ಯಲ್ಲಾಪುರ : ಶ್ರೀರಾಮ ಕ್ಷೇತ್ರ ಮಹಾ ಸಂಸ್ಥಾನ ನಿತ್ಯಾನಂದ ನಗರ ಧರ್ಮಸ್ಥಳ ಇದರ ಪೀಠಾಧೀಶ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಇವರ ಚಾತುರ್ಮಾಸ್ಯ ವೃತ ಕಾರ್ಯಕ್ರಮವು ಮೊದಲ ಬಾರಿಗೆ ಜಿಲ್ಲೆಯ ಭಟ್ಕಳದ ಕರಿಕಲ್ ಶಾಖಾ ಮಠದಲ್ಲಿ ಜು.21ರಿಂದ ಆ.30ರವರೆಗೆ ನಡೆಯಲಿದೆ ಎಂದು ಯಲ್ಲಾಪುರ ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ನರಸಿಂಹ ಏನ್. ನಾಯ್ಕ ಹೇಳಿದರು.
ಅವರು ಮಂಗಳವಾರ ಚಾತುರ್ಮಾಸ್ಯ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. 41 ದಿನಗಳ ಚಾತುರ್ಮಾಸ್ಯ ವ್ರತ ನಡೆಯಲಿದ್ದು ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ ಕರಿಕಲ್ ಶಾಖಾ ಮಠದಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲಿ ಮೊದಲ ಬಾರಿಗೆ ಶ್ರೀಗಳು ಚಾರ್ತುಮಾಸ್ಯ ವೃತ ಆಚರಿಸುತ್ತಿದ್ದಾರೆ. ನಿತ್ಯವೂ ಕರಿಕಲ್ ಮಂದಿರದಲ್ಲಿ ಗುರು ಪೂಜೆ, ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ ಎಂದರು.
ಆಗಸ್ಟ್ 27 ರಂದು ಯಲ್ಲಾಪುರ ತಾಲೂಕಿನಿಂದ ನಾಮಧಾರಿ ಅಭಿವೃದ್ಧಿ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಸಮಾಜ ಬಾಂಧವರು ಪಾಲ್ಗೊಳ್ಳಲಿದ್ದೇವೆ. ಸರ್ವ ಸಮುದಾಯದ ಭಕ್ತರು ಚಾತುರ್ಮಾಸ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸುವಂತೆ ಕೋರಿದರು.