯವಿರುತ್ತವೆ.

ನ್ಯಾಯ: 

ಪ್ರಜಾಪ್ರಭುತ್ವವು ನಿಯಮಗಳ ಆಳ್ವಿಕೆಯನ್ನು ಪ್ರೋತ್ಸಾಹಿಸುತ್ತದೆ ಮತ್ತು ಎಲ್ಲಾ ಜನರಿಗೆ ನ್ಯಾಯವನ್ನು ಖಾತರಿಪಡಿಸುತ್ತದೆ. ಪ್ರತಿಯೊಬ್ಬರಿಗೂ ನ್ಯಾಯಾಂಗಕ್ಕೆ ಪ್ರವೇಶ ಮತ್ತು ತಮ್ಮ ಹಕ್ಕುಗಳನ್ನು ಸಮರ್ಥಿಸಿಕೊಳ್ಳಲು ಅವಕಾಶ ಲಭ್ಯವಿರುತ್ತದೆ. 

ಜನಸಾಮಾನ್ಯರ ಅಧಿಕಾರ: 

ಪ್ರಜಾಪ್ರಭುತ್ವದಲ್ಲಿ ಜನಸಾಮಾನ್ಯರು ಸರ್ಕಾರವನ್ನು ಆಯ್ಕೆ ಮಾಡುವ ಅಧಿಕಾರವನ್ನು ಹೊಂದಿರುತ್ತಾರೆ. ಅವರು ತಮ್ಮ ನಿಯೋಗಿಗಳನ್ನು ಆಯ್ಕೆ ಮಾಡಬಹುದು ಮತ್ತು ಸರ್ಕಾರದ ಕಾರ್ಯಕ್ಷಮತೆಯ ಬಗ್ಗೆ ಪ್ರಶ್ನಿಸಬಹುದು. 

ಪ್ರಜಾಪ್ರಭುತ್ವವು ಜನರಿಗೆ ಅತ್ಯಂತ ಉತ್ತಮ ಆಡಳಿತ ಪದ್ಧತಿಯಾಗಿದೆ. ಏಕೆಂದರೆ ಇದು ಜನರಿಗೆ ಸ್ವಾತಂತ್ರ್ಯ, ಸಮಾನತೆ, ನ್ಯಾಯ ಮತ್ತು ಅಧಿಕಾರವನ್ನು ಖಾತರಿಪಡಿಸುತ್ತದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸ್ಮರಿಸುವ ಮತ್ತು ಬಲಪಡಿಸುವುದು ನಮ್ಮ ಎಲ್ಲರ ಜವಾಬ್ದಾರಿಯಾಗಿದೆ.

.

.

.